Story Highlights
Credit Card : ಕ್ರೆಡಿಟ್ ಕಾರ್ಡ್ ನ ಲಿಮಿಟ್ (credit card limits) ಎನ್ನುವುದು ನಿಮ್ಮ ಕ್ರೆಡಿಟ್ ಸ್ಕೋರ್ (credit score) ಹಾಗೂ ಸಂಬಳದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ
Credit Card : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ (credit card) ಎನ್ನುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಖಾತೆಯಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ ಕೂಡ ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದ್ದರೆ ಸಾಕು, ಯಾವುದೇ ವಸ್ತು ಖರೀದಿ ಮಾಡಲು ಕೂಡ ಸಾಧ್ಯವಾಗುತ್ತದೆ.
ನೀವು ಇಂದು ಖರೀದಿ ಮಾಡಿ ತಿಂಗಳ ಕೊನೆಯಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ನೀವು ಖರೀದಿ ಮಾಡಿದ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸಿದರೆ ಸಾಕು.
ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ₹2.67 ಲಕ್ಷ ಸಬ್ಸಿಡಿ ಸಾಲ! ಸರ್ಕಾರದ ಹೊಸ ಯೋಜನೆ
ಕ್ರೆಡಿಟ್ ಕಾರ್ಡ್ ನಲ್ಲಿ ಇದೆ ಸಾಕಷ್ಟು ಬೆನಿಫಿಟ್ (Credit card benefits)
ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ಮೌಲ್ಯದ ಕ್ರೆಡಿಟ್ ಕಾರ್ಡ್ ಅನ್ನು ಗ್ರಾಹಕರಿಗೆ ನೀಡುತ್ತಾರೆ, ಕ್ರೆಡಿಟ್ ಕಾರ್ಡ್ ನ ಲಿಮಿಟ್ (credit card limits) ಎನ್ನುವುದು ನಿಮ್ಮ ಕ್ರೆಡಿಟ್ ಸ್ಕೋರ್ (credit score) ಹಾಗೂ ಸಂಬಳದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಹೊಂದಿದ್ರೆ ಸಾಕಷ್ಟು ಬೆನಿಫಿಟ್ ಕೂಡ ಇದೆ, ನೀವು ಬೇರೆ ಬೇರೆ ರೀತಿಯ ಪೇಮೆಂಟ್ ಮಾಡಿಕೊಳ್ಳುವುದಕ್ಕೆ ಅಥವಾ ವಸ್ತು ಖರೀದಿ ಮಾಡುವುದಕ್ಕೆ ಕ್ರೆಡಿಟ್ ಕಾರ್ಡ್ ಅನ್ನು ಇದುವರೆಗೆ ಬಳಸಿರಬಹುದು, ಆದರೆ ನಿಮ್ಮ ಕ್ರೆಡಿಟ್ ಕಾರ್ಡ್ ನಿಂದಲೇ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಹಣ ವರ್ಗಾವಣೆಯನ್ನು ಮಾಡಬಹುದು ಎನ್ನುವ ವಿಚಾರ ನಿಮಗೆ ಗೊತ್ತಿದೆಯೇ?
ಒಮ್ಮೆ ನಮ್ಮ ಬಳಿ ಒಂದಷ್ಟು ಕ್ಯಾಶ್ ಇರುತ್ತೆ ಅದನ್ನ ಹೇಗೆ ಬ್ಯಾಂಕ್ ಅಕೌಂಟ್ ಗೆ ಟ್ರಾನ್ಸ್ಫರ್ (money transfer) ಮಾಡಿಕೊಳ್ಳಬೇಕು. ಎನ್ನುವ ಗೊಂದಲವೂ ಹಲವರಲ್ಲಿ ಇರುತ್ತದೆ
ಈಗ ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಮೂಲಕವೇ ಈ ಕೆಲಸ ಮಾಡಿಕೊಳ್ಳಬಹುದು. ಜೀವ ವಿಮಾ ಪಾವತಿ ಹಾಗೂ ಇತರ ಕೆಲವು ಹಣಕಾಸಿನ ವ್ಯವಹಾರದಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಲು ಸಾಧ್ಯವಿಲ್ಲ
ಆಧಾರ್ ಕಾರ್ಡ್ ಇರುವವರಿಗೆ ಈ ಉಚಿತ ಸೇವೆ ಇನ್ನು 6 ದಿನ ಮಾತ್ರ; ಮಿಸ್ ಮಾಡ್ಕೋಬೇಡಿ
ಅಂತಹ ಸಂದರ್ಭದಲ್ಲಿ ನೀವು ಕ್ರೆಡಿಟ್ ಕಾರ್ಡ್ ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡು ಆ ಮೂಲಕ ಪಾವತಿ ಮಾಡಬಹುದು ಹಾಗಾದರೆ ಕ್ರೆಡಿಟ್ ಕಾರ್ಡ್ ನಿಂದ ಬ್ಯಾಂಕ್ ಖಾತೆಗೆ (bank account) ಹಣವನ್ನು ವರ್ಗಾಯಿಸುವುದು ಹೇಗೆ ಎಂಬುದನ್ನು ನೋಡೋಣ.
ಕ್ರೆಡಿಟ್ ಕಾರ್ಡ್ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು (money transfer from credit card to bank account) ಬೇರೆ ಬೇರೆ ರೀತಿಯಾದಂತಹ ಮಾರ್ಗಗಳು ಇವೆ ಅವುಗಳಲ್ಲಿ ಮುಖ್ಯವಾಗಿ,
*ನೇರ ವರ್ಗಾವಣೆ (direct transfer) – ನೀವು ಆನ್ಲೈನ್ ಬ್ಯಾಂಕಿಂಗ್ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲು ಬ್ಯಾಂಕುಗಳು ಅವಕಾಶ ಮಾಡಿಕೊಡುತ್ತವೆ
ಬ್ಯಾಂಕ್ ಸಾಲ ಮಾಡಿದ್ದ ಮನೆಯ ಯಜಮಾನ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು?
ಒಂದು ದಿನಕ್ಕೆ ಇಷ್ಟು ಹಣವನ್ನು ಮಾತ್ರ ವರ್ಗಾವಣೆ ಮಾಡಬಹುದು ಎನ್ನುವ ಮಿತಿಯನ್ನು ಕೂಡ ವಿಧಿಸಲಾಗಿದ್ದು ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ, ಹಾಗಾಗಿ ನೀವು ಯಾವ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಸಿಕೊಳ್ಳುತ್ತಿದ್ದೀರೋ, ಆ ಬ್ಯಾಂಕ್ ನ ಮಿತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ.
ನೆಟ್ ಬ್ಯಾಂಕಿಂಗ್ (net banking) ಮೂಲಕ ಹಣ ವರ್ಗಾವಣೆ – ಇನ್ನು ನೀವು ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಆ ಮೂಲಕವೂ ಕೂಡ ಕ್ರೆಡಿಟ್ ಕಾರ್ಡ್ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು.
ಅದಕ್ಕಾಗಿ ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಬೇಕು ನಂತರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ನಿಧಿ ವರ್ಗಾವಣೆ ಎನ್ನುವ ಆಯ್ಕೆಯನ್ನು ಮಾಡಿ ಎಷ್ಟು ಹಣ ವರ್ಗಾವಣೆ ಮಾಡಬೇಕು ಎನ್ನುವ ಅಮೌಂಟ್ ನಮೂದಿಸಿ. ತಕ್ಷಣವೇ ಕ್ರೆಡಿಟ್ ಕಾರ್ಡ್ ನಿಂದ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಬಹುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ EMI ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್
ದೂರವಾಣಿ ಕರೆ ಮೂಲಕ ವರ್ಗಾವಣೆ (money transfer from phone call)- ಇನ್ನು ನಿಮಗೆ ಆನ್ಲೈನ್ ಮೂಲಕ ಟ್ರಾನ್ಸ್ಫರ್ ಮಾಡಲು ಸಾಧ್ಯವಾಗದೇ ಇದ್ದಲ್ಲಿ ನಿಮ್ಮ ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಿ ಅಥವಾ ಬ್ಯಾಂಕ್ ನ ಶಾಖೆಗೆ ಫೋನ್ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಹಾಗೂ ಹಣ ವರ್ಗಾವಣೆ ಮಾಡಬೇಕಾಗಿರುವ ಅಮೌಂಟ್ ತಿಳಿಸಿದರೆ ಬ್ಯಾಂಕ್ ಶಾಖೆಯಿಂದಲೇ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ.
ಚೆಕ್ ಕೂಡ ಬಳಸಬಹುದು (use bank cheque for transfer)- ಇನ್ನು ಇದು ಸಾಂಪ್ರದಾಯಿಕ ವಿಧಾನವೇ ಆಗಿದ್ದರೂ ಕೂಡ ಸಾಕಷ್ಟು ಜನ ಈಗಲೂ ಚೆಕ್ ಬರೆಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ನಿಮ್ ಬ್ಯಾಂಕ್ ಗೆ ಹೋಗಿ ಸೆಲ್ಫ್ ಚೆಕ್ ಬರೆದು ನಿಮ್ಮ ಖಾತೆಗೆ ಕ್ರೆಡಿಟ್ ಕಾರ್ಡ್ ನ ಹಣ ವರ್ಗಾವಣೆ ಮಾಡಿಕೊಳ್ಳಬಹುದು.
Do you know how to transfer money to bank account through credit card