ಕೃಷಿ ಭೂಮಿ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್! ಬಂಪರ್ ಕೊಡುಗೆ
ಸ್ವಸಹಾಯ ಸಂಘದಲ್ಲಿ ಇರುವ ಮಹಿಳೆಯರು ತಮ್ಮ ಬ್ಯಾಂಕ್ ನಲ್ಲಿ ಲೋನ್ (Bank Loan) ಪಡೆದು ಡ್ರೋನ್ (drone) ಪಡೆಯಬಹುದು. ಇದಕ್ಕೆ ಸರಕಾರದ ಸಬ್ಸಿಡಿ ಸಿಗಲಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹಳ ಹಿಂದಿನಿಂದಲೇ ಮಹಿಳಾ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡುತ್ತಲೇ ಬಂದಿದ್ದು ಉದ್ಯೋಗ (Job), ಶಿಕ್ಷಣ (Education) ಇನ್ನಿತರ ಪ್ರಗತಿಗೆ ಸರಕಾರ ಬೆಂಗಾವಲಾಗಿ ನಿಂತಿದೆ.
ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂಬ ನೆಲೆಯಲ್ಲಿ ಸರಕಾರಿ ಹುದ್ದೆಗಳಿಗೆ ಮಹಿಳೆಯರಿಗೆಂದೆ ವಿಶೇಷ ಮೀಸಲಾತಿ ಜೊತೆಗೆ ಇತರ ಕ್ರಮ ಕೈಗೊಳ್ಳಲಾಗುತ್ತಿದೆ. ಅದರೊಂದಿಗೆ ಕೌಶಲ್ಯ ಅಭಿವೃದ್ಧಿ ಚಟುವಟಿಕೆ ಉತ್ತೇಜಿಸಿ ಸ್ವ ಉದ್ಯೋಗಕ್ಕೆ (Own Business) ಸಹ ಬೆಂಬಲಿಸಲಾಗುತ್ತಿದೆ.
ಈಗ ಅದೇ ನೆಲೆಯಲ್ಲಿ ಹೊಸದೊಂದು ಯೋಜನೆಯನ್ನು ಕೇಂದ್ರ ಸರಕಾರ ಪರಿಚಯಿಸುತ್ತಿದ್ದು ಈ ಮಾಹಿತಿ ಅನೇಕ ಮಹಿಳೆಯರಿಗೆ ಬಹಳ ಅನುಕೂಲವಾಗಲಿದೆ.
ಕಳೆದು ಹೋದ ಫೋನ್ ನಿಂದ PhonePe, Google Pay ನಿಷ್ಕ್ರಿಯ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡಲು ವಿವಿಧ ಪ್ರತ್ಯೇಕ ಯೋಜನೆ ಜಾರಿಗೆ ತರುತ್ತಲೇ ಇದೆ. ಪ್ರತೀ ತಿಂಗಳು ಕೂಡ 15,000 ವೇತನದ ಜೊತೆಗೆ ಉಚಿತ ತರಬೇತಿ (Free Training) ನೀಡುವ ಸಲುವಾಗಿ ಹೊಸದೊಂದು ಯೋಜನೆಗೆ ಕೇಂದ್ರ ಸರಕಾರ ಮುಂದಾಗಿದೆ.
ಇದು ಯಾರಿಗೆ ಬಹಳ ಅನುಕೂಲ ಆಗಲಿದೆ. ಈ ಯೋಜನೆಗೆ ಫಲಾನುಭವಿಗಳಾಗಲು ಅರ್ಹತೆ ಸ್ಥಾನ ಮಾನ ಏನು ಎಂಬ ಇತ್ಯಾದಿ ಮಾಹಿತಿಯನ್ನು ಇಂದಿನ ಲೇಖನದ ಮೂಲಕ ನಾವು ನಿಮಗೆ ತಿಳಿಸಲಿದ್ದೇವೆ.
ಡ್ರೋನ್ ದೀದಿ ಯೋಜನೆ
ಕೇಂದ್ರ ಸರಕಾರ ಜಾರಿಗೆ ತಂದ ಹೊಸ ಯೋಜನೆ ಹೆಸರು ಡ್ರೋನ್ ದೀದಿ ಎಂದಾಗಿದ್ದು ಇದನ್ನು ಕೃಷಿ (Agriculture) ಮಾಡುವ ಮಹಿಳೆಯರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಜಾರಿಗೆ ತಂದಿರುವುದನ್ನು ನಾವು ಕಾಣಬಹುದು.
ಕೃಷಿಯಲ್ಲಿ ಹೆಚ್ಚಿನ ಮಹಿಳೆಯರಿ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕ ಸದೃಢತೆ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ ಎನ್ನಬಹುದು. ಇದರ ಮೂಲಕ ಆಧುನಿಕ ಕೃಷಿ ತಂತ್ರಜ್ಞಾನ ಹೇಗೆ ಬಳಸುವುದು ಎಂದು ಕಲಿಸಲಾಗುತ್ತದೆ.
ಒಂದೇ ಫೋನ್ ನಂಬರ್, ಎರಡು ಬ್ಯಾಂಕ್ ಅಕೌಂಟ್ ಇರುವ ಎಲ್ಲರಿಗೂ ಇನ್ಮುಂದೆ ಹೊಸ ನಿಯಮ!
ತರಬೇತಿ ಉಚಿತವಾಗಿ ಇರಲಿದೆ?
ಹೆಸರೇ ಸೂಚಿಸುವಂತೆ ಕೃಷಿಯಲ್ಲಿ ಆಧುನಿಕ ವಿಧಾನದ ಅಳವಡಿಕೆ ಆಗಿದೆ. ಇತ್ತೀಚೆಗೆ ಡ್ರೋನ್ ಬಳಸಿ, ಕೀಟನಾಶಕ, ಇತರ ಸ್ಪ್ರೇಯನ್ನು ಕೃಷಿಯಲ್ಲಿ ಗಿಡದ ಪೋಷಣೆ ಮಾಡಲು ಬಳಕೆ ಮಾಡಲಾಗುತ್ತಿದೆ. ಈಗ ಇದನ್ನು ಸರಕಾರ ಕೃಷಿ ಆಸಕ್ತ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಬ್ಸಿಡಿ ಸಮೇತ ಡ್ರೋನ್ ಅನ್ನು ನೀಡಲಾಗುವುದು. ಅದನ್ನು ಕೃಷಿ ಚಟುವಟಿಕೆಗೆ ಹೇಗೆ ಬಳಸಬೇಕು ಎಂಬ ಬಗ್ಗೆ ಕೂಡ ಕಲಿಸಿ ಕೊಡಲಾಗುವುದು.
ನಿಮ್ಮ ಹೆಂಡತಿ ಹೆಸರಲ್ಲಿ ಹೋಮ್ ಲೋನ್ ತಗೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಭಾರೀ ಬೆನಿಫಿಟ್
ಸ್ವಸಹಾಯ ಸಂಘದಲ್ಲಿ ಇರುವ ಮಹಿಳೆಯರು ತಮ್ಮ ಬ್ಯಾಂಕ್ ನಲ್ಲಿ ಲೋನ್ (Bank Loan) ಪಡೆದು ಡ್ರೋನ್ (drone) ಪಡೆಯಬಹುದು. ಇದಕ್ಕೆ ಸರಕಾರದ ಸಬ್ಸಿಡಿ ಸಿಗುವ ಕಾರಣ ದೊಡ್ಡ ಆರ್ಥಿಕ ಹೊರೆ ಆಗಲಾರದು ಎಂದು ಹೇಳಬಹುದು.
ಕೃಷಿಯಲ್ಲಿ (Agriculture) ಮಹಿಳೆಯರಿಗೆ ಆಸಕ್ತಿ ಇದ್ದರೂ ಪೂರ್ತಿ ಪ್ರಮಾಣದಲ್ಲಿ ತೊಡಗಿಕೊಳ್ಳಲು ಆಗಲಾರದು ಹಾಗಾಗಿ ಮಹಿಳೆಯರನ್ನು ಕೃಷಿ ಕ್ಷೇತ್ರದತ್ತ ಉತ್ತೇಜಿಸುವುದೇ ಈ ಯೋಜನೆಯ ಒಂದು ಮುಖ್ಯ ಉದ್ದೇಶ ಆಗಿರುವುದನ್ನು ನಾವು ಕಾಣಬಹುದು.
Good news from the central government for women who own agricultural land