ಮನೆಯಲ್ಲಿ ಮಿತಿಗಿಂತ ಜಾಸ್ತಿ ಚಿನ್ನ ಇಟ್ಟಿದ್ದೀರಾ! ಅಷ್ಟಕ್ಕೂ ನೀವು ಎಷ್ಟು ಚಿನ್ನ ಇಡಬಹುದು ಗೊತ್ತಾ?
Gold Limit : ಇಂದು ಬಹು ಬೇಡಿಕೆಯ ವಸ್ತು ಚಿನ್ನ ಆಗಿದೆ. ಹೌದು ಹೆಚ್ಚು ಮೌಲ್ಯಯುತವಾದ ವಸ್ತು ಎಂದರೇ ಅದು ಚಿನ್ನ. ಹಿಂದಿನ ಕಾಲದಲ್ಲಿ ಶುಭ ಸಮಾರಂಭಗಳಲ್ಲಿ ಮದುವೆ, ಪೂಜೆ ಪುನಸ್ಕಾರ ಇತ್ಯಾದಿಯಲ್ಲಿ ಚಿನ್ನ ಬಳಸಲಾಗುತ್ತಿತ್ತು.
ಆದರೆ ಇಂದು ಚಿನ್ನ ತೊಡುವಕ್ಕಿಂತಲೂ ಹೆಚ್ಚಾಗಿ ಹೂಡಿಕೆ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಚಿನ್ನದ ಬೆಲೆ (Gold Price) ಕೂಡ ಇಂದು ದುಪ್ಪಟ್ಟು ಆಗಿದ್ದು ವರ್ಷದಿಂದ ವರ್ಷಕ್ಕೆ ಬೆಲೆ ಏರುತ್ತಲೇ ಬಂದಿದೆ.
ಹಾಗಿದ್ದಲ್ಲಿ ನಿಮ್ಮ ಮನೆಯಲ್ಲಿ ನೀವು ಎಷ್ಟು ಚಿನ್ನ (Gold Limit at Home) ಇಡಬಹುದು? ಆದಾಯ ಇಲಾಖೆಯ ನಿಯಮ ಏನು ಎಂಬುದನ್ನು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ.
ಚಿನ್ನದ ಮೇಲೆ ಹೂಡಿಕೆ ಮಾಡುವುದು ಮುಂದಿನ ದಿನಕ್ಕೆ ಅಂದರೆ ಭವಿಷ್ಯಕ್ಕೆ ಉತ್ತಮವೇ ಆಗಿದೆ. ಆದರೆ ಮನೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಹಣ ಇಟ್ಟರೆ ಆದಾಯ ಇಲಾಖೆ ನಿಮ್ಮನ್ನು ಪ್ರಶ್ನೆ ಕೂಡ ಮಾಡಲಿದೆ.
ನಿಮ್ಮ ಅದೃಷ್ಟ ನೆಟ್ಟಗಿದ್ದು 1 ಕೋಟಿ ಲಾಟರಿ ಹೊಡೆದ್ರೆ, ನೀವು ಎಷ್ಟು ಟ್ಯಾಕ್ಸ್ ಕಟ್ಟಬೇಕಾಗುತ್ತೆ ಗೊತ್ತಾ?
ಎಷ್ಟು ಚಿನ್ನ ಇಡಲು ಅವಕಾಶ ಇದೆ
*ಮನೆಯಲ್ಲಿ ಅವಿವಾಹಿತ ಮಹಿಳೆಯು 250 ಗ್ರಾಂ ಚಿನ್ನವನ್ನು (Gold Jewellery) ಮನೆಯಲ್ಲಿ ಇಡಲು ಅವಕಾಶ ಇರಲಿದೆ.
*ಇನ್ನು ವಿವಾಹಿತ ವ್ಯಕ್ತಿ 100 ಗ್ರಾಂ ಚಿನ್ನವನ್ನು ಮಾತ್ರ ಇಡಬಹುದು.
*ವಿವಾಹಿತ ಮಹಿಳೆ 500 ಗ್ರಾಂ ಚಿನ್ನವನ್ನು ಮನೆಯಲ್ಲಿ ಇಡಬಹುದು.
*ವಿವಾಹಿತ ಪುರುಷ ಮನೆಯಲ್ಲಿ 100 ಗ್ರಾಂ ಚಿನ್ನ ಇಡಬಹುದು.
ಕೇವಲ 850 ರೂಪಾಯಿ ಇಂದ ಈ ಬ್ಯುಸಿನೆಸ್ ಶುರು ಮಾಡಿ, ಪ್ರತಿದಿನ 1000 ರೂಪಾಯಿ ಆದಾಯ ಗ್ಯಾರೆಂಟಿ!
ಚಿನ್ನವನ್ನು ಮನೆಯಲ್ಲಿ ಇಡಲು ತೆರಿಗೆ ಇದೆಯೇ?
ಮನೆಯಲ್ಲಿ ಚಿನ್ನವನ್ನು ಇಡಲು ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಆದರೆ ಚಿನ್ನವನ್ನು ಮಾರಾಟ ಮಾಡಿದರೆ ಅದರ ಮೇಲೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಚಿನ್ನವನ್ನು 3 ವರ್ಷಗಳ ಕಾಲ ಇಟ್ಟುಕೊಂಡ ನಂತರ ಮಾರಾಟ ಮಾಡಿದರೆ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಗೆ ಒಳಗಾಗಿರುತ್ತದೆ. ಆದರೆ ಮನೆಯಲ್ಲಿ ಇಡಲು ಯಾವುದೇ ರೀತಿಯ ತೆರಿಗೆ ಇಲ್ಲ
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ರೆ ಏನಾಗುತ್ತೆ! ಅದಕ್ಕೂ ಇದಿಯಾ ಲಿಮಿಟ್? ಇಲ್ಲಿದೆ ಬಿಗ್ ಅಪ್ಡೇಟ್
ಇನ್ನು ಚಿನ್ನದ ಮೇಲೆ ಇತರ ರೀತಿಯಲ್ಲಿ ತೆರಿಗೆಯನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಅಂದರೆ ಚಿನ್ನದ ಬಿಸ್ಕತ್, ನಾಣ್ಯಗಳು ಮತ್ತು ಆಭರಣಗಳ ಖರೀದಿಗೆ ಶೇಕಡಾ 3 ರವರೆಗೆ GST ಇರಲಿದ್ದು ಚಿನ್ನದ ತಯಾರಿಕೆ ಶುಲ್ಕದಲ್ಲಿ ಶೇಕಡಾ 5 ರವರೆಗೆ GST ಪಾವತಿ ಮಾಡಬೇಕು.
ಹಾಗಾಗಿ ಲೆಕ್ಕಕ್ಕಿಂತ ಹೆಚ್ಚು ಚಿನ್ನ ಇಡುವ ಮೊದಲು ಜಾಗೃತರಾಗಿರಿ. ಅಧಿಕಾರಿಗಳು ದಾಳಿ ಮಾಡಲು ಬಂದಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಚಿನ್ನ ಇದ್ದರೆ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.
Have more gold than the limit! Do you know how much gold you can keep at Home