ಕೇವಲ 850 ರೂಪಾಯಿ ಇಂದ ಈ ಬ್ಯುಸಿನೆಸ್ ಶುರು ಮಾಡಿ, ಪ್ರತಿದಿನ 1000 ರೂಪಾಯಿ ಆದಾಯ ಗ್ಯಾರೆಂಟಿ!
ಇಂದು ನಾವು ಒಂದು ಬ್ಯುಸಿನೆಸ್ ಐಡಿಯಾ (Business Idea) ತಿಳಿಸಿಕೊಡುತ್ತೇವೆ. ನೀವು ಹೆಚ್ಚಿನ ಹಣ ಖರ್ಚು ಮಾಡದೇ, ಕೇವಲ 850 ರೂಪಾಯಿಗಳಲ್ಲಿ ಈ ಬ್ಯುಸಿನೆಸ್ ಶುರು ಮಾಡಬಹುದು
ಈಗಿನ ಕಾಲದಲ್ಲಿ ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡಲು ಬಹುತೇಕರು ಇಷ್ಟಪಡುವುದಿಲ್ಲ. ಒಂದಷ್ಟು ಜನರು ತಮ್ಮದೇ ಆದ ಸ್ವಂತ ಉದ್ಯೋಗ ಅಥವಾ ಸ್ವಂತ ಬ್ಯುಸಿನೆಸ್ (Own Business) ಶುರು ಮಾಡಬೇಕು ಎಂದುಕೊಂಡಿರುತ್ತಾರೆ.
ಆದರೆ ಅವರ ಐಡಿಯಾ ಕಡಿಮೆ ಬಜೆಟ್ ನಲ್ಲಿ ಬ್ಯುಸಿನೆಸ್ ಶುರು ಮಾಡಬೇಕು ಎನ್ನುವುದಾಗಿರುವ ಕಾರಣ, ಯಾವ ಬ್ಯುಸಿನೆಸ್ ಶುರು ಮಾಡಬೇಕು ಎಂದು ಗೊಂದಲದಲ್ಲಿ, ಹೆಚ್ಚಿನ ಬಂಡವಾಳ ಇಲ್ಲದೇ ಸುಮ್ಮನಾಗಿರುತ್ತಾರೆ.
ಅಂಥವರಿಗಾಗಿ ಇಂದು ನಾವು ಒಂದು ಬ್ಯುಸಿನೆಸ್ ಐಡಿಯಾ (Business Idea) ತಿಳಿಸಿಕೊಡುತ್ತೇವೆ. ನೀವು ಹೆಚ್ಚಿನ ಹಣ ಖರ್ಚು ಮಾಡದೇ, ಕೇವಲ 850 ರೂಪಾಯಿಗಳಲ್ಲಿ ಈ ಬ್ಯುಸಿನೆಸ್ ಶುರು ಮಾಡಬಹುದು, ಇದರಿಂದ ಶುರುವಿನ ಹಂತದಲ್ಲೇ ದಿನಕ್ಕೆ 1000 ರೂಪಾಯಿ ಹಣಗಳಿಕೆ ಮಾಡಬಹುದು.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ರೆ ಏನಾಗುತ್ತೆ! ಅದಕ್ಕೂ ಇದಿಯಾ ಲಿಮಿಟ್? ಇಲ್ಲಿದೆ ಬಿಗ್ ಅಪ್ಡೇಟ್
ಈ ಬ್ಯುಸಿನೆಸ್ ಅನ್ನು ಮನೆಯಲ್ಲೇ ಶುರು ಮಾಡಬಹುದು. ಅಷ್ಟಕ್ಕೂ ಯಾವ ಬ್ಯುಸಿನೆಸ್ ಇದು ಎಂದು ನೀವು ಯೋಚಿಸುತ್ತಿದ್ದರೆ, ಇದರ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..
ಕೇವಲ 850 ರೂಪಾಯಿಗಳಲ್ಲಿ ನೀವು ಹಾಗಲಕಾಯಿ ಚಿಪ್ಸ್ ಬ್ಯುಸಿನೆಸ್ (Chips Business) ಶುರು ಮಾಡಬಹುದು. ಈಗ ಫ್ರೆಶ್ ಚಿಪ್ಸ್ ತಿನ್ನುವ ಆಸೆ ಎಲ್ಲರಿಗೂ ಇದೆ. ಎಲ್ಲಾ ವಯಸ್ಸಿನವರು ಇಷ್ಟಪಟ್ಟು ತಿನ್ನುತ್ತಾರೆ.
ಹಾಗಾಗಿ ಇದು ಹೆಚ್ಚು ಲಾಭ ತರುವಂಥ ಬ್ಯುಸಿನೆಸ್ ಆಗಿದೆ. ಹಾಗಲಕಾಯಿ ಚಿಪ್ಸ್ ತಯಾರಿಸುವ ಯಂತ್ರ ನಿಮಗೆ ಕೇವಲ 850 ರೂಪಾಯಿಗೆ ಆನ್ಲೈನ್ ನಲ್ಲಿ ಸಿಗುತ್ತದೆ, ಈ ಯಂತ್ರದ ಜೊತೆಗೆ ಚಿಪ್ಸ್ ಮಾಡಲು ಬೇಕಾಗುವ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು 100 ರಿಂದ 200 ರೂಪಾಯಿ ಬೇಕಾಗುತ್ತದೆ.
ಈ ₹1 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಲಕ್ಷಾಧಿಪತಿ ಆಗೋದು ಗ್ಯಾರೆಂಟಿ! ಇಲ್ಲಿದೆ ಡೀಟೇಲ್ಸ್
ಇಷ್ಟು ಹಣ ನಿಮ್ಮ ಬಳಿ ಇದ್ದರೆ, ಚಿಪ್ಸ್ ಬ್ಯುಸಿನೆಸ್ ಶುರು ಮಾಡಬಹುದು. ಇದರಲ್ಲಿ ಖರ್ಚು ಕಡಿಮೆ, ಯಂತ್ರ ಕೆಲಸ ಮಾಡಲು ವಿದ್ಯುತ್ ಬೇಕಾಗಿಲ್ಲ. ಒಂದು ಟೇಬಲ್ ಮೇಲೆ ಸುಲಭವಾಗಿ ಹಾಗಲಕಾಯಿ ಚಿಪ್ಸ್ ಮಾಡಬಹುದು. ಹಾಗೆಯೇ ಇದನ್ನು ಒಂದು ಸಣ್ಣ ಕಾರ್ಟ್ ನಲ್ಲಿ, ಅಥವಾ ಅಂಗಡಿ ಶುರು ಮಾಡಿ ಮಾಡಬಹುದು. ನೀವು ತಯಾರಿಸುವ ಚಿಪ್ಸ್ ಕ್ವಾಲಿಟಿ ಮತ್ತು ರುಚಿ ಚೆನ್ನಾಗಿದ್ದರೆ ಹೆಚ್ಚಿನ ಗ್ರಾಹಕರು ಖರೀದಿ ಮಾಡುವುದಕ್ಕೆ ಮುಂದೆ ಬರುತ್ತಾರೆ.
ನಿಮಗೆ ಹತ್ತಿರ ಇರುವ ಅಂಗಡಿಗಳ ಜೊತೆಗೆ ಮಾತನಾಡಿ, ಅವರ ಅಂಗಡಿ ಮತ್ತು ಸೂಪರ್ ಮಾರ್ಕೆಟ್ ಗಳಲ್ಲಿ (Super Market) ಕೂಡ ನೀವು ತಯಾರಿಸುವ ಚಿಪ್ಸ್ ಮಾರಾಟ ಮಾಡಬಹುದು.
ನಿಮಗೆ ಗೊತ್ತಿಲ್ಲದಂತೆ ಬೇರೆಯವರು ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ತಗೋಬಹುದಾ? ಇಲ್ಲಿದೆ ಉತ್ತರ
ನಿಮ್ಮ ಪ್ರಾಡಕ್ಟ್ ಅನ್ನು ಮಾರ್ಕೆಟಿಂಗ್ ಮಾಡಲು ಸೋಶಿಯಲ್ ಮೀಡಿಯಾ (Social Media) ಮತ್ತು ವಾಟ್ಸಾಪ್ ಮತ್ತು ಇನ್ನಿತರ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಳ್ಳಬಹುದು. ಒಂದು ದಿನಕ್ಕೆ 10 ಕೆಜಿ ಚಿಪ್ಸ್ ಮಾರಾಟ ಆದರೂ, 1000 ರೂಪಾಯಿ ಲಾಭ ಬರೋದು ಗ್ಯಾರೆಂಟಿ.
Start this business from just 850 rupees, 1000 rupees income guaranteed every day