ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ

Story Highlights

Credit Card : ಕ್ರೆಡಿಟ್ ಕಾರ್ಡ್ ಬೇಕು, ಆದರೆ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ವಾ? ಪರವಾಗಿಲ್ಲ ಈ ಥರ ಕ್ರೆಡಿಟ್ ಕಾರ್ಡ್ ಪಡೆಯಬಹುದು

Credit Card : ಕ್ರೆಡಿಟ್ ಕಾರ್ಡ್ ಈಗ ಬಹಳಷ್ಟು ಜನರು ಬಳಕೆ ಮಾಡುವ ಆಯ್ಕೆ. ಬ್ಯಾಂಕ್ ಅಕೌಂಟ್ (Bank Account) ಇದ್ದು, ಉತ್ತಮ ಹಣಕಾಸಿನ ವಹಿವಾಟು ನಡೆಸುವ, ಹಾಗೂ ಒಳ್ಳೆಯ ಕೆಲಸದಲ್ಲಿ ಇರುವವರು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಪಡೆಯುತ್ತಾರೆ.

ಕ್ರೆಡಿಟ್ ಕಾರ್ಡ್ ಇದ್ದರೆ ಅದರಿಂದ ಸಾಕಷ್ಟು ಸೌಲಭ್ಯಗಳನ್ನು ಮತ್ತು ಪ್ರಯೋಜನವನ್ನು ಕೂಡ ಪಡೆಯಬಹುದು. ಇದೇ ಕಾರಣಕ್ಕೆ ಜನರು ಕ್ರೆಡಿಟ್ ಕಾರ್ಡ್ ಪಡೆಯುತ್ತಾರೆ. ಈ ಕ್ರೆಡಿಟ್ ಕಾರ್ಡ್ ಅನ್ನು ಜನರಿಗೆ ಕೊಡುವುದು ಅವರ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ.

ಪೋಸ್ಟ್ ಆಫೀಸ್ ಖಾತೆಗೆ ಮೋದಿ ಹಾಕ್ತಾರಂತೆ ₹3000, ಹೊಸ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು!

ಹೌದು, ಯಾವುದೇ ಬ್ಯಾಂಕ್ ಇಂದ ಕ್ರೆಡಿಟ್ ಕಾರ್ಡ್ ಪಡೆಯಬೇಕು ಎಂದರೆ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿರಲೇಬೇಕು. ಆಗ ನಿಮಗೆ ಕ್ರೆಡಿಟ್ ಕಾರ್ಡ್ ಆಫರ್ ಮಾಡುತ್ತಾರೆ. ಕ್ರೆಡಿಟ್ ಕಾರ್ಡ್ ಇದ್ದರೆ ಲೋನ್ ಪಾವತಿ ಮಾಡುವುದು ಸುಲಭ, ಎಲ್ಲಿಗಾದರು ಟ್ರಾವೆಲ್ ಮಾಡುವಾಗ ಟಿಕೆಟ್ ಗಳ ಮೇಲೆ, ಇನ್ನಿತರ ಖರ್ಚುಗಳ ಮೇಲೆ ರಿಯಾಯಿತಿ ಪಡೆಯುತ್ತೀರಿ, ಶಾಪಿಂಗ್ ನಲ್ಲಿ ರಿಯಾಯಿತಿ ಪಡೆಯುತ್ತೀರಿ, ಇಂಥ ಹಲವು ಸೌಲಭ್ಯಗಳು ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುತ್ತದೆ..

ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ Credit Card ಸಿಗುತ್ತದೆ ಎನ್ನುವುದು ಸತ್ಯವೇನೋ ನಿಜ. ಆದರೆ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದೇ ಇದ್ದರೂ ಕೂಡ ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು.

ಕೃಷಿ ಭೂಮಿ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್! ಬಂಪರ್ ಕೊಡುಗೆ

Credit Cardಅದು ಹೇಗೆ ಎಂದರೆ, ಬ್ಯಾಂಕ್ ಇಂದ ನೀವು ಸೆಕ್ಯೂರಿಟಿ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಇದನ್ನು ನಿಮ್ಮ FD ಆಧಾರದ ಮೇಲೆ ಕೊಡಲಾಗುತ್ತದೆ. ಈ ಕಾರ್ಡ್ ಇಂದ ಹಣ ಖರ್ಚು ಮಾಡಿದ ಬಳಿಕ, ನೀವು ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಹೋದರೆ, ಆಗ ನಿಮ್ಮ Fixed Deposit ಇಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ.

ಈ ರೀತಿಯಾಗಿ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕೂಡ ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. FD ಆಧಾರದ ಮೇಲೆ ನೀಡುವ ಈ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಇಂಪ್ರೂವ್ ಆಗುತ್ತದೆ.

ಕಳೆದು ಹೋದ ಫೋನ್ ನಿಂದ PhonePe, Google Pay ನಿಷ್ಕ್ರಿಯ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಇನ್ನು ಈ ಕಾರ್ಡ್ ನ ಮಿತಿ ಎಷ್ಟಿರುತ್ತದೆ ಎಂದು ನೋಡುವುದಾದರೆ, ನಿಮ್ಮ FD ಯಲ್ಲಿ ಎಷ್ಟು ಮೊತ್ತ ಠೇವಣಿ ಇಟ್ಟಿರುತ್ತೀರೋ, ಕ್ರೆಡಿಟ್ ಕಾರ್ಡ್ ಲಿಮಿಟ್ ಕೂಡ ಅಷ್ಟೇ ಇರುತ್ತದೆ. 2 ಲಕ್ಷ FD ಮಾಡಿದ್ದರೆ, ಕ್ರೆಡಿಟ್ ಲಿಮಿಟ್ ಕೂಡ ಅಷ್ಟೇ ಇರಲಿದೆ.

ಇನ್ನು ಸೆಕ್ಯೂರಿಟಿ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಯಾವೆಲ್ಲಾ ಕಾರ್ಡ್ ಗಳು (Credit Cards) ಬರುತ್ತದೆ ಎಂದು ನೋಡುವುದಾದರೆ, ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್, ಎಸ್‌.ಬಿ.ಐ ಕಾರ್ಡ್ ಉನ್ನತಿ ಹಾಗೂ ಆಕ್ಸಿಸ್ ಇನ್‌ ಸ್ಟಾ ಈಸಿ ಕ್ರೆಡಿಟ್ ಕಾರ್ಡ್ ಇದಿಷ್ಟು ಸೆಕ್ಯೂರಿಟಿ ಕ್ರೆಡಿಟ್ ಕಾರ್ಡ್ ಸಾಲಿಗೆ ಬರುತ್ತದೆ.

ಈ ಥರ ಕ್ರೆಡಿಟ್ ಕಾರ್ಡ್ ಪಡೆಯಲು 2000 ರೂಪಾಯಿ ಡೆಪಾಸಿಟ್ ಇಡಬೇಕು, ಹಾಗೆಯೇ ಇದಕ್ಕೆ ಯಾವುದೇ ಲಾಕ್ ಇನ್ ಅವಧಿ ಇರುವುದಿಲ್ಲ. ಬ್ಯಾಂಕ್ ನಲ್ಲಿ ಹೆಚ್ಚು FD ಮಾಡಿ, ಹೆಚ್ಚು ಕ್ರೆಡಿಟ್ ಕಾರ್ಡ್ ಗಳನ್ನು ಕೂಡ ಪಡೆದುಕೊಳ್ಳಬಹುದು.

ಒಂದೇ ಫೋನ್ ನಂಬರ್, ಎರಡು ಬ್ಯಾಂಕ್ ಅಕೌಂಟ್ ಇರುವ ಎಲ್ಲರಿಗೂ ಇನ್ಮುಂದೆ ಹೊಸ ನಿಯಮ!

Can you get a credit card with a low credit score, here are the tips

Related Stories