Business News

ನಿಮ್ಮ ಅದೃಷ್ಟ ನೆಟ್ಟಗಿದ್ದು 1 ಕೋಟಿ ಲಾಟರಿ ಹೊಡೆದ್ರೆ, ನೀವು ಎಷ್ಟು ಟ್ಯಾಕ್ಸ್ ಕಟ್ಟಬೇಕಾಗುತ್ತೆ ಗೊತ್ತಾ?

ಕೆಲವರಿಗೆ ಅದೃಷ್ಟ ಯಾವಾಗ ಕೈ ಹಿಡಿಯುತ್ತದೆ ಎಂದು ಗೊತ್ತಿರುವುದಿಲ್ಲ. ನಾವು ಊಹೆಯೇ ಮಾಡದ ಸಮಯದಲ್ಲಿ, ನಾವು ಅಂದುಕೊಂಡಿರದ ರೀತಿಯಲ್ಲಿ ಅದೃಷ್ಟ ನಮ್ಮ ಕೈಹಿಡಿಯುತ್ತದೆ.

ಹಲವು ಸಾರಿ ನಾವು ಲಾಟರಿ ಟಿಕೆಟ್ ಪಡೆದು, ಲಕ್ಷಾಂತರ ರೂಪಾಯಿ, ಕೋಟ್ಯಾಂತರ ರೂಪಾಯಿ ಗೆದ್ದವರ ಬಗ್ಗೆ ಕೇಳಿರುತ್ತೇವೆ, ಮಾಧ್ಯಮಗಳಲ್ಲಿ ಅಂಥವರನ್ನು ನೋಡಿರುತ್ತೇವೆ. ಆದರೆ ಅವರು ಗೆದ್ದ ಮೊತ್ತಕ್ಕೆ ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್ ಪಾವತಿ (Tax Pay) ಮಾಡಬೇಕು ಗೊತ್ತಾ?

Do you know how much tax you have to pay if you win 1 crore lottery

ಹೌದು, ಹೀಗೆ ಯಾವುದೇ ಅದೃಷ್ಟದ ಮೂಲಕ ಆದಾಯ ಪಡೆದರೆ, ಅದಕ್ಕಾಗಿ ನೀವು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಬೇಕು. ನೀವು ತೆರಿಗೆಯ ರೂಪದಲ್ಲಿ ಪಾವತಿ ಮಾಡುವ ಮೊತ್ತ ಕಡಿಮೆ ಅಂತು ಇರುವುದಿಲ್ಲ.

ಕೇವಲ 850 ರೂಪಾಯಿ ಇಂದ ಈ ಬ್ಯುಸಿನೆಸ್ ಶುರು ಮಾಡಿ, ಪ್ರತಿದಿನ 1000 ರೂಪಾಯಿ ಆದಾಯ ಗ್ಯಾರೆಂಟಿ!

ಹಾಗಾಗಿ ಎಷ್ಟೇ ದೊಡ್ಡ ಮೊತ್ತ ಗೆದ್ದರೂ ಪೂರ್ತಿ ಹಣ ನಿಮ್ಮ ಕೈಗೆ ಬರುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿದ್ದರೆ ನಿಮಗೆ ಒಳ್ಳೆಯದು. ಇಂದು 1 ಕೋಟಿ ಲಾಟರಿ ಗೆದ್ದರೆ, ಅದಕ್ಕೆ ಎಷ್ಟು ಟ್ಯಾಕ್ಸ್ ಕಟ್ಟಬೇಕು ಎಂದು ತಿಳಿದುಕೊಳ್ಳೋಣ..

ಲಾಟರಿ ಟಿಕೆಟ್ ಕೊಳ್ಳುವುದು ಭಾರತದ ಎಲ್ಲಾ ರಾಜ್ಯದ ಕೆಲವು ಜನರಲ್ಲಿ ಇರುವ ಅಭ್ಯಾಸ ಎಂದರೆ ತಪ್ಪಲ್ಲ. ಕೆಲವರು ತಮ್ಮ ಅದೃಷ್ಟದ ಮೇಲೆ ನಂಬಿಕೆ ಇಟ್ಟು ಲಾಟರಿ ಟಿಕೆಟ್ (Lottery Ticket) ಖರೀದಿ ಮಾಡುತ್ತಾರೆ.

ಖರೀದಿ ಮಾಡುವ ಅಷ್ಟೂ ಜನರಲ್ಲಿ ಲಾಟರಿ ಭಾಗ್ಯ ಸಿಗುವುದು ಒಬ್ಬರಿಗೋ, ಇಬ್ಬರಿಗೋ ಮಾತ್ರ. ಹಾಗೆಯೇ ಲಾಟರಿ ಟಿಕೆಟ್ ಖರೀದಿ ಮಾಡಿ, ಪ್ರೈಜ್ ಬರದೇ ತಲೆಕೆಡಿಸಿಕೊಂಡವರು ಕೂಡ ಇದ್ದಾರೆ. ಇಂಥ ಉದಾಹರಣೆಗಳು ಕೂಡ ಬಹಳಷ್ಟು ಇರುವ ಕಾರಣ ಜನರು ಹುಷಾರಾಗಿ ಇರಬೇಕು.

ಆದಾಯ ತೆರಿಗೆ ಎನ್ನುವ ಕಾನೂನು ನಮ್ಮ ದೇಶದಲ್ಲಿ ಜಾರಿಗೆ ಬಂದಿದ್ದು 1961ರಲ್ಲಿ, ಒಂದು ವೇಳೆ ನೀವು ಲಾಟರಿಯಲ್ಲಿ ಹಣ ಗೆದ್ದರು ಕೂಡ, ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಇದು ಕಡ್ಡಾಯದ ನಿಯಮ ಆಗಿದೆ. 1961ರಲ್ಲಿ ಜಾರಿಗೆ ಬಂದ ಸೆಕ್ಷನ್ 194B ಅಡಿಯಲ್ಲಿ ಲಾಟರಿಯಲ್ಲಿ ಗೆದ್ದ ಹಣವನ್ನು ಗೆದ್ದವರಿಗೆ ಕೊಡುವುದಕ್ಕಿಂತ ಮೊದಲು ಅದರಿಂದ TDS ಅನ್ನು ಪಾವತಿ ಮಾಡಬೇಕು, ಇಲ್ಲಿ ನೀವು ಪಾವತಿ ಮಾಡಬೇಕಾದ ಟಿಡಿಎಸ್ 30% ಆಗಿರುತ್ತದೆ. ಇದೊಂದೇ ಅಲ್ಲದೇ ಇನ್ನು ಹೆಚ್ಚುವರಿ ಶುಲ್ಕಗಳನ್ನು ನೀವು ಪಾವತಿ ಮಾಡಬೇಕು.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ರೆ ಏನಾಗುತ್ತೆ! ಅದಕ್ಕೂ ಇದಿಯಾ ಲಿಮಿಟ್? ಇಲ್ಲಿದೆ ಬಿಗ್ ಅಪ್ಡೇಟ್

ಹೌದು, ಟಿಡಿಎಸ್ ಜೊತೆಗೆ ಹೆಚ್ಚಿನ ಶುಲ್ಕ ಮತ್ತು ಸೆಸ್ ಇವೆರಡನ್ನೂ ಸೇರಿಸಿ 31.2% ವರೆಗು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಲಾಟರಿ ಗೆದ್ದವರು ಈ ತೆರಿಗೆ ಪಾವತಿ ಮಾಡಲೇಬೇಕು, ಇದರ ಬಗ್ಗೆ ವಕೀಲರಿಂದ ಕಾನೂನಾತ್ಮಕವಾಗಿ ಸಲಹೆಗಳನ್ನು ಕೆಲವರು ಪಡೆದುಕೊಳ್ಳುತ್ತಾರೆ.

ಇತ್ತೀಚೆಗೆ ಖಾಸಗಿ ಆಪ್ ನಲ್ಲಿ (App) 49 ರೂಪಾಯಿ ಖರ್ಚು ಮಾಡಿದ ವ್ಯಕ್ತಿಯೊಬ್ಬ, 1.5 ಕೋಟಿ ಹಣ ಗೆದ್ದಿದ್ದ. ಆತನು ತೆರಿಗೆ ಪಾವತಿ ಮಾಡಿದ್ದನ್ನು ಇಲ್ಲಿ ನೆನೆಯಬಹುದು.

Do you know how much tax you have to pay if you win 1 crore lottery

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories