ಸ್ಟಾರ್ ಚಿಹ್ನೆ ಇರೋ ₹500 ರೂಪಾಯಿ ನೋಟಿನ ಬಗ್ಗೆ ಹೊಸ ಅಪ್ಡೇಟ್! ಮಹತ್ವದ ಮಾಹಿತಿ

500 ರೂಪಾಯಿಗಳ ನೋಟುಗಳನ್ನು (Indian currency) ಬ್ಯಾನ್ ಮಾಡಲಾಗುತ್ತದೆ ಎಂದು ಕೂಡ ವದಂತಿಗಳು ಹಬ್ಬಿತ್ತು, ಆದರೆ ಇದು ಸುಳ್ಳು ಸುದ್ದಿ ಎಂದು ಆರ್ ಬಿ ಐ (Reserve Bank of India) ಸ್ಪಷ್ಟನೆ ನೀಡಿದೆ

ಕೇಂದ್ರ ಸರ್ಕಾರ ಕಪ್ಪು ಹಣ ತಡೆಯಲು ನೋಟ್ ಬ್ಯಾನ್ (currency ban) ಮಾಡಿತ್ತು. 2 ಬಾರಿ ನೋಟ್ ಬ್ಯಾನ್ ಆದಾಗಲೂ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು

ಕಳೆದ ಬಾರಿ 2,000 ರೂಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸಲಾದ (Demonetisation of notes) ನಂತರ ಈಗ ಚಲಾವಣೆಯಲ್ಲಿ ಇರುವ 500 ರೂಪಾಯಿಗಳ ನೋಟುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ.

500 ರೂಪಾಯಿಗಳ ನೋಟುಗಳನ್ನು (Indian currency) ಬ್ಯಾನ್ ಮಾಡಲಾಗುತ್ತದೆ ಎಂದು ಕೂಡ ವದಂತಿಗಳು ಹಬ್ಬಿತ್ತು, ಆದರೆ ಇದು ಸುಳ್ಳು ಸುದ್ದಿ ಎಂದು ಆರ್ ಬಿ ಐ (Reserve Bank of India) ಸ್ಪಷ್ಟನೆ ನೀಡಿದೆ.

New update about all 500 rupee notes with star symbol

ಕ್ರೆಡಿಟ್ ಕಾರ್ಡ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಹೇಗೆ ಗೊತ್ತಾ?

500 ರೂಪಾಯಿ ನೋಟಿನಲ್ಲಿ ಸ್ಟಾರ್ ಚಿಹ್ನೆ ಇದೆಯಾ? (Star symbol in 500 rupees currency)

ಇದು ನಕಲಿ ಎನ್ನುವ ಸುದ್ದಿಯನ್ನು ಈಗಾಗಲೇ ವಾಟ್ಸಪ್ (WhatsApp) ಹಾಗೂ ಇತರ ಸೋಶಿಯಲ್ ಮೀಡಿಯಾದಲ್ಲಿ ನೀವು ಕೂಡ ಓದಿರಬಹುದು. ಹಾಗೇನೇ ಈ ವಿಷಯ ತಿಳಿಯುತ್ತಿದ್ದ ಹಾಗೆ ಇನ್ನಷ್ಟು ಜನರಿಗೆ ಅದನ್ನು ಫಾರ್ವರ್ಡ್ ಮಾಡಿರಬಹುದು.

ಸ್ಟಾರ್ ಚಿಹ್ನೆ 500 ರೂಪಾಯಿಗಳ ಸಂಖ್ಯೆಗಳ ನಡುವೆ ಕಾಣಿಸಿಕೊಂಡರೆ ಅದು ಫೇಕ್ ಅಥವಾ ನಕಲಿ ನೋಟು ಎನ್ನುವ ಸುದ್ದಿ ಈಗಾಗಲೇ ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾ (social media) ದಲ್ಲಿ ಹರಿದಾಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ

ಈ ರೀತಿ ನೋಟುಗಳು ಇದ್ರೆ ಜನ ಇದನ್ನು ಬಳಸಿ ಹಣಕಾಸಿನ ವಹಿವಾಟು (Money Transaction) ಮಾಡಲು ಕೂಡ ಹಿಂಜರಿಯುತ್ತಿದ್ದಾರೆ, ಆದರೆ ಈಗ ಫ್ಯಾಕ್ಟ್ ಚೆಕ್ ಮಾಡುವ ಪಿಐಬಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದೆ.

ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ₹2.67 ಲಕ್ಷ ಸಬ್ಸಿಡಿ ಸಾಲ! ಸರ್ಕಾರದ ಹೊಸ ಯೋಜನೆ

2017ರಿಂದಲೇ ಚಾಲ್ತಿಯಲ್ಲಿರುವ ನೋಟುಗಳು!

500 Rupees Note500 ರೂಪಾಯಿಗಳ ನೋಟುಗಳಲ್ಲಿ ಸ್ಟಾರ್ ಚಿಹ್ನೆ (Star Mark on Notes) ಇರುವುದು ಹೊಸದೇನು ಅಲ್ಲ. 2017ರಲ್ಲಿ ಪ್ರಿಂಟ್ (currency print) ಆಗಿರುವ ನೋಟುಗಳಲ್ಲಿಯೂ ಕೂಡ ಸ್ಟಾರ್ ಚಿನ್ನೆ ಇದೆ ಹಾಗಾಗಿ ಯಾರು ಕೂಡ ಸ್ಟಾರ್ ಚಿಹ್ನೆ ಇರುವ 500 ರೂಪಾಯಿಗಳ ನೋಟುಗಳು ಫೇಕ್ ಎಂದು ಭಾವಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಆರ್ ಬಿ ಐ ಮಾಹಿತಿ!

ಭಾರತೀಯ ರಿಸರ್ವ್ ಬ್ಯಾಂಕ್ ಹಿಂದೆಯೂ ಕೂಡ 500 ರೂಪಾಯಿಗಳ ನೋಟುಗಳಿಗೆ ಸಂಬಂಧಪಟ್ಟಂತೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಉತ್ತರವನ್ನು ನೀಡಿತ್ತು. 500 ರೂಪಾಯಿಗಳ ನೋಟುಗಳಲ್ಲಿ ಸ್ಟಾರ್ ಚಿಹ್ನೆ ಇದ್ದರೆ ಅದು ಮರು ಮುದ್ರಣ ಆಗಿರುವ ನೋಟು ಎಂಬುದನ್ನು ಸೂಚಿಸುತ್ತದೆ ಎನ್ನುವುದಾಗಿ ಈ ಹಿಂದೆಯೇ ತಿಳಿಸಿತ್ತು. ಈ ನೋಟುಗಳು ಕೂಡ ಇತರ ನೋಟುಗಳಂತೆ ಬಳಕೆಗೆ ಯೋಗ್ಯವಾದ ಹಣವಾಗಿದೆ ಎಂದು ಸ್ಪಷ್ಟನೆ ನೀಡಿತ್ತು.

ಬ್ಯಾಂಕ್ ಸಾಲ ಮಾಡಿದ್ದ ಮನೆಯ ಯಜಮಾನ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು?

ನೋಟುಗಳಲ್ಲಿ ಸ್ಟಾರ್ ಚಿಹ್ನೆಯನ್ನು ಮುದ್ರಣ ಮಾಡುವುದು ಯಾಕೆ?

ಸ್ಟಾರ್ ನ್ನು ಪ್ರಿಂಟ್ ಮಾಡುವುದು ಕೇವಲ 500 ರೂಪಾಯಿಗಳ ಮುಖಬೆಲೆ ನೋಟುಗಳಲ್ಲಿ ಮಾತ್ರವಲ್ಲ 10, 20, 50 ಹಾಗೂ 100 ರೂಪಾಯಿಗಳ ನೋಟುಗಳಲ್ಲಿಯೂ ಕೂಡ ಮುದ್ರಣ ಮಾಡಲಾಗಿದೆ, 2016ರಲ್ಲಿ ಗಾಂಧೀಜಿ ಚಿತ್ರವಿರುವ ನೋಟುಗಳಲ್ಲಿ ಎರಡು ಪ್ಯಾನಲ್ ಗಳಲ್ಲಿ “E” ಅಥವಾ ಸ್ಟಾರ್ ಚಿಹ್ನೆಯನ್ನು ಮುದ್ರಣ ಮಾಡಲಾಗಿದೆ.

ಇನ್ನು ಈ ರೀತಿಯ ಸ್ಟಾರ್ ಚಿಹ್ನೆಯನ್ನು ಯಾಕೆ ಆರ್ ಬಿ ಐ ನೋಟುಗಳಲ್ಲಿ ಪ್ರಕಟಿಸುತ್ತದೆ ಎಂಬುದನ್ನು ನೋಡುವುದಾದರೆ ನೋಟುಗಳ ಮುದ್ರಣದ ಸಮಯದಲ್ಲಿ ಯಾವುದೇ ಲೋಪ ದೋಷ ಉಂಟಾಗಿ ಆ ನೋಟುಗಳು ಬಳಕೆಗೆ ಯೋಗ್ಯವಲ್ಲ ಎನ್ನುವಂತಹ ಸಂದರ್ಭದಲ್ಲಿ ಮತ್ತೆ ಅದೇ ಮುಖಬೆಲೆಯ ನೋಟುಗಳನ್ನು ಅದೇ ಸೀರಿಯಲ್ ಸಂಖ್ಯೆಯನ್ನು ಹಾಕಿ ಪ್ರಿಂಟ್ ಮಾಡಲಾಗುತ್ತದೆ.

ಆದರೆ ಇದಕ್ಕೆ ಪ್ರಿಂಟ್ ಮಾಡಿದ ನಂತರ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅದೇ ಸೀರಿಯಲ್ ಇರುವ ನೋಟುಗಳಲ್ಲಿ ಸ್ಟಾರ್ ಸೇರಿಸಲಾಗುತ್ತದೆ. ಇದು ಮುದ್ರಣ ವೆಚ್ಚವನ್ನು ಕೂಡ ತಗ್ಗಿಸುತ್ತದೆ. ಯಾಕೆಂದರೆ ಒಂದೇ ಸೀರಿಯಲ್ ಸಂಖ್ಯೆಯ (serial number) ನೋಟುಗಳಾಗಿರುವುದರಿಂದ ಹೊಸ ಸೀರಿಯಲ್ ಸಂಖ್ಯೆ ಹಾಕಿ ಮತ್ತೆ ಮುದ್ರಿಸುವ ಅಗತ್ಯ ಇರುವುದಿಲ್ಲ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ EMI ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್

international level ಯೋಚನೆ ಇದಾಗಿದ್ದು ಹಣಕಾಸು ಮುದ್ರಣದಲ್ಲಿ ಯಾವುದೇ ಲೋಪ ದೋಷಗಳನ್ನು ತಡೆಗಟ್ಟಲು ಈ ರೀತಿ ಮಾಡಲಾಗಿದೆ ಹಾಗಾಗಿ ನಿಮ್ಮ ಬಳಿ ಇರುವ 500 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಸ್ಟಾರ್ ಚಿಹ್ನೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ಇದು ಫೇಕ್ ನೋಟು ಅಲ್ಲ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ.

New update about all 500 rupee notes with star symbol

Related Stories