ಬ್ಯಾಂಕ್ ನಲ್ಲಿ ಸಾಲ (bank loan) ಮಾಡಿರುವ ಗ್ರಾಹಕರಿಗೆ ಅನುಕೂಲವಾಗುವಂತಹ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿರುವ ಆರ್ ಬಿ ಐ (RBI) ನಿಜಕ್ಕೂ ಸಾಲಗಾರರ ಪಾಲಿಗೆ ವರದಾನವಾಗಿದೆ ಎನ್ನಬಹುದು.
ಮೊದಲೇ ಸಾಲದ ಹೊರೆ ಹೊತ್ತಿರುವ ಜನರಿಗೆ ಬ್ಯಾಂಕುಗಳ ಕೆಲವು ನಿಯಮಗಳು ನಿಜಕ್ಕೂ ಸಮಸ್ಯೆ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಲು ಆರ್ ಬಿ ಐ ನಿರ್ಧರಿಸಿದೆ.
ವಿದೇಶದಲ್ಲಿ ಓದಬೇಕು ಅನ್ನೋ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ
ಇಎಂಐ ಪಾವತಿಯ ಮೇಲಿನ ಹೊಸ ನಿಯಮ (New rules on EMI payment)
ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಸಾಲ ಪಡೆದುಕೊಳ್ಳಲು ಅವಕಾಶವಿರುತ್ತದೆ. ಗೃಹ ಸಾಲ (home loan) ಚಿನ್ನದ ಮೇಲಿನ ಸಾಲ (Gold Loan), ವೈಯಕ್ತಿಕ ಸಾಲ (personal loan) ವಾಹನದ ಮೇಲಿನ ಸಾಲ ಹೀಗೆ ನಿಮಗೆ ಅನುಕೂಲವಾದ ಸಾಲ ಸೌಲಭ್ಯವನ್ನು ಬ್ಯಾಂಕ್ ಗಳು ಒದಗಿಸುತ್ತವೆ.
ಎಲ್ಲಾ ಸಾಲಗಳನ್ನು ತೀರಿಸಲು ತಿಂಗಳ EMI ಅನ್ನು ನಾವು ಆಯ್ದುಕೊಳ್ಳುತ್ತೇವೆ, ಪ್ರತಿ ತಿಂಗಳು ತಪ್ಪದೇ ಇಎಂಐ ಮೊತ್ತವನ್ನು ಸಾಲಗಾರ ತನ್ನ ಸಾಲದ ಖಾತೆಗೆ ಜಮಾ ಮಾಡಬೇಕು, ನೀವು ಸಾಲ ಎಷ್ಟು ತೆಗೆದುಕೊಳ್ಳುತ್ತೀರಿ ಎನ್ನುವ ಮೌಲ್ಯದ ಆಧಾರದ ಮೇಲೆ ಇಎಂಐ ಮೊತ್ತ ಕೂಡ ನಿರ್ಧಾರಿತವಾಗಿರುತ್ತದೆ.
ಬ್ಯಾಂಕ್ ನಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು? ಬದಲಾದ ನಿಯಮ; ಹೊಸ ರೂಲ್ಸ್
ಒಂದು ವೇಳೆ ಪಾವತಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಮುಂದೇನು?
ಸಾಮಾನ್ಯವಾಗಿ ಬ್ಯಾಂಕ್ ಯಾವುದೇ ರೀತಿಯ ಸಾಲಕ್ಕೆ ಪ್ರತಿ ತಿಂಗಳು 2ರಿಂದ 4ನೇ ತಾರೀಖಿನ ಒಳಗೆ ಹಣವನ್ನ ನೇರವಾಗಿ ಗ್ರಾಹಕನ ಖಾತೆಯಿಂದ ಕಡಿತಗೊಳಿಸುತ್ತದೆ. ಆದರೆ ಸಾಕಷ್ಟು ಕಂಪನಿಗಳು ಪ್ರತಿ ತಿಂಗಳು 5 ನೇ ತಾರೀಖಿನಿಂದ 10ನೇ ತಾರೀಖಿನ ಒಳಗೆ ನೌಕರರಿಗೆ ಸಂಬಳ ವಿತರಣೆ ಮಾಡುತ್ತವೆ.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ವ್ಯಕ್ತಿಗೆ ಬ್ಯಾಂಕ್ ನಿಗದಿಪಡಿಸಿದ ದಿನಾಂಕವೇ ಇಎಂಐ ಪಾವತಿ ಮಾಡಲು ಸಾಧ್ಯವಾಗದೆ ಇರಬಹುದು. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಸಾಲಗಾರರಿಗೆ ತಕ್ಷಣವೇ ಹೆಚ್ಚುವರಿ ಶುಲ್ಕ (extra fees) ವಿಧಿಸುತ್ತವೆ. ಈ ಪ್ರಕ್ರಿಯೆಗೆ ಆರ್ ಬಿ ಐ ಕಡಿವಾಣ ಹಾಕಿದೆ.
ಬ್ಯಾಂಕುಗಳು ಥಟ್ ಅಂತ ಲೋನ್ ಕೊಡೋ ಹಾಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?
ಹೆಚ್ಚುವರಿ ಶುಲ್ಕ ಅಥವಾ ದಂಡ ವಿಧಿಸುವಂತಿಲ್ಲ (No penalty)
ಹೌದು, ಇನ್ನು ಮುಂದೆ ಬ್ಯಾಂಕ್ ಏಕಾಏಕಿ ನೀವು ಒಂದು ತಿಂಗಳ ಇಎಂಐ ಅನ್ನು ಅದೇ ನಿಗದಿತ ದಿನಾಂಕದಂದು ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ. ಪ್ರತಿಯೊಬ್ಬ ಸಾಲಗಾರರಿಗೂ ಕೂಡ ಇಎಂಐ ಪಾವತಿ ಮಾಡಲು ಒಂದು ವಾರದ ಗ್ರೇಸ್ ಪೀರಿಯಡ್ (Grace period) ನೀಡಬೇಕು.
ನಿಗದಿತ ದಿನಾಂಕದ ಮೇಲೆ ಒಂದು ವಾರವನ್ನು ಹೆಚ್ಚುವರಿಯಾಗಿ ನೀಡಿದ ನಂತರವೂ ಕೂಡ ಇಎಂಐ ಪಾವತಿ ಮಾಡದೆ ಇದ್ದಲ್ಲಿ ಆಗ ದಂಡ ವಿಧಿಸಬಹುದು ಎಂದು ಆರ್‌ಬಿಐ ತಿಳಿಸಿದೆ.
ಇನ್ನು ಎಷ್ಟೋ ಬಾರಿ ಗ್ರಾಹಕರ ಖಾತೆಯಲ್ಲಿ ಇಎಂಐ ಪಾವತಿ ಮಾಡಲು ಬೇಕಾಗಿರುವಷ್ಟು ಹಣ ಇರುವುದಿಲ್ಲ ಇದನ್ನು ಗ್ರಾಹಕರಿಗೆ ಮುಂಚಿತವಾಗಿಯೇ ನೋಟಿಫಿಕೇಶನ್ (notification) ಕಳುಹಿಸುವುದರ ಮೂಲಕ ಗ್ರಾಹಕರನ್ನ ಜಾಗೃತಗೊಳಿಸಬೇಕು ಎಂದು ಆರ್‌ಬಿಐ ತಿಳಿಸಿದೆ.
ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ, ಸಿಗಲಿದೆ 50 ಲಕ್ಷ ಸಬ್ಸಿಡಿ ಸಾಲ
ಇಂತಹ ಮಹತ್ತರ ಬದಲಾವಣೆಗಳನ್ನು ಆರ್‌ಬಿಐ ತಂದಿರುವುದರಿಂದ ಸಾಕಷ್ಟು ಇಎಂಐ ಪಾವತಿ ದಾರರಿಗೆ ಸಹಾಯಕವಾಗಲಿದೆ. ಒಂದು ವಾರ ಹೆಚ್ಚುವರಿ ಯಾಗಿ ಅವಧಿ ಸಿಗುವುದರಿಂದ ಸಂಬಳ ಆಗುತ್ತಿದ್ದ ಹಾಗೆ ನೇರವಾಗಿ ಖಾತೆಯಿಂದ ಬ್ಯಾಂಕಿಗೆ ಹಣ ಜಮಾ ಮಾಡಿಕೊಳ್ಳಬಹುದು.
Good news for those who borrow from any bank and paying EMI
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.