Business News

ವಿದೇಶದಲ್ಲಿ ಓದಬೇಕು ಅನ್ನೋ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ

Education Scholarship : ತಮ್ಮ ಉನ್ನತ ಶಿಕ್ಷಣವನ್ನು (higher studies) ಅಥವಾ ಓದಿನ ಯಾವುದೇ ಹಂತವನ್ನು ವಿದೇಶದಲ್ಲಿ ಮುಂದುವರಿಸಬೇಕು ಎಂದು ಹಲವರ ಆಶಯ. ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ, ಹಾಗಂದ ಮಾತ್ರಕ್ಕೆ ಈ ಕನಸನ್ನು ಹಾಗೆಯೇ ಬಿಟ್ಟುಬಿಡಬೇಕು ಎಂದೇನು ಇಲ್ಲ.

ಯಾಕೆಂದರೆ ಇಂದು ಸಾಕಷ್ಟು ವಿದೇಶಗಳಲ್ಲಿ ಶಿಕ್ಷಣಕ್ಕಾಗಿ (studies in foreign countries) ಭಾರತೀಯ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿದ್ದು ಅವರೇ ವಿದ್ಯಾರ್ಥಿ ವೇತನವನ್ನು ಕೂಡ ನೀಡುತ್ತಿದ್ದಾರೆ.

The central government brought a new scholarship scheme for students

ಬ್ಯಾಂಕ್ ನಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು? ಬದಲಾದ ನಿಯಮ; ಹೊಸ ರೂಲ್ಸ್

ವಿದೇಶಗಳಲ್ಲಿ ಓದುವುದಕ್ಕೆ ಸಿಗುತ್ತೆ ವಿದ್ಯಾರ್ಥಿ ವೇತನ (Scholarship for studying abroad)

ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿದೇಶಗಳಲ್ಲಿ ಓದಲು ವಿದೇಶಗಳೇ ಅವಕಾಶ ಮಾಡಿಕೊಡುತ್ತಿವೆ. ಇಂತಹ ದೇಶಗಳಲ್ಲಿ ಸಿಂಗಾಪೂರ್ (Singapore) ಕೂಡ ಒಂದು. ಪ್ರಸ್ತುತ ಸಿಂಗಾಪುರ್ ಭಾರತೀಯ ವಿದ್ಯಾರ್ಥಿಗಳು ತಮ್ಮ ದೇಶದಲ್ಲಿ ಓದುವುದಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನದ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ.

Singapore ವಿದ್ಯಾರ್ಥಿ ವೇತನ!

1. ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್ (NUS) – ವಿಜ್ಞಾನ ಮತ್ತು ತಂತ್ರಜ್ಞಾನ (S&T) ಪದವಿಪೂರ್ವ ವಿದ್ಯಾರ್ಥಿಗಳ ಜೀವನ ವೆಚ್ಚ, ವಸತಿ, ಊಟ, ಪ್ರಯಾಣದ ವೆಚ್ಚ ಎಲ್ಲವನ್ನು ಭರಿಸುವಂತಹ ವಿದ್ಯಾರ್ಥಿ ವೇತನವನ್ನು ನೀಡುತ್ತದೆ.

2. ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿ (NTU) ನವೋದಯ ಇಂಜಿನಿಯರಿಂಗ್ ಪ್ರೋಗ್ರಾಂ ಸ್ಕಾಲರ್‌ಶಿಪ್

3. NTU-ಯೂನಿವರ್ಸಿಟಿ ಸ್ಕಾಲರ್ಸ್ ಪ್ರೋಗ್ರಾಂ ಸ್ಕಾಲರ್‌ಶಿಪ್

ಈ ಮೂರು ಸಿಂಗಾಪುರ್ ನಲ್ಲಿ ಸಿಗಲಿರುವ ಪ್ರಮುಖ ಸ್ಕಾಲರ್ಶಿಪ್ ಗಳು.

ಬ್ಯಾಂಕುಗಳು ಥಟ್ ಅಂತ ಲೋನ್ ಕೊಡೋ ಹಾಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?

Education scholarshipನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್ (NUS)

*ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಸಿಂಗಾಪೂರ್ ನಲ್ಲಿ ಅಧ್ಯಯನ ಮಾಡಬೇಕು.

*ಪ್ರಪಂಚದ ಯಾವುದೇ ಭಾಗದ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಈ ವಿದ್ಯಾರ್ಥಿ ವೇತನ ಲಭ್ಯವಾಗುತ್ತದೆ.

*ಸಿಂಗಾಪುರ್ ಹೊರತುಪಡಿಸಿ ಏಷ್ಯಾದ ಯಾವುದೇ ಭಾಗದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಸಾಧ್ಯವಿದೆ.

*ಪಠ್ಯೇತರ ವಿಭಾಗದಲ್ಲಿಯೂ ಕೂಡ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಾಗಿರಬೇಕು.

*ಉತ್ತಮ ನಾಯಕತ್ವದ ಗುಣ ಹೊಂದಿರಬೇಕು.

*ಪ್ರೌಢಶಾಲಾ ಹಂತದಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣಕ್ಕಾಗಿ ಸಿಂಗಾಪುರ್ ನಲ್ಲಿ ಓದಲು ಬಯಸಿದರೆ ಈ ವಿದ್ಯಾರ್ಥಿ ವೇತನ ಲಭ್ಯವಾಗುತ್ತದೆ.

ಕೇವಲ ₹25000ಕ್ಕೆ ನಿಮ್ಮದಾಗಿಸಿಕೊಳ್ಳಿ 85km ಮೈಲೇಜ್ ನೀಡುವ ಹೀರೋ ಬೈಕ್

ವಿದ್ಯಾರ್ಥಿ ವೇತನದ ಮೊತ್ತ! (Scholarship amount)

ವಾರ್ಷಿಕ ಜೀವನ ಭತ್ಯೆ ರೂ 3,42,000
ಮರುಸ್ಥಳಾಂತರ ಭತ್ಯೆ ರೂ 11,400

ನವೋದಯ ಎಂಜಿನಿಯರಿಂಗ್ ಪ್ರೋಗ್ರಾಂ ವಿದ್ಯಾರ್ಥಿವೇತನ (REPS)

*ಪ್ರಪಂಚದ ಯಾವುದೇ ಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

*ನವೋದಯ ಇಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಯನ ಪೂರ್ಣಗೊಳಿಸಲು ಸಿದ್ಧರಿರಬೇಕು.

*ಶೈಕ್ಷಣಿಕ ವಿಚಾರ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡ ಸಾಧನೆ ಮಾಡಿದವರಾಗಿರಬೇಕು.

ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ, ಸಿಗಲಿದೆ 50 ಲಕ್ಷ ಸಬ್ಸಿಡಿ ಸಾಲ

ವಿದ್ಯಾರ್ಥಿವೇತನದ ಮೊತ್ತ

Rs 3,42,000 ವರ್ಷದ ಖರ್ಚುವೆಚ್ಚ.
ವರ್ಷಕ್ಕೆ Rs 28,000 ಪುಸ್ತಕ ಭತ್ಯೆ.
NTU ಹಾಸ್ಟೆಲ್ ನಿವಾಸಿಗಳಿಗೆ ವಸತಿ ಭತ್ಯೆ ಕೂಡ ನೀಡಲಾಗುವುದು.

ಪದವಿಪೂರ್ವ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕಾಗಿ ಸಿಂಗಾಪುರದಲ್ಲಿ ಶಿಕ್ಷಣ (Education) ಮಾಡಲು ಬಯಸುವವರಿಗೆ ಈ ಮೇಲಿನ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎನ್ನಬಹುದು.

Students who want to study in abroad will get Education scholarship

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories