ಓಲ್ಡ್ ಮಾಡೆಲ್ ಹೀರೋ ಹೋಂಡಾ ಸ್ಪ್ಲೇಂಡರ್ ಬೈಕ್ ಇದ್ದೋರಿಗೆ ಗುಡ್ ನ್ಯೂಸ್! ಕಂಪನಿ ಹೊಸ ಆಫರ್

Story Highlights

ಪೆಟ್ರೋಲ್ ಉಳಿಸಬೇಕು ಹಾಗೂ ಬೈಕ್ ಗಳು ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಆಗಬೇಕು ಎನ್ನುವ ಕಾರಣಕ್ಕೆ ಹಲವು ಕಡೆ ಬೈಕ್ ಗಳಿಗೆ CNG Tool Kit ಅನ್ನು ಅಳವಡಿಸಿಕೊಡಲಾಗುತ್ತಿದೆ.

ಒಂದು ಕಾಲದಲ್ಲಿ ಮಧ್ಯಮವರ್ಗದ ಜನರು ಅತಿಹೆಚ್ಚಾಗಿ ಖರೀದಿ ಮಾಡುತ್ತಿದ್ದ ಬೈಕ್ Hero Honda Splendor Bike ಎಂದು ಹೇಳಿದರೆ ತಪ್ಪಲ್ಲ. ಇದೊಂದು ಬಜೆಟ್ ಫ್ರೆಂಡ್ಲಿ ಬೈಕ್ ಆಗಿದ್ದು, ಉತ್ತಮ ಮೈಲೇಜ್ ಕೊಡುತ್ತಿತ್ತು, ಜನರು ಬಳಕೆ ಮಾಡುವುದಕ್ಕೆ ಕೂಡ ಉತ್ತಮವಾದ ಪರ್ಫಾರ್ಮೆನ್ಸ್ ಕೊಡುತ್ತಿತ್ತು.

ಈ ಎಲ್ಲಾ ಕಾರಣಗಳಿಂದ Hero Honda Splendor ಬೈಕ್ ಜನರಿಗೆ ಹೆಚ್ಚು ಇಷ್ಟ ಆಗುವುದರ ಜೊತೆಗೆ ಹೆಚ್ಚಿನ ಜನರು ಖರೀದಿ ಮಾಡುವಂಥ ಬೈಕ್ ಸಹ ಆಗಿತ್ತು. ಬಹಳಷ್ಟು ವರ್ಷಗಳ ಕಾಲ ಟ್ರೆಂಡ್ ಆಗಿದ್ದ ಬೈಕ್ ಇದು. ಶುರುವಿನಲ್ಲಿ ಈ ಬೈಕ್ ತಯಾರಾಗಿದ್ದು ಹೀರೋ ಹೋಂಡಾ ಕಂಪನಿಯಲ್ಲಿ.

ಆಗ ಈ ಎರಡು ಕಂಪನಿಗಳು ಕೂಡ ಒಂದೇ ಆಗಿತ್ತು, ಆ ವೇಳೆ ತಯಾರಾದ ಬೈಕ್ Hero Honda Splendor. ಆದರೆ ಈಗ ಎರಡು ಕಂಪನಿಗಳು ಬೇರೆ ಬೇರೆ ಆಗಿದೆ. ಈ ವೇಳೆ ಹೀರೋ ಕಂಪನಿ ತಮ್ಮ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದು, ಅದು ಏನು ಎಂದು ತಿಳಿದುಕೊಳ್ಳೋಣ..

ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಸಿಗಲಿದೆ ₹50,000! ಮೋದಿ ಸರ್ಕಾರದಿಂದ ಹೊಸ ಯೋಜನೆ

ಒಂದು ಕಾಲದಲ್ಲಿ ಅತಿಹೆಚ್ಚು ಮಾರಾಟ ಆಗಿ, ಹೆಚ್ಚಿನ ಜನರು ಬಳಕೆ ಮಾಡುತ್ತಿದ್ದ ಬೈಕ್ ಇದು. ಈಗಲೂ ಕೂಡ ಹಲವಾರು ಜನರ ಬಳಿ
Hero Honda Splendor ಬೈಕ್ ಇದೆ. ಈ ವೇಳೆ RTO ಇಲಾಖೆ ಕಡೆಯಿಂದ ಜನರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಈಗ ಪೆಟ್ರೋಲ್ ಉಳಿಸಬೇಕು ಹಾಗೂ ಬೈಕ್ ಗಳು ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಆಗಬೇಕು ಎನ್ನುವ ಕಾರಣಕ್ಕೆ ಹಲವು ಕಡೆ ಬೈಕ್ ಗಳಿಗೆ CNG Tool Kit ಅನ್ನು ಅಳವಡಿಸಿಕೊಡಲಾಗುತ್ತಿದೆ. ಇಷ್ಟು ದಿವಸಗಳ ಕಾಲ ಇದು ಬೇರೆ ರೀತಿ ನಡೆಯುತ್ತಿತ್ತು.

ಬೈಕ್ ಗಳಿಗೆ ಸಿ.ಎನ್.ಜಿ ಟೂಲ್ ಕಿಟ್ ಅಳವಡಿಸುವುದು ಕಾನೂನಿನ ಪ್ರಕಾರವಾಗಿ ಇರಲಿಲ್ಲ. ಆದರೆ ಈಗ RTO ಈ ಒಂದು ವಿಚಾರವನ್ನು ಕಾನೂನಾತ್ಮಕವಾಗಿ, ಅಧಿಕೃತಗೊಳಿಸಿ ಜಾರಿಗೆ ತರಬೇಕೆಂದು ಮುಂದಾಗಿದೆ ಎನ್ನುವುದು ಉತ್ತಮವಾದ ವಿಚಾರ.

RTO ಕಡೆಯಿಂದ ಅಧಿಕೃತವಾಗಿ ಸರ್ಟಿಫೈ ಮಾಡಿರುವ ಸಂಸ್ಥೆಯಲ್ಲಿ CNG Tool Kit ಗಳನ್ನು ಬೈಕ್ ಗೆ ಅಳವಡಿಸಿಕೊಳ್ಳಬಹುದು. ಈ ರೀತಿಯಾಗಿ Hero Honda Splendor ಬೈಕ್ ಗು CNG Tool Kit ಅಳವಡಿಸಿ ಬೈಕ್ ಓಡಿಸಬಹುದು ಎಂದು ತಿಳಿಸಲಾಗಿದೆ.

ಇಂಟರ್ನೆಟ್ ಇಲ್ಲದೆ PhonePe, Google Pay ಯುಪಿಐ ಪೇಮೆಂಟ್ ಮಾಡೋಕೆ ಇಲ್ಲಿದೆ ಸುಲಭ ವಿಧಾನ

Hero Splendor Plus Bike
Image: Times Bull

ಈಗ ಪೆಟ್ರೋಲ್ ಗಿಂತಲು CNG ಯಲ್ಲಿ ಒಳ್ಳೆಯ ಮೈಲೇಜ್ ಸಿಗುತ್ತದೆ. ಒಂದು ಲೀಟರ್ ಪೆಟ್ರೋಲ್ ಗೆ 60 ರಿಂದ 65 km ಮೈಲೇಜ್ ಸಿಗುತ್ತದೆ. ಆದರೆ ಒಂದು ಕೆಜಿ ಸಿ.ಎನ್.ಜಿ ಯಲ್ಲಿ 90 km ವರೆಗು ಮೈಲೇಜ್ ಸಿಗುತ್ತದೆ.

ಕಡಿಮೆ ಬಡ್ಡಿ ಇರೋ ಬ್ಯಾಂಕಿಗೆ ಹೋಮ್ ಲೋನ್ ವರ್ಗಾವಣೆ ಮಾಡಿಕೊಳ್ಳಿ! ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಿ

ಹಾಗಾಗಿ ನಿಮ್ಮ ಹಳೆಯ ಬೈಕ್ ಗಳನ್ನು CNG ಆಗಿ ಚೇಂಜ್ ಮಾಡಿಸಿಕೊಂಡರೆ, ಅದನ್ನು ನಿರ್ವಹಣೆ ಮಾಡುವುದು ಸುಲಭ ಆಗುತ್ತದೆ. ನೀವು ನಿಮ್ಮ ಬಳಿ ಇರುವ ಹಳೆಯ Hero Honda Splendor ಬೈಕ್ ಅನ್ನು CNG ಆಗಿ ಚೇಂಜ್ ಮಾಡಿಸಿಕೊಳ್ಳಬಹುದು.

Good news for those who own an old model Hero Honda Splendor bike

Related Stories