Business News

ಹೊಸ ಮನೆ, ಆಸ್ತಿ ಖರೀದಿಗೆ ಬಂತು ಹೊಸ ರೂಲ್ಸ್! ಯಾಮಾರಿದ್ರೆ ಬೀಳುತ್ತೆ ಭಾರೀ ದಂಡ

ನೀವು ಇನ್ಕಮ್ ಟ್ಯಾಕ್ಸ್ (income tax payer) ಪಾವತಿದಾರರ ಈ ವರ್ಷದ ಐ ಟಿ ಆರ್ (ITR filing) ಇನ್ನೂ ಫೈಲಿಂಗ್ ಮಾಡಿಲ್ವಾ ಹಾಗಾದ್ರೆ ಈ ಸುದ್ದಿ ನಿಮಗಾಗಿ. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಹಾಗೆ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಐ ಟಿ ಆರ್ ಫೈಲ್ ಮಾಡದೆ ಇದ್ದಲ್ಲಿ ಈ ಬದಲಾದ ನಿಯಮಗಳನ್ನು ತಿಳಿದುಕೊಳ್ಳಬೇಕು.

ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ, ಅದರಲ್ಲೂ ಈ ಕೆಳಗಿನ ಪ್ರಮುಖ ಆದಾಯಗಳ ಬಗ್ಗೆ ನೀವು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲೇಬೇಕು

New tax rule for owners of own house, land, property

ಈ ಕೆಲವು ಮೂಲಗಳಿಂದ ಹಣ ಸಂಪಾದನೆ ಮಾಡುತ್ತಿದ್ದರೆ ಅದನ್ನು ಆದಾಯ ತೆರಿಗೆ ಇಲಾಖೆ (income tax department) ತಿಳಿಸದೆ ತೆರಿಗೆ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ನೀವು ಎಷ್ಟು ತೆರಿಗೆ ಪಾವತಿ ಮಾಡಬೇಕಿತ್ತೋ ಅದಕ್ಕಿಂತ ಮೂರು ಪಟ್ಟು ಹೆಚ್ಚಿನ ದಂಡ ತೆರಬೇಕಾಗುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಹೆಚ್ಚು ಬಡ್ಡಿ ನೀಡುವ ಹೊಸ ಸ್ಕೀಮ್ ಇದು

*ಸ್ಥಿರ ಆಸ್ತಿ ಖರೀದಿ ಮತ್ತು ಮಾರಾಟ? (Property Purchase and Sale)

ಆಸ್ತಿ ಖರೀದಿ ಮತ್ತು ಮಾರಾಟಕ್ಕೆ (Property Purchase and Sale) ಸಂಬಂಧಪಟ್ಟಹಾಗೆ ತೆರಿಗೆ ಇಲಾಖೆಯಲ್ಲಿ ((income tax) ಕೆಲವು ಪ್ರಮುಖ ನಿಯಮಗಳನ್ನು ಜಾರಿಗೆ ತರಲಾಗಿದೆ. ನೀವು ಒಂದು ವೇಳೆ 30 ಲಕ್ಷ ರೂಪಾಯಿಗಳ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಹಣವನ್ನು ಮಾರಾಟ ಅಥವಾ ಖರೀದಿಗೆ ವ್ಯಯಿಸುವುದಾಗಿದ್ದರೆ, ರಿಜಿಸ್ಟ್ರಾರ್ ಹಾಗೂ ಉಪ ರಿಜಿಸ್ಟ್ರಾರ್ ಗಮನಕ್ಕೆ ತರಬೇಕು, ಅಂದ್ರೆ ನೀವು ನೋಂದಾವಣೆ ಮಾಡಿಕೊಳ್ಳುವ ಸಮಯದಲ್ಲಿ ರಿಜಿಸ್ಟ್ರಾರ್ ಗಮನಕ್ಕೆ ಈ ವಿಚಾರ ತಂದಾಗ ನೀವು ಖರ್ಚು ಮಾಡಿದ ಹಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.

Property Purchase*ವಿದೇಶಿ ಕರೆನ್ಸಿ ಮಾರಾಟ!

ವಿದೇಶಿ ಕರೆನ್ಸಿ ಮಾರಾಟಕ್ಕೂ ಕೂಡ ನಿಯಮಗಳು ಅನ್ವಯವಾಗಲಿದ್ದು ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವಿದೇಶಿ ಕರೆನ್ಸಿ ಮಾರಾಟದ ವಹಿವಾಟಿನ ಮೇಲೆ ತೆರಿಗೆ ವಿಧಿಸಲಾಗುತ್ತದೆ.

ಚಿನ್ನದ ಬೆಲೆ ಭಾನುವಾರ ಭಾರೀ ಇಳಿಕೆ, ಏಕಾಏಕಿ ₹550 ರೂಪಾಯಿ ಕುಸಿತ; ಇಲ್ಲಿದೆ ಡೀಟೇಲ್ಸ್

*ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ – Credit Card Bill

credit cardಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ (Credit Card) ಹೊಂದಿದ್ದಾರೆ ಎಂದರೆ ಐಟಿ ಪೇಮೆಂಟ್ ಮಾಡುವವರೇ ಆಗಿರುತ್ತಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರ ಮೇಲೆ ಆದಾಯ ಇಲಾಖೆಯ ಹದ್ದಿನ ಕಣ್ಣಿಟ್ಟಿರುತ್ತದೆ.

ರೂ. 1 ಲಕ್ಷ ಗಳಿಗಿಂತ ಹೆಚ್ಚಿನ ನಗದು ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದರೆ ಅದು ಆದಾಯ ಇಲಾಖೆಯ ಗಮನಕ್ಕೆ ಬರಬೇಕು, ಅದೇ ರೀತಿ ಒಂದು ಹಣಕಾಸು ವರ್ಷದ ಅವಧಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮಾಡಿದ್ದರೆ ಅದನ್ನು ಐಟಿ ಇಲಾಖೆಗೆ ತಿಳಿಸಬೇಕು ಇಲ್ಲವಾದರೆ ಈ ಬಗ್ಗೆ ಮಾಹಿತಿ ಪಡೆದುಕೊಂಡ ಆದಾಯ ಇಲಾಖೆ ಹೆಚ್ಚುವರಿ ದಂಡ ವಿಧಿಸಬಹುದು.

ಎಫ್ ಡಿ ಮೇಲಿನ ಹೂಡಿಕೆ – Fixed Deposit

Fixed Depositಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಇಡುವುದು ಸಹಜ, ಹೀಗಾಗಿ ಆದಾಯ ತೆರಿಗೆ ಪಾವತಿ ಮಾಡುವವರು ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿ ಮಾಡಿದರೆ ಅಥವಾ ಒಂದಕ್ಕಿಂತ ಹೆಚ್ಚಿನ ಎಫ್ ಡಿ ಖಾತೆ ಹೊಂದಿದ್ದು 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅದನ್ನು ಐಟಿ ಇಲಾಖೆಗೆ ತಿಳಿಸಬೇಕು.

ಸೈಟ್, ಮನೆ, ಆಸ್ತಿ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ! ಹೊಸ ರೂಲ್ಸ್

ಷೇರು ಮತ್ತು ಬಾಂಡ್ ಗಳಲ್ಲಿ ಹೂಡಿಕೆ ಮಾಡಿದರೆ!

ಇನ್ನು ನೀವು ಯಾವುದೇ ರೀತಿಯ ಸ್ಟಾಕ್ ಮಾರ್ಕೆಟ್ ಅಥವಾ ಬಾಂಡ್ ಗಳ ಮೇಲಿನ ಹೂಡಿಕೆಗೂ ಕೂಡ ಆದಾಯ ತೆರಿಗೆ ಇಲಾಖೆಯ ನಮ್ಮ ಅನ್ಯಾಯವಾಗುತ್ತದೆ. 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆ ಆದಾಯ ಇಲಾಖೆಗೆ ತಿಳಿಸುವುದು ಕಡ್ಡಾಯ.

*ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ

ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (Savings Account) ಹೊಂದಿದ್ದರೆ ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ 10 ಲಕ್ಷದವರೆಗೆ ಹಾಗೂ ಚಾಲ್ತಿ ಖಾತೆಯಲ್ಲಿ 50 ಲಕ್ಷದವರೆಗಿನ ವಹಿವಾಟಿಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈ ರೀತಿ ವಹಿವಾಟು ಮಾಡಿದಾಗ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುವುದು ಮುಖ್ಯ.

ಈ ರೀತಿ ಕೆಲವು ಪ್ರಮುಖ ಆದಾಯ ಮೂಲಗಳನ್ನು ನೀವು ಹೊಂದಿದ್ದರೆ ಐಟಿಗೆ ಮಾಹಿತಿ ನೀಡಲೇಬೇಕು. ತೆರಿಗೆಯಿಂದ ತಪ್ಪಿಸಿಕೊಳ್ಳಲು ಈ ಮಾಹಿತಿಗಳನ್ನು ನೀಡದೆ ಇದ್ದಲ್ಲಿ ಮುಂದೆ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಹೇಗೆ ಗೊತ್ತಾ?

The new rules of the income tax department for buying a house, property

Our Whatsapp Channel is Live Now 👇

Whatsapp Channel

Related Stories