ಪ್ರತಿ ತಿಂಗಳು ₹9000 ಆದಾಯ ಕೊಡೋ ಪೋಸ್ಟ್ ಆಫೀಸ್ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ!
post office scheme : ಪ್ರತಿ ತಿಂಗಳು ನಿಶ್ಚಿತ ಆದಾಯ ಪಡೆಯುವುದಕ್ಕೆ ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ ಒಳ್ಳೆಯ ಆಯ್ಕೆ. ಇದರಲ್ಲಿ ನೀವು ಇಂತಿಷ್ಟು ಎಂದು ಹಣ ಹೂಡಿಕೆ ಮಾಡಿದರೆ, ಅದರ ಬಡ್ಡಿಯಲ್ಲೇ ಪ್ರತಿ ತಿಂಗಳು ಆದಾಯ ಬರುತ್ತದೆ.
post office scheme : ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಬೇಕು ಎಂದುಕೊಂಡಿರುವವರಿಗೆ ಪೋಸ್ಟ್ ಆಫೀಸ್ ಯೋಜನೆಗಳು ಒಳ್ಳೆಯ ಆಯ್ಕೆ ಆಗಿದೆ. ಇಲ್ಲಿ ನಿಮ್ಮ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುವುದಕ್ಕೆ, ಹಲವು ಒಳ್ಳೆಯ ಯೋಜನೆಗಳಿವೆ, ಅವುಗಳ ಪೈಕಿ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ ಉತ್ತಮವಾದ ಆಯ್ಕೆ ಆಗಿದೆ. ಇದರಲ್ಲಿ ನೀವು ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ ಪಡೆಯಬಹುದು.
ಹೌದು, ಪ್ರತಿ ತಿಂಗಳು ನಿಶ್ಚಿತ ಆದಾಯ ಪಡೆಯುವುದಕ್ಕೆ ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ (Monthly Investment Scheme) ಒಳ್ಳೆಯ ಆಯ್ಕೆ. ಇದರಲ್ಲಿ ನೀವು ಇಂತಿಷ್ಟು ಎಂದು ಹಣ ಹೂಡಿಕೆ ಮಾಡಿದರೆ, ಅದರ ಬಡ್ಡಿಯಲ್ಲೇ ಪ್ರತಿ ತಿಂಗಳು ಆದಾಯ ಬರುತ್ತದೆ.
ಈ ಯೋಜನೆಗೆ 7.4% ಬಡ್ಡಿದರ ನಿಗದಿ ಮಾಡಲಾಗಿದ್ದು, ಇಲ್ಲಿ ನೀವು ಎಷ್ಟು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಎಷ್ಟು ಆದಾಯ (Income) ಪಡೆಯಬಹುದು ಎನ್ನುವುದನ್ನ ತಿಳಿದುಕೊಳ್ಳೋಣ..
ಬಾಡಿಗೆ ಮನೆಯಲ್ಲಿ ಇದ್ದು ನೀವಿನ್ನೂ ರೆಂಟ್ ಅಗ್ರಿಮೆಂಟ್ ಮಾಡಿಸಿಲ್ವಾ? ಬಂತು ನೋಡಿ ಹೊಸ ರೂಲ್ಸ್
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, ಮುಂದಿನ 5 ವರ್ಷಗಳ ಕಾಲ ಪ್ರತಿ ತಿಂಗಳು ₹616.67 ರೂಪಾಯಿಗಳ ರಿಟರ್ನ್ಸ್ ಅನ್ನು ನಿಮಗೆ ನೀಡುತ್ತದೆ. ಇದೇ ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ₹1,233.34 ರೂಪಾಯಿ ಆದಾಯ ಪ್ರತಿ ತಿಂಗಳು ಬರುತ್ತದೆ.
ಹಾಗೆಯೇ ಈ ಯೋಜನೆಯಲ್ಲಿ ₹3 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ₹1850 ರೂಪಾಯಿ ಹಣವನ್ನು ಬಡ್ಡಿಯ ರೂಪದಲ್ಲಿ ಪಡೆಯಬಹುದು.
ಈ ಯೋಜನೆಯಲ್ಲಿ ನೀವು ಇನ್ನು ಹೆಚ್ಚಿನ ಮೊತ್ತ ಅಂದರೆ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹3083 ರೂಪಾಯಿಗಳನ್ನು ಪ್ರತಿ ತಿಂಗಳ ಆದಾಯವಾಗಿ ಪಡೆಯಬಹುದು.
ಪ್ರತಿ ತಿಂಗಳು ಹೀಗೆ ಆದಾಯ ಬರುತ್ತದೆ. ಒಬ್ಬ ವ್ಯಕ್ತಿ ಈ ಯೋಜನೆಯಲ್ಲಿ ಖಾತೆ ತೆರೆದರೆ, ಅವರು ಹೂಡಿಕೆ ಮಾಡಬಹುದಾದ ಗರಿಷ್ಠ ಮಿತಿ, 9 ಲಕ್ಷ ರೂಪಾಯಿ ಆಗಿರುತ್ತದೆ. ಇಷ್ಟು ಮೊತ್ತಕ್ಕೆ ಪ್ರತಿ ತಿಂಗಳು ₹5550 ರೂಪಾಯಿ ಆದಾಯ ಬರುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಜಾಸ್ತಿ ಹಣ ಇಟ್ಟಿದ್ದೆ ಆದ್ರೆ ಏನಾಗುತ್ತೆ ಗೊತ್ತಾ?
ಇನ್ನು ಇದೇ ಯೋಜನೆಯಲ್ಲಿ ಜಾಯಿಂಟ್ ಅಕೌಂಟ್ (Joint Account) ತೆರೆದರೆ 15 ಲಕ್ಷ ಹೂಡಿಕೆ ಮಾಡಬಹುದು, ಇಷ್ಟು ಮೊತ್ತ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹9250 ರೂಪಾಯಿಗಳು ತಿಂಗಳ ಆದಾಯವಾಗಿ ನಿಮ್ಮ ಕೈಸೇರುತ್ತದೆ. 60 ತಿಂಗಳು ಅಂದರೆ 5 ವರ್ಷಗಳ ಕಾಲ ಈ ಯೋಜನೆಯ ರಿಟರ್ನ್ಸ್ ಪಡೆದ ನಂತರ 15 ಲಕ್ಷ ರೂಪಾಯಿಗಳನ್ನು ವಾಪಸ್ ಪಡೆಯಬಹುದು. 5 ವರ್ಷಕ್ಕಿಂತ ಮೊದಲೇ ಹಣವನ್ನು ವಾಪಸ್ ಪಡೆಯುತ್ತೀರಿ ಎಂದರೆ, ಅದಕ್ಕಾಗಿ ದಂಡ ಕಟ್ಟಬೇಕಾಗುತ್ತದೆ.
A post office scheme that provides income of 9000 per month