ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಜಾಸ್ತಿ ಹಣ ಇಟ್ಟಿದ್ದೆ ಆದ್ರೆ ಏನಾಗುತ್ತೆ ಗೊತ್ತಾ?
ಕೋವಿಡ್ ಸೋಂಕು ಬಂದ ನಂತರ ಜನರು ಯೋಚನೆ ಮಾಡುವ ಸ್ಥಿತಿ ಬದಲಾಗಿದೆ ಎಂದರೆ ತಪ್ಪಲ್ಲ. ಈಗ ಜನರು ಹೆಚ್ಚಾಗಿ ಉಳಿತಾಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಇಂದು ಉಳಿತಾಯ (Savings) ಮಾಡಿದರೆ ಮುಂದಿನ ಜೀವನ ಚೆನ್ನಾಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ.
ಹಾಗಾಗಿ ಬಹಳಷ್ಟು ಜನರು ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದು, ಉಳಿತಾಯ ಮಾಡಬೇಕು ಎಂದುಕೊಂಡಿರುವವರು ತಮ್ಮಿಂದ ಆದಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದಾರೆ.
ಕೋಳಿ ಫಾರ್ಮ್ ತೆರೆಯಲು ಸ್ಟೇಟ್ ಬ್ಯಾಂಕ್ ನಿಂದಲೇ ಸಿಗಲಿದೆ 9 ಲಕ್ಷ ರೂಪಾಯಿ! ಇಂದೇ ಅರ್ಜಿ ಸಲ್ಲಿಸಿ
ಈಗ ಬಹುತೇಕ ಎಲ್ಲರ ಬಳಿ ಬ್ಯಾಂಕ್ ಅಕೌಂಟ್ ಇದ್ದೇ ಇರುತ್ತದೆ. ತಮ್ಮ ಸೇವಿಂಗ್ಸ್ ಅಕೌಂಟ್ ಗಳಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಿರುತ್ತಾರೆ. ಸೇವಿಂಗ್ಸ್ ಅಕೌಂಟ್ ಗಳಲ್ಲಿ ಇಂತಿಷ್ಟು ಹಣ ಮಾತ್ರ ಇಡಬೇಕು, ಸೇವಿಂಗ್ಸ್ ಅಕೌಂಟ್ ನಲ್ಲಿ (Savings Account) ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಇಡಬಾರದು ಎಂದು ಯಾವುದೇ ಬ್ಯಾಂಕ್ ಇಂದ ಯಾವುದೇ ನಿಯಮ ಇಲ್ಲ. ಎಷ್ಟು ಹಣವನ್ನು ಬೇಕಾದರೂ ಜನರು ಉಳಿತಾಯ ಮಾಡಬಹುದು.
ನೀವು ಉಳಿತಾಯ ಮಾಡುವುದಕ್ಕೆ ಲಿಮಿಟ್ಸ್ ಇಲ್ಲ. ಆದರೆ ಒಂದು ವೇಳೆ ನಿಮ್ಮ ಅಕೌಂಟ್ ನಲ್ಲಿ 10 ಲಕ್ಷಕ್ಕಿಂತ ಜಾಸ್ತಿ ಹಣವಿದ್ದರೆ, 10 ಲಕ್ಷಕ್ಕಿಂತ ಹೆಚ್ಚಿನ ಹಣ ಇದ್ದರೆ, ಆ ಬಗ್ಗೆ ಬ್ಯಾಂಕ್ ಕಡೆಯಿಂದ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.
1961ರ ಸೆಕ್ಷನ್ 285ಬಿಎ ನ ಅನುಸಾರ ಎಲ್ಲಾ ಬ್ಯಾಂಕ್ ಗಳು ಸಹ ತೆರಿಗೆ ಇಲಾಖೆಗೆ ಈ ಮಾಹಿತಿ ಕೊಡಬೇಕು. ಹೆಚ್ಚಿನ ಮೊತ್ತಕ್ಕೆ ITR ಸಲ್ಲಿಕೆ ಆದಾಗ ನೀವು ಕೊಡುತ್ತಿರುವ ಎಲ್ಲಾ ಮಾಹಿತಿಗಳು ಸರಿಯಾಗಿರಬೇಕು. ಒಂದು ವೇಳೆ ಸರಿ ಇಲ್ಲ ಎಂದರೆ ನಿಮಗೆ ಆದಾಯ ತೆರಿಗೆ ಇಲಾಖೆ ಇಂದ ನೋಟಿಸ್ ಬರುತ್ತದೆ.
ಓಲ್ಡ್ ಮಾಡೆಲ್ ಹೀರೋ ಹೋಂಡಾ ಸ್ಪ್ಲೇಂಡರ್ ಬೈಕ್ ಇದ್ದೋರಿಗೆ ಗುಡ್ ನ್ಯೂಸ್! ಕಂಪನಿ ಹೊಸ ಆಫರ್
ಉದ್ಯೋಗದಲ್ಲಿ ಇರುವವರು ಅಥವಾ ಐಟಿಆರ್ ಸಲ್ಲಿಸುವ ಯಾರೇ ಆಗಿದ್ದರೂ ಅವರು ತಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಹಣಕ್ಕೆ ಕೂಡ ಲೆಕ್ಕ ಕೊಡಬೇಕಾಗುತ್ತದೆ. ಇದರ ಮೂಲ ಯಾವುದು ಎಂದು ತಿಳಿಸಬೇಕು. ಸೇವಿಂಗ್ಸ್ ಅಕೌಂಟ್ ನಲ್ಲಿ ಇಡುವ ಹಣಕ್ಕೆ ಬರುವ ಬಡ್ಡಿಯನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ.
ಹಾಗಾಗಿ ಐಟಿಆರ್ ಸಲ್ಲಿಕೆ ಮಾಡುವಾಗ, ಈ ಹಣಕ್ಕೂ ಮೂಲ ತಿಳಿಸಬೇಕು. ಸೇವಿಂಗ್ಸ್ ಅಕೌಂಟ್ ಗೆ ಬರುವ ಬಡ್ಡಿದರ 10 ಸಾವಿರಕ್ಕಿಂತ ಕಡಿಮೆ ಇದ್ದರೆ, ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ.
ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಸಿಗಲಿದೆ ₹50,000! ಮೋದಿ ಸರ್ಕಾರದಿಂದ ಹೊಸ ಯೋಜನೆ
ಇದು ಸಾಮಾನ್ಯ ಜನರಿಗೆ ಇರುವ ನಿಯಮ ಆಗಿದ್ದು, ಹಿರಿಯ ನಾಗರೀಕರಿಗೆ 50 ಸಾವಿರ ರೂಪಾಯಿಗಳವರೆಗು ತೆರಿಗೆ ಪ್ರಯೋಜನ ಸಿಗುತ್ತದೆ. ನಿಮಗೆ ಬರುವ ಬಡ್ಡಿಯಲ್ಲಿ ಬ್ಯಾಂಕ್ ಇಂದ 10% ಟಿಡಿಎಸ್ ಗಾಗಿ ಕಟ್ ಮಾಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಟಿಟಿಎ ಅನುಸಾರ ಯಾವುದೇ ವ್ಯಕ್ತಿ 10 ಸಾವಿರಕ್ಕಿಂತ ಕಡಿಮೆ ಬಡ್ಡಿ ಪಡೆದರೇ, ಅದಕ್ಕೆ ಆದಾಯ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
Cash Deposit Limit For Bank Savings Account
Our Whatsapp Channel is Live Now 👇