Business News

ಇಂಟರ್ನೆಟ್ ಇಲ್ಲದೆ PhonePe, Google Pay ಯುಪಿಐ ಪೇಮೆಂಟ್ ಮಾಡೋಕೆ ಇಲ್ಲಿದೆ ಸುಲಭ ವಿಧಾನ

ನಮ್ಮ ದೇಶ ಡಿಜಿಟಲ್ ಇಂಡಿಯಾ (Digital India) ಆಗಿರುವ ವಿಷಯ ಗೊತ್ತೇ ಇದೆ. ಪ್ರಸ್ತುತ ಭಾರತದಲ್ಲಿ ಹಣಕಾಸಿನ ವ್ಯವಹಾರಗಳು ನಡೆಯುತ್ತಿರುವುದು ಆನ್ಲೈನ್ ವಹಿವಾಟುಗಳ (Online Transaction) ಮೂಲಕ. ಹೆಚ್ಚಿನ ಜನರು ಮೊಬೈಲ್ ರೀಚಾರ್ಜ್ ಇಂದ ಹಿಡಿದು, ಬಿಲ್ ಪೇಮೆಂಟ್ ವರೆಗು ಈಗ ಆನ್ಲೈನ್ ಮೂಲಕವೇ ಪಾವತಿ ಮಾಡುತ್ತಿದ್ದಾರೆ.

ಕೋವಿಡ್ ಬಂದ ಬಳಿಕ ಈ ಅಭ್ಯಾಸ ಇನ್ನು ಜಾಸ್ತಿಯೇ ಆಗಿದೆ ಎಂದು ಹೇಳಬಹುದು. ಹೆಚ್ಚಿನ ಜನರು ಹಣ ವರ್ಗಾವಣೆಗೆ ಯುಪಿಐ (UPI Money Transfer) ಬಳಕೆ ಮಾಡುತ್ತಿದ್ದಾರೆ. ಗೂಗಲ್ ಪೇ (Google Pay), ಫೋನ್ ಪೇ (PhonePe), ಪೇಟಿಎಂ ಇಂಥ ಯುಪಿಐ ಆಪ್ ಗಳ (UPI Apps) ಮೂಲಕ ಪೇಮೆಂಟ್ ಮಾಡುತ್ತಿದ್ದಾರೆ.

ಇಂಟರ್ನೆಟ್ ಇಲ್ಲದೆ PhonePe, Google Pay ಯುಪಿಐ ಪೇಮೆಂಟ್ ಮಾಡೋಕೆ ಇಲ್ಲಿದೆ ಸುಲಭ ವಿಧಾನ - Kannada News

ಕಡಿಮೆ ಬಡ್ಡಿ ಇರೋ ಬ್ಯಾಂಕಿಗೆ ಹೋಮ್ ಲೋನ್ ವರ್ಗಾವಣೆ ಮಾಡಿಕೊಳ್ಳಿ! ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಿ

ಹಾಗೆಯೇ ಯುಪಿಐ ಬಳಕೆ ಶುರು ಆದಾಗಿನಿಂದ ಬ್ಯಾಂಕ್ ವ್ಯವಹಾರಗಳು ಕಡಿಮೆ ಆಗುತ್ತಾ ಬಂದಿದೆ ಎಂದರೂ ತಪ್ಪಲ್ಲ. ಎಲ್ಲರ ಬಳಿಯಲ್ಲಿ ಈಗ ಸ್ಮಾರ್ಟ್ ಫೋನ್ ಬಂದಿರುವ ಕಾರಣ ಸಣ್ಣ ಮಕ್ಕಳು ಕೂಡ ಯುಪಿಐ ಬಳಕೆ ಮಾಡುವುದನ್ನು ಕಲಿತುಕೊಂಡಿದ್ದಾರೆ. ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೆ ಇಂಟರ್ನೆಟ್ ಕನೆಕ್ಷನ್ (Internet Connection) ಇರಬೇಕು.

ಆದರೆ ಇದೀಗ ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೇ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವ ಹೊಸ ಮಾರ್ಗ ಬಂದಿದೆ. ಯು.ಎಸ್.ಎಸ್.ಡಿ ರೀತಿಯ ಮೂಲಕ ಇಂಟರ್ನೆಟ್ ಇಲ್ಲದೆಯೇ ನಿಮ್ಮ ಫೋನ್ ನಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಬಹುದು.

ಇದು ಸುಲಭವಾದ ಮಾರ್ಗ ಆಗಿದ್ದು, ಈ ರೀತಿಯಲ್ಲಿ ಹಣ ವರ್ಗಾವಣೆ ಮಾಡುವುದು ಹೇಗೆ? ಇದರಿಂದ ಏನು ಸಮಸ್ಯೆ ಆಗುವುದಿಲ್ಲವೇ? ಇದೆಲ್ಲವನ್ನು ಪೂರ್ತಿಯಾಗಿ ತಿಳಿದುಕೊಳ್ಳೋಣ..

ಈ ₹10 ರೂಪಾಯಿ ಹಳೆಯ ನೋಟ್ ನಿಮ್ಮತ್ರ ಇದ್ರೆ ₹25,000 ನಿಮ್ಮದಾಗಿಸಿಕೊಳ್ಳಿ! ಬಂಪರ್ ಕೊಡುಗೆ

UPI Paymentನಮ್ಮ ಫೋನ್ ನ ಇಂಟರ್ನೆಟ್ ಕೆನೆಕ್ಷನ್ ಯಾವಾಗಲೂ ಚೆನ್ನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವೊಮ್ಮೆ ಇಂಟರ್ನೆಟ್ ಕೈಕೊಡಬಹುದು ಅಥವಾ ಇನ್ನೇನೋ ಸಮಸ್ಯೆ ಆಗಬಹುದು. ಆ ರೀತಿ ಆದಾಗ ಯುಪಿಐ ಪೇಮೆಂಟ್ (UPI Payment) ಹೇಗೆ ಮಾಡುವುದು ಎಂದು ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯು.ಎಸ್.ಎಸ್.ಡಿ ಮೂಲಕ *99# ನಂಬರ್ ಡಯಲ್ ಮಾಡುವ ಮೂಲಕ ಯುಪಿಐ ಇಂದ ಹಣ ಪಾವತಿ ಮಾಡಬಹುದು. ಈ ಹೊಸ ಸೌಲಭ್ಯವನ್ನು NCPI USSD ಮೂಲಕ ಪರಿಚಯಿಸಿದೆ.

ಮತ್ತಷ್ಟು ದುಬಾರಿ ಆಯ್ತು ಚಿನ್ನ, ₹200 ರೂಪಾಯಿ ಕುಸಿದ ಬೆಳ್ಳಿ! ಇಲ್ಲಿದೆ ಇಂದಿನ ಚಿನ್ನದ ಬೆಲೆ ಡೀಟೇಲ್ಸ್

ಈ ಒಂದು ಹೊಸ ಸೌಲಭ್ಯ ಹೇಗಿದೆ ಎಂದರೆ, ಇದನ್ನು ಬಳಸಿ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಯುಪಿಐ ಪಾವತಿ ಮಾಡುವುದಲ್ಲ, ಸಾಮಾನ್ಯವಾದ ಬೇಸಿಕ್ ಮೊಬೈಲ್ ಗಳಲ್ಲಿ ಕೂಡ ಯುಪಿಐ ಪೇಮೆಂಟ್ ಮಾಡಬಹುದು.

ಸಾಮಾನ್ಯ ಜನರಿಗು ಸಹಾಯ ಆಗಲಿ ಎನ್ನುವ ಕಾರಣಕ್ಕೆ ಈ ಒಂದು ಸೇವೆಯನ್ನು ತರಲಾಗಿದ್ದು, ಒಬ್ಬ ವ್ಯಕ್ತಿ USSD ಮೂಲಕ ₹2000 ರೂಪಾಯಿಗಳವರೆಗು ಸಣ್ಣ ಹಣಕಾಸಿನ ವಹಿವಾಟನ್ನು ಆಫ್ಲೈನ್ ಮೂಲಕ ನಡೆಸಬಹುದು.

Here is an easy way to make UPI payment without internet

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories