ಸೈಟ್, ಮನೆ, ಆಸ್ತಿ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ! ಹೊಸ ರೂಲ್ಸ್
ನಮ್ಮ ದೇಶದಲ್ಲಿ ಬೇರೆ ಬೇರೆ ರೀತಿಯಾದಂತಹ ತೆರಿಗೆ ನಿಯಮಗಳು (tax rules) ಇವೆ. ಒಂದೊಂದು ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಒಂದೊಂದು ಆದಾಯಕ್ಕೆ ಸಂಬಂಧಪಟ್ಟ ಹಾಗೆ ತೆರಿಗೆ ಪಾವತಿ (tax pay) ಮಾಡಬೇಕಾಗುತ್ತದೆ.
ನೀವು ಯಾವ ರೀತಿಯ ಆಸ್ತಿ ಖರೀದಿ (property purchase) ಮಾಡುತ್ತೀರಿ? ಅದರ ಮೌಲ್ಯ ಎಷ್ಟು? ನೀವು ಗಳಿಸುವ ಆದಾಯ ಎಷ್ಟು? ಎನ್ನುವುದರ ಆಧಾರದ ಮೇಲೆ ಟಿಡಿಎಸ್ ಕೂಡ ಕಟ್ಟಬೇಕು.
ಸ್ಟಾರ್ ಚಿಹ್ನೆ ಇರೋ ₹500 ರೂಪಾಯಿ ನೋಟಿನ ಬಗ್ಗೆ ಹೊಸ ಅಪ್ಡೇಟ್! ಮಹತ್ವದ ಮಾಹಿತಿ
ಆಸ್ತಿಯ ಮೇಲಿನ ತೆರಿಗೆ! (Tax on property)
ಆಸ್ತಿಯ ಮೇಲಿನ ತೆರಿಗೆ ಪಾವತಿ ಮಾಡುವ ಮೊದಲು ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಯಾವುದೇ ಆಸ್ತಿಯನ್ನು ಹೊಸದಾಗಿ ಖರೀದಿ ಮಾಡುವುದಿದ್ದರೆ ಸರ್ಕಾರಕ್ಕೆ 1% ನಷ್ಟು ಟಿಡಿಎಸ್ ಪಾವತಿ (TDS) ಮಾಡಬೇಕು.
ಇನ್ನು 99% ನಷ್ಟು ಹಣವನ್ನು ಮಾರಾಟಗಾರನಿಗೆ ಪಾವತಿ ಮಾಡಬೇಕು. ಆದರೆ ಮಾರಾಟಗಾರನಿಗೆ ನೀವು ಸರ್ಕಾರಕ್ಕೆ 1% ಟಿಡಿಎಸ್ ಪಾವತಿ ಮಾಡಿರುವ ಬಗ್ಗೆ ದಾಖಲೆಯನ್ನು ಕೂಡ ನೀಡಬೇಕು. ಒಂದು ವೇಳೆ TDS ಪಾವತಿ ಮಾಡದೆ ಇದ್ದಲ್ಲಿ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ (income tax notice) ಜಾರಿಯಾಗಬಹುದು.
ಪಾವತಿ ಮಾಡಬೇಕು 1% ಬದಲು 20% TDS!
ಆದಾಯ ತೆರಿಗೆ ಕಾಯ್ದೆಯ (income tax act) ಪ್ರಕಾರ 50 ಲಕ್ಷ ಮೊತ್ತ ಅಥವಾ ಅದಕ್ಕಿಂತ ಹೆಚ್ಚಿಗೆ ಮೊತ್ತದ ಆಸ್ತಿ ಖರೀದಿ ಮಾಡಿದರೆ 1% TDS ಪಾವತಿಸಬೇಕು. ಒಂದು ವೇಳೆ 1% ನಷ್ಟು ಟಿಡಿಎಸ್ ಪಾವತಿ ಮಾಡದೆ ಇದ್ದಲ್ಲಿ ಆಸ್ತಿ ಖರೀದಿಯ 6 ತಿಂಗಳ ಬಳಿಕ ಆದಾಯ ಇಲಾಖೆಯ ನೋಟಿಸ್ ನಿಮಗೆ ಬರಬಹುದು. ಆ ನೋಟಿಸ್ ನಲ್ಲಿ ಒಂದು ಪರ್ಸೆಂಟ್ ಬದಲಿಗೆ 20% ನಷ್ಟು ಟಿಡಿಎಸ್ ಪಾವತಿ ಮಾಡಲು ತಿಳಿಸಲಾಗಿರುತ್ತದೆ. ಅಂದ್ರೆ ನೀವು ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಹೇಗೆ ಗೊತ್ತಾ?
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯ! (Aadhar card pan card link mandatory)
ಯಾವುದೇ ಆಸ್ತಿ ಖರೀದಿ ಮಾಡುವ ಸಮಯದಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೂ ಮೊದಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯ.
ಆಸ್ತಿ ಖರೀದಿಗೆ ಪಾನ್ ಕಾರ್ಡ್ ಮಾಹಿತಿ ನೀಡಲೇಬೇಕು. ಆದಾಯ ತೆರಿಗೆ ಕಾಯ್ದೆ 139 ಎ ಎ ಅಡಿಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ, ಒಂದು ವೇಳೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ₹2.67 ಲಕ್ಷ ಸಬ್ಸಿಡಿ ಸಾಲ! ಸರ್ಕಾರದ ಹೊಸ ಯೋಜನೆ
ಆಸ್ತಿ ಖರೀದಿಯ (Buy Property) ನಂತರ 6 ತಿಂಗಳ ಅವಧಿ ನೀಡಲಾಗುತ್ತದೆ. ಅಷ್ಟರಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗದೆ ನೋಂದಣಿ (Property Registration) ಮಾಡಿಸಿಕೊಂಡಿದ್ದರೆ ಆಗ ಆದಾಯ ತೆರಿಗೆ ಇಲಾಖೆ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನೋಂದಣಿ ಸಮಯದಲ್ಲಿ ಲಿಂಕ್ ಆಗದೆ ಇದ್ದರೆ ಆಸ್ತಿ ನೊಂದಣಿ ಯಲ್ಲಿ ತಪ್ಪಾಗುವ ಸಾಧ್ಯತೆ ಇರುತ್ತದೆ. ಆಗ ನೀವು ನಿಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇರುವುದಕ್ಕೆ ಆದಾಯ ತೆರಿಗೆಯ ನೋಟಿಸ್ ಜಾರಿಯಾಗಬಹುದು. ಹಾಗಾಗಿ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ಈ ಕಡ್ಡಾಯ ನಿಯಮಗಳನ್ನು ತಿಳಿದುಕೊಂಡು ಅದನ್ನ ಪಾಲಿಸುವುದು ಒಳ್ಳೆಯದು.
New guidelines from center for site, house, property buyers