ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?

Story Highlights

ಹೋಮ್ ಲೋನ್ (Home Loan) , ವೆಹಿಕಲ್ ಲೋನ್ (Vehicle Loan) ಇದೆಲ್ಲವನ್ನು ಕೂಡ ಸೆಕ್ಯೂರ್ಡ್ ಸಾಲ ಎಂದು ಪರಿಗಣಿಸಲಾಗುತ್ತದೆ, ಇನ್ನು ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಗೆ ಸಿಗುವ ಲೋನ್ (Credit Card Loan) ಇದೆಲ್ಲವನ್ನು ಅನ್ ಸೆಕ್ಯೂರ್ಡ್ ಲೋನ್ ಎಂದು ಪರಿಗಣಿಸಲಾಗುತ್ತದೆ.

ಜನರು ತಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು, ಸ್ವಂತ ಮನೆ (Home Loan) ಮಾಡಿಕೊಳ್ಳಲು, ವಾಹನ ಖರೀದಿ ಮಾಡಲು, ವೈಯಕ್ತಿಕ ಖರ್ಚುಗಳನ್ನು (Personal Loan) ನೋಡಿಕೊಳ್ಳಲು ಹೀಗೆ ಅನೇಕ ಕಾರಣಗಳಿಗೆ ಬ್ಯಾಂಕ್ ಇಂದ ಸಾಲ (Bank Loan) ಪಡೆಯುತ್ತಾರೆ.

ಆದರೆ ಸಾಲ ಪಡೆಯುವುದಕ್ಕಿಂತ ಮೊದಲು ಬ್ಯಾಂಕ್ ನಿಯಮ, RBI ನಿಯಮ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಆಗ ಸಾಲ ಪಡೆಯುವ ವ್ಯಕ್ತಿಗೆ ತೊಂದರೆ ಆಗುವುದಿಲ್ಲ.

ಬ್ಯಾಂಕ್ ಇಂದ ಪಡೆಯುವ ಸಾಲದಲ್ಲಿ 2 ವಿಧವಿದೆ, ಹೋಮ್ ಲೋನ್ (Home Loan) , ವೆಹಿಕಲ್ ಲೋನ್ (Vehicle Loan) ಇದೆಲ್ಲವನ್ನು ಕೂಡ ಸೆಕ್ಯೂರ್ಡ್ ಸಾಲ ಎಂದು ಪರಿಗಣಿಸಲಾಗುತ್ತದೆ, ಇನ್ನು ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಗೆ ಸಿಗುವ ಲೋನ್ (Credit Card Loan) ಇದೆಲ್ಲವನ್ನು ಅನ್ ಸೆಕ್ಯೂರ್ಡ್ ಲೋನ್ ಎಂದು ಪರಿಗಣಿಸಲಾಗುತ್ತದೆ.

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹20,000 ಹಣ ಇಟ್ಟು ಒನ್ ಟು ಡಬಲ್ ಮಾಡ್ಕೊಳ್ಳಿ!

ಈ ರೀತಿಯಾಗಿ ಸಾಲ ಪಡೆಯುವ ವ್ಯಕ್ತಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದೇ ಹೋದರೆ ಆತನ ಮೇಲೆ ಬ್ಯಾಂಕ್ ಇಂದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಆದರೆ ಅಕಸ್ಮಾತ್ ಸಾಲ ಪಡೆದ ವ್ಯಕ್ತಿ, ಮರುಪಾವತಿ ಮಾಡುವುದಕ್ಕಿಂತ ಮೊದಲೇ ಮರಣ ಹೊಂದಿದರೆ ಆಗ ಏನು ಮಾಡಬೇಕು? ಸಾಲ ಮರುಪಾವತಿ ಮಾಡಬೇಕಾದ ಭಾರ ಯಾರ ಮೇಲೆ ಬೀಳುತ್ತದೆ? ಮನೆಯವರೇ ಸಾಲದ ಮೊತ್ತವನ್ನು ಮರುಪಾವತಿ (Loan Re Payment) ಮಾಡಬೇಕಾ? ಇದರ ಬಗ್ಗೆ ಬ್ಯಾಂಕ್ ನಲ್ಲಿ ಮತ್ತು RBI ನಲ್ಲಿ ಇರುವ ನಿಯಮಗಳು ಏನೇನು? ಇದೆಲ್ಲದರ ಬಗ್ಗೆ ಇಂದು ತಿಳಿದುಕೊಳ್ಳೋಣ..

ಕಡಿಮೆ ಬಡ್ಡಿಗೆ 5 ಲಕ್ಷದವರೆಗೂ ಪರ್ಸನಲ್ ಲೋನ್ ಕೊಡೋ ಬ್ಯಾಂಕುಗಳಿವು! ಜಾಸ್ತಿ ಡಾಕ್ಯುಮೆಂಟ್ಸ್ ಕೇಳೋಲ್ಲ

Bank Loanಸಾಲ ಪಡೆದ ವ್ಯಕ್ತಿ ಮರಣ ಹೊಂದಿದರೆ ಇವರು ತೀರಿಸಬೇಕು:

*ಹೋಮ್ ಲೋನ್: ಹೋಮ್ ಲೋನ್ ಸೆಕ್ಯೂರ್ಡ್ ಲೋನ್ ಆಗಿರುತ್ತದೆ. ಒಂದು ವೇಳೆ ಹೋಮ್ ಲೋನ್ ಅನ್ನು ಜಾಯಿಂಟ್ ಅಕೌಂಟ್ ಮೂಲಕ ಇಬ್ಬರು ವ್ಯಕ್ತಿಗಳು ಸೇರಿ, ಹೋಮ್ ಲೋನ್ ಪಡೆದಿದ್ದಾರೆ ಎಂದರೆ, ಒಬ್ಬ ವ್ಯಕ್ತಿ ಮರಣ ಹೊಂದಿದರೆ, ಇನ್ನೊಬ್ಬ ವ್ಯಕ್ತಿಯ ಮೇಲೆ ಸಾಲದ ಹೊರೆ ಸಂಪೂರ್ಣವಾಗಿ ಬೀಳುತ್ತದೆ. ಒಂದು ವೇಳೆ ಸಾಲ ಮರುಪಾವತಿ ಆಗಿಲ್ಲ ಎಂದರೆ, ಆ ಆಸ್ತಿ ಬ್ಯಾಂಕ್ ಪಾಲಾಗುತ್ತದೆ.

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಬಂಪರ್ ಕೊಡುಗೆ! ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಭಾರೀ ಬಡ್ಡಿ

*ವೆಹಿಕಲ್ ಲೋನ್: ಇದು ಕೂಡ ಸೆಕ್ಯೂರ್ಡ್ ಲೋನ್ ಗೆ ಸೇರಲಿದ್ದು, ವೆಹಿಕಲ್ ಲೋನ್ ಪಡೆದ ವ್ಯಕ್ತಿ ಮರಣ ಹೊಂದಿದರೆ, ಸಾಲ ತೀರಿಸುವ ಜವಾಬ್ದಾರಿ ಅವರ ಕುಟುಂಬದ ಮೇಲೆ ಬೀಳುತ್ತದೆ. ಒಂದು ವೇಳೆ ಮನೆಯವರು ವೆಹಿಕಲ್ ಲೋನ್ ಅನ್ನು ತೀರಿಸಲು ಸಾಧ್ಯ ಆಗಲಿಲ್ಲ ಎಂದರೆ, ಆಗ ಖರೀದಿ ಮಾಡಿರುವ ವಾಹನವನ್ನು ಬ್ಯಾಂಕ್ ವಶಪಡಿಸಿಕೊಳ್ಳುತ್ತದೆ.

*ಪರ್ಸನಲ್ ಲೋನ್: ಇದು ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಪಡೆಯುವ ಸಾಲ ಆಗಿದ್ದು, ಸೆಕ್ಯೂರ್ಡ್ ಲೋನ್ ಅಡಿಗೆ ಬರುವುದಿಲ್ಲ. ಈ ಸಾಲ ಪಡೆಯುವ ವ್ಯಕ್ತಿ ಅಕಸ್ಮಾತ್ ಮರಣ ಹೊಂದಿದರೆ, ಸಾಲ ಮರುಪಾವತಿ ಮಾಡಲು ಆತನ ಕುಟುಂಬದವರನ್ನು ಕೇಳುವ ಹಾಗಿಲ್ಲ. ಕುಟುಂಬಕ್ಕೆ ಈ ಜವಾಬ್ದಾರಿ ಸೇರುವುದಿಲ್ಲ. ಹಾಗಾಗಿ ಈ ಕೇಸ್ ಅನ್ನು NPA ಗೆ ಸೇರಿಸುತ್ತದೆ ಬ್ಯಾಂಕ್.

ಈ ಬ್ಯಾಂಕ್ ಗಳಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಅತಿಹೆಚ್ಚು ಬಡ್ಡಿ! ಇದು ಹಣ ಡಬಲ್ ಆಗೋ ಚಾನ್ಸ್!

If a person who has taken a loan from the bank dies suddenly, who will pay the loan

Related Stories