ಆಧಾರ್ ಕಾರ್ಡ್ ಇರುವವರಿಗೆ ಈ ಉಚಿತ ಸೇವೆ ಇನ್ನು 6 ದಿನ ಮಾತ್ರ; ಮಿಸ್ ಮಾಡ್ಕೋಬೇಡಿ

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆ (Annabhagya scheme) ಹಣವಾಗಲಿ ಜಮಾ ಆಗುವುದಿಲ್ಲ

Bengaluru, Karnataka, India
Edited By: Satish Raj Goravigere

ಆಧಾರ್ ಕಾರ್ಡ್ (Aadhaar Card) ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ, ಸರ್ಕಾರ ಇಂತಹ ಒಂದು ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ

ಇನ್ನು ಕೇವಲ ಆರು ದಿನಗಳಲ್ಲಿ ನೀವು ಈ ಕೆಲಸ ಮಾಡದೆ ಇದ್ದರೆ ಮುಂದೆ ಸರ್ಕಾರದ ಯಾವ ಯೋಜನೆಯ ಪ್ರಯೋಜನಗಳು ಕೂಡ ಸಿಗುವುದಿಲ್ಲ ಎಂದು ತಿಳಿಸಲಾಗಿದೆ.

If Aadhaar card was made before 2014, here is a big update

ಬ್ಯಾಂಕ್ ಸಾಲ ಮಾಡಿದ್ದ ಮನೆಯ ಯಜಮಾನ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು?

ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯ! (Aadhar Card update mandatory)

ಎಲ್ಲರಿಗೂ ಗೊತ್ತಿರುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅನ್ನು ನೀಡಿದೆ, ಆಧಾರ್ ಕಾರ್ಡ್ ಇಲ್ಲದೆ ನಾವು ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಿಕೊಳ್ಳಲು ಸಾಧ್ಯವಿಲ್ಲ

ಅಷ್ಟೇ ಅಲ್ಲದೆ ಯಾವುದೇ ಡಾಕ್ಯುಮೆಂಟ್ಸ್ ಮಾಡಿಸಿಕೊಳ್ಳಲು ಕೂಡ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿರುತ್ತದೆ. ಇನ್ನು ಸಾಕಷ್ಟು ಜನ ಕಳೆದ ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ, ಅಂತವರು ಈಗ ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ನಿಗದಿತ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆಯ (Annabhagya scheme) ಹಣವಾಗಲಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗುವುದಿಲ್ಲ. ಕಿಸಾನ್ ಕ್ರೆಡಿಟ್ (Kisan credit scheme) ಯೋಜನೆಯ ಪ್ರಯೋಜನವೂ ಕೂಡ ಸಿಗುವುದಿಲ್ಲ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ EMI ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್

ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳುವುದು ಹೇಗೆ? (How to update Aadhaar card)

Aadhaar Cardಆಧಾರ್ ಕಾರ್ಡ್ ಅನ್ನು 10 ವರ್ಷಗಳ ಹಿಂದೆ ಪಡೆದುಕೊಂಡಿರುವವರು ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology) ತಿಳಿಸಿದೆ.

ನೀವು ಆನ್ಲೈನ್ ನಲ್ಲಿ https://myaadhaar.uidai.gov.in ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು, ಆನ್ಲೈನ್ (online) ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ.

ಇನ್ನು ಆಫ್ ಲೈನ್ ಮೂಲಕ ಆಧಾರ ಕೇಂದ್ರಗಳಲ್ಲಿ ಅಥವಾ ಸೇವಾ ಕೇಂದ್ರಗಳಲ್ಲಿಯೂ ಕೂಡ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಜೊತೆಗೆ ಹತ್ತಿರದ ಸೈಬರ್ ಸೆಂಟರ್ (cyber centre) ಗಳಲ್ಲಿಯೂ ಕೂಡ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು

ವಿದೇಶದಲ್ಲಿ ಓದಬೇಕು ಅನ್ನೋ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ

ಇದಕ್ಕೆ ಶುಲ್ಕ (fee for updating) ವಿಧಿಸಲಾಗುತ್ತದೆ ಕನಿಷ್ಠ 50 ರೂಪಾಯಿಗಳಿಂದ 100 ರೂಪಾಯಿಗಳ ವರೆಗೆ ಶುಲ್ಕ ಪಾವತಿಸಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ.

ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿ ಇದ್ದು ಯಾರೆಲ್ಲಾ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದು ಇದುವರೆಗೆ ಅಪ್ ಡೇಟ್ ಮಾಡಲ್ಲವೋ ಅಂತವರು ತಕ್ಷಣವೇ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಪಡೆದುಕೊಂಡಿದ್ದು ಯಾವಾಗ ಎನ್ನುವ ಡೇಟ್ ನೆನಪಿಲ್ಲದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿಯೇ ಎಡ ಭಾಗದಲ್ಲಿ ಅಡ್ಡವಾಗಿ ಚಿಕ್ಕ ಅಕ್ಷರಗಳಲ್ಲಿ ಆಧಾರ್ ಕಾರ್ಡ್ ನಿಮಗೆ ನೀಡಿರುವ ಡೇಟ್ ಮುದ್ರಿಸಿರಲಾಗುತ್ತದೆ ಅದನ್ನ ನೋಡಿಕೊಂಡು ಹತ್ತು ವರ್ಷ ಕಳೆದಿದ್ದರೆ ತಕ್ಷಣವೇ ಅಪ್ಡೇಟ್ ಮಾಡಿಸಿಕೊಳ್ಳಿ.

ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ಏನಾಗುತ್ತೆ?

ನೀವು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿರುವವರಾಗಿದ್ದರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ನಿರ್ಲಕ್ಷ್ಯ ಮಾಡಬೇಡಿ ನೀವು ನಿರ್ಲಕ್ಷ ಮಾಡಿದರೆ ನಿಮಗೆ ಇನ್ನು ಮುಂದೆ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನಗಳು ಕೂಡ ಲಭ್ಯವಾಗುವುದಿಲ್ಲ. 14ರ ನಂತರ ಅಪ್ಡೇಟ್ ಮಾಡಿಕೊಳ್ಳಲು ಹೆಚ್ಚುವರಿ ದಂಡ ಕೂಡ ಪಾವತಿಸಬೇಕು.

ಬ್ಯಾಂಕ್ ನಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು? ಬದಲಾದ ನಿಯಮ; ಹೊಸ ರೂಲ್ಸ್

ಮೈ ಆಧಾರ್ ಪೋರ್ಟಲ್ (my Aadhaar portal) https://myaadhaar.uidai.gov.in/ ನಲ್ಲಿ ಅರ್ಜಿ ಸಲ್ಲಿಸಬಹುದು, ಈ ವೆಬ್ಸೈಟ್ ಗೆ ಲಾಗಿನ್ ಆದರೆ ನಿಮ್ಮ ಹನ್ನೆರಡು ಅಂಕೆಯ ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ಅಪ್ಡೇಟ್ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ನಲ್ಲಿ ಹೆಸರು ,ವಿಳಾಸ ,ಜನ್ಮ ದಿನಾಂಕ, ಮೊದಲಾದ ಎಲ್ಲಾ ವಿವರಗಳನ್ನು ಕೂಡ ನವೀಕರಿಸಿಕೊಳ್ಳಲು ಅವಕಾಶವಿದೆ. ಇಂದಿನಿಂದ ಆರು ದಿನಗಳ ಒಳಗೆ ಈ ಕೆಲಸವನ್ನು ಮಾಡಿಕೊಳ್ಳಿ.

This free service for Aadhaar card holders is only for 6 days