Business News

ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟಿದೆ ಪಾಲು, ಈ ಬಗ್ಗೆ ಕಾನೂನು ಹೇಳೋದೇನು? ಇಲ್ಲಿದೆ ಮಾಹಿತಿ

ಆಸ್ತಿಗೆ ಸಂಬಂಧಿಸಿದ ಹಾಗೆ ನಮ್ಮ ದೇಶದಲ್ಲಿ ಬೇರೆ ರೀತಿಯ ಕಾನೂನುಗಳಿವೆ (Property Law). ಒಂದು ಕುಟುಂಬ ಎಂದು ಬಂದಾಗ ಅಲ್ಲಿ ಎಲ್ಲರೂ ಎಷ್ಟೇ ಪ್ರೀತಿ ಇಂದ ಇದ್ದರೂ ಕೂಡ ಅವರುಗಳ ನಡುವೆ ಆಸ್ತಿ ವಿಚಾರಕ್ಕೆ (Property Rights) ಭಿನ್ನಾಭಿಪ್ರಾಯ ಬಂದೆ ಬರುತ್ತದೆ.

ಅಂಥ ಸಮಯದಲ್ಲಿ ಜಗಳ ಮತ್ತು ಮನಸ್ತಾಪಗಳು ಕೂಡ ಹೆಚ್ಚಾಗುತ್ತದೆ. ಈ ರೀತಿ ಆಗಬಾರದು ಎಂದರೆ ಆಸ್ತಿ ವಿಚಾರದಲ್ಲಿ ಇರುವ ಕಾನೂನಿನ ಬಗ್ಗೆ ಜನರು ತಿಳಿದುಕೊಳ್ಳುವುದು ಒಳ್ಳೆಯದು. ಆಗ ಯಾವುದೇ ಜಗಳ ಮನಸ್ತಾಪ ಬರುವುದಿಲ್ಲ.

In such cases, girls do not get property

ನಮ್ಮ ಭಾರತ ದೇಶದಲ್ಲಿ ಆಸ್ತಿಗೆ ಸಂಬಂಧಿಸಿದ ಹಾಗೆ ಕಾನೂನು ಹೇಗಿದೆ ಎಂದು ನೋಡುವುದಾದರೆ, 2005 ರಲ್ಲಿ ಕುಟುಂಬದ ಉತ್ತರಾಧಿಕಾರಿ ಕಾಯ್ದೆಯ ಹಕ್ಕಿನಲ್ಲಿ ತಿದ್ದುಪಡಿ ಮಾಡಲಾಯಿತು. ಗಂಡುಮಕ್ಕಳಿಗೆ ಇರುವ ಹಾಗೆ ಹೆಣ್ಣುಮಕ್ಕಳಿಗೆ ಕೂಡ ತಂದೆ ತಾಯಿಯ ಆಸ್ತಿಯಲ್ಲಿ ಸಮಾನ ಹಕ್ಕು ಇರುತ್ತದೆ, ಸಮಾನವಾಗಿ ಭಾಗ ಕೊಡಬೇಕು ಎನ್ನುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದು ಮನೆಯ ಹೆಣ್ಣುಮಗಳ ವಿಚಾರಕ್ಕೆ ಬಂದ ಕಾನೂನು ಆಗಿದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಬರೋಬ್ಬರಿ 16 ಲಕ್ಷ! ಇದಕ್ಕಿಂತ ಉತ್ತಮ ಯೋಜನೆ ಇನ್ನೊಂದಿಲ್ಲ

ಇನ್ನು ಮನೆಯ ಸೊಸೆಗೆ ಬರುವ ಆಸ್ತಿ ಹಕ್ಕಿನ ಬಗ್ಗೆ ನೋಡುವುದಾದರೆ, ಒಂದು ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಆಕೆಗೆ ಗಂಡನ ಆಸ್ತಿಯ ಮೇಲೆ ತಕ್ಕಮಟ್ಟಿಗೆ ಹಕ್ಕು ಬರುತ್ತದೆ.

ಆದರೆ ಕುಟುಂಬದ ಆಸ್ತಿಯ ಮೇಲೆ ಸೊಸೆಗೆ ಎಷ್ಟು ಹಕ್ಕು ಇರುತ್ತದೆ? ಇದರ ಬಗ್ಗೆ ತಿಳಿಯುವುದಾದರೆ, ಮನೆಯ ಮಗಳಿಗೆ ಇರುವಷ್ಟು ಹಕ್ಕು ಸೊಸೆ ಆದವಳಿಗೆ ಇರುವುದಿಲ್ಲ. ಹಾಗಿದ್ದಲ್ಲಿ ಸೊಸೆಗೆ ಎಷ್ಟು ಹಕ್ಕು ಬರುತ್ತದೆ, ಎಂದು ಪೂರ್ತಿಯಾಗಿ ತಿಳಿಯೋಣ..

52 ವರ್ಷಗಳ ಹಿಂದೆ ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? 1971ರ ಮಸಾಲೆ ದೋಸೆ ಬಿಲ್ ವೈರಲ್

ಸೊಸೆಗೆ ಸಿಗುವ ಹಕ್ಕು ಇದು:

Property Rightsಒಂದು ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಆಕೆ ಆ ಮನೆಯ ಸದಸ್ಯೆ ಆಗುತ್ತಾಳೆ. ಇಡೀ ಜೀವನ ಗಂಡನ ಮನೆಯಲ್ಲೇ ಕಳೆಯಬೇಕಾಗುತ್ತದೆ. ಗಂಡನ ಮನೆಯವರನ್ನೇ ತನ್ನ ಮನೆಯವರು ಎಂದುಕೊಂಡು ಬದುಕುತ್ತಾಳೆ.

ಆದರೆ ಆಕೆಗೆ ತನ್ನ ಗಂಡನ ಆಸ್ತಿಯಲ್ಲಿ (Husband Property) ಹಕ್ಕು ಇರುತ್ತದೆ ಹೊರತು, ಗಂಡನ ಮನೆಯ ಆಸ್ತಿ ಅಂದರೆ ಅತ್ತೆ ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕು ಇರುವುದಿಲ್ಲ. ಹೌದು, ಅತ್ತೆ ಮಾವನ ಆಸ್ತಿ ಎಂದರೆ ಅದು ಅವರು ಮಾಡಿಟ್ಟ ಆಸ್ತಿ ಆಗಿರುತ್ತದೆ.

10 ಲಕ್ಷ ಸಾಲ ವಾಟ್ಸಾಪ್ ನಲ್ಲೇ ಸಿಗಲಿದೆ, ಲೋನ್ ಬೇಕು ಅನ್ನೋರು ಜಸ್ಟ್ Hi ಅಂತ ಮೆಸೇಜ್ ಮಾಡಿ ಸಾಕು

ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಯಾವುದೇ ಹಕ್ಕು ಇರುವುದಿಲ್ಲ, ಅದರಲ್ಲಿ ಅವಳು ಪಾಲು ಕೇಳುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಅತ್ತೆ ಮಾವ ತೀರಿಕೊಂಡ ನಂತರ, ಆ ಆಸ್ತಿ ಆಕೆಯ ಗಂಡನಿಗೆ ಸೇರುತ್ತದೆ. ಆ ನಂತರ ಗಂಡನ ಆಸ್ತಿಯಲ್ಲಿ ಆಕೆಗೆ ಹಕ್ಕು ಬರುತ್ತದೆ. ಆದರೆ ಅತ್ತೆ ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕು ಬರುವುದಿಲ್ಲ. ಮದುವೆ ಸಮಯದಲ್ಲಿ ಸೊಸೆ ಆದವಳಿಗೆ ಸಿಗುವ ಗಿಫ್ಟ್ ಗಳು ಮಾತ್ರ ಪೂರ್ತಿಯಾಗಿ ಅವಳಿಗೆ ಸೇರಿದ್ದಾಗಿರುತ್ತದೆ.

What is the daughter-in-law’s share in the property of the father-in-law

Related Stories