ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ; ಪಾಲಿಸದೆ ಇದ್ರೆ ₹10,000 ರೂಪಾಯಿ ದಂಡ

ಹಣಕಾಸು ವ್ಯವಹಾರ ಮಾಡುವುದಕ್ಕೆ ಪ್ಯಾನ್ ಕಾರ್ಡ್ (PAN Card) ಹಾಗೂ ಆಧಾರ್ ( Aadhaar Card) ಕಾರ್ಡ್ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ.

ನಾವು ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡುವುದಕ್ಕೆ ಪ್ಯಾನ್ ಕಾರ್ಡ್ (PAN Card) ಹಾಗೂ ಆಧಾರ್ ( Aadhaar Card) ಕಾರ್ಡ್ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ಆದಾಯ ತೆರಿಗೆ ಪಾವತಿ ಗಂತೂ ಪ್ಯಾನ್ ಕಾರ್ಡ್ ಇಲ್ಲದೆ ಇದ್ರೆ ಪಾವತಿ ಮಾಡುವಾಗ ಹೆಚ್ಚುವರಿ ದಂಡವನ್ನು ಕೂಡ ಪಾವತಿಸಬೇಕು.

ಅದರ ಬದಲು ಆದಾಯ ತೆರಿಗೆ ಇಲಾಖೆಯ (Income Tax) ನಿಯಮಗಳನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು ಇದರಿಂದ ದಂಡ (penalty) ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು.

ಹೊಸ ಮನೆ, ಆಸ್ತಿ ಖರೀದಿಗೆ ಬಂತು ಹೊಸ ರೂಲ್ಸ್! ಯಾಮಾರಿದ್ರೆ ಬೀಳುತ್ತೆ ಭಾರೀ ದಂಡ

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ; ಪಾಲಿಸದೆ ಇದ್ರೆ ₹10,000 ರೂಪಾಯಿ ದಂಡ - Kannada News

ನಿಮ್ಮ ಬಳಿ ಎಷ್ಟು ಪ್ಯಾನ್ ಕಾರ್ಡ್ ಇದೆ?

ಸಾಮಾನ್ಯವಾಗಿ ಪಾನ್ ಕಾರ್ಡ್ ಅನ್ನು ಕೆಲವು ಸಂಸ್ಥೆಗಳಿಂದ ಹಾಗೂ ಆನ್ಲೈನ್ ಮೂಲಕವೂ ಪಡೆದುಕೊಳ್ಳಬಹುದು, ಇಂತಹ ಸಂದರ್ಭದಲ್ಲಿ ಒಂದಿಷ್ಟು ಜನ ಎರಡು ಪ್ಯಾನ್ ಕಾರ್ಡ್ ಹೊಂದಿರುವುದು ಇದೀಗ ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಆದಾಯ ತೆರಿಗೆ ಇಲಾಖೆಯ ನಿಯಮವನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ.

ಪ್ಯಾನ್ ಕಾರ್ಡ್ ನಲ್ಲಿ ವಿಶಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಈ PAN ಸಂಖ್ಯೆ ಆದಾಯ ತೆರಿಗೆ ಸಮಯದಲ್ಲಿ ನಮೂದಿಸಬೇಕು. ಒಂದು ವೇಳೆ ಆದಾಯ ತೆರಿಗೆ ಪಾವತಿಸುವಾಗ ನೀವು ಬಳಸುವ ಪ್ಯಾನ್ ಕಾರ್ಡ್ ನಕಲಿ ಎಂಬುದು ತಿಳಿದು ಬಂದರೆ ದೊಡ್ಡ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ.

ಇತ್ತೀಚಿಗೆ ಸಾಕಷ್ಟು ಜನ ನಕಲಿ ಪಾನ್ ಕಾರ್ಡ್ ಅಥವಾ ಎರಡು ಪಾನ್ ಕಾರ್ಡ್ ಹೊಂದಿರುವುದು ಕಂಡುಬಂದಿದೆ. ಎರಡು ಪ್ಯಾನ್ ಕಾರ್ಡ್ ಹೊಂದಿರುವುದು ಕಾನೂನು ಬಾಹಿರ ಎನಿಸಿಕೊಳ್ಳುತ್ತದೆ.

ಯಾವುದೇ ಒಬ್ಬ ವ್ಯಕ್ತಿ ಅಥವಾ ಕಂಪನಿ ಒಂದು ಪ್ಯಾನ್ ಕಾರ್ಡ್ ಹೊಂದಿರಲು ಮಾತ್ರ ಅವಕಾಶವಿದೆ. ಹಾಗೆ ತೆರಿಗೆ ಇಲಾಖೆಗೆ ವಂಚನೆ ಮಾಡುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚಿನ ಪ್ಯಾನ್ ನಂಬರ್ ಹೊಂದಿದ್ದು ಎರಡು ನಂಬರ್ ಮೂಲಕ ನೀವು ಹಣಕಾಸಿನ ವ್ಯವಹಾರ ನಡೆಸಿದರೆ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ಪಾವತಿಸಬೇಕು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಹೆಚ್ಚು ಬಡ್ಡಿ ನೀಡುವ ಹೊಸ ಸ್ಕೀಮ್ ಇದು

ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಸರೆಂಡರ್ ಮಾಡಿ!

Pan Cardಆದಾಯ ತೆರಿಗೆ ಇಲಾಖೆ ಈಗಾಗಲೇ ಸೂಚಿಸಿರುವಂತೆ ಯಾರಾದರೂ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ, ಅದರಲ್ಲಿ ನಕಲಿ ಪ್ಯಾನ್ ಕಾರ್ಡ್ ಅನ್ನು ತಕ್ಷಣವೇ ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ನಕಲಿ ಪಾನ್ ಕಾರ್ಡ್ ಇನ್ನು ನೀವು ಬಳಸುತ್ತಿದ್ದರೆ ಖಂಡಿತವಾಗಿಯೂ ಇದು ಸಮಸ್ಯೆ ಆಗಬಹುದು.

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272B ಅಡಿಯಲ್ಲಿ ನಕಲಿ ಪ್ಯಾನ್ ಕಾರ್ಡ್ ಹೊಂದಿರುವವರಿಗೆ 10,000 ದಂಡ ವಿಧಿಸಲಾಗುವುದು ಎಂದು ಆದಾಯ ಇಲಾಖೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇರುವವರು ತಕ್ಷಣವೇ ತಮ್ಮ ಬಳಿ ಇರುವ ಎರಡನೇ ಪ್ಯಾನ್ ಕಾರ್ಡ್ ಅಥವಾ ನಕಲಿ ಪ್ಯಾನ್ ಕಾರ್ಡ್ ಅನ್ನು ಸಂಬಂಧಪಟ್ಟ ಇಲಾಖೆಗೆ ಹಿಂತಿರುಗಿಸಬೇಕು.

ಚಿನ್ನದ ಬೆಲೆ ಭಾನುವಾರ ಭಾರೀ ಇಳಿಕೆ, ಏಕಾಏಕಿ ₹550 ರೂಪಾಯಿ ಕುಸಿತ; ಇಲ್ಲಿದೆ ಡೀಟೇಲ್ಸ್

ಪ್ಯಾನ್ ಕಾರ್ಡ್ ಹಿಂತಿರುಗಿಸುವುದು ಹೇಗೆ! How to return fake PAN Card?

ನಿಮ್ಮ ಬಳಿ ಇರುವ ಎರಡನೇ ಪ್ಯಾನ್ ಕಾರ್ಡನ್ನು ಆನ್ಲೈನ್ online ಮೂಲಕ ಹಾಗೂ ಆಫ್ಲೈನ್ offline ಮೂಲಕ ಇಲಾಖೆಗೆ ಹಿಂತಿರುಗಿಸಬಹುದಾಗಿದೆ. ಆನ್ಲೈನ್ ಮೂಲಕ ಹಿಂತಿರುಗಿಸುವ ಹಂತಗಳನ್ನು ನೋಡೋಣ.

ಮೊದಲಿಗೆ ಆದಾಯ ಇಲಾಖೆಯ ಅಧಿಕೃತ ವೆಬ್ಸೈಟ್ (official website) https://www.protean-tinpan.com/faqs/pan/faq-pan-cancellation.html ಭೇಟಿ ನೀಡಿ. ನಂತರ ಇಲ್ಲಿ ಪ್ಯಾನ್ ಕಾರ್ಡ್ ವಿಭಾಗದಲ್ಲಿ ನಿಮ್ಮ ಒರಿಜಿನಲ್ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಪ್ಯಾನ್ ಕಾರ್ಡ್ ಬದಲಾವಣೆಗೆ ವಿನಂತಿ ಸಲ್ಲಿಸಬೇಕು ಆಗ ನಿಮಗೆ ಫಾರ್ಮ್ ನಂಬರ್ 11 ಲಭ್ಯವಾಗುತ್ತದೆ.

ಈ ಫಾರ್ಮ್ ಅನ್ನು ಭರ್ತಿ ಮಾಡಿ ನೀವು ಯಾವ ಪ್ಯಾನ್ ಕಾರ್ಡ್ ಅನ್ನು ಹಿಂತಿರುಗಿಸಲು ಬಯಸುತ್ತಿರೋ ಆ ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು. ಫಾರ್ಮ್ ನಂಬರ್ 11 ರ ಜೊತೆಗೆ ನಿಮ್ಮ ನಕಲಿ ಪ್ಯಾನ್ ಕಾರ್ಡ್ ಸರೆಂಡರ್ ಮಾಡಬಹುದು.

ಇನ್ನು ಆಫ್ಲೈನ್ ಮೂಲಕ ನೀವು ನಕಲಿ ಪಾನ್ ಕಾರ್ಡ್ ಹಿಂತಿರುಗಿಸುವುದಿದ್ದರೆ, ಫಾರ್ಮ್ ನಂಬರ್ 49 A ಭರ್ತಿ ಮಾಡಬೇಕು. ಭರ್ತಿ ಮಾಡಿದ ಫಾರ್ಮ್ ಜೊತೆಗೆ ನೀವು ಯಾವ ಪ್ಯಾನ್ ಕಾರ್ಡ್ ಸರೆಂಡರ್ ಮಾಡಲು ಹೊರಟಿದ್ದೀಯೋ ಆ ಪಾನ್ ಕಾರ್ಡ್ ವಿವರಗಳನ್ನು ನೀಡಬೇಕು. ಬಳಿಕ UTI ಅಥವಾ ಎನ್‌ಎಸ್‌ಡಿಎಲ್ ಟಿನ್ ಫೆಸಿಲಿಟೇಶನ್ ಸೆಂಟರ್‌ಗೆ ನೀವು ಭರ್ತಿ ಮಾಡಿದ ಫಾರ್ಮ್ ಜೊತೆಗೆ ನಕಲಿ ಪ್ಯಾನ್ ಕಾರ್ಡ್ ಹಿಂತಿರುಗಿಸಬೇಕು.

ಇನ್ನು https://www.incometaxindiaefiling.gov.in/ ಈ ವೆಬ್ಸೈಟ್ನಲ್ಲಿ ನಿಮ್ಮ ಹತ್ತಿರದ ಮೌಲ್ಯಮಾಪನ ಅಧಿಕಾರಿ ಬಗ್ಗೆ ಮಾಹಿತಿ ಸಿಗುತ್ತದೆ ಅದನ್ನು ತಿಳಿದುಕೊಂಡು ಅವರಿಗೆ ನೀವು ನಿಮ್ಮ ಪ್ಯಾನ್ ಕಾರ್ಡ್ ಸರೆಂಡರ್ ಮಾಡಬಹುದು.

A fine of 10,000 will be imposed if the Pan Card rule is not followed

Follow us On

FaceBook Google News

A fine of 10,000 will be imposed if the Pan Card rule is not followed