ನಿಮಗೆ ಗೊತ್ತಿಲ್ಲದಂತೆ ಬೇರೆಯವರು ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ತಗೋಬಹುದಾ? ಇಲ್ಲಿದೆ ಉತ್ತರ
ನಿಮ್ಮ ಹಣ ಬ್ಯಾಂಕ್ ನಲ್ಲಿ ಇದ್ದರೂ ಕೂಡ ಈಗ ಸೈಬರ್ ವಂಚಕರ ಮೋಸದ ಜಾಲದಿಂದಾಗಿ ಬ್ಯಾಂಕಿನ ಹಣವನ್ನು ಸುಲಭವಾಗಿ ಡ್ರಾ ಮಾಡಬಹುದಾಗಿದೆ.
ಹಣ ಇಂದು ಪ್ರತಿಯೊಬ್ಬರ ಜೀವನದಲ್ಲಿಯೂ ಬಹಳ ಮುಖ್ಯ ಸ್ಥಾನ ಪಡೆದಿದೆ. ಹಣ ಒಂದಿದ್ದರೆ ಜೀವನದಲ್ಲಿ ಎಲ್ಲವನ್ನು ಕೊಂಡುಕೊಳ್ಳಬಹುದು ಎಂಬ ಮನಸ್ಥಿತಿ ಜನರಲ್ಲಿ ನಿರ್ಮಾಣ ಆಗಿದೆ.
ಹಾಗಾಗಿ ಹಣ ಸಂಗ್ರಹ ಆದಂತೆ ಅದನ್ನು ಬ್ಯಾಂಕ್ ನಲ್ಲಿ (Bank) ವಿವಿಧ ಯೋಜನೆಗೆ ಇಲ್ಲವೇ ಉಳಿತಾಯ ಯೋಜನೆಗೆ ಹಣ ವಿನಿಯೋಗ ಮಾಡುತ್ತಾರೆ. ಈ ನಿಟ್ಟಿನಲ್ಲಿ ಒಬ್ಬೊಬ್ಬರ ಬಳಿಯೂ ನಾಲ್ಕೈದು ಬ್ಯಾಂಕ್ ಖಾತೆ (Bank Account) ಇರುವುದನ್ನು ನಾವು ಕಾಣಬಹುದು.
ಹೊರಗೆ ಹಣ ವಿನಿಯೋಗ ಮಾಡುವುದು ಅಪಾಯ ಎಂಬ ಕಾರಣಕ್ಕೆ ಬ್ಯಾಂಕ್ ನಲ್ಲಿ ಸುರಕ್ಷಿತವಾಗಿ ಕೂಡಿಡುವ ಜನರ ಬ್ಯಾಂಕ್ ನಲ್ಲಿ ಸಂಗ್ರಹ ಆದ ಹಣ ಕೂಡ ಈಗ ಅಷ್ಟು ಸೇಫ್ ಇಲ್ಲದಂತಾಗಿದೆ. ನಿಮಗೆ ಗೊತ್ತಿಲ್ಲದೆ ನಿಮ್ಮ ಬ್ಯಾಂಕ್ ನ ಹಣ ಡ್ರಾ ಮಾಡಬಹುದೇ ಎಂಬ ಪ್ರಶ್ನೆಗೆ ಇಲ್ಲಿ ನೀವು ಉತ್ತರ ಕಂಡುಕೊಳ್ಳಲಿದ್ದೀರಿ.
ಗ್ಯಾಸ್ ಸಿಲಿಂಡರ್ ಖರೀದಿಗೂ ಇನ್ಮುಂದೆ ಹೊಸ ರೂಲ್ಸ್! ಬಂತು ಕೇಂದ್ರ ಸರಕಾರದ ಹೊಸ ನಿಯಮ
ಬ್ಯಾಂಕ್ ಶುಲ್ಕ ಇದೆ?
ನೀವು ಬ್ಯಾಂಕಿನ ATM Card ಬಳಸಿದ್ದಕ್ಕೆ ಕೆಲವು ಸಾಮಾನ್ಯ ಶುಲ್ಕವನ್ನು ಬ್ಯಾಂಕ್ ವಿಧಿಸಲಿದೆ. ಅದೇ ರೀತಿ ನಿಮ್ಮ ಖಾತೆ ನಿರ್ವಹಣೆ ಮಾಡುವ ಉದ್ದೇಶಕ್ಕೆ ಕೂಡ ಬ್ಯಾಂಕ್ ಶುಲ್ಕ ವಿಧಿಸಲಿದೆ. ಅದೇ ರೀತಿ ನಿಗಧಿತ ಮೊತ್ತಕ್ಕಿಂತ ಅಧಿಕವಾಗಿ ಬ್ಯಾಂಕ್ ವ್ಯವಹಾರ (Banking) ನಡೆಸಿದರು ಕೂಡ ಬ್ಯಾಂಕ್ ಶುಲ್ಕ ವಿಧಿಸಲಿದೆ.
ಅದೇ ರೀತಿ ಡೆಬಿಟ್ ಕಾರ್ಡ್ ಬಳಕೆ ಮಾಡಿದ್ದಕ್ಕೆ ವಾರ್ಷಿಕ ದರ ವಿಧಿಸಲಿದೆ. ಹಾಗಾಗಿ ಇಂತಹ ಅನೇಕ ಕಾರಣಕ್ಕೆ ಬ್ಯಾಂಕ್ ಶುಲ್ಕ ವಿಧಿಸುವಾಗ ಒಂದೊಂದು ಬ್ಯಾಂಕ್ ಒಂದೊಂದು ಮಾನದಂಡ ವಿಧಿಸಲಿದೆ.
ಸತ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಕುಟುಂಬಸ್ಥರು ಹಣ ಡ್ರಾ ಮಾಡಬಹುದಾ! ಏನಿದೆ ರೂಲ್ಸ್ ಗೊತ್ತಾ?
ಹೆಚ್ಚುತ್ತಿದೆ ವಂಚಕರ ಜಾಲ
ಇತ್ತೀಚಿನ ದಿನದಲ್ಲಿ ದುಡ್ಡಿನ ಆಮಿಷ ಒಡ್ಡಿ, ಕಾರು ಇತರ ಗಿಫ್ಟ್ ಗಳ ಆಸೆ ತೋರಿಸಿ ಜನರನ್ನು ಮೋಸ ಮಾಡುವ ಪ್ರಮಾಣ ಅಧಿಕ ಆಗುತ್ತಿದೆ. ಅನೇಕ ಜನರು ಆನ್ಲೈನ್ ನಲ್ಲಿ ವರ್ಕ್ ಫ್ರಂ ಹೋಂ ಆಸೆ ತೋರಿಸಿ ಅಧಿಕ ಹಣದಾಸೆಗೆ ಜನರು ತಮ್ಮ ಹಣ ಕಳೆದುಕೊಳ್ಳುತ್ತಿದ್ದಾರೆ
ಹಾಗಾಗಿ ನಿಮ್ಮ ಹಣ ಬ್ಯಾಂಕ್ ನಲ್ಲಿ ಇದ್ದರೂ ಕೂಡ ಈಗ ಸೈಬರ್ ವಂಚಕರ ಮೋಸದ ಜಾಲದಿಂದಾಗಿ ಬ್ಯಾಂಕಿನ ಹಣವನ್ನು ಸುಲಭವಾಗಿ ಡ್ರಾ ಮಾಡಬಹುದಾಗಿದೆ. ಹಾಗಾಗಿ ಈ ಬಗ್ಗೆ ಇತ್ತೀಚೆಗಷ್ಟೇ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಈ ಬಗ್ಗೆ ವರದಿ ಸಲ್ಲಿಸಿದೆ.
ಬೇರೆಯವರ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದ್ದೀರಾ? ಸರಕಾರದಿಂದ ಬಂತು ಈ ಹೊಸ ರೂಲ್ಸ್
ನಕಲಿ ಅಪ್ಲಿಕೇಶನ್ ಲಿಂಕ್ ಡೌನ್‌ಲೋಡ್ ಮಾಡಲು ತಿಳಿಸಿ ಟೆಲಿಗ್ರಾಂ, ವಾಟ್ಸ್ ಆ್ಯಪ್ ಇತರ ಮೂಲಕ ವಂಚನೆ ಮಾಡುವ ಪ್ರಮಾಣ ಅಧಿಕ ಆಗುತ್ತಿದೆ. ಆಧಾರ್ ಕೆವೈಸಿ, ಪಾನ್ ಕಾರ್ಡ್ ನಂಬರ್ ಹಾಗೂ ಇತರ ಅಗತ್ಯವಿದೆ ಎಂದು ಬ್ಯಾಂಕ್ ನಿಂದ ಕರೆ ಅಥವಾ ಮೆಸೇಜ್ ಮಾಡುವಂತೆ ಮಾಹಿತಿ ನೀಡಲಿದ್ದಾರೆ.
ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ (Mobile App) ಆಗುತ್ತಿದ್ದಂತೆ ನಿಮ್ಮ ಬ್ಯಾಂಕ್ ಖಾತೆಗೆ ಪ್ರವೇಶಿಸಿ ನಿಮ್ಮ ಬಳಿ ಇದ್ದ ಹಣ ವಿತ್ ಡ್ರಾ ಅಥವಾ ಟ್ರಾನ್ಸ್ ಫರ್ ಮಾಡಲಿದ್ದಾರೆ.
ಜಾಗೃತರಾಗಿ
ಅನುಮಾನಸ್ಪದ ಕರೆ ಅಥವಾ ಮೆಸೇಜ್ ಬಂದರೆ ಅದರ ಬಗ್ಗೆ ಸರಿಯಾಗಿ ತಿಳಿದು ಮುನ್ನಡೆಯಿರಿ. ಯಾವುದೇ ಕಾರಣಕ್ಕೂ ಅವರು ತಿಳಿಸುವ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡಿ. ಒಂದು ವೇಳೆ ಮಾಡಿದರು ಕೂಡಲೇ ಡೆಟಾ ಆಫ್ ಮಾಡಿ ಬಿಡಿ. ಬಳಿಕ ಅದನ್ನು ಅನ್ ಇನ್ ಸ್ಟಾಲ್ ಮಾಡಿ.
ಅದೇ ರೀತಿ ನಿಮಗೆ ಸೈಬರ್ ವಂಚನೆ ಆದರೆ ಆಗ ನೀವು 1930 ಗೆ ಕರೆ ಮಾಡಿ ಈ ಬಗ್ಗೆ ತಕ್ಷಣ ಮಾಹಿತಿ ನೀಡಿ. ಒಟ್ಟಾರೆಯಾಗಿ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ, ಹಾಗಾಗಿ ನೀವು ಯಾವುದೇ ಆಮಿಷಗಳಿಗೆ ಒಳಗಾಗಿ ಮೋಸ ಹೋಗದಂತೆ ಎಚ್ಚರ ವಹಿಸಿ.
ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗ್ತಾಯಿದೆ, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಿ
Can someone else withdraw money from your bank account without your knowledge