Business News

ಫೋನ್ ಪೇ ಅಕೌಂಟ್ ಇದ್ದೋರಿಗೆ 5 ಲಕ್ಷ ಪರ್ಸನಲ್ ಲೋನ್ ಸಿಗ್ತಾಯಿದೆ, ಬೇಕಾದ್ರೆ ನೀವೂ ತಗೋಬಹುದು!

Personal Loan : ಹಣದ ಅವಶ್ಯಕತೆ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಸಮಯದಲ್ಲಿ ನಮ್ಮೆಲ್ಲರಿಗೂ ಬಂದೇ ಬರುತ್ತದೆ. ಆರ್ಥಿಕ ಸಮಸ್ಯೆ ಎನ್ನುವುದು ನಮಗೆಲ್ಲಾ ಯಾವಾಗ ಬರುತ್ತದೆ ಎಂದು ಗೊತ್ತಾಗೋದಿಲ್ಲ.

ಒಂದು ವೇಳೆ ಆ ರೀತಿ ಬಂದಾಗ ಇನ್ನೊಬ್ಬರ ಬಳಿ ಹಣ ಕೇಳುವ ಪರಿಸ್ಥಿತಿ ಬಂದು, ಅವರು ಇಲ್ಲ ಎಂದು ಹೇಳಿ ಬೇಸರ ಆಗುವುದಕ್ಕಿಂತ, ನಮಗೆ ಗೊತ್ತಿರುವ ಮಾರ್ಗದಲ್ಲೇ ಸುಲಭವಾಗಿ ಪರ್ಸನಲ್ ಲೋನ್ (Personal Loan) ಪಡೆಯಬಹುದು. ಅದು ಫೋನ್ ಪೇ (PhonePe) ಮೂಲಕ.

5 lakh personal loan is available for those who have a phonePe account

ಹೌದು, ನಮಗೆಲ್ಲಾ ಗೊತ್ತಿರುವ ಹಾಗೆ ಫೋನ್ ಪೇ ಜನಪ್ರಿಯ ಯುಪಿಐ ಪೇಮೆಂಟ್ ಆಪ್ (UPI Payment App) ಆಗಿದೆ. ಈ ಒಂದು ಆಪ್ ಬಳಸಿ ಜನರು ಹೆಚ್ಚಾಗಿ ಹಣ ವರ್ಗಾವಣೆ, ವಹಿವಾಟುಗಳನ್ನು ನಡೆಸುತ್ತಾರೆ.

ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹೊಸ ಕಾನೂನು, ಬಾಡಿಗೆ ಮನೆ ಓನರ್ ಗಳಿಗೂ ಇದು ಅನ್ವಯ!

ಆದರೆ ಫೋನ್ ಪೇ ಆಪ್ ಕೇವಲ ಹಣ ವರ್ಗಾವಣೆಗೆ ಮಾತ್ರವಲ್ಲ, ಪರ್ಸನಲ್ ಲೋನ್ ಪಡೆಯಬಹುದು. ತಕ್ಷಣಕ್ಕೆ ಹಣದ ಅವಶ್ಯಕತೆ ಇರುವ ಸಮಯದಲ್ಲಿ 5 ಲಕ್ಷ ರೂಪಾಯಿಗಳವರೆಗು ಸಾಲ ಪಡೆಯಬಹುದು. ಈ ವಿಶೇಷ ಸೌಲಭ್ಯವನ್ನು ಜನರಿಗಾಗಿ ಫೋನ್ ಪೇ ತಂದಿದೆ.

ಹೌದು, ನೀವು ಬ್ಯಾಂಕ್ ಗೆ ಅಥವಾ ಇನ್ನೆಲ್ಲಿಗೆ ಹೋದರು ಸಾಲ ಪಡೆಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಪೇ ಆಪ್ ಬಳಕೆ ಮಾಡಿ ಬಹಳ ಕಡಿಮೆ ಸಮಯದಲ್ಲಿ 5 ಲಕ್ಷದವರೆಗು ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಬಹುದು.

ಸಾಲ ಕೊಡುವ ಕಂಪನಿಗಳ ಜೊತೆಗೆ ಮಧ್ಯವರ್ತಿಯಾಗಿ ಫೋನ್ ಪೇ ಕೆಲಸ ಮಾಡುತ್ತದೆ. ಈ ಮೂಲಕ ನಿಮಗೆ ಸಾಲ ಕೊಡಲಾಗುತ್ತದೆ. ಹಾಗಿದ್ದಲ್ಲಿ ಫೋನ್ ಪೇ ಆಪ್ ಮೂಲಕ ಸಾಲ ಪಡೆಯುವುದು ಹೇಗೆ ಎಂದು ತಿಳಿಯೋಣ.

ಎಷ್ಟೇ ಪ್ರಯತ್ನಪಟ್ಟರೂ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗ್ತಿಲ್ವಾ? ಬನ್ನಿ ಈ ರೀತಿ ಟ್ರೈ ಮಾಡಿ ಸಾಕು!

ಫೋನ್ ಪೇ ಇಂದ ಸಾಲ ಪಡೆಯುವ ವಿಧಾನ:

PhonePe*ಮೊದಲಿಗೆ ನಿಮ್ಮ ಫೋನ್ ನಲ್ಲಿ ಫೋನ್ ಪೇ ಆಪ್ ಇನ್ಸ್ಟಾಲ್ ಮಾಡಿ, ಬ್ಯಾಂಲ್ ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಇಂದ ಲಾಗಿನ್ ಮಾಡಿ.

*ಬಳಿಕ ನಿಮಗೆ ಆಪ್ ನಲ್ಲಿ ಲೋನ್ ಸೆಕ್ಷನ್ ಎನ್ನುವ ಒಂದು ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ. ಅದನ್ನು ಸೆಲೆಕ್ಟ್ ಮಾಡಿ, ಅದರಲ್ಲಿ ಪರ್ಸನಲ್ ಲೋನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಇಲ್ಲಿ ನಿಮಗೆ ಬೇಕಿರುವ ಲೋನ್ ಹಣ ಎಷ್ಟು ಮತ್ತು ಇಎಂಐ ಪಾವತಿ ಮಾಡುತ್ತೀರಿ ಎನ್ನುವ ಆಯ್ಕೆಯನ್ನು ಕೇಳುತ್ತದೆ. ಅದನ್ನು ಸರಿಯಾಗಿ ಆಯ್ಕೆ ಮಾಡಿ.

ಗೋಲ್ಡ್ ಲೋನ್ ಪಡೆಯೋಕ್ಕಿಂತ ಮೊದಲು ತಿಳಿಯಬೇಕಾದ ವಿಚಾರ! ಬ್ಯಾಂಕುಗಳಿಂದ ಬಿಗ್ ಅಪ್ಡೇಟ್

*ಇದೆಲ್ಲವೂ ಆದ ನಂತರ ಫೋನ್ ಪೇ ಹಾಗೂ ಆ ಹಣಕಾಸಿನ ಸಂಸ್ಥೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ನಿಮಗೆ ಒಲ್ಲಿಗೆ ಎಂದು ಸೂಚಿಸಿ, ಸೈನ್ ಮಾಡಿ.
*ಇದಾದ ನಂತರ ನಿಮ್ಮ ಬಗ್ಗೆ ಇನ್ನೂ ಕೆಲವು ಮಾಹಿತಿಗಳು ಮತ್ತು ಕೆಲವು ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಇದಿಷ್ಟು ಕೆಲಸಗಳನ್ನು ಯಾವುದೇ ತಪ್ಪಿಲ್ಲದ ಹಾಗೆ ಮುಗಿಸಿ.

ಇದೆಲ್ಲವೂ ಸರಿ ಇದ್ದು, ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಕೂಡ ಚೆನ್ನಾಗಿದ್ದರೇ ಕೆಲವೇ ನಿಮಿಷಗಳಲ್ಲಿ ಫೋನ್ ಪೇ ಮೂಲಕ ಸಾಲ ಪಡೆಯಬಹುದು.

5 lakh personal loan is available for those who have a phonePe account

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories