ನಿಮ್ಮ ಹೆಂಡತಿ ಹೆಸರಲ್ಲಿ ಹೋಮ್ ಲೋನ್ ತಗೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಭಾರೀ ಬೆನಿಫಿಟ್

Home Loan : ಸುಂದರವಾದ ಮನೆ ಕಟ್ಟಬೇಕು ಎನ್ನುವುದು ಅನೇಕರ ಬಹುದೊಡ್ಡ ಕನಸ್ಸಾಗಿರುತ್ತದೆ. ಈ ಕನಸನ್ನು ನನಸು ಮಾಡುವ ಸಲುವಾಗಿ ಸಾಲ ಪಡೆಯಲು (Bank Loan) ಮುಂದಾಗುವುದು ಇಂದು ಸಾಮಾನ್ಯವಾಗಿದೆ.
ಬ್ಯಾಂಕ್ ಅಥವಾ ಇತರ ಹಣಕಾಸು ಮೂಲದಿಂದ ಸಾಲ ಸೂಲ ಮಾಡಿಯಾದರೂ ಕನಸಿನ ಮನೆ ಕಾಣಬೇಕು ಎಂಬ ಹಂಬಲ ಬಹುತೇಕರಲ್ಲಿ ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ನೀವು ಗೃಹ ನಿರ್ಮಾಣ ಮಾಡುವ ಉದ್ದೇಶಕ್ಕೆ ಸಾಲ ಮಾಡುವುದೇ ಆಗಿದ್ದರೆ ನಿಮ್ಮ ಪತ್ನಿಯ ಹೆಸರಲ್ಲಿ ಗೃಹ ಸಾಲ ಪಡೆಯುವುದು ಬಹಳ ಉತ್ತಮವಾದ ಒಂದು ಯೋಜನೆಯಾಗಿದೆ.
ಮನೆಯಲ್ಲಿ ಮಿತಿಗಿಂತ ಜಾಸ್ತಿ ಚಿನ್ನ ಇಟ್ಟಿದ್ದೀರಾ! ಅಷ್ಟಕ್ಕೂ ನೀವು ಎಷ್ಟು ಚಿನ್ನ ಇಡಬಹುದು ಗೊತ್ತಾ?
ಮಹಿಳೆಯರಿಗೆ ವಿವಿಧ ರೀತಿಯ ಸೌಲಭ್ಯ ನೀಡಲಾಗುವುದು ಎಂಬುದು ನಮಗೆಲ್ಲ ತಿಳಿದ ಸಂಗತಿ. ಅದರಲ್ಲಿ ಬ್ಯಾಂಕ್ ಸಾಲದಲ್ಲಿಯೂ (Bank Loan) ಮಹಿಳೆಯರಿಗೆ ಅಧಿಕ ಪ್ರಾತಿನಿಧ್ಯತೆ ಇರಲಿದೆ. ಸಾಮಾನ್ಯವಾಗಿ ಪುರುಷರು ಗೃಹ ನಿರ್ಮಾಣ ಕಾರ್ಯದಲ್ಲಿ ಸಾಲ ಸೂಲ ಮಾಡುತ್ತಾರೆ. ಆದರೆ ಮಹಿಳೆಯರ ಹೆಸರಲ್ಲಿ ಗೃಹ ಸಾಲ ಪಡೆದರೆ ಅನೇಕ ವಿಚಾರದಲ್ಲಿ ನಮಗೆ ಲಾಭ ಸಿಗುತ್ತದೆ ಎಂದು ಹೇಳಬಹುದು. ಹಾಗಾದರೆ ಏನೆಲ್ಲ ಅನುಕೂಲ ಇದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಈ ಎಲ್ಲ ಪ್ರಯೋಜನೆ ಸಿಗಲಿದೆ
*ಮಹಿಳೆಯರಿಗೆ ಸ್ವಂತ ಮನೆ ನಿರ್ಮಾಣಕ್ಕೆ ನೀಡಲಾಗುವ ಗೃಹಸಾಲವನ್ನು (Home Loan) ದೀರ್ಘಾವಧಿಯ ಕಾಲಕ್ಕೆ ನೀಡಲಾಗುವುದು. ಮಹಿಳಾ ಪಾವತಿದಾರರಿಗೆ ಹೆಚ್ಚುವರಿ ಸಾಲ ಮರುಪಾವತಿ ಅವಧಿ ನೀಡಲಾಗುವ ಕಾರಣ ನಿಧಾನವಾಗಿ ಸಾಲ ಹಿಂದಿರುಗಿಸಬಹುದು. 15 ವರ್ಷ ತೀರಿಸಬೇಕಾಗಿದ್ದ ಸಾಲ 20 ವರ್ಷದ ತನಕ ಸಮಯಾವಕಾಶ ನೀಡಲಾಗುವುದು.
*ನಿಮ್ಮ ಪತ್ನಿಯ ಹೆಸರಲ್ಲಿ ನೀವು ಗೃಹ ಸಾಲ ಮಾಡಿದರೆ ಆಗ ತೆರಿಗೆ ವಿನಾಯಿತಿ ಪ್ರಯೋಜನ ಪಡೆದುಕೊಳ್ಳಬಹುದು. ಭಾರತದ ತೆರಿಗೆ ಅಧಿನಿಯಮ ಕಾಯ್ದೆ 1961 ರ ಅಡಿಯಲ್ಲಿ 2ಲಕ್ಷರೂಪಾಯಿ ಸಾಲ ಇದ್ದರೆ ಅದರಲ್ಲಿ 1.5 ಲಕ್ಷದ ತನಕ ತೆರಿಗೆ ವಿನಾಯಿತಿ ಇರಲಿದೆ.
ನಿಮ್ಮ ಅದೃಷ್ಟ ನೆಟ್ಟಗಿದ್ದು 1 ಕೋಟಿ ಲಾಟರಿ ಹೊಡೆದ್ರೆ, ನೀವು ಎಷ್ಟು ಟ್ಯಾಕ್ಸ್ ಕಟ್ಟಬೇಕಾಗುತ್ತೆ ಗೊತ್ತಾ?
*ನಿಮ್ಮ ಪತ್ನಿ ಹೆಸರಲ್ಲಿ ಗೃಹ ಸಾಲಮಾಡಿದಾಗ ಸರಕಾರದ ಅನುದಾನ ಪ್ರಯೋಜನೆ ಪಡೆಯಬಹುದು. ಸಬ್ಸಿಡಿ ಮೊತ್ತ ಪಡೆಯಲು ಬಹಳ ಅನುಕೂಲಕರ ಆಗಲಿದೆ.
*ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಹಿಳೆಯರು 2.67 ಲಕ್ಷ ರೂಪಾಯಿಗಳ ಸಬ್ಸಿಡಿ ಪಡೆಯಲಿದ್ದಾರೆ ಎನ್ನಬಹುದು.
*ಮಹಿಳೆಯರ ಹೆಸರಲ್ಲಿ ಗೃಹ ಸಾಲ ಪಡೆದರೆ ಕಡಿಮೆ ಬಡ್ಡಿದರದ ಪ್ರಯೋಜನೆ ಸಿಗಲಿದೆ ಎನ್ನಬಹುದು.
*ಬಹುತೇಕ ಖಾಸಗಿ ಮತ್ತು ಸ್ವಾಮ್ಯ ದ ಬ್ಯಾಂಕಿನಲ್ಲಿ ಮಹಿಳೆಯರಿಗೆ ಬಡ್ಡಿದರದ ಮೇಲೆ ವಿಶೇಷ ರಿಯಾಯಿತಿ ಸೌಲಭ್ಯ ನೀಡಲಿದೆ. *ಪುರುಷರಿಗೆ ಗೃಹ ಸಾಲದ ಮೇಲೆ 7% ಬಡ್ಡಿದರ ಪಡೆದರೆ ಮಹಿಳೆ ಯರಿಗೆ 6.85% ನಂತೆ ಬಡ್ಡಿದರ ಪಡೆಯಲಾಗುವುದು.
ಕೇವಲ 850 ರೂಪಾಯಿ ಇಂದ ಈ ಬ್ಯುಸಿನೆಸ್ ಶುರು ಮಾಡಿ, ಪ್ರತಿದಿನ 1000 ರೂಪಾಯಿ ಆದಾಯ ಗ್ಯಾರೆಂಟಿ!
*ಆಸ್ತಿ ಖರೀದಿ ಮತ್ತು ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಮಹಿಳಾ ಸಾಲಗಾರರಿವೆ ಸ್ಟ್ಯಾಂಪ್ ಡ್ಯೂಟಿ ಕಡಿಮೆ ಎನ್ನಬಹುದು.
*ವಿಧವೆ, ಒಂಟಿ ಮಹಿಳೆ ಆರ್ಥಿಕ ಹಿಂದುಳಿದವರು 6-10 ಲಕ್ಷದ ಗೃಹ ಸಾಲ ಪಡೆದರೆ 6.5% ನಷ್ಟು ಸಬ್ಸಿಡಿ ಸಿಗಲಿದೆ ಹಾಗಾಗಿ ಮಹಿಳೆಯರಿಗೆ ಗೃಹ ನಿರ್ಮಾಣ ಸಾಲದಿಂದ ಅಧಿಕ ಪ್ರಯೋಜನೆ ಇರಲಿದೆ.
*ಮಹಿಳೆಯರು Loan ಮಾಡಿದ್ದ ಸಂದರ್ಭದಲ್ಲಿ ಹೊಸ ಸರಕಾರ ಆಡಳಿತ ಮಾಡುವುದಿದ್ದರೆ ಸಾಲ ಮನ್ನಕ್ಕೂ ಕೆಲವು ಶಿಫಾರಸ್ಸು ಬರಲಿದೆ. ಹಾಗಾಗಿ ಸಾಲ ಪಡೆಯುವಾಗ ಪುರುಷರಿಗೆ ಹೋಲಿಸಿದರೆ ಗೃಹ ಸಾಲದಲ್ಲಿ (Home Loan) ಮಹಿಳೆಯರಿಗೆ ಅಧಿಕ ಬೆಂಬಲ ಇದೆ.
Do you know the benefits of taking a home loan in your wife’s name




