ಈ ಬ್ಯಾಂಕ್ ಗಳಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಅತಿಹೆಚ್ಚು ಬಡ್ಡಿ! ಇದು ಹಣ ಡಬಲ್ ಆಗೋ ಚಾನ್ಸ್!
Fixed Deposit : FD ಯೋಜನೆಗೆ ಈ ಬ್ಯಾಂಕ್ ಗಳಲ್ಲಿ ಸಿಗಲಿದೆ ಅತಿಹೆಚ್ಚು ಬಡ್ಡಿದರ! ಇನ್ನೇಕೆ ತಡ ಈಗಲೇ ಹೂಡಿಕೆ ಮಾಡಿ!
Fixed Deposit : FD ಯೋಜನೆಗಳು ಈಗ ಹೂಡಿಕೆ ಮಾಡುವುದಕ್ಕೆ ಉತ್ತಮವಾದ ಆಯ್ಕೆ ಆಗಿದೆ. ಹಲವು ಬ್ಯಾಂಕ್ ಗಳು FD ಹೂಡಿಕೆಗಳ ಮೇಲೆ ಉತ್ತಮವಾದ ಬಡ್ಡಿದರ ನೀಡುತ್ತಿದೆ.
ಸಾರ್ವಜನಿಕರಿಗಿಂತ ಹಿರಿಯ ನಾಗರೀಕರಿಗೆ 0.25% ಇಂದ 0.75% ವರೆಗು ಹೆಚ್ಚು ಬಡ್ಡಿದರ ಸಿಗುತ್ತದೆ. Fixed Deposit ಯೋಜನೆಗಳ ಹೂಡಿಕೆಗೆ ಬರುವ ಬಡ್ಡಿಗೆ ಟ್ಯಾಕ್ಸ್ ಕಟ್ಟಬೇಕು, ಆದರೆ ಸೆಕ್ಷನ್ 80ಸಿ ಅಡಿಯಲ್ಲಿ ಇದರಿಂದ ಹಿರಿಯ ನಾಗರೀಕರು ವಿನಾಯಿತಿ ಪಡೆಯಬಹುದು. ಹಾಗೆಯೇ FD ಮೇಲಿನ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಬಹುದು..
ಎಟಿಎಂ ಕಾರ್ಡ್ ಬೇಕಿಲ್ಲ, ಗೂಗಲ್ ಪೇ ಇದ್ರೆ ಸಾಕು ಹಣ ವಿತ್ ಡ್ರಾ ಮಾಡೋಕೆ! ಇಲ್ಲಿದೆ ಬಿಗ್ ಅಪ್ಡೇಟ್
ಯಾವ ಬ್ಯಾಂಕ್ ನಲ್ಲಿ FD ಹೂಡಿಕೆಗೆ ಎಷ್ಟು ಬಡ್ಡಿದರ ಕೊಡಲಾಗುತ್ತದೆ ಎಂದು ನೋಡುವುದಾದರೆ..
*AU Small Finance ಬ್ಯಾಂಕ್ ನಲ್ಲಿ 18 ತಿಂಗಳ FD ಹೂಡಿಕೆಗೆ, ಹಿರಿಯ ನಾಗರೀಕರಿಗೆ 8.50% ಬಡ್ಡಿ ನೀಡಲಾಗುತ್ತದೆ.
*ಈಕ್ವಿಟಿ ಫೈನಾನ್ಸ್ ಬ್ಯಾಂಕ್ ನಲ್ಲಿ 444 ದಿನಗಳ FD ಹೂಡಿಕೆಗೆ ಹಿರಿಯ ನಾಗರೀಕರಿಗೆ 9% ಬಡ್ಡಿದರ ಸಿಗುತ್ತದೆ.
*ESAF ಸ್ಮಾಲ್ ಬ್ಯಾಂಕ್ ನಲ್ಲಿ 8.75% ಬಡ್ಡಿದರ 2 ರಿಂದ 3 ವರ್ಷಗಳ FD ಯೋಜನೆಗೆ ಸಿಗುತ್ತದೆ.
*ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9% ಬಡ್ಡಿದರ 365 ದಿನಗಳ FD ಯೋಜನೆಗೆ ಸಿಗುತ್ತದೆ.
*15 ತಿಂಗಳ FD ಯೋಜನೆಗೆ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9% ಬಡ್ಡಿ ಸಿಗುತ್ತದೆ.
*10001 ದಿನಗಳ FD ಹೂಡಿಕೆಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9.50% ಬಡ್ಡಿ ಸಿಗುತ್ತದೆ.
*1500 ದಿನಗಳ FD ಯೋಜನೆಗೆ ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9.15% ಬಡ್ಡಿ ಸಿಗುತ್ತದೆ.
*546 ರಿಂದ 1111 ದಿನಗಳ FD ಯೋಜನೆಗೆ ನಾರ್ತ್ ಈಸ್ಟ್ ಫೈನಾನ್ಸ್ ಬ್ಯಾಂಕ್ ನಲ್ಲಿ 9.10% ಬಡ್ಡಿದರ ಸಿಗುತ್ತದೆ.
*2 ರಿಂದ 3 ವರ್ಷಗಳ FD ಹೂಡಿಕೆಗೆ ಸೂರ್ಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9.10% ಬಡ್ಡಿ ಸಿಗುತ್ತದೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳ ಬಗ್ಗೆ ಹೇಳುವುದಾದರೆ, 2 ರಿಂದ 4 ವರ್ಷಗಳ FD ಯೋಜನೆಗೆ ಬ್ಯಾಂಕ್ ಆಫ್ ಬರೋಡಾದಲ್ಲಿ 7.75% ಬಡ್ಡಿದರ ಸಿಗುತ್ತದೆ. 666 ದಿನಗಳ FD ಯೋಜನೆಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7.80% ಬಡ್ಡಿ ನೀಡಲಾಗುತ್ತದೆ.
400 ದಿನಗಳ FD ಯೋಜನೆಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 7.60% ಬಡ್ಡಿ, ಕೆನರಾ ಬ್ಯಾಂಕ್ ನಲ್ಲಿ 7.75% ಬಡ್ಡಿ ಸಿಗುತ್ತದೆ. 555 ದಿನಗಳ FD ಹೂಡಿಕೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯಾ ಬ್ಯಾಂಕ್ ಇಂಡ್ ಸೂಪರ್ ಸ್ಕೀಮ್ ನಲ್ಲಿ 7.75% ಬಡ್ಡಿ ಸಿಗಲಿದ್ದು, 444 ದಿನಗಳ ಅವಧಿಗೆ 6.60% ಬಡ್ಡಿ ಸಿಗುತ್ತದೆ.
ಪಿಯುಸಿ ಪಾಸ್ ಆಗಿದ್ದು ಬಿಪಿಎಲ್ ಕಾರ್ಡ್ ಇರೋ ಬಡ ಮಕ್ಕಳಿಗೆ ಸಿಗಲಿದೆ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 444 ದಿನಗಳ FD ಯೋಜನೆಗೆ ಹಿರಿಯ ನಾಗರೀಕರಿಗೆ 7.80% ಬಡ್ಡಿ ಸಿಗುತ್ತದೆ, PNB ನಲ್ಲಿ 400 ದಿನಗಳ FD ಹೂಡಿಕೆಗೆ 7.75% ಬಡ್ಡಿ ಸಿಗಲಿದೆ. 444 ದಿನಗಳ FD ಹೂಡಿಕೆಗೆ ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ನಲ್ಲಿ 7.75% ಬಡ್ಡಿ ಸಿಗುತ್ತದೆ.
400 ದಿನಗಳ FD ಹೂಡಿಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಮೃತ್ ಕಲಶ್ ಯೋಜನೆ ಆಗಿದ್ದು, ಇದಕ್ಕೆ 7.60% ಬಡ್ಡಿ ಸಿಗಲಿದೆ. 399 ದಿನಗಳ FD ಹೂಡಿಕೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7.75% ಬಡ್ಡಿದರ ಸಿಗುತ್ತಿದೆ.
ಪ್ರೈವೇಟ್ ಬ್ಯಾಂಕ್ ಗಳಲ್ಲಿ ಹೇಗಿದೆ ಎಂದು ನೋಡುವುದಾದರೆ.. ಆಕ್ಸಿಸ್ ಬ್ಯಾಂಕ್ ನಲ್ಲಿ 17 ರಿಂದ 18 ತಿಂಗಳ FD ಹೂಡಿಕೆಯ ಮೇಲೆ ಹಿರಿಯ ನಾಗರೀಕರಿಗೆ 7.85% ಬಡ್ಡಿ ಸಿಗಲಿದೆ, 1 ವರ್ಷದ ಹೂಡಿಕೆಗೆ ಬಂಧನ್ ಬ್ಯಾಂಕ್ ನಲ್ಲಿ 8.35% ಬಡ್ಡಿ ಸಿಗುತ್ತದೆ.
ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು ಪ್ರತಿ ತಿಂಗಳು ಇಎಂಐ ಕಂತು ಕಟ್ಟುತ್ತಿರುವವರಿಗೆ ಸಿಹಿಸುದ್ದಿ!
400 ದಿನಗಳ FD ಹೂಡಿಕೆಗೆ ಸಿಟಿ ಯೂನಿಯನ್ ಬ್ಯಾಂಕ್ ನಲ್ಲಿ 7.75% ಬಡ್ಡಿ, CSB ನಲ್ಲಿ 401 ದಿನಗಳ FD ಹೂಡಿಕೆಗೆ 7.75% ಬಡ್ಡಿ, DBS ಬ್ಯಾಂಕ್ ನಲ್ಲಿ 376 ಇಂದ 540 ದಿನಗಳ FD ಹೂಡಿಕೆಗೆ 8% ಬಡ್ಡಿದರ ಸಿಗುತ್ತದೆ. 400 ದಿನಗಳ FD ಹೂಡಿಕೆಗೆ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ 7.75% ಬಡ್ಡಿ ಸಿಗುತ್ತದೆ.
400 ದಿನಗಳ FD ಹೂಡಿಕೆಗೆ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ನಲ್ಲಿ 8% ಬಡ್ಡಿ ಸಿಗುತ್ತದೆ. 18 ತಿಂಗಳ FD ಹೂಡಿಕೆಗೆ ಯೆಸ್ ಬ್ಯಾಂಕ್ ನಲ್ಲಿ 8.50% ಬಡ್ಡಿ ಸಿಗಲಿದೆ, 375 ದಿನಗಳ FD ಹೂಡಿಕೆಗೆ ಕರ್ಣಾಟಕ ಬ್ಯಾಂಕ್ ನಲ್ಲಿ 7.80% ಬಡ್ಡಿ, 390 ರಿಂದ 23 ತಿಂಗಳ FD ಹೂಡಿಕೆಗೆ ಕೋಟಕ್ ಮಹಿಂದ್ರ ಬ್ಯಾಂಕ್ ನಲ್ಲಿ 7.90% ಬಡ್ಡಿ ಸಿಗುತ್ತದೆ.
18 ತಿಂಗಳು ಇಂದ 2 ವರ್ಷದ FD ಹೂಡಿಕೆಗೆ RBL ಬ್ಯಾಂಕ್ ನಲ್ಲಿ 8.50% ಬಡ್ಡಿ ಸಿಗುತ್ತದೆ, 15 ತಿಂಗಳಿನಿಂದ 2 ವರ್ಷದ FD ಹೂಡಿಕೆಗೆ ICICI ಬ್ಯಾಂಕ್ ನಲ್ಲಿ 7.75% ಬಡ್ಡಿದರ ಸಿಗುತ್ತದೆ. 500 ದಿನಗಳ FD ಹೂಡಿಕೆಗೆ 8.40% ಬಡ್ಡಿದರ IDFC ಬ್ಯಾಂಕ್ ನಲ್ಲಿ ಸಿಗುತ್ತದೆ. 15 ರಿಂದ 16 ತಿಂಗಳ FD ಯೋಜನೆಗೆ ಇಂಡಸ್ ಬ್ಯಾಂಕ್ ನಲ್ಲಿ 8.25% ಬಡ್ಡಿದರ ಸಿಗುತ್ತದೆ.
You will get the highest interest for your fixed Deposit money in these banks