ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಬಂಪರ್ ಕೊಡುಗೆ! ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಭಾರೀ ಬಡ್ಡಿ
Fixed Deposit : ಹಣ ಉಳಿತಾಯ ಮಾಡಿ, ಹೂಡಿಕೆ ಮಾಡಬೇಕು ಎಂದುಕೊಂಡಿರುವವರಿಗೆ ಬ್ಯಾಂಕ್ ನಲ್ಲಿ FD ಮಾಡುವುದು ಉತ್ತಮವಾದ ಆಯ್ಕೆ ಆಗಿದೆ. ಏಕೆಂದರೆ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿ ಇರುತ್ತದೆ, ಜೊತೆಗೆ ಉತ್ತಮವಾದ ಬಡ್ಡಿದರ ಕೂಡ ಸಿಗುತ್ತದೆ.
ಹಾಗಾಗಿ ಹೆಚ್ಚಿನ ಜನರು ಬ್ಯಾಂಕ್ ಗಳಲ್ಲಿ FD ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಒಂದು ವೇಳೆ ನೀವು ಕೂಡ ಇದೇ ಪ್ಲಾನ್ ನಲ್ಲಿದ್ದರೆ, ಇಂದು ನಿಮಗೆ ಸಿಹಿ ಸುದ್ದಿ ಕಾದಿದೆ..
ಯಾರೆಲ್ಲಾ ಉತ್ತಮವಾದ ಬಡ್ಡಿ ಸಿಗುವ FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದೀರೋ, ಅಂಥವರ ಬ್ಯಾಂಕ್ ಅಕೌಂಟ್ Canara Bank, SBI, HDFC ಅಥವಾ ICICI ಬ್ಯಾಂಕ್ ನಲ್ಲಿ ಇದ್ದರೆ, ಅಂಥವರಿಗೆ ಇದು ಗುಡ್ ನ್ಯೂಸ್ ಆಗಿದ್ದು, ಈ ಬ್ಯಾಂಕ್ ಗಳಲ್ಲಿ FD ಮೇಲೆ ಬಡ್ಡಿದರ ಹೆಚ್ಚಳ ಆಗಿದೆ.
ಈ ಬ್ಯಾಂಕ್ ಗಳಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಅತಿಹೆಚ್ಚು ಬಡ್ಡಿ! ಇದು ಹಣ ಡಬಲ್ ಆಗೋ ಚಾನ್ಸ್!
ಹಿರಿಯ ನಾಗರೀಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚು ಬಡ್ಡಿದರ ಸಿಗಲಿದ್ದು, ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ಸಿಗುತ್ತದೆ ಎನ್ನುವುದನ್ನು ಪೂರ್ತಿಯಾಗಿ ಇಂದು ತಿಳಿದುಕೊಳ್ಳೋಣ..
*SBI ಬಡ್ಡಿದರ: ಭಾರತದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವ SBI ನಲ್ಲಿ FD ಹೂಡಿಕೆ ಮೇಲೆ ಸಾಮಾನ್ಯ ಗ್ರಾಹಕರಿಗೆ 3.50 ಇಂದ 7.10% ವರೆಗು ಬಡ್ಡಿದರ ಇರುತ್ತದೆ. ಇನ್ನು ಹಿರಿಯ ನಾಗರೀಕರಿಗೆ 4 ಇಂದ 7.60% ವರೆಗು ಬಡ್ಡಿದರ ಇರುತ್ತದೆ.
SBI ನಲ್ಲಿ ಪ್ರಸ್ತುತ 400 ದಿನಗಳ ವಿಶೇಷ FD ಯೋಜನೆ ಇದ್ದು, ಇದಕ್ಕೆ 7.10% ಬಡ್ಡಿದರ ನಿಗದಿ ಮಾಡಲಾಗಿದೆ. 2024ರ ಸೆಪ್ಟೆಂಬರ್ 30ರ ಒಳಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಎಟಿಎಂ ಕಾರ್ಡ್ ಬೇಕಿಲ್ಲ, ಗೂಗಲ್ ಪೇ ಇದ್ರೆ ಸಾಕು ಹಣ ವಿತ್ ಡ್ರಾ ಮಾಡೋಕೆ! ಇಲ್ಲಿದೆ ಬಿಗ್ ಅಪ್ಡೇಟ್
*ICICI ಬಡ್ಡಿದರ: ಇದು ಕೂಡ ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು, ICICI ನಲ್ಲಿ ಸಾಮಾನ್ಯ ಜನರಿಗೆ FD ಹೂಡಿಕೆ ಮೇಲೆ 3 ಇಂದ 7.20% ವರೆಗು ಬಡ್ಡಿದರ ಸಿಗಲಿದೆ. ಹಿರಿಯ ನಾಗರೀಕರಿಗೆ 3.50 ಇಂದ 7.75% ವರೆಗೂ ಬಡ್ಡಿ ಸಿಗುತ್ತದೆ.
*HDFC ಬಡ್ಡಿದರ: ಪ್ರೈವೇಟ್ ಸೆಕ್ಟರ್ ಗೆ ಬಂದರೆ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಇದು ಎಂದರೆ ತಪ್ಪಲ್ಲ. HDFC ಬ್ಯಾಂಕ್ ನಲ್ಲಿ FD ಹೂಡಿಕೆ ಮೇಲೆ ಸಾಮಾನ್ಯ ಜನರಿಗೆ 3 ಇಂದ 7.25% ವರೆಗು ಬಡ್ಡಿದರ ಇರುತ್ತದೆ, ಹಿರಿಯ ನಾಗರೀಕರಿಗೆ 3.50 ಇಂದ 7.75% ವರೆಗು ಬಡ್ಡಿದರ ಇರಲಿದೆ. 18 ತಿಂಗಳ ಹೂಡಿಕೆಗೆ 7.25%, 21 ತಿಂಗಳ ಹೂಡಿಕೆಗೆ 7.75% ಬಡ್ಡಿದರ ಇರಲಿದೆ.
ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು ಪ್ರತಿ ತಿಂಗಳು ಇಎಂಐ ಕಂತು ಕಟ್ಟುತ್ತಿರುವವರಿಗೆ ಸಿಹಿಸುದ್ದಿ!
*ಕೆನರಾ ಬ್ಯಾಂಕ್: ಮತ್ತೊಂದು ಪ್ರಮುಖ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದ್ದು, ಇಲ್ಲಿ 7 ದಿನಗಳಿಂದ 10 ವರ್ಷಗಳ ಒಳಗಿನ FD ಹೂಡಿಕೆಯ ಮೇಲೆ ಸಾಮಾನ್ಯ ಜನರಿಗೆ 4 ಇಂದ 7.25% ವರೆಗು ಬಡ್ಡಿದರ ಇರುತ್ತದೆ. ಹಿರಿಯ ನಾಗರೀಕರಿಗೆ 4 ಇಂದ 7.75% ವರೆಗು ಬಡ್ಡಿದರ ನಿಗದಿ ಆಗಿದೆ. 444 ದಿನಗಳ FD ಹೂಡಿಕೆ ಮೇಲೆ 7.25% ಇಂದ 7.75% ವರೆಗು ಬಡ್ಡಿದರ ನಿಗದಿ ಆಗಿದೆ.
*PNB ಬಡ್ಡಿದರ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ FD ಹೂಡಿಕೆಯ ಮೇಲೆ ಎಷ್ಟು ಬಡ್ಡಿದರ ನಿಗದಿ ಆಗಿದೆ ಎಂದರೆ ಸಾಮಾನ್ಯ ಗ್ರಾಹಕರಿಗೆ 3.50% ಇಂದ 7.25% ವರೆಗೂ ಬಡ್ಡಿದರ ಇದ್ದು, ಹಿರಿಯ ನಾಗರೀಕರಿಗೆ 4 ಇಂದ 7.75% ಬಡ್ಡಿದರ ನಿಗದಿ ಆಗಿದೆ. 400 ದಿನಗಳ FD ಹೂಡಿಕೆಗೆ 7.25 ಇಂದ 7.75% ವರೆಗು ಬಡ್ಡಿ ಸಿಗಬಹುದು.
*Yes Bank ಬಡ್ಡಿದರ: ಈ ಬ್ಯಾಂಕ್ ನಲ್ಲಿ FD ಹೂಡಿಕೆಗಳ ಮೇಲೆ ಸಾಮಾನ್ಯ ಜನರಿಗೆ 3.25% ಇಂದ 8% ವರೆಗೂ ಬಡ್ಡಿದರ ಸಿಗುತ್ತದೆ. ಹಿರಿಯ ನಾಗರೀಕರಿಗೆ 3.75% ಇಂದ 8.50% ವರೆಗೂ ಬಡ್ಡಿದರ ನಿಗದಿ ಆಗಿದೆ. 18 ತಿಂಗಳ FD ಹೂಡಿಕೆಗೆ 8 ಇಂದ 8.50% ವರೆಗು ಬಡ್ಡಿದರ ಸಿಗಬಹುದು.
ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿದ್ದೀರಾ? ಬಂತು ಬಡವರ ಕನಸು ನನಸು ಮಾಡೋ ಹೊಸ ಯೋಜನೆ!
Canara Bank, State Bank Account Holders will get Huge interest for Fixed Deposit