10 ಲಕ್ಷ ಸಾಲ ವಾಟ್ಸಾಪ್ ನಲ್ಲೇ ಸಿಗಲಿದೆ, ಲೋನ್ ಬೇಕು ಅನ್ನೋರು ಜಸ್ಟ್ Hi ಅಂತ ಮೆಸೇಜ್ ಮಾಡಿ ಸಾಕು

Story Highlights

Whatsapp Loan : 10 ಲಕ್ಷದವರೆಗಿನ ಸಾಲ ವಾಟ್ಸಾಪ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಸಿಗುತ್ತದೆ, ಹೌದು ಈಗ ವಾಟ್ಸಾಪ್ ಮೂಲಕ ಪರ್ಸನಲ್ ಲೋನ್ (Personal Loan) ಸಿಗುತ್ತದೆ.

Whatsapp Loan : ಸಮಾನ್ಯವಾಗಿ ಹಣಕಾಸಿನ ಸಮಸ್ಯೆ ಎದುರಾದಾಗ, ಯಾರ ಬಳಿ ಕೂಡ ಹಣ ಪಡೆಯಬಾರದು ಅನ್ನಿಸಿದಾಗ, ಹೇಗೆ ಯಾರ ಬಳಿ ಸಾಲ ಪಡೆಯುವುದು ಎನ್ನುವ ಪ್ರಶ್ನೆ ಕಂಡುಬರುತ್ತದೆ.

ಸಾಲ ಪಡೆಯುವುದಕ್ಕೆ ಹಲವು ಹಣಕಾಸು ಸಂಸ್ಥೆ ಇದೆ, ಬ್ಯಾಂಕ್ ಗಳಿವೆ (Banks), ಆದರೆ ಅಲ್ಲಿಂದ ಸಾಲ ಪಡೆಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರೊಸೆಸ್ ಗಳು (Loan Process) ಜಾಸ್ತಿ ಇರುತ್ತದೆ, ಕೆಲವೊಮ್ಮೆ ನಮಗೆ ತಕ್ಷಣಕ್ಕೆ ಹಣ ಬೇಕಾಗುತ್ತದೆ. ಆಗ ಏನು ಮಾಡಬೇಕೆಂದು ದಾರಿ ಸಿಗುವುದಿಲ್ಲ.

ಒಂದು ವೇಳೆ ನೀವು ಈ ಥರದ ಪರಿಸ್ಥಿತಿ ಎದುರಿಸುತ್ತಿದ್ದೀರಿ ಎಂದರೆ ನಿಮಗಾಗಿ ಒಂದು ಒಳ್ಳೆಯ ಸುದ್ದಿ ಕಾದಿದೆ. ಇನ್ನುಮುಂದೆ ನೀವು ಸುಲಭವಾಗಿ ಸಾಲ ಪಡೆಯಬಹುದು. ಅದು 10 ಲಕ್ಷದವರೆಗಿನ ಸಾಲ ವಾಟ್ಸಾಪ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಸಿಗುತ್ತದೆ, ಹೌದು ಈಗ ವಾಟ್ಸಾಪ್ ಮೂಲಕ ಪರ್ಸನಲ್ ಲೋನ್ (Personal Loan) ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಅತೀ ಕಡಿಮೆ ಬಡ್ಡಿಗೆ ಸಿಗಲಿದೆ ಹೋಮ್ ಲೋನ್! ಅರ್ಜಿ ಸಲ್ಲಿಸಿ

IFFL ಎನ್ನುವ ಹಣಕಾಸು ಸಂಸ್ಥೆ ವಾಟ್ಸಾಪ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ನೀವು ಸುಲಭವಾಗಿ ಕೆಲವೇ ಕ್ಷಣಗಳಲ್ಲಿ ಸಾಲ ಪಡೆಯಬಹುದು.

ಸಾಲಕ್ಕೆ ನಿಮಗೆ ಅರ್ಹತೆ ಇದೆಯಾ? ಎಷ್ಟು ಸಾಲ ಪಡೆಯಬಹುದು? ಇದೆಲ್ಲವೂ ಕೂಡ ಕೆಲವೇ ನಿಮಿಷಗಳಲ್ಲಿ ಚೆಕ್ ಮಾಡಲಾಗುತ್ತದೆ. ಅಪ್ಲೈ ಮಾಡುವುದರಿಂದ ಹಿಡಿದು, ನೀವು ಸಾಲ ಪಡೆಯುವ ಮೊತ್ತ ನಿರ್ಧಾರ ಆಗಿ, ಆ ಹಣ ನಿಮ್ಮ ಅಕೌಂಟ್ ಗೆ (Bank Account) ಹಣ ಬರುವವರೆಗೂ ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ ನಲ್ಲಿಯೇ ನಡೆಯಲಿದ್ದು, ನೀವು ಸುಲಭವಾಗಿ ಸಾಲ ಪಡೆಯಬಹುದು. ಹಾಗಿದ್ದಲ್ಲಿ ಈ ಸಾಲದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ತಿಳಿಯೋಣ.

ಬ್ಯಾಂಕ್ ಅಕೌಂಟ್ ನಲ್ಲಿ ನಾಮಿನಿ ಹೆಸರು ಇಲ್ಲದಾಗ ಖಾತೆ ಇದ್ದ ವ್ಯಕ್ತಿ ಸತ್ತರೆ ಹಣ ಏನಾಗುತ್ತೆ ಗೊತ್ತಾ?

Loanಬ್ಯುಸಿನೆಸ್ ಗಾಗಿ ಮಾತ್ರ ಸಾಲ:

ಈ ವಾಟ್ಸಾಪ್ ಸಾಲ ಬ್ಯುಸಿನೆಸ್ (Business Loan) ಅಥವಾ ಯಾವುದೇ ವ್ಯಾಪಾರ ಮಾಡುವುದಕ್ಕಾಗಿ ಸಿಗುತ್ತದೆ. ಈ ಸಾಲವನ್ನು ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ಪಡೆಯಬಹುದು.

ಪ್ರಪಂಚಾದ್ಯಂತ ಸುಮಾರು 450 ಮಿಲಿಯನ್ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ. ಅಂಥವರಿಗೆ ಸಹಾಯ ಆಗಲಿ, ಹಣಕಾಸಿನ ಅವಶ್ಯಕತೆ ಬಂದಾಗ ನೆರವು ಸಿಗಲಿ, ಬೇಗ ಸಾಲ ಸಿಗಲಿ ಎಂದು ಈ ಸೌಲಭ್ಯವನ್ನು ಜಾರಿಗೆ ತರಲಾಗಿದೆ.

ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?

ನಿಮಗೆ ತಕ್ಷಣಕ್ಕೆ ಸಾಲ ಬೇಕು ಎಂದರೆ, 9019702184 ಈ ನಂಬರ್ ಸೇವ್ ಮಾಡಿಕೊಳ್ಳಿ. ಇದು ಸಾಲ ಕೊಡುವ ಚಾಟ್ ಬಾಟ್ ಆಗಿದ್ದು, ಇದು ಸಾಲಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ವಿವರಗಳನ್ನು ಕೇಳುತ್ತದೆ.

ಅದನ್ನು ಎಂಟರ್ ಮಾಡಿದ ನಂತರ, ಎಲ್ಲಾ ವಿವರಗಳನ್ನು ಪರಿಶೀಲಿಸಿ ನಿಮಗೆ ಸಾಲವನ್ನು ನೀಡುತ್ತದೆ. ಈ ಮೂಲಕ ನೀವು ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ನಿಮ್ಮ ತಕ್ಷಣದ ಅಗತ್ಯತೆಗೆ ಈ ರೀತಿಯಾಗಿ ಸಾಲ ಪಡೆಯುವುದು ಉತ್ತಮವಾದ ಮಾರ್ಗ ಆಗಿದೆ.

10 lakh loan will be available on WhatsApp, just send a message saying Hi

Related Stories