ಬ್ಯಾಂಕ್ ಸಾಲ ಮಾಡಿದ್ದ ಮನೆಯ ಯಜಮಾನ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು?

ಸಾಲದಲ್ಲಿ ಸಾಕಷ್ಟು ವಿಧಗಳು ಇವೆ, ನೀವು ಗೃಹ ಸಾಲ (home loan) ತೆಗೆದುಕೊಳ್ಳಬಹುದು, ವಾಹನದ ಮೇಲಿನ ಸಾಲ, ಕ್ರೆಡಿಟ್ ಲೋನ್ (credit loan) ಚಿನ್ನ ಅಡವಿಟ್ಟು ತೆಗೆದುಕೊಳ್ಳುವ ಸಾಲ (Gold Loan), ವೈಯಕ್ತಿಕ ಸಾಲ (Personal Loan)

ಎಷ್ಟೇ ದುಡಿಮೆ ಮಾಡಿದರು ಕೂಡ ಅದಕ್ಕೆ ತಕ್ಕ ಹಾಗೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ದುಡಿಮೆ ಮಾಡಿರುವ ಹಣದ ಹೊರತಾಗಿ ಸಾಲ (loan) ತೆಗೆದುಕೊಳ್ಳುವಂತಹ ಅನಿವಾರ್ಯತೆ ಸೃಷ್ಟಿಯಾಗಿ ಬಿಡುತ್ತದೆ. ಹಾಗಾಗಿ ಒಂದಲ್ಲ ಒಂದು ಕಾರಣಕ್ಕೆ ಒಂದು ಬ್ಯಾಂಕ್ ಮೊರೆ ಹೋಗಬೇಕು.

ಬ್ಯಾಂಕ್ ಸಾಲ (bank loan) ಎನ್ನುವುದು ಮನುಷ್ಯನಿಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ. ಆದರೆ ಏನು ಮಾಡುವುದು, ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಸಾಲ ತೆಗೆದುಕೊಳ್ಳುವುದಕ್ಕಿಂತ ಬೇರೆ ಆಪ್ಷನ್ ಇರುವುದೇ ಇಲ್ಲ.

ಇನ್ನು ಸಾಲದಲ್ಲಿ ಸಾಕಷ್ಟು ವಿಧಗಳು ಇವೆ, ನೀವು ಗೃಹ ಸಾಲ (home loan) ತೆಗೆದುಕೊಳ್ಳಬಹುದು, ವಾಹನದ ಮೇಲಿನ ಸಾಲ, ಕ್ರೆಡಿಟ್ ಲೋನ್ (credit loan) ಚಿನ್ನ ಅಡವಿಟ್ಟು ತೆಗೆದುಕೊಳ್ಳುವ ಸಾಲ (Gold Loan), ವೈಯಕ್ತಿಕ ಸಾಲ (Personal Loan) ವಿಶೇಷ ಯೋಜನೆಗಳ ಅಡಿಯಲ್ಲಿ ಸಾಲ, ಹೀಗೆ ಬೇರೆ ಬೇರೆ ರೀತಿಯಾದಂತಹ ಸಾಲಗಳು ಲಭ್ಯವಿರುತ್ತದೆ.

ಬ್ಯಾಂಕ್ ಸಾಲ ಮಾಡಿದ್ದ ಮನೆಯ ಯಜಮಾನ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು? - Kannada News

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ EMI ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್

ಲೋನ್ ಬಗ್ಗೆ ಇರುವ ರೂಲ್ಸ್ ತಿಳಿದುಕೊಳ್ಳಿ! (Rules about bank loans)

Bank Loanಸಾಲಕ್ಕೆ ಸಂಬಂಧಪಟ್ಟ ಹಾಗೆ ಬಡ್ಡಿದರ (interest rate) ಹಾಗೂ ನಿಯಮಗಳು ಕೂಡ ಬೇರೆ ಬೇರೆ ಆಗಿರುತ್ತವೆ. ಗೃಹ ಸಾಲ, ವಾಹನದ ಮೇಲಿನ ಸಾಲ, ಚಿನ್ನದ ಸಾಲ ಇವೆಲ್ಲ ಶ್ಯೂರಿಟಿ (surety) ಆಧಾರದ ಮೇಲೆ ಕೊಡುವಂತಹ ಸಾಲ.

ಅಂದರೆ ಯಾರು ಸಾಲ ತೆಗೆದುಕೊಳ್ಳಲು ಇಚ್ಚಿಸುತ್ತಾರೋ ಅಂಥವರು ತಮ್ಮ ಆಸ್ತಿ ಪತ್ರ ಅಥವಾ ಅಮೂಲ್ಯವಾದ ವಸ್ತುವನ್ನು ಅಡವಿಡಬೇಕು. ಆದರೆ ವೈಯಕ್ತಿಕ ಸಾಲ (personal loan) ದಲ್ಲಿ ಹಾಗಲ್ಲ, ಇದು ಶ್ಯೂರಿಟಿ ಇಲ್ಲದೆ ಇರುವ ಸಾಲವಾಗಿದ್ದು ಕೇವಲ ವ್ಯಕ್ತಿಯ ತಿಂಗಳ ವೇತನದ ಆಧಾರದ ಮೇಲೆ ಕ್ರೆಡಿಟ್ ಸ್ಕೋರ್ (credit score) ಆಧಾರದ ಮೇಲೆ ಪಡೆದುಕೊಳ್ಳುವಂತದ್ದು. ಇದಕ್ಕೆ ಬೇರೆ ಯಾವುದೇ ರೀತಿಯ ಅಡಮಾನ ಇಡಬೇಕಿಲ್ಲ.

ವಿದೇಶದಲ್ಲಿ ಓದಬೇಕು ಅನ್ನೋ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ

ಸಾಲಗಾರ ಮೃತಪಟ್ಟರೆ ಸಾಲ ತೀರಿಸುವ ಜವಾಬ್ದಾರಿ ಯಾರದ್ದು

ಬದುಕಿನ ಬಂಡಿಯನ್ನು ನಡೆಸುವ ಯಜಮಾನ ಅಕಾಲಿಕ ಮರಣ ಹೊಂದಿದರೆ ಕುಟುಂಬದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಸ್ಯೆಗಳಲ್ಲಿ ಬ್ಯಾಂಕ್ ಸಾಲವನ್ನು ಯಾರು ತೀರಿಸಬೇಕು ಎನ್ನುವುದು ಕೂಡ ಬಹಳ ದೊಡ್ಡ ಸಮಸ್ಯೆಯೇ ಎನ್ನಬಹುದು.

ಯಾಕಂದ್ರೆ ಎಷ್ಟೋ ಬಾರಿ ಮನೆಯ ಯಜಮಾನ ಸಾಲ ಮಾಡಿರುವುದು ಕುಟುಂಬದ ಇತರ ಸದಸ್ಯರಿಗೆ ಗೊತ್ತೇ ಇರೋದಿಲ್ಲ. ಯಾವಾಗ ಬ್ಯಾಂಕ್ ನಿಂದ ಕರೆ ಬರುತ್ತದೆಯೋ ಆಗಲೇ ಈ ಬಗ್ಗೆ ತಿಳಿಯುತ್ತದೆ. ಇಂತಹ ಸಂದರ್ಭದಲ್ಲಿ ನಿಜಕ್ಕೂ ಮನೆಯ ಇತರ ಸದಸ್ಯರು ಮಾಡಿರುವ ಸಾಲಕ್ಕೆ ಕುಟುಂಬದವರೇ ಹೊಣೆಯಾಗುತ್ತಾರಾ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಇಲ್ಲಿದೆ ಉತ್ತರ.

ಬ್ಯಾಂಕ್ ಸಾಲವನ್ನು ಕೊಟ್ಟ ನಂತರ ಸಾಲಗಾರ ಅದನ್ನ ಸರಿಯಾದ ಸಮಯಕ್ಕೆ ತೀರಿಸಬೇಕು. ಒಂದು ವೇಳೆ ಕಂತುಗಳನ್ನ ಪಾವತಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಆತನಿಗೆ ನೋಟಿಸ್ ಜಾರಿ ಮಾಡುವ ಬ್ಯಾಂಕ್ ಆಗಲು ಆತ ಸ್ಪಂದಿಸದೆ ಇದ್ದಾಗ ಹಣ ವಸೂಲಿಗಾಗಿ ಏಜೆಂಟ್ ಗಳ ಸಹಾಯವನ್ನು ಬ್ಯಾಂಕ್ ಪಡೆಯಬಹುದು.

ಬ್ಯಾಂಕ್ ನಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು? ಬದಲಾದ ನಿಯಮ; ಹೊಸ ರೂಲ್ಸ್

ಹಣ ವಸುಲಾತಿಗಾಗಿ ರಿಕವರಿ ಏಜೆಂಟ್ (recovery agent) ಗಳು ನಿಮ್ಮ ಮನೆ ಬಾಗಿಲಿಗೆ ಬರಬಹುದು. ಆಗಲೂ ಕೂಡ ನಿಮ್ಮಿಂದ ಪ್ರತಿಕ್ರಿಯೆ ಸರಿಯಾಗಿ ಇಲ್ಲದೆ ಇದ್ದಲ್ಲಿ, ನೀವು ಅಡವಿಟ್ಟ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳಬಹುದು. ಹರಾಜು ಕೂಡ ಮಾಡಬಹುದು.

ಇನ್ನು ಮನೆಯ ಯಜಮಾನ ಅಥವಾ ಸಾಲ ಮಾಡಿದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಆ ಸಾಲವನ್ನು ತೀರಿಸುವಂತೆ ಬ್ಯಾಂಕ್ ಮನೆಯವರನ್ನು ಕೇಳಬಹುದು. ಕುಟುಂಬದವರು ಯಾವುದೇ ರೀತಿಯ ಹೊಣೆಗಾರಿಕೆ ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಮಾತ್ರ ಆಸ್ತಿ ಹರಾಜು ಪ್ರಕ್ರಿಯೆ ಹಂತಕ್ಕೆ ಬ್ಯಾಂಕ್ ಹೋಗಬಹುದು.

ಆದರೆ ನಿಜವಾದ ಸಮಸ್ಯೆ ಇರುವುದು ವಯಕ್ತಿಕ ಸಾಲದಲ್ಲಿ. ಯಾಕಂದ್ರೆ ವೈಯಕ್ತಿಕ ಸಾಲದಲ್ಲಿ (Personal Loan) ಯಾವುದೇ ಶ್ಯೂರಿಟಿ ಇಲ್ಲದೆ ಸಾಲ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ತೀರಿಸುವುದಕ್ಕೂ ಮೊದಲೇ ಸಾಲಗಾರ ಮೃತಪಟ್ಟರೆ ಬ್ಯಾಂಕ್ ನೇರವಾಗಿ ಕುಟುಂಬದವರನ್ನು ಕೇಳುವಂತಿಲ್ಲ.

ಬ್ಯಾಂಕುಗಳು ಥಟ್ ಅಂತ ಲೋನ್ ಕೊಡೋ ಹಾಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?

ವೈಯಕ್ತಿಕ ಸಾಲಕ್ಕೆ (Personal Loan) ಕುಟುಂಬದವರು ಹೊಣೆಗಾರರಾಗುವುದಿಲ್ಲ. ಹಾಗಾಗಿ ಇಂತಹ ಸಂದರ್ಭದಲ್ಲಿ ಬ್ಯಾಂಕ್ ವೈಯಕ್ತಿಕ ಸಾಲ ತೀರಿಸದೆ ಮರಣ ಹೊಂದಿದ ವ್ಯಕ್ತಿಯ ಸಾಲವನ್ನು NPA ಗೆ ಸೇರಿಸುತ್ತದೆ.

ಅದೇ ರೀತಿ ಕ್ರೆಡಿಟ್ ಬಿಲ್ ಪಾವತಿ ಮಾಡದೆ ಇದ್ದಾಗಲೂ ಕೂಡ ಅದು ಕೇವಲ ಸಾಲ ಮಾಡಿದ ವ್ಯಕ್ತಿಯ ಜವಾಬ್ದಾರಿ ಆಗಿರುತ್ತದೆಯೇ ಹೊರತು ಮನೆಯವರದ್ದಲ್ಲ. ಹಾಗಾಗಿ ಬ್ಯಾಂಕ್ (Bank) ಈ ಕಾರಣಕ್ಕೂ ಕೂಡ ಮನೆಯ ಸದಸ್ಯರ ಪ್ರಶ್ನೆ ಮಾಡುವಂತಿಲ್ಲ.

If the person who took a bank loan dies, who should repay the loan

Follow us On

FaceBook Google News

If the person who took a bank loan dies, who should repay the loan