ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ರೆ ಏನಾಗುತ್ತೆ! ಅದಕ್ಕೂ ಇದಿಯಾ ಲಿಮಿಟ್? ಇಲ್ಲಿದೆ ಬಿಗ್ ಅಪ್ಡೇಟ್
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ (Bank Account) ಹೊಂದುವುದದಿಂದ ಏನಾದರೂ ಸಮಸ್ಯೆ ಆಗುತ್ತದೆಯೇ? ಅಥವಾ ಏನು ತೊಂದರೆ ಆಗುವುದಿಲ್ಲವಾ..
ಬ್ಯಾಂಕ್ ಅಕೌಂಟ್ ಈಗ ನಮ್ಮೆಲ್ಲರ ಬಳಿ ಇರಲೇಬೇಕಾದ ಸೌಲಭ್ಯ. ಹೌದು, ಹಣಕಾಸಿನ ವ್ಯವಹಾರಗಳನ್ನು (Banking) ನಡೆಸುವುದಕ್ಕೆ ಬ್ಯಾಂಕ್ ಅಕೌಂಟ್ (Bank Account) ಅತ್ಯಗತ್ಯ. ಈಗ ಎಲ್ಲವೂ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ನಡೆಯುತ್ತದೆ.
ಗೂಗಲ್ ಪೇ (Google Pay), ಫೋನ್ ಪೇ (Phonepe) ಇವುಗಳ ಮೂಲಕ ಹಣ ಪಾವತಿ ಮಾಡಲು ಬ್ಯಾಂಕ್ ಅಕೌಂಟ್ ಇರಲೇಬೇಕು. ಈಗ ನಮ್ಮ ದೇಶದ ಹಳ್ಳಿಗಳಲ್ಲಿ ಕೂಡ ಬ್ಯಾಂಕ್ ಸೇವೆಗಳು (Banking Service) ಲಭ್ಯವಿದೆ. ಹಾಗಾಗಿ ಬಹುತೇಕ ಜನರು ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ.
ಕೆಲವು ಜನರ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ನಲ್ಲಿ ಅಕೌಂಟ್ ಇರುತ್ತದೆ. ಕೆಲಸ ಬದಲಾವಣೆ ಮಾಡುವಾಗ ಬೇರೆ ಅಕೌಂಟ್, Loan ಪಡೆಯುವುದಕ್ಕೆ ಬೇರೆ ಬ್ಯಾಂಕ್ ನಲ್ಲಿ ಅಕೌಂಟ್, ಹೀಗೆ ನಾನಾ ಕಾರಣಗಳಿಂದ ವಿವಿಧ ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿಕೊಂಡಿರುತ್ತಾರೆ.
ಈ ₹1 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಲಕ್ಷಾಧಿಪತಿ ಆಗೋದು ಗ್ಯಾರೆಂಟಿ! ಇಲ್ಲಿದೆ ಡೀಟೇಲ್ಸ್
ಆದರೆ ಈ ರೀತಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ (Bank Account) ಹೊಂದುವುದದಿಂದ ಏನಾದರೂ ಸಮಸ್ಯೆ ಆಗುತ್ತದೆಯೇ? ಅಥವಾ ಏನು ತೊಂದರೆ ಆಗುವುದಿಲ್ಲವಾ ಎನ್ನುವ ಪ್ರಶ್ನೆ ಜನರಲ್ಲಿ ಇದ್ದೇ ಇರುತ್ತದೆ. ಇದರ ಬಗ್ಗೆ ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..
ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ, ಈ ಎಲ್ಲಾ ಉಪಯೋಗವಿದೆ:
*ಬೇರೆ ಬೇರೆ ವಿಚಾರಕ್ಕೆ ಬೇರೆ ಬೇರೆ ಬ್ಯಾಂಕ್ ಅಕೌಂಟ್ ಇರುವುದು ಒಳ್ಳೆಯದು. ಸರ್ಕಾರದ ಸಬ್ಸಿಡಿ ಪಡೆಯಲು ಒಂದು ಅಕೌಂಟ್, ಸೇವಿಂಗ್ಸ್ ಹಣ ಇಡುವುದಕ್ಕೆ ಒಂದು ಅಕೌಂಟ್, ಪ್ರತಿದಿನ ಮಾಡುವ ಖರ್ಚಿಗೆ ಒಂದು ಅಕೌಂಟ್, ಟ್ರೇಡಿಂಗ್ ಮಾಡೋದಕ್ಕೆ ಒಂದು ಅಕೌಂಟ್, ಯುಪಿಐ ಪಾವತಿಗೆ ಒಂದು ಅಕೌಂಟ್, ಈ ರೀತಿ ಬೇರೆ ಕೆಲಸಕ್ಕೆ ಬೇರೆ ಬೇರೆ ಅಕೌಂಟ್ ಇದ್ದರೆ ಒಳ್ಳೆಯದು.
ನಿಮಗೆ ಗೊತ್ತಿಲ್ಲದಂತೆ ಬೇರೆಯವರು ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ತಗೋಬಹುದಾ? ಇಲ್ಲಿದೆ ಉತ್ತರ
*ಕೆಲವೊಮ್ಮೆ ಬ್ಯಾಂಕ್ ಸರ್ವರ್ ಗಳು ಸಮಸ್ಯೆ ಕೊಡುತ್ತದೆ. ಅಂಥ ಸಮಯದಲ್ಲಿ ಒಂದಕ್ಕಿಂತ ಜಾಸ್ತಿ ಬ್ಯಾಂಕ್ ಗಳಲ್ಲಿ ಅಕೌಂಟ್ ಇದ್ದರೆ, ಇನ್ನೊಂದು ಬ್ಯಾಂಕ್ ಅಕೌಂಟ್ ಇಂದ ಪೇಮೆಂಟ್ ಮಾಡಬಹುದು. ಇದು ಅನುಕೂಲಕರ ಆಗಿದೆ.
*ಹೆಚ್ಚಿನ ಹಣವನ್ನು ಎಟಿಎಂ ಇಂದ ವಿತ್ ಡ್ರಾ ಮಾಡಬೇಕು ಎಂದು ಬಯಸುವವರು ಹೆಚ್ಚು ಬ್ಯಾಂಕ್ ಅಕೌಂಟ್ಸ್ ಇಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ಇಂಥ ಬ್ಯಾಂಕ್ ಇಂದ ಇಷ್ಟು ಮೊತ್ತವನ್ನು ಮಾತ್ರ ಒಂದು ದಿನಕ್ಕೆ ಎಟಿಎಂ ಇಂದ ವಿತ್ ಡ್ರಾ ಮಾಡಬಹುದು ಎಂದು ನಿಯಮವಿದೆ. ಹಾಗಾಗಿ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ, ಹೆಚ್ಚು ಹಣವನ್ನು ವಿತ್ ಡ್ರಾ ಮಾಡಬಹುದು.
ಗ್ಯಾಸ್ ಸಿಲಿಂಡರ್ ಖರೀದಿಗೂ ಇನ್ಮುಂದೆ ಹೊಸ ರೂಲ್ಸ್! ಬಂತು ಕೇಂದ್ರ ಸರಕಾರದ ಹೊಸ ನಿಯಮ
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇರುವುದರ ಅನುಪಯೋಗಗಳು:
*ಎಲ್ಲಾ ಬ್ಯಾಂಕ್ ಅಕೌಂಟ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ (Bank Balance) ನೋಡಿಕೊಳ್ಳಬೇಕಾಗುತ್ತದೆ, ಇದು ಪ್ರಮುಖವಾದ ನಿಯಮ ಆಗಿದೆ. ಮಿನಿಮಮ್ ಬ್ಯಾಲೆನ್ಸ್ ಎಲ್ಲಾ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ಮೊತ್ತ ಇರುತ್ತದೆ.
ಕೆಲವು ಬ್ಯಾಂಕ್ ಗಳಲ್ಲಿ ₹10,000 ಮಿನಿಮಮ್ ಬ್ಯಾಲೆನ್ಸ್ ಇಡಲೇಬೇಕು. ಈ ರೀತಿ ಆದಾಗ ಎಲ್ಲಾ ಬ್ಯಾಂಕ್ ಅಕೌಂಟ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇನ್ ಟೆನ್ ಮಾಡುವುದು ಕಷ್ಟ ಆಗಿಬಿಡುತ್ತದೆ.
*ಎಲ್ಲಾ ಬ್ಯಾಂಕ್ ಅಕೌಂಟ್ ಗಳನ್ನು ನಾವು ಆಕ್ಟಿವ್ ಆಗಿ ಬಳಸಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಬಳಸದೇ ಇರುವ ಆ ಅಕೌಂಟ್ ಕ್ಯಾನ್ಸಲ್ ಆಗಬಹುದು. ಹಾಗಾಗಿ ಹೆಚ್ಚು ಅಕೌಂಟ್ ಹೊಂದಿರುವುದು ಸಮಸ್ಯೆಯೇ ಆಗಿದೆ.
What happens if there is more than one bank account