ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಹೆಚ್ಚು ಬಡ್ಡಿ ನೀಡುವ ಹೊಸ ಸ್ಕೀಮ್ ಇದು
Fixed Deposit : ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಹಣ ಉಳಿತಾಯ (savings) ಮಾಡಲು ಬೇರೆ ಬೇರೆ ಕ್ಷೇತ್ರದಲ್ಲಿ ಹೂಡಿಕೆ (investment) ಮಾಡಲಾಗುತ್ತದೆ. ಕೆಲವರು ಚಿನ್ನದ ಮೇಲೆ ಹೂಡಿಕೆ (Gold Investment) ಮಾಡಿದರೆ, ಇನ್ನು ಕೆಲವರು ಆಸ್ತಿ ಖರೀದಿ ಮೇಲೆ ಹೂಡಿಕೆ ಮಾಡುತ್ತಾರೆ, ಮತ್ತೆ ಕೆಲವರು ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿ ಬಡ್ಡಿ ಪಡೆದುಕೊಳ್ಳುತ್ತಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚಿಗೆ ತುಂಬಾನೇ ಫೇಮಸ್ ಆಗಿರುವುದು ಸ್ಥಿರ ಠೇವಣಿ (Fixed Deposit).
ಹೌದು, ಇಂದು ಮ್ಯೂಚುವಲ್ ಫಂಡ್ (mutual fund) ಎಸ್ಐಪಿ ಮೊದಲಾದ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚು ಅಂಚೆ ಕಚೇರಿಯಲ್ಲಿ ಹಾಗೂ ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ

ಚಿನ್ನದ ಬೆಲೆ ಭಾನುವಾರ ಭಾರೀ ಇಳಿಕೆ, ಏಕಾಏಕಿ ₹550 ರೂಪಾಯಿ ಕುಸಿತ; ಇಲ್ಲಿದೆ ಡೀಟೇಲ್ಸ್
ಯಾಕೆಂದರೆ ಈ ಹೂಡಿಕೆಗಳು ಅಪಾಯ ಮುಕ್ತ ಹೂಡಿಕೆಗಳಾಗಿದ್ದು ನೀವು ಒಮ್ಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿಕೊಳ್ಳಬಹುದು. ಹೀಗೆ ನೀವು ಅಪಾಯ ಮುಕ್ತ ಹೂಡಿಕೆಯನ್ನು ಆಯ್ದುಕೊಳ್ಳುತ್ತಿದ್ದರೆ ಸ್ಥಿರ ಠೇವಣಿ (fixed deposit) ಅತ್ಯುತ್ತಮ ಆಯ್ಕೆಯಾಗಿದೆ.
ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಇಡುವುದು! (FD in bank)
ಬೇರೆ ಬೇರೆ ಬ್ಯಾಂಕುಗಳು (Banks) ಬೇರೆ ಬೇರೆ ಅವಧಿಯ ಸ್ಥಿರ ಠೇವಣಿ ಮೇಲೆ ಬಡ್ಡಿ ದರವನ್ನು (interest ) ನಿಗದಿಪಡಿಸುತ್ತವೆ. ಅದರಲ್ಲೂ ಹಿರಿಯ ಗ್ರಾಹಕರು ಸ್ಥಿರ ಠೇವಣಿ ಇಟ್ಟಾಗ ಅವರಿಗೆ ಸಿಗುವ ಬಡ್ಡಿ ದರವು ಹೆಚ್ಚು. ಹೀಗಾಗಿ ನೀವು ಯಾವ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದನ್ನು ಪರಿಶೀಲಿಸಿ ನಂತರ ಹೂಡಿಕೆ ಮಾಡುವುದು ಒಳ್ಳೆಯದು.
ಸೈಟ್, ಮನೆ, ಆಸ್ತಿ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ! ಹೊಸ ರೂಲ್ಸ್
ಎಸ್ ಬಿ ಐ ಅಮೃತ್ ಕಲಶ್ ಎಫ್ ಡಿ ಯೋಜನೆ! (SBI Amrit Kalash FD scheme)
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಗ್ರಾಹಕರಾಗಿದ್ದರೆ ನಿಮಗಾಗಿ ನೀವು ಎಸ್‌ಬಿಐ ಆರಂಭಿಸಿದ ಅಮೃತ ಕಲಶ್ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅತಿ ಉತ್ತಮ ಲಾಭ ಗಳಿಸಿಕೊಳ್ಳಬಹುದು.
ಎಸ್ ಬಿ ಐ ಅಮೃತ್ ಕಲಶ್ ಯೋಜನೆಯನ್ನು 2020 ಫೆಬ್ರುವರಿ ತಿಂಗಳಿನಲ್ಲಿ ಆರಂಭಿಸಲಾಗಿತ್ತು. ಇದಕ್ಕೆ ಅತ್ಯುತ್ತಮ ಪ್ರಕ್ರಿಯೆ ದೊರಕಿದ್ದು ಗ್ರಾಹಕರ ಒತ್ತಾಯದ ಮೇರೆಗೆ ಡಿಸೆಂಬರ್ 31, 2023ರ ವರೆಗೆ ಅಮೃತ ಕಲಶ್ ಯೋಜನೆಯ ಹೂಡಿಕೆ ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ.
ಕ್ರೆಡಿಟ್ ಕಾರ್ಡ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಹೇಗೆ ಗೊತ್ತಾ?
ಅಮೃತ್ ಕಲಶ್ ಯೋಜನೆಯ ವಿಶೇಷತೆ
*ಎಸ್ ಬಿ ಐ ನಲ್ಲಿ 2 ಕೋಟಿಗಿಂತ ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿದರೆ ಅಮೃತ್ ಕಲಶ್ ಯೋಜನೆಯ ಅಡಿಯಲ್ಲಿ ಅತ್ಯುತ್ತಮ ಬಡ್ಡಿ ದರ ನೀಡಲಾಗುವುದು.
*ಸಾಮಾನ್ಯ ಗ್ರಾಹಕರಿಗೆ 7.1% ಹಾಗೂ ಹಿರಿಯ ನಾಗರಿಕರಿಗೆ 7.6% ನಷ್ಟು ಬಡ್ಡಿ ಸಿಗುತ್ತದೆ.
*ಅಮೃತ್ ಕಲಶ್ ಯೋಜನೆಯ ಅಡಿಯಲ್ಲಿ 400 ದಿನಗಳ ಎಫ್ ಡಿ ಸ್ಕೀಮ್ ಅನ್ನು ಭಾರತೀಯರು ಮಾತ್ರವಲ್ಲದೆ ಎನ್ ಆರ್ ಐ ಗಳು ಕೂಡ ಪಡೆದುಕೊಳ್ಳಬಹುದು.
*ಈ ಯೋಜನೆಯ ಅಡಿಯಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿಯ ಆಧಾರದ ಆದಾಯವನ್ನು ಹಿಂಪಡೆಯಬಹುದು.
*ಅಥವಾ 400 ದಿನಗಳ ಮೆಚುರಿಟಿ ಮುಗಿದ ನಂತರ ಸಂಪೂರ್ಣ ಹಣವನ್ನು ಪಡೆದುಕೊಳ್ಳಬಹುದು ಎರಡು ಆಯ್ಕೆಗಳನ್ನು ನೀಡಲಾಗಿದೆ.
*ಅಮೃತ್ ಕಲಶ್ ಯೋಜನೆಯಿಂದ ಪಡೆದುಕೊಳ್ಳುವ ಬಡ್ಡಿಯ ಮೇಲೆ ಟಿಡಿಎಸ್ ಪಾವತಿ ಮಾಡಬೇಕು.
*400 ದಿನಗಳ ಹೂಡಿಕೆಯ ಮೇಲೆ ಸಾಲ ಸೌಲಭ್ಯಗಳನ್ನು (Loan) ಕೂಡ ಪಡೆದುಕೊಳ್ಳಬಹುದು.
ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ₹2.67 ಲಕ್ಷ ಸಬ್ಸಿಡಿ ಸಾಲ! ಸರ್ಕಾರದ ಹೊಸ ಯೋಜನೆ
ಅಗಸ್ಟ್ 15, 2023 ಕೊನೆಗೊಳ್ಳಬೇಕಿದ್ದ ಅಮೃತ ಕಲಶ್ ಯೋಜನೆ ಗ್ರಾಹಕರ ಬೇಡಿಕೆಯ ಮೇಲೆ ಡಿಸೆಂಬರ್ 31, 2023ರ ವರೆಗೆ ಅಂದರೆ ನಾಲ್ಕು ತಿಂಗಳುಗಳ ಕಾಲ ವಿಸ್ತರಿಸಲ್ಪಟ್ಟಿದೆ. ಹಾಗಾಗಿ ಹೆಚ್ಚು ಪ್ರಯೋಜನಗಳನ್ನು ಹೊಂದಿರುವ ಅಮೃತ್ ಕಲಶ್ ಯೋಜನೆಯಲ್ಲಿ ಹೂಡಿಕೆ ಮಾಡಲು ಈ ತಿಂಗಳ ಕೊನೆಯವರೆಗೂ ಮಾತ್ರ ಅವಕಾಶ ಇದೆ. ಅಷ್ಟರಲ್ಲಿ ಯೋಜನೆಯ ಸದುಪಯೋಗಪಡಿಸಿಕೊಳ್ಳಿ.
State Bank Of India Amrit Kalash Fixed Deposit scheme Details and Benefits