ಕಡಿಮೆ ಬಡ್ಡಿ ಇರೋ ಬ್ಯಾಂಕಿಗೆ ಹೋಮ್ ಲೋನ್ ವರ್ಗಾವಣೆ ಮಾಡಿಕೊಳ್ಳಿ! ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಿ

Story Highlights

Home Loan : ಗೃಹಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ ಎನ್ನುವುದು ಬ್ಯಾಂಕ್ ಇಂದ ಬ್ಯಾಂಕ್ ಗೆ ಬದಲಾವಣೆ ಆಗುತ್ತದೆ, ಕೆಲವು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ, ಕೆಲವು ಬ್ಯಾಂಕ್ ಗಳಲ್ಲಿ ಜಾಸ್ತಿ ಬಡ್ಡಿ ಇರುತ್ತದೆ.

Home Loan : ನಮ್ಮಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಯಾರಿಗೆ ತಾನೇ ಇರೋದಿಲ್ಲ. ಎಲ್ಲರಲ್ಲೂ ಈ ಕನಸು ಇದ್ದೇ ಇರುತ್ತದೆ, ಆದರೆ ಯಾರೂ ಕೂಡ ಆರ್ಥಿಕವಾಗಿ ಅಷ್ಟು ಸಬಲರಾಗಿ ಇರೋದಿಲ್ಲ. ಹಾಗಾಗಿ ಬಹಳಷ್ಟು ಜನರು ಹೋಮ್ ಲೋನ್ (Home Loan) ಮೂಲಕ ಮನೆ ಕಟ್ಟುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.

ಸ್ವಂತ ಮನೆ ಕಟ್ಟುವುದಕ್ಕೆ ಬ್ಯಾಂಕ್ ಗಳಿಂದ ಹೋಮ್ ಲೋನ್ ಅಥವಾ ಗೃಹ ಸಾಲ ಪಡೆಯಬಹುದು. ಇದರಿಂದ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು.

ದೇಶದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಬ್ಯಾಂಕ್ ಗಳಲ್ಲಿ ಗೃಹಸಾಲ ಸಿಕ್ಕೇ ಸಿಗುತ್ತದೆ. ನಿಮ್ಮ ಆದಾಯ ಮತ್ತು ಸಿಬಿಲ್ ಸ್ಕೋರ್ ನ (CIBIL Score) ಆಧಾರದ ಮೇಲೆ ಗೃಹಸಾಲವನ್ನು ನೀಡಲಾಗುತ್ತದೆ. ಹಾಗೆಯೇ ಗೃಹಸಾಲವನ್ನು ಮರುಪಾವತಿ ಮಾಡುವ ಅವಧಿ 10 ರಿಂದ 20 ವರ್ಷಗಳವರೆಗೂ ಇರುತ್ತದೆ.

ಈ ಅವಧಿಯಲ್ಲಿ ಗೃಹಸಾಲವನ್ನು ತೀರಿಸಬೇಕು. ಹಾಗೆಯೇ ಇಲ್ಲಿ ನೀವು ಇನ್ನು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಅದು ಗೃಹಸಾಲಕ್ಕೆ ವಿಧಿಸುವ ಬಡ್ಡಿಯ ಬಗ್ಗೆ.

ಈ ₹10 ರೂಪಾಯಿ ಹಳೆಯ ನೋಟ್ ನಿಮ್ಮತ್ರ ಇದ್ರೆ ₹25,000 ನಿಮ್ಮದಾಗಿಸಿಕೊಳ್ಳಿ! ಬಂಪರ್ ಕೊಡುಗೆ

ಗೃಹಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ ಎನ್ನುವುದು ಬ್ಯಾಂಕ್ ಇಂದ ಬ್ಯಾಂಕ್ ಗೆ ಬದಲಾವಣೆ ಆಗುತ್ತದೆ, ಕೆಲವು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ, ಕೆಲವು ಬ್ಯಾಂಕ್ ಗಳಲ್ಲಿ ಜಾಸ್ತಿ ಬಡ್ಡಿ ಇರುತ್ತದೆ. ಅದನ್ನೆಲ್ಲ ನೋಡಿಕೊಂಡು ಗೃಹಸಾಲ ಪಡೆದರು ಸಹ, ಕೆಲವೊಮ್ಮೆ ಆ ಬಡ್ಡಿದರ ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತದೆ, ಆ ರೀತಿ ಬದಲಾದಾಗ, ಅಷ್ಟೇ ಬಡ್ಡಿಯನ್ನು ನಾವು ಪಾವತಿ ಮಾಡಬೇಕಾಗುತ್ತದೆ.

ಒಂದು ವೇಳೆ ನೀವು ಪಡೆದಿರುವ ಹೋಮ್ ಲೋನ್ ಗೆ ಬಡ್ಡಿ ಕಟ್ಟುವುದು ನಿಮಗೆ ಹೊರೆ ಅನ್ನಿಸುತ್ತಿದ್ದರೆ, ಬೇರೆ ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಳ್ಳಬಹುದು.

ಹೌದು, ನಿಮ್ಮ ಹೋಮ್ ಲೋನ್ ಅನ್ನು ಒಂದು ಬ್ಯಾಂಕ್ ಇಂದ ಇನ್ನೊಂದು ಬ್ಯಾಂಕ್ ಗೆ ವರ್ಗಾವಣೆ ಮಾಡಬಹುದು. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯ, ಹೌದು ಪ್ರಸ್ತುತ ನೀವು ಲೋನ್ ಪಡೆದಿರುವ ಬ್ಯಾಂಕ್ ನಲ್ಲಿ ಹಣ ಮರುಪಾವತಿ (Loan Re Payment) ಮಾಡಲು ಕಷ್ಟ ಅನ್ನಿಸಿದರೆ, ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ಇದೆಯೋ ಆ ಬ್ಯಾಂಕ್ ಗೆ ಲೋನ್ ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು. ಈ ಕೆಲಸವನ್ನು ಹೇಗೆ ಮಾಡುವುದು ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ..

ಮತ್ತಷ್ಟು ದುಬಾರಿ ಆಯ್ತು ಚಿನ್ನ, ₹200 ರೂಪಾಯಿ ಕುಸಿದ ಬೆಳ್ಳಿ! ಇಲ್ಲಿದೆ ಇಂದಿನ ಚಿನ್ನದ ಬೆಲೆ ಡೀಟೇಲ್ಸ್

Home Loanಹೋಮ್ ಲೋನ್ ಟ್ರಾನ್ಸ್ಫರ್ ಮಾಡುವ ವಿಧಾನ:

*ಯಾವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಬಡ್ಡಿದರ ಎಷ್ಟಿದೆ, ನೀವು ಎಷ್ಟು ಇಎಂಐ ಕಟ್ಟಬೇಕು ಎನ್ನುವುದನ್ನು ಚೆಕ್ ಮಾಡಿ, ನಂತರ ಯಾವ ಬ್ಯಾಂಕ್ ಎಂದು ಆಯ್ಕೆ ಮಾಡಿಕೊಳ್ಳಿ.

*ಇದರ ಜೊತೆಗೆ ಪ್ರಸ್ತುತ ಲೋನ್ ಪಾವತಿ ಮಾಡುತ್ತಿರುವ ಬ್ಯಾಂಕ್ ನಲ್ಲಿ ಸ್ವತ್ತು ಮರುಸ್ವಾಧೀನ ಮಾಡಿಸಿಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಸಿ.

*ಲೋನ್ ಕಟ್ಟುತ್ತಿರುವ ಬ್ಯಾಂಕ್ ಇಂದ ನಿಮ್ಮ ಆಸ್ತಿಯ ದಾಖಲೆಗಳು, ಹಾಗೂ ಬ್ಯಾಂಕ್ ಸ್ಟೇಟ್ಮೆಂಟ್ (Bank Statement) ಪಡೆಯಬೇಕು.

ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟಿದೆ ಪಾಲು, ಈ ಬಗ್ಗೆ ಕಾನೂನು ಹೇಳೋದೇನು? ಇಲ್ಲಿದೆ ಮಾಹಿತಿ

*ಬಳಿಕ ಹಳೆಯ ಬ್ಯಾಂಕ್ ಇಂದ NOC ಪಡೆಯಬೇಕು, ಅದನ್ನು ಹೊಸ ಬ್ಯಾಂಕ್ ಗೆ ನೀಡಿ, ಆ ಮೂಲಕವಾಗಿ ಒಂದು ಬ್ಯಾಂಕ್ ಇಂದ ಇನ್ನೊಂದು ಬ್ಯಾಂಕ್ ಗೆ ಲೋನ್ ವರ್ಗಾವಣೆ ಮಾಡಿಕೊಳ್ಳಬಹುದು.

ಲೋನ್ ಟ್ರಾನ್ಸ್ಫರ್ ಗೆ ಬಹಳಷ್ಟು ದಾಖಲೆಗಳು ಬೇಕಾಗುತ್ತದೆ, ಕೆವೈಸಿ ಪೇಪರ್, ಆಸ್ತಿ ಪತ್ರಗಳು, ಲೋನ್ ಬ್ಯಾಲೆನ್ಸ್ ಪೇಪರ್, ಬಡ್ಡಿ ಪೇಪರ್ ಸೇರಿದಂತೆ ಇನ್ನೆಷ್ಟು ದಾಖಲೆಗಳು ಬೇಕಾಗುತ್ತದೆ. ಇದೆಲ್ಲವನ್ನು ರೆಡಿ ಮಾಡಿ ಇಟ್ಟುಕೊಂಡರೆ, ಹಳೆ ಬ್ಯಾಂಕ್ ಪ್ರೊಸಿಜರ್ ಗಳನ್ನು ಪೂರ್ತಿಗೊಳಿಸಿ, ಹೊಸ ಬ್ಯಾಂಕ್ ನಲ್ಲಿ EMI ಪಾವತಿ ಮಾಡುವುದಕ್ಕೆ ಶುರು ಮಾಡಬಹುದು.

Transfer your home loan to a bank with low interest

Related Stories