ಬೇರೆಯವರ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದ್ದೀರಾ? ಸರಕಾರದಿಂದ ಬಂತು ಈ ಹೊಸ ರೂಲ್ಸ್

Story Highlights

ಸಾಲ ಪಡೆಯುವ ವ್ಯಕ್ತಿ ವಯಸ್ಸು ಅಧಿಕ ಇದ್ದು ಮೊತ್ತ ಕೂಡ ಅಧಿಕ ಇರುವ ಜೊತೆಗೆ ಬ್ಯಾಂಕ್ ವಹಿವಾಟಿನಲ್ಲಿ ಸಿಬಿಲ್ ಸ್ಕೋರ್ (CIBIL Score) ಕಡಿಮೆ ಇದ್ದರೆ ಆಗ ಜಾಮೀನು ಸಹಿ ಅಗತ್ಯವಾಗಿ ಕೇಳಲಾಗುವುದು.

ಸಾಲವನ್ನು ಅನೇಕ ಕಾರಣಕ್ಕೆ ಮಾಡಿರಬಹುದು. ಇಂದು ಮನೆ (Home Loan), ಶಿಕ್ಷಣ (Education Loan) , ಸ್ವ ಉದ್ಯೋಗ (Business Loan), ವಯಕ್ತಿಕ ಸಾಲ (Personal Loan) ಎಂಬ ಕಾರಣಕ್ಕೆ ಸಾಲವನ್ನು ಮಾಡುವವರ ಪ್ರಮಾಣ ಅಧಿಕ ಇದೆ. ಸಾಲ ಮಾಡುವವರ ಸಂಖ್ಯೆ ಹೆಚ್ಚಾದಂತೆ ಸಾಲ ನೀಡುವ ಸಂಸ್ಥೆಗಳ ಪ್ರಮಾಣ ಕೂಡ ಅಧಿಕ ಆಗಿದೆ ಎನ್ನಬಹುದು.

ಹೀಗಾಗಿ ಸಾಲ ಪಡೆಯುವವರು ಸರಿಯಾದ ಯೋಜನೆ, ಯೋಚನೆ ಇಲ್ಲದೆ ಕೂಡ ಸಾಲವನ್ನು ಸುಲಭಕ್ಕೆ ಪಡೆಯುತ್ತಾರೆ. ಬಹುತೇಕ ಸಾಲಗಳಿಗೆ ಜಾಮೀನು ಸಹಿ ಬೇರೆ ಅವರ ಬಳಿ ಹಾಕಿಸುವುದನ್ನು ನಾವು ಕಾಣಬಹುದು. ಆದರೆ ನೀವು ಇಲ್ಲಿ ಒಂದು ಅಂಶ ಗಮನಿಸಬೇಕು, ಸಾಲ ಪಡೆದಾತನ ಮೇಲೆ ನಂಬಿಕೆ ಇಲ್ಲದೆ ನೀವು ಸಹಿ ಹಾಕಿದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕಬಹುದು.

ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗ್ತಾಯಿದೆ, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಿ

ಸಾಲ ಪಡೆದವರು ಸಾಲ ತೀರಿಸಲು ಸಾಧ್ಯವಾಗದ ಸಂದರ್ಭದಲ್ಲಿ ತಲೆಮರೆಸಿಕೊಂಡರೆ ಆಗ ಸಾಲ ಪಡೆದವನಿಗೆ ಯಾರು ಜಾಮೀನಿಗೆ ಸಹಿ ಹಾಕಿರುತ್ತಾರೆ ಅವರ ಬಳಿ ಸಾಲ ವಸೂಲಿ ಮಾಡುವ ಸಾಧ್ಯತೆ ಇರಲಿದೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು.

ಪರಿಚಯಸ್ಥರು, ಸಂಬಂಧಿಕರು, ಸ್ನೇಹಿತರು ಎಂದು ನೀವು ಮಾಡುವ ಒಂದು ಸಹಿ ಅವರಿಗೆ ಸುಲಭಕ್ಕೆ ಸಾಲ ಸಿಗಲಿದೆ ಆದರೆ ನೀವು ಅವರ ಹಣಕಾಸಿನ ಹೊರೆಯ ಜವಬ್ದಾರಿ ಹೊತ್ತಂತೆ ಆಗಲಿದೆ.

ಯಾವ ಸಂದರ್ಭದಲ್ಲಿ ಜಾಮೀನು ಸಾಲ ಕೇಳಲಾಗುವುದು?

ಎಲ್ಲ ಬ್ಯಾಂಕಿನಲ್ಲಿ ನೀಡುವ ಸಾಲಕ್ಕೆ ಜಾಮೀನು ಸಹಿ ಕೇಳಲಾಗುವುದಿಲ್ಲ ಬದಲಾಗಿ ಸಾಲ ಪಡೆಯುವ ವ್ಯಕ್ತಿಗೆ ಸಾಲ ತೀರಿಸುವ ಸಾಮರ್ಥ್ಯ ಇಲ್ಲ ಎಂದು ಅನಿಸಿದಾಗ ಅಥವಾ ಸಾಲ ಮರುಪಾವತಿ (Loan Re-Payment) ಸಾಮರ್ಥ್ಯ ಇಲ್ಲದೆ ಇದ್ದ ಸಂದರ್ಭದಲ್ಲಿ ಕೇಳಲಾಗುವುದು.

ಸಾಲ ಪಡೆಯುವ ವ್ಯಕ್ತಿ ವಯಸ್ಸು ಅಧಿಕ ಇದ್ದು ಮೊತ್ತ ಕೂಡ ಅಧಿಕ ಇರುವ ಜೊತೆಗೆ ಬ್ಯಾಂಕ್ ವಹಿವಾಟಿನಲ್ಲಿ ಸಿಬಿಲ್ ಸ್ಕೋರ್ (CIBIL Score) ಕಡಿಮೆ ಇದ್ದರೆ ಆಗ ಜಾಮೀನು ಸಹಿ ಅಗತ್ಯವಾಗಿ ಕೇಳಲಾಗುವುದು.

1 ಲಕ್ಷ ಬೆಲೆಬಾಳುವ ಚಿನ್ನಅಡ ಇಟ್ರೆ ಎಷ್ಟು ಹಣ ಸಿಗುತ್ತೆ? ಬಡ್ಡಿ ಎಷ್ಟು? ಇಲ್ಲಿದೆ ಬ್ಯಾಂಕುಗಳ ಲೆಕ್ಕಾಚಾರ

Loanಹೊಸ ನಿಯಮ?

ಬೇರೆ ಅವರ ಸಾಲಕ್ಕೆ ಜಾಮೀನು ಹಾಕಿದವರು ಆ ಸಾಲಕ್ಕೆ ಸಂಪೂರ್ಣ ಹೊಣೆದಾರರು ಆಗಲಿದ್ದಾರೆ‌. ಅಂತಹ ಸಾಲ ಮರುಪಾವತಿ ಆಗದಿದ್ದಾಗ ಸಾಲ ಮರುಪಾವತಿಸಲು ಬ್ಯಾಂಕ್ ನವರು ಬಂದು ನಿಮ್ಮ ಬಳಿ ಕೇಳುವ ನಿಮ್ಮ ಆಸ್ತಿ ಬ್ಯಾಂಕ್ ವ್ಯವಹಾರ ಮುಟ್ಟುಗೋಲು ಮಾಡುವ ಅಷ್ಟು ಅಧಿಕಾರ ಇರಲಿದೆ.

ಆಗ ನಿಮಗೆ ಸಾಲ ವಾಪಾಸ್ಸು ನನ್ನ ಬಳಿ ಕೇಳಬೇಡಿ ಸಾಲ ಪಡೆದವರು ತೀರಿಸುತ್ತಾರೆ ನಾನು ಜವಾಬ್ದಾರನಲ್ಲ ಎಂದು ಹೇಳುವ ಯಾವುದೇ ಅಧಿಕಾರ ಇರಲಾರದು ಎನ್ನಬಹುದು.

ಬ್ಯಾಂಕ್‌ನಿಂದ ಸಾಲ ಪಡೆದ ವ್ಯಕ್ತಿ ಅಕಸ್ಮಾತ್ ಸತ್ತರೆ ಆ ಸಾಲ ತೀರಿಸುವವರು ಯಾರು? ಹೊಸ ರೂಲ್ಸ್

ಇನ್ನು ಮುಂದೆ ಸ್ನೇಹಿತರು , ಸಂಬಂಧಿಕರ ಯಾವುದೇ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದರೆ ನೀವು ಆ ಸಾಲಕ್ಕೆ ಸಂಪೂರ್ಣ ಹೊಣೆದಾರರು ಎಂಬ ಹೊಸ ರೂಲ್ಸ್ ಕಡ್ಡಾಯವಾಗಿ ಜಾರಿಯಾಗುತ್ತಿದೆ.

ಅಷ್ಟು ಮಾತ್ರವಲ್ಲದೆ ನೀವು ಜಾಮೀನಿಗೆ ಸಹಿ ಹಾಕಿ ಅದು ಸಾಲ ತೀರಿಸಲಾಗದಿದ್ದರೆ ಅದು ನಿಮ್ಮ ಬ್ಯಾಂಕಿನ ಸಿಬಿಲ್ ಸ್ಕೋರ್ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಒಂದು ಸಹಿ ಹಾಕುವ ಮುನ್ನ ಸಾವಿರ ಬಾರಿ ಯೋಚಿಸಿ, ಸಾಲ ಮರುಪಾವತಿ ಆಗುವ ಭರವಸೆ ಇದ್ದರೆ ಮಾತ್ರ ಸಹಿ ಹಾಕಿರಿ.

Importance Things to Know Before You Sign as a Guarantor for a Loan

Related Stories