Education scholarship : ರತನ್ ಟಾಟಾ (Ratan Tata) ಅವರ ಬಗ್ಗೆ ನಮ್ಮ ದೇಶದ ಜನರಿಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ಉದ್ಯಮಿಗಳಲ್ಲಿ ಅವರು ಅಗ್ರಸ್ಥಾನದಲ್ಲಿ ಇರುವ ವ್ಯಕ್ತಿ. ಅಗಾಧ ಸಾಧನೆ ಮಾಡಿ, ಅತಿಹೆಚ್ಚು ಹಣ ಗಳಿಸಿ ಆಗರ್ಭ ಶ್ರೀಮಂತರಾಗಿದ್ದರೂ, ತಮ್ಮ ಸರಳತೆ ಇಂದ ಎಲ್ಲರಿಗೂ ಇಷ್ಟ ಆಗುವವರು ರತನ್ ಟಾಟಾ. ಇವರು ದೇಶದ ಸಾಮಾನ್ಯ ಜನರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಬೇಕು ಎಂದು ಬಯಸುವ ವ್ಯಕ್ತಿಗಳಲ್ಲಿ ಒಬ್ಬರು..
ಬಡವರು ಕೂಡ ಕಾರ್ ಖರೀದಿ (Buy Car) ಮಾಡಿ ಒಳ್ಳೆಯ ಪ್ರಯಾಣ ಮಾಡಬೇಕು ಎನ್ನುವ ಆಸೆಯಿಂದ ರತನ್ ಟಾಟಾ ಅವರು 1 ಲಕ್ಷ ರೂಪಾಯಿಗೆ ನ್ಯಾನೋ ಕಾರ್ ತಯಾರಿಸಿದರು. ಇತ್ತೀಚೆಗೆ ತಮ್ಮ ಸಂಸ್ಥೆಯ ವತಿಯಿಂದ ಪ್ರಾಣಿಗಳಿಗಾಗಿ ವಿಶೇಷವಾದ ಅಸ್ಪತ್ರೆಯನ್ನು ಸಹ ಶುರು ಮಾಡಿದರು.
ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು ಪ್ರತಿ ತಿಂಗಳು ಇಎಂಐ ಕಂತು ಕಟ್ಟುತ್ತಿರುವವರಿಗೆ ಸಿಹಿಸುದ್ದಿ!
ಶ್ರೇಷ್ಠ ವ್ಯಕ್ತಿ ಆಗಿರುವ ರತನ್ ಟಾಟಾ ಅವರು ಇದೀಗ ಬಡವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ (Education) ಸಹಾಯ ಮಾಡಲು ಮುಂದಾಗಿದ್ದಾರೆ.
ಹೌದು, ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಎರಡು ಕೂಡ ಬಹಳ ಮುಖ್ಯ. ಹಾಗಾಗಿ ರತನ್ ಅವರು ತಮ್ಮ Tata Capital Limited ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಿದ್ದಾರೆ.
ಇದಕ್ಕಾಗಿ ವಿದ್ಯಾರ್ಥಿಗಳ ಮನೆಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರಬೇಕು. ಹಾಗೆಯೇ ಇನ್ನು ಕೆಲವು ನಿಯಮಗಳು ಮತ್ತು ಮಾನದಂಡಗಳನ್ನು ಸಹ ಇಡಲಾಗಿದ್ದು, ಅವುಗಳು ಏನೇನು? ವಿದ್ಯಾರ್ಥಿಗಳು ಹೇಗೆ ಈ ಸ್ಕಾಲರ್ಶಿಪ್ ನ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿದ್ದೀರಾ? ಬಂತು ಬಡವರ ಕನಸು ನನಸು ಮಾಡೋ ಹೊಸ ಯೋಜನೆ!
ಟಾಟಾ ಸ್ಕಾಲರ್ಶಿಪ್
ರತನ್ ಟಾಟಾ ಅವರ ಒಡೆತನದ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯ ಕಡೆಯಿಂದ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಟಾಟಾ ಸ್ಕಾಲರ್ಶಿಪ್ 2024-25 ಅನ್ನು ಶುರು ಮಾಡಲಾಗಿದೆ.
ಪಿಯುಸಿ, ಡಿಪ್ಲೊಮಾ ಮತ್ತು ವಿವಿಧ ಡಿಗ್ರಿ ಪದವಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ. ಆಸಕ್ತಿ ಮತ್ತು ಅರ್ಹತೆ ಎರಡು ಇರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ನ ಸೌಲಭ್ಯ ಸಿಗಲಿದ್ದು, ಈ ಟಾಟಾ ಕ್ಯಾಪಿಟಲ್ (Tata Capital) ಪಂಖ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಕ್ಕೆ 2024ರ ಸೆಪ್ಟೆಂಬರ್ 15 ಕೊನೆಯ ದಿನಾಂಕ ಆಗಿದೆ.
ಫೋನ್ ಪೇ ಅಕೌಂಟ್ ಇದ್ದೋರಿಗೆ 5 ಲಕ್ಷ ಪರ್ಸನಲ್ ಲೋನ್ ಸಿಗ್ತಾಯಿದೆ, ಬೇಕಾದ್ರೆ ನೀವೂ ತಗೋಬಹುದು!
ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ?
ಈ ಸ್ಕಾಲರ್ಶಿಪ್ ಅನ್ನು ವಿಶೇಷವಾಗಿ ಬಡವರ್ಗದ ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದೇ ವಿದ್ಯಾಭ್ಯಾಸ ಮುಂದುವರೆಸಿಕೊಂಡು ಹೋಗಲಿ ಎನ್ನುವ ಕಾರಣಕ್ಕೆ ಶುರು ಮಾಡಲಾಗಿದ್ದು, ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಒಳಗೆ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಾಗೆಯೇ ಪಿಯುಸಿ, ಡಿಪ್ಲೊಮಾ, ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳ ಕೋರ್ಸ್ ಅಡ್ಮಿಷನ್ ಫೀಸ್ ಎಷ್ಟಿದೆಯೋ ಅದರಲ್ಲಿ 80% ಅಷ್ಟು ಮೊತ್ತವನ್ನು ಸ್ಕಾಲರ್ಶಿಪ್ ಆಗಿ ನೀಡಲಾಗುತ್ತದೆ. ಜೊತೆಗೆ ಈ ಕೋರ್ಸ್ ಗಳಲ್ಲಿ ಓದುತ್ತಿರುವವರಿಗೆ 10,000 ರೂಪಾಯಿಗಳವರೆಗು ಸಹಾಯಧನ ಕೂಡ ಸಿಗಲಿದೆ.
PUC passed BPL card Holder will get Education scholarship From Tata
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.