ಎಷ್ಟೋ ಬಾರಿ ಲಕ್ಷಾಂತರ ರೂಪಾಯಿಯನ್ನು ಭವಿಷ್ಯದಲ್ಲಿ ಬೇಕಾಗುತ್ತದೆ ಎಂಬ ಉದ್ದೇಶಕ್ಕೆ  ಎತ್ತಿಡುವ ಜನರನ್ನು ನಾವು ಕಾಣಬಹುದು. ಹಾಗೆ ಕೂಡಿಟ್ಟ ಬ್ಯಾಂಕ್ ನ ಬ್ಯಾಲೆನ್ಸ್  ಲಕ್ಷಾಂತರ ರೂಪಾಯಿ ಕೂಡ ಆಗಿರಬಹುದು.

ಹೀಗೆ ಲಕ್ಷ ಲಕ್ಷ ಹಣ ಕೂಡಿಟ್ಟವರೇ ಅಸಹಜ ಅಥವಾ ವಯೋವೃದ್ಧರಾಗಿ ಅಥವಾ ಇತರ ಆರೋಗ್ಯ ಸಮಸ್ಯೆಯಿಂದ ಸತ್ತರೆ ಆಗ ಆ ವ್ಯಕ್ತಿಗೆ ಸೇರಿದ್ದ ಹಣ ಅವರ ಕುಟುಂಬಕ್ಕೆ ನೀಡಲಾಗುತ್ತದೆಯೇ…

Can family members withdraw money from the bank account of a dead person

ಮೃತರ ಖಾತೆಯಲ್ಲಿ (Bank Account) ಇದ್ದ ಹಣವನ್ನು ಕುಟುಂಬಸ್ಥರು ಡ್ರಾ ಮಾಡಲು ಅವಕಾಶ ಇದೆಯೇ, ಈ ಸಂಬಂಧ ಪಟ್ಟ ಕಾನೂನಿನ ನಿಯಮ ಏನು ಹೇಳುತ್ತದೆ ಎಂಬ ಅನೇಕ ಉಪಯುಕ್ತ ಮಾಹಿತಿಯನ್ನು ನೀವು ತಿಳಿಯಿರಿ.

SSLC ಪಾಸ್ ಆದವರಿಗೆ 73 ಸಾವಿರ ವಿದ್ಯಾರ್ಥಿ ವೇತನ! ಕೋಟಕ್ ಬ್ಯಾಂಕ್ ನಿಂದ ಬಂಪರ್ ಕೊಡುಗೆ

ಮೃತ ವ್ಯಕ್ತಿ ಕೂಡಿಟ್ಟ ಹಣ ಲಕ್ಷಗಟ್ಟಲೆ ಇದ್ದರೆ ಅದನ್ನು ಬ್ಯಾಂಕಿನ ಪಾಲಾಗುವಂತೆ ಬಿಡಲು ಯಾರು ಕೂಡ ಇರಲಾರರು.  ಹಾಗಾದರೆ ಮೃತ ವ್ಯಕ್ತಿಯ ಖಾತೆಯಿಂದ ಹಣ ಪಡೆಯಬಹುದೆ ಎಂದರೆ ಅದು ಅಪರಾಧ ಆಗಲಿದೆ ಎನ್ನಬಹುದು.

ಮೃತ ವ್ಯಕ್ತಿಯ ಖಾತೆಯಲ್ಲಿ ಇರುವ ಹಣವನ್ನು ATM ಮೂಲಕ ವಿತ್ ಡ್ರಾ (Cash Withdraw) ಮಾಡುವುದು ಹಣ ಪಡೆಯುವುದು ಎಲ್ಲವೂ ಕೂಡ ಕಾನೂನು ಬಾಹಿರ ಆಗಲಿದೆ‌. ಹಾಗೆಂದ ಮಾತ್ರಕ್ಕೆ ನಿಮಗೆ ಆ ಹಣದ ಮೇಲೆ ಅಧಿಕಾರ ಇಲ್ಲ ಎಂದಲ್ಲ ಬದಲಿಗೆ ನೀವು ಅದನ್ನು ಕಾನೂನಾತ್ಮಕವಾಗಿ ಪಡೆಯಬಹುದು.

ಬೇರೆಯವರ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದ್ದೀರಾ? ಸರಕಾರದಿಂದ ಬಂತು ಈ ಹೊಸ ರೂಲ್ಸ್

Bank Accountವ್ಯಕ್ತಿಯ ಮರಣದ ನಂತರ ಅವರ ಕುಟುಂಬದವರು ಅವರ ಅಕೌಂಟ್ ನಿಂದ ಹಣ ಪಡೆಯುವುದು ಕಾನೂನುಬಾಹಿರ ಎಂದು ಕರೆಸಿಕೊಳ್ಳಲಿದೆ.
ವ್ಯಕ್ತಿ ಮರಣ ಹೊಂದಿದ್ದಾಗ ಅವರ ನಿಶ್ಚಿತ ಠೇವಣಿಯಿಂದ (Fixed Deposit) ಅಥವಾ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಸಾಧ್ಯವಿಲ್ಲ

ಉಳಿತಾಯ ಖಾತೆಯಿಂದ (Savings Account) ಹಣ ಪಡೆಯುವುದಕ್ಕೂ FD ನಲ್ಲಿ ಹಣ ಸಂಗ್ರಹ ಮಾಡಿದ್ದನ್ನು ಪಡೆಯುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎನ್ನಬಹುದು. ಹೌದು, ಫಿಕ್ಸೆಡ್ ಡೆಪಾಸಿಟ್ ನಲ್ಲಿ (Fixed Deposit) ಠೇವಣಿ ಮಾಡಿದ್ದ ಹಣವನ್ನುಅವರು ಹಿಂಪಡೆಯಲು ಸಾಧ್ಯವಿಲ್ಲ, ಅದು ಯಾರು ನಾಮಿನಿ ಇರಲಿದ್ದಾರೋ ಅವರ ಪಾಲಾಗಲಿದೆ. ಭಾರತ ಸರಕಾರದ ನಿಯಮಾವಳಿಗಳ ಪ್ರಕಾರ ವ್ಯಕ್ತಿ ಮರಣ ಹೊಂದಿದ್ದ ಬಳಿಕ ಆತನ ATM, Debit card ಮೂಲಕ ಹಣ ಪಡೆಯುವುದು ತಪ್ಪು ಎನ್ನಬಹುದು.

ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗ್ತಾಯಿದೆ, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಿ

ಹಣ ಪಡೆಯಲು ಈ ಕ್ರಮ ಅನುಸರಿಸಿ

FD ಅಥವಾ ಇತರ ಹಣವನ್ನು ಪಡೆಯಲು ಕೂಡ ಒಂದು ಕ್ರಮ ಇರಲಿದೆ. ಮರಣಹೊಂದಿದ್ದ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಬಾರದು ಅದರ ಬದಲಿಗೆ ಕುಟುಂಬ ಸದಸ್ಯರು ಆತನ ಮರಣ ಪ್ರಮಾಣ ಪತ್ರ ಸೇರಿದಂತೆ ಸಂಬಂಧ ಪಟ್ಟ ದಾಖಲೆಗಳನ್ನು ಬ್ಯಾಂಕಿಗೆ ನೀಡಬೇಕು.

ಬ್ಯಾಂಕಿನಲ್ಲಿ ಸಾಮಾನ್ಯ ಖಾತೆ ಹೊಂದಿದ್ದರು ಅದಕ್ಕೆ ನಾಮಿನಿ ಇರಲಿದ್ದಾರೆ. ಆಗ ವ್ಯಕ್ತಿ ಮೃತನಾದರೆ ಬ್ಯಾಂಕಿನಲ್ಲಿ ಮರಣ ಪ್ರಮಾಣ ಪತ್ರದ ಜೊತೆಗೆ ನಾಮಿನಿ ಸದಸ್ಯತ್ವಕ್ಕೆ ಸಂಬಂಧ ಪಟ್ಟ ದಾಖಲೆ ಕಡ್ಡಾಯವಾಗಿ ನೀಡಬೇಕು.

ನಾಮಿನಿ ಅವರ KYC ಪ್ರಕ್ರಿಯೆ ಆಗಿದ್ದು ಸಂಬಂಧ ಪಟ್ಟ ಸರಕಾರಿ ಅಧಿಕಾರಿಗಳಿಂದ ಈ ದಾಖಲಾತಿ ಹೊಂದಿದ್ದರೆ ಬ್ಯಾಂಕ್ ನಿಂದ ಹಣ ಪಡೆಯಬಹುದು. ಸಂಬಂಧ ಪಟ್ಟ ಸರಕಾರಿ ಅಧಿಕಾರಿಗಳು ದೃಢೀಕರಿಸಿದ್ದ ಬಳಿಕವಷ್ಟೆ ಮೃತ ವ್ಯಕ್ತಿಯ ಹಣವನ್ನು ಪಡೆಯಬಹುದಾಗಿದೆ.

ಬ್ಯಾಂಕ್‌ನಿಂದ ಸಾಲ ಪಡೆದ ವ್ಯಕ್ತಿ ಅಕಸ್ಮಾತ್ ಸತ್ತರೆ ಆ ಸಾಲ ತೀರಿಸುವವರು ಯಾರು? ಹೊಸ ರೂಲ್ಸ್

Can family members withdraw money from the bank account of a dead person