ಗ್ಯಾಸ್ ಸಿಲಿಂಡರ್ ಖರೀದಿಗೂ ಇನ್ಮುಂದೆ ಹೊಸ ರೂಲ್ಸ್! ಬಂತು ಕೇಂದ್ರ ಸರಕಾರದ ಹೊಸ ನಿಯಮ
ಗ್ಯಾಸ್ ಸಿಲಿಂಡರ್ ಗಳಲ್ಲಿ ಕ್ಯೂಆರ್ ಕೋಡ್ (QR Code) ಬಳಕೆಗೆ ನಿರ್ಣಯ ಮಾಡಿದೆ. ಇದರಿಂದ ಸಿಲಿಂಡರ್ ಗಳ ಟ್ರ್ಯಾಕಿಂಗ್, ಕಳ್ಳತನ ಮತ್ತು ಏಜೆನ್ಸಿಗಳ ದಾಸ್ತಾನು ನಿರ್ವಹಣೆಯಲ್ಲಿ ಅಕ್ರಮಗಳನ್ನು ತಡೆಯಬಹುದಾಗಿದೆ.
ಇಂದು ಪ್ರತಿಯೊಂದು ಮನೆಗೂ ಕೂಡ ಮೂಲಭೂತ ಅವಶ್ಯಕ ವಸ್ತುಗಳು ಬಹಳ ಮುಖ್ಯವಾಗಿ ಬೇಕು. ಹೌದು ಅದರಲ್ಲಿ ಮುಖ್ಯವಾಗಿ ಅಡುಗೆಗೆ ಬಳಸುವಂತಹ ಗ್ಯಾಸ್ ಸಿಲಿಂಡರ್ (Gas Cylinder) ಕೂಡ ಒಂದಾಗಿದೆ.
ಹಿಂದೆಲ್ಲ ಇದ್ದಿಲು, ಕಟ್ಟಿಗೆ ಬಳಸಿ ಅಡುಗೆ ಮಾಡ್ತಾ ಇದ್ದರು, ಆದರೆ ಇಂದು ಹಾಗಲ್ಲ ಪ್ರತಿಯೊಂದು ಮನೆಗೂ ಗ್ಯಾಸ್ ಸಿಲಿಂಡರ್ ಪೂರೈಕೆ ಇರಲಿದೆ. ಅದರಲ್ಲೂ ಕೇಂದ್ರ ಸರಕಾರ ಕೂಡ ಬಡವರ್ಗದ ಜನತೆಗಾಗಿಯೇ ಉಜ್ವಲ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಕಡಿಮೆ ದರದ ಗ್ಯಾಸ್ ಮತ್ತು ಸಬ್ಸಿಡಿ ಯನ್ನು ಸಹ ಪಡೆಯುತ್ತಿದ್ದಾರೆ.
ಸತ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಕುಟುಂಬಸ್ಥರು ಹಣ ಡ್ರಾ ಮಾಡಬಹುದಾ! ಏನಿದೆ ರೂಲ್ಸ್ ಗೊತ್ತಾ?
ಆದರೆ ಇಂದು ಉಚಿತ ಸೌಲಭ್ಯ ಗಳು ಸಿಗ್ತಾ ಹೊದಂತೆ ಆಕ್ರಮಗಳು ಕೂಡ ಹೆಚ್ಚಾಗುತ್ತಿದೆ. ಅನರ್ಹರು ಕೂಡ ಸೌಲಭ್ಯ ಪಡೆಯಲು ಮುಂದೆ ಬರುತ್ತಾರೆ. ಇಂದು ಗ್ಯಾಸ್ ಸಿಲಿಂಡರ್ ಗಳ ಅಕ್ರಮಗಳು ಕೂಡ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು ಗ್ಯಾಸ್ ಸಿಲಿಂಡರ್ ಆಕ್ರಮ ತಡೆ ಗಟ್ಟಲು ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈ ಗೊಂಡಿದೆ.
ಹೌದು ಗ್ಯಾಸ್ ಸಿಲಿಂಡರ್ ಗಳಲ್ಲಿ ಕ್ಯೂಆರ್ ಕೋಡ್ (QR Code) ಬಳಕೆಗೆ ನಿರ್ಣಯ ಮಾಡಿದೆ. ಇದರಿಂದ ಸಿಲಿಂಡರ್ ಗಳ ಟ್ರ್ಯಾಕಿಂಗ್, ಕಳ್ಳತನ ಮತ್ತು ಏಜೆನ್ಸಿಗಳ ದಾಸ್ತಾನು ನಿರ್ವಹಣೆಯಲ್ಲಿ ಅಕ್ರಮಗಳನ್ನು ತಡೆಯಬಹುದಾಗಿದೆ.
ಕ್ಯುಆರ್ ಕೋಡ್ ಎಂಬುದು ಸ್ವಲ್ಪ ಮಟ್ಟಿಗೆ ಆಧಾರ್ ಕಾರ್ಡ್ ವಿಧಾನವೇ ಹೋಲಲಿದೆ. ಈ ಕೋಡ್ ಮೂಲಕ ಗ್ಯಾಸ್ ಸಿಲಿಂಡರ್ ನಲ್ಲಿರುವ ಗ್ಯಾಸ್ ಮಾಹಿತಿ ಯನ್ನು ಅನ್ನು ಟ್ರ್ಯಾಕ್ ಮಾಡಲು ಸುಲಭ
ಬೇರೆಯವರ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದ್ದೀರಾ? ಸರಕಾರದಿಂದ ಬಂತು ಈ ಹೊಸ ರೂಲ್ಸ್
ಲಾಭವೇನು?
*ಗ್ಯಾಸ್ ಕಳ್ಳತನ ವನ್ನು ತಡೆಯಬಹುದು.
*ಸಿಲಿಂಡರ್ ಗೆ ಎಷ್ಟು ಬಾರಿ ಗ್ಯಾಸ್ ರೀಫಿಲ್ ಮಾಡಲಾಗಿದೆ ಪತ್ತೆ ಹಚ್ಚ ಬಹುದು
*ಗ್ಯಾಸ್ ಸಿಲಿಂಡರ್‌ನಲ್ಲಿ ಕ್ಯೂಆರ್ ಕೋಡ್ ಅಳವಡಿಸಿದರೆ ಟ್ರ್ಯಾಕಿಂಗ್ ಮಾಡಲು ಸರಳವಾಗಲಿದೆ
*ಕ್ಯುಆರ್ ಕೋಡ್ (QR code) ಅನ್ನು ಹೊಸ ಸಿಲಿಂಡರ್ ಗಳಲ್ಲಿ (Cylinder) ಮೆಟಲ್ ಸ್ಟಿಕರ್ ಜೊತೆಗೆ ಅಳವಡಿಸಲಾಗಲಿದ್ದು ಯಾವ ಡೀಲರ್ ನಿಂದ ಬಂದಿದೆ ಪತ್ತೆ ಮಾಡಬಹುದು
ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗ್ತಾಯಿದೆ, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಿ
*ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆಯೇ ಕಂಡುಹಿಡಿಯಬಹುದು
ಹಾಗಾಗಿ ಇನ್ಮುಂದೆ ಉಚಿತ ಗ್ಯಾಸ್ ಸಿಲಿಂಡರ್ (Free Gas Connection) ಯೋಜನೆಯನ್ನು ಅನರ್ಹರು ಬಳಕೆ ಮಾಡಿಕೊಂಡರೆ ಸುಲಭವಾಗಿ ಮಾಹಿತಿ ಸಿಗಲಿದೆ.
New Update On LPG gas cylinder, QR Code For Cylinder