ಬ್ಯಾಂಕ್ ನಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು? ಬದಲಾದ ನಿಯಮ; ಹೊಸ ರೂಲ್ಸ್
ನಮ್ಮ ಜೀವನದಲ್ಲಿ ಬ್ಯಾಂಕ್ ವ್ಯವಹಾರಗಳು (bank transaction) ಹಾಸುಹೊಕ್ಕಾಗಿದೆ. ಪ್ರತಿಯೊಂದು ಹಣಕಾಸು ವ್ಯವಹಾರಗಳನ್ನು ಮಾಡಲು ಬ್ಯಾಂಕ್ (Bank) ಅನ್ನು ಅವಲಂಬಿಸುತ್ತೇವೆ.
ಇವತ್ತಿನ ನಮ್ಮ ಜೀವನದಲ್ಲಿ ಬ್ಯಾಂಕ್ ವ್ಯವಹಾರಗಳು (bank transaction) ಹಾಸುಹೊಕ್ಕಾಗಿದೆ. ಪ್ರತಿಯೊಂದು ಹಣಕಾಸು ವ್ಯವಹಾರಗಳನ್ನು ಮಾಡಲು ಬ್ಯಾಂಕ್ (Bank) ಅನ್ನು ಅವಲಂಬಿಸುತ್ತೇವೆ.
ಮುಂಚಿನಂತೆ ಜನರಿಂದ ಜನರ ಕೈಗೆ ನಗದು ಹಣ ಕೊಟ್ಟು ವ್ಯವಹಾರ ಮಾಡುವ ಪದ್ಧತಿ ಈಗ ಬಹಳ ಕಡಿಮೆಯಾಗಿದೆ, ನಾವು ಆನ್ಲೈನ್ (online payment) ಮೂಲಕ ಹಣ ಪಾವತಿ ಮಾಡುತ್ತೇವೆ ಅಥವಾ ಬ್ಯಾಂಕ್ ಮೂಲಕ ಚೆಕ್ ಬುಕ್ ಗಳ ಮೂಲಕ ಹಣದ ವ್ಯವಹಾರ ನಡೆಸಲಾಗುತ್ತದೆ.
ಬ್ಯಾಂಕಿಂಗ್ ವ್ಯವಹಾರ ಅಂದ್ರೆ ಅಲ್ಲಿ ಆದಾಯ ತೆರಿಗೆ (Income Tax) ಕೂಡ ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಬ್ಯಾಂಕಿನಲ್ಲಿ ನೀವು ಎಷ್ಟು ಹಣ ಡೆಪಾಸಿಟ್ (deposit in bank) ಇಡುತ್ತೀರಿ? ಎಷ್ಟು ಹಣವನ್ನು ಹಿಂಪಡೆಯುತ್ತೀರಿ ಎನ್ನುವುದರ ಆಧಾರದ ಮೇಲೆ ಆದಾಯ ತೆರಿಗೆ ಕೂಡ ನಿರ್ಧಾರವಾಗುತ್ತದೆ.
ಇನ್ನೇನು 2023ರ ಹಣಕಾಸು ವರ್ಷ (financial year 2023) ಮುಗಿಯುತ್ತಿದ್ದಂತೆ ಮುಂದಿನ ವರ್ಷದ ಆರಂಭದಲ್ಲಿ ಟ್ಯಾಕ್ಸ್ ಪೇ (tax pay) ಮಾಡಬೇಕು ಅದಕ್ಕಿಂತ ಮುಂಚೆ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಕೇಂದ್ರ ಸರ್ಕಾರ ಸೂಚಿಸಿರುವ ಕೆಲವು ಪ್ರಮುಖ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಸೂಕ್ತ.
ಬ್ಯಾಂಕುಗಳು ಥಟ್ ಅಂತ ಲೋನ್ ಕೊಡೋ ಹಾಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?
ಬ್ಯಾಂಕ್ ನಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು? (How much deposit you can keep in bank)
ಸಾಮಾನ್ಯವಾಗಿ ಎಲ್ಲರೂ ಉಳಿತಾಯ ಖಾತೆಯನ್ನು (savings account) ಬ್ಯಾಂಕ್ ನಲ್ಲಿ ಹೊಂದಿರುತ್ತಾರೆ ಇನ್ನು ನೀವು ಉಳಿತಾಯ ಖಾತೆಯಲ್ಲಿ (Current Account) ಒಂದು ಆರ್ಥಿಕ ವರ್ಷದಲ್ಲಿ ಎಷ್ಟು ಹಣದ ವ್ಯವಹಾರ ಮಾಡಬಹುದು ಎಂಬುದಕ್ಕೂ ಕೂಡ ಮಿತಿ ಇದೆ.
ಉಳಿತಾಯ ಖಾತೆಯನ್ನು ಬ್ಯಾಂಕ್ ನಲ್ಲಿ ಹೊಂದಿರುವವರು ಒಂದು ವರ್ಷದ ಅವಧಿಯಲ್ಲಿ ಅಂದರೆ ಒಂದು ವರ್ಷದ ಹಣಕಾಸು ಅವಧಿಯಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ನಗದು ಠೇವಣಿ ಇಡುವುದು ಹಾಗೂ ಹಣ ಹಿಂಪಡೆಯುವ ಪ್ರಕ್ರಿಯೆ ನಡೆಸಬಹುದು.
ಇದಕ್ಕಿಂತ ಹೆಚ್ಚಿಗೆ ಹಣ ಇಟ್ಟರೆ ಅಥವಾ ಇದಕ್ಕಿಂತ ಹೆಚ್ಚಿಗೆ ಹಣದ ವ್ಯವಹಾರ ನಡೆಸಿದರೆ ಆದಾಯ ಇಲಾಖೆಯ ನೋಟಿಸ್ (income tax notice) ನಿಮ್ಮ ಮನೆ ಬಾಗಿಲಿಗೆ ಬರಬಹುದು. ಒಂದು ವೇಳೆ ನೀವು ಇಟ್ಟ ಡೆಪಾಸಿಟ್ ಹಣಕ್ಕೆ ನಿಮ್ಮ ಬಳಿ ಸರಿಯಾದ ದಾಖಲೆಗಳು ಇದ್ರೆ ಯಾವುದೇ ರೀತಿಯ ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ದಾಖಲೆ ಇಲ್ಲದೆ ಇದ್ದಾಗ ದಂಡ ಪಾವತಿಸಬೇಕಾಗುತ್ತದೆ. ಇನ್ನು ಈ ಮಿತಿ ಚಾಲ್ತಿ ಖಾತೆ (current account) ಹೊಂದಿರುವವರಿಗೆ 50 ಲಕ್ಷ ರೂಪಾಯಿಗಳು.
ಒಂದು ವೇಳೆ ಗ್ರಾಹಕರು ಅಂಚೆ ಕಛೇರಿಗಳಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿ (Mutual Fund) ಅಥವಾ ಇತರ ಯಾವುದೇ ಹಣಕಾಸು ವ್ಯವಹಾರಗಳಲ್ಲಿ ಈ ಮಿತಿಯನ್ನು ಮೀರಿದರೆ ತಕ್ಷಣವೇ ಆದಾಯ ಇಲಾಖೆಗೆ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು.
ಕೇವಲ ₹25000ಕ್ಕೆ ನಿಮ್ಮದಾಗಿಸಿಕೊಳ್ಳಿ 85km ಮೈಲೇಜ್ ನೀಡುವ ಹೀರೋ ಬೈಕ್
ಒಬ್ಬ ವ್ಯಕ್ತಿ ಎಷ್ಟು ಖಾತೆ ಹೊಂದಿರಬಹುದು? (Multiple Bank account)
ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ತೆರೆಯಬಹುದು. ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದಿರಬಹುದು, ಆದರೆ ನೀವು ಹೀಗೆ ಹೆಚ್ಚಿಗೆ ಉಳಿತಾಯ ಖಾತೆಯನ್ನು ಹೊಂದಿದ್ದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ.
ನೀವು ಎಷ್ಟೇ ಖಾತೆ ಹೊಂದಿದ್ದರು ಕೂಡ ಆರ್ಥಿಕ ವರ್ಷದಲ್ಲಿ, ಹಣಕಾಸಿನ ವ್ಯವಹಾರ ನಡೆಸಲು ಸಾಧ್ಯವಾಗುವುದು ಹತ್ತು ಲಕ್ಷ ಮೊತ್ತದ ವರೆಗೆ ಮಾತ್ರ. ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದರೆ ಹೆಚ್ಚುವರಿಯಾಗಿ ಶುಲ್ಕ (processing fee) ಪಾವತಿಸಬೇಕೇ ಹೊರತು ಇದರಿಂದ ಬೇರೆ ಪ್ರಯೋಜನವಿಲ್ಲ. ಹಾಗಾಗಿ ಒಂದೇ ಉಳಿತಾಯ ಖಾತೆಯನ್ನು ಹೊಂದಿರುವುದು ಒಳ್ಳೆಯದು.
ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ, ಸಿಗಲಿದೆ 50 ಲಕ್ಷ ಸಬ್ಸಿಡಿ ಸಾಲ
ಚೆಕ್ ಮೂಲಕ ಹಣಕಾಸು ವ್ಯವಹಾರಕ್ಕೆ ಬದಲಾದ ನಿಯಮ!
ಸಾಮಾನ್ಯವಾಗಿ ಚಾಲ್ತಿ ಖಾತೆ ಹೊಂದಿರುವವರು, ಅಂದರೆ ತಮ್ಮದೇ ಆಗಿರುವ ಉದ್ಯೋಗ ಮಾಡುವವರು ಬ್ಯಾಂಕ್ ನಿಯಮವನ್ನು ತಿಳಿದುಕೊಳ್ಳಬೇಕು. ಇನ್ನು ನೀವು ಚೆಕ್ ಡೆಪಾಸಿಟ್ (cheque deposit) ಮಾಡುವುದಾದರೆ ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಗಾದರೆ 10 ಲಕ್ಷ ಹಾಗೂ ಚಾಲ್ತಿ ಖಾತೆಗಾದರೆ 50 ಲಕ್ಷದ ಮಿತಿಯನ್ನು ವಿಧಿಸಲಾಗಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1947 ಒಂದು ಹಣಕಾಸು ವರ್ಷದಲ್ಲಿ 10 ಲಕ್ಷದವರೆಗಿನ ವ್ಯವಹಾರ ನಡೆಸಬಹುದು. ಪೇಮೆಂಟ್ ಅಂಡ್ ಸೆಟಲ್ಮೆಂಟ್ ಆಕ್ಟ್ 2007 (payment and settlement act 2007), ಸೆಕ್ಷನ್ 18ರ ಪ್ರಕಾರ ಈ ನಿಯಮ ಇವೆಲ್ಲಾ ಬ್ಯಾಂಕ್ ಗ್ರಾಹಕರಿಗೆ ಅನ್ವಯವಾಗಲಿದೆ. ಕೃಷಿ ಉಪಕರಣಗಳಿಗೆ ಸಾಲ, ಚೆಕ್ ಗಳು, ಬ್ಯಾಂಕ್ ಡ್ರಾಫ್ಟ್ ಗಳು ವ್ಯವಹಾರಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮವನ್ನು ಬಿಗಿಗೊಳಿಸಿದೆ.
ಸ್ವಂತ ಮನೆ ಇರುವ ಎಲ್ಲರಿಗೂ ತೆರಿಗೆ ನಿಯಮ ಬದಲಾವಣೆ! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ
How much money can be deposited in the bank, Changed rules