ಎಷ್ಟೇ ಪ್ರಯತ್ನಪಟ್ಟರೂ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗ್ತಿಲ್ವಾ? ಬನ್ನಿ ಈ ರೀತಿ ಟ್ರೈ ಮಾಡಿ ಸಾಕು!
Home Loan : ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಕೊಡುವುದಕ್ಕಿಂತ ಮೊದಲು ವ್ಯಕ್ತಿಯ ಕ್ರೆಡಿಟ್ ಸ್ಕೋರ್ (Credit Score) ಚೆಕ್ ಮಾಡುತ್ತಾರೆ, ಕೆಲಸಕ್ಕೆ ಹೋಗುವ ವ್ಯಕ್ತಿಗಿಂತ ಸ್ವಯಂ ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು.
Home Loan : ಬ್ಯಾಂಕ್ ಗಳಲ್ಲಿ ಹೋಮ್ ಲೋನ್ (Home Loan) ಪಡೆಯುವುದು ಸುಲಭವಲ್ಲ. ಅಲ್ಲಿ ಬಹಳಷ್ಟು ವಿಚಾರಗಳನ್ನು ಪರಿಶೀಲಿಸಿ ಹೋಮ್ ಲೋನ್ ಕೊಡಲಾಗುತ್ತದೆ. ಮುಖ್ಯವಾಗಿ ಹೋಮ್ ಲೋನ್ ಪಡೆಯುವ ವ್ಯಕ್ತಿಗೆ ಉತ್ತಮವಾಗಿ ಸಂಬಳ ಬರುವಂಥ ಕೆಲಸ ಇರೆಬೇಕು.
ಆದಾಯ ಇದ್ದರೆ ಮಾತ್ರ, ಲೋನ್ ತೀರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ಬ್ಯಾಂಕ್ ಸಾಲ (Bank Loan) ಕೊಡುತ್ತದೆ. ಕರಕುಶಲ ವಸ್ತುಗಳ ಸ್ವಯಂ ಉದ್ಯೋಗ, ಸ್ವಯಂ ಸಣ್ಣ ವ್ಯಾಪಾರ ಮಾಡುವವರಿಗೆ ಲೋನ್ ಸಿಗುವುದಿಲ್ಲ, ಕಾರಣ ಅವರಿಗೆ ರೆಗ್ಯುಲರ್ ಆಗಿ ಸಂಬಳ ಬರುವಂಥ ಕೆಲಸ ಇಲ್ಲ ಎನ್ನುವುದಾಗಿರುತ್ತದೆ.
ಈ ರೀತಿಯ ಪರಿಸ್ಥಿತಿಯಲ್ಲಿ ನೀವು ಇದ್ದರೆ, ಲೋನ್ ಪಡೆಯಲು ಬೇರೆ ದಾರಿ ಯಾವುದಾದರೂ ಇದೆಯಾ? ಇದರ ಬಗ್ಗೆ ಇಂದು ತಿಳಿದುಕೊಳ್ಳೋಣ..
ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಕೊಡುವುದಕ್ಕಿಂತ ಮೊದಲು ವ್ಯಕ್ತಿಯ ಕ್ರೆಡಿಟ್ ಸ್ಕೋರ್ (Credit Score) ಚೆಕ್ ಮಾಡುತ್ತಾರೆ, ಕೆಲಸಕ್ಕೆ ಹೋಗುವ ವ್ಯಕ್ತಿಗಿಂತ ಸ್ವಯಂ ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು.
ಗೋಲ್ಡ್ ಲೋನ್ ಪಡೆಯೋಕ್ಕಿಂತ ಮೊದಲು ತಿಳಿಯಬೇಕಾದ ವಿಚಾರ! ಬ್ಯಾಂಕುಗಳಿಂದ ಬಿಗ್ ಅಪ್ಡೇಟ್
ಸ್ವಯಂ ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ ಕಡಿಮೆ ಇರೋದ್ರಿಂದಲೇ ಅವರಿಗೆ ಲೋನ್ ಸಿಗುವುದು ಕಷ್ಟ ಆಗಿರುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ಬ್ಯಾಂಕ್ ಅಥವಾ NBFC ನಲ್ಲಿ ಲೋನ್ ಮರುಪಾವತಿ ಮಾಡುತ್ತಾರೆ ಎನ್ನುವ ನಂಬಿಕೆ ಬರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಜಾಸ್ತಿ ಇರಬೇಕು ಎಂದರೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಬೇಕು.
ಆಕಸ್ಮಾತ್ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲ ಎಂದರೆ, ಯಾರಾದರೂ ನಿಮ್ಮ ಸಾಲಕ್ಕೆ ಶುರಿಟಿ ಕೊಡಬಹುದು ಇದು ಎರಡನೇ ಆಯ್ಕೆ. ಲೋನ್ ಪಡೆಯಲು ಇನ್ನೊಂದು ಆಯ್ಕೆ ಕೂಡ ಇದೆ, ಹೆಚ್ಚಿನ ಮೊತ್ತವನ್ನು ಡೌನ್ ಪೇಮೆಂಟ್ (Down Payment) ಮಾಡುವ ಮೂಲಕ ಲೋನ್ ಪಡೆಯಬಹುದು, ಇದರಿಂದ ನೀವು ಸಾಲಮರುಪಾವತಿ ಮಾಡುತ್ತೀರಿ ಎಂದು ಬ್ಯಾಂಕ್ ನವರಿಗೆ ನಂಬಿಕೆ ಬರುತ್ತದೆ ಜೊತೆಗೆ ಲೋನ್ ಟು ವ್ಯಾಲ್ಯೂ ರೇಶ್ಯು ಅಂದರೆ ನೀವು ಸಾಲ ಮರುಪಾವತಿ ಮಾಡಬೇಕಾದ ಮೊತ್ತ ಕೂಡ ಕಡಿಮೆ ಆಗುತ್ತದೆ.
1934ರ ಸೈಕಲ್ ಬಿಲ್ ವೈರಲ್! ಆಗ ಬೆಲೆ ಎಷ್ಟಿತ್ತು ಗೊತ್ತಾ? ಆಗಿನ ಕಾಲವೇ ಚೆನ್ನಾಗಿತ್ತು ಅಂತೀರ!
ಸ್ವಂತ ಉದ್ಯೋಗ ಮಾಡುವವರು, ನೀವು ಮಾಡುವ ವ್ಯಾಪಾರದ ವಹಿವಾಟುಗಳ ಫೈನಾನ್ಶಿಯಲ್ ಸ್ಟೇಟ್ಮೆಂಟ್ಸ್, ನೀವು ಐಟಿ ರಿಟರ್ನ್ಸ್ ಸಲ್ಲಿಸಿರುವ ದಾಖಲೆಗಳು ಇದೆಲ್ಲವನ್ನು ನೀಡಿ ಲೋನ್ ಪಡೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಬ್ಯುಸಿನೆಸ್ ವಹಿವಾಟುಗಳನ್ನು (Business) ಉತ್ತಮವಾಗಿ ಮೇನ್ ಟೇನ್ ಮಾಡಬೇಕಾಗುತ್ತದೆ.
ಹಿಂದಿನ 2 ಅಥವಾ 3 ವರ್ಷಗಳಿಂದ ನಿಮ್ಮ ವ್ಯಾಪಾರದ ತೆರಿಗೆ ರಿಟರ್ನ್ಸ್ ಕಟ್ಟಿದ್ದೀರಾ? ಎನ್ನುವುದೆಲ್ಲವನ್ನು ಪರಿಶೀಲಿಸಿ, ಬೇಕಿದ್ದರೆ ಲೈಸೆನ್ಸ್ ಕೇಳಿ, ಎಲ್ಲವನ್ನು ಚೆಕ್ ಮಾಡಿ ಬ್ಯಾಂಕ್ ಇಂದ ನಿಮಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ.
ನಿಮಗೆ ಒಳ್ಳೆಯ ಆದಾಯ ಇದೆ ಎಂದರೆ ಬ್ಯಾಂಕ್ ನಿಮಗೆ ಸಾಲ ಕೊಡಲು ಮುಂದಾಗುತ್ತದೆ, ಹಾಗೆಯೇ ನಿಮ್ಮ ಬಳಿ ನಗದು ಇದೆಯೇ ಎನ್ನುವುದನ್ನು ಕೂಡ ಚೆಕ್ ಮಾಡಲಾಗುತ್ತದೆ. ಇದೆಲ್ಲವೂ ಇದ್ದರೆ, ನೀವು ಲೋನ್ ಮರುಪಾವತಿ (Loan Re Payment) ಮಾಡುತ್ತೀರಿ ಎಂದು ಬ್ಯಾಂಕ್ ಗೆ ಖಾತ್ರಿಯಾಗುತ್ತದೆ.
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ
ನಿಮ್ಮ ಡೆಟ್ ಟು ಇನ್ಕಮ್ ರೇಶ್ಯು ಕೂಡ ಕಡಿಮೆ ಇರಬೇಕು, ಇದರ ಅರ್ಥ ನಿಮ್ಮ ಆದಾಯದಲ್ಲಿ ಸಾಲಕ್ಕಾಗಿ ನೀವು ಪಾವತಿ ಮಾಡುವ ಮೊತ್ತ ಕಡಿಮೆ ಇರಬೇಕು, ಆಗ ಹೊಸ ಸಾಲ ಸಿಗುವ ಸಾಧ್ಯತೆ ಕೂಡ ಇರುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿಟ್ಟುಕೊಂಡು, ಬ್ಯುಸಿನೆಸ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು (Documents) ಚೆನ್ನಾಗಿ ನಿರ್ವಹಿಸಿಕೊಂಡು ಬನ್ನಿ, ಹೋಮ್ ಲೋನ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ಗೆ ನೀಡಿ, ಆಗ ನೀವು ಸ್ವಯಂ ಉದ್ಯೋಗಿ (Own Business) ಆಗಿದ್ದರೂ ಕೂಡ ನಿಮಗೆ ಲೋನ್ ಸಿಗುತ್ತದೆ.
Here is the Tips to get a home loan from any banks