ಕಳೆದು ಹೋದ ಫೋನ್ ನಿಂದ PhonePe, Google Pay ನಿಷ್ಕ್ರಿಯ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಇತ್ತೀಚಿನ ದಿನದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಾಗುತ್ತಿದ್ದು ಹೊಸ ಮೊಬೈಲ್ ಬ್ರ್ಯಾಂಡ್ ಫೋನ್ ಕೂಡ ಆಗಾಗ ಮಾರುಕಟ್ಟೆಗೆ ಆಗಮನ ಆಗುತ್ತಲೇ ಇರುತ್ತದೆ. ಮೊಬೈಲ್ ಒಮ್ಮೆ ನೀವು ಬಳಸಿದರು ಬಳಿಕ ಸೆಕೆಂಡ್ ಹ್ಯಾಂಡ್ ಗೆ ಅದನ್ನು ಸೇಲ್ ಮಾಡಬಹುದು. ಅಂತಹ ಸಂದರ್ಭದಲ್ಲಿ ಎಲ್ಲವನ್ನು ಕೂಡ ಫ್ಲ್ತಾಶ್ ಮಾಡುವ ಆಯ್ಕೆಇರಲಿದೆ..
ಆದರೆ ನಿಮಗೆ ಅರಿಯದಂತೆ ಯಾರೋ ಕಳ್ಳರು ನಿಮ್ಮ ಮೊಬೈಲ್ ಎಗರಿಸಿದರೆ ಆಗ ನಿಮಗೆ ಯಾವೊಂದು ತುರ್ತು ಕ್ರಮ ಕೂಡ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಬಹುದು. ಮೊಬೈಲ್ ಎಲ್ಲೊ ಮಿಸ್ (Mobile Lost) ಆಗಿದೆ ಅಥವಾ ಯಾರೊ ನಿಮ್ಮ ಮೊಬೈಲ್ ಕದ್ದಿದ್ದಾರೆ ಎಂದರೆ ಕೂಡಲೇ ನೀವು UPI ಸೇವೆ ರದ್ದು ಮಾಡುವುದನ್ನು ಮರೆಯಬಾರದು.
ಒಂದೇ ಫೋನ್ ನಂಬರ್, ಎರಡು ಬ್ಯಾಂಕ್ ಅಕೌಂಟ್ ಇರುವ ಎಲ್ಲರಿಗೂ ಇನ್ಮುಂದೆ ಹೊಸ ನಿಯಮ!
ಇಂದು ಬಹುತೇಕ ವ್ಯವಹಾರ ಡಿಜಿಟಲ್ ಮಯವಾದ ಕಾರಣ ಹಣ ಲಪಟಾಯಿಸುವ ಆನ್ಲೈನ್ ಕಳ್ಳರಿಗೂ ಬಹಳ ಸುಲಭ ಕೆಲಸವಾಗುತ್ತಿದೆ. ಮೊಬೈಲ್ ಕಳೆದು ಹೋಗಿದ್ದನ್ನು ನೀವು ಪೊಲೀಸ್ ಕಂಪ್ಲೆಂಟ್ ಕೊಡುವ ಮುನ್ನವೇ ಮೊದಲೇ ನಿಮ್ಮ ಬ್ಯಾಂಕ್ ಖಾತೆಯ (Bank Account) ಮೊತ್ತ ಖಾಲಿ ಆಗಲಿದೆ.
ಹಾಗಾಗಿ ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ತತ್ ಕ್ಷಣವೇ ಕೆಲವೊಂದು ಕ್ರಮ ನೀವು ಕೈಗೊಂಡರೆ ಬ್ಯಾಂಕ್ ಖಾತೆ ಹಣ ಕಳ್ಳ ಕಾಕರ ಪಾಲಾಗುವುದನ್ನು ತಪ್ಪಿಸಬಹುದು.
ವಿವಿಧ ಅಪ್ಲಿಕೇಶನ್ ಬಳಕೆ
ರಾಷ್ಟ್ರದಲ್ಲಿ NPCI ನಿಂದ ವಿವಿಧ ಅಪ್ಲಿಕೇಶನ್ ಅನ್ನು ನೀಡಲಾಗಿದ್ದು ಅದನ್ನು ಜನರು ನಿತ್ಯ ಜೀವನದಲ್ಲಿ ಬಳಕೆ ಮಾಡುತ್ತಲೇ ಇದ್ದಾರೆ. ತಮ್ಮ ಸ್ಮಾರ್ಟ್ ಫೋನಿನಲ್ಲಿ UPI ನ ಪಾವತಿಯ ಉದ್ದೇಶಕ್ಕಾಗಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇತರ ಆ್ಯಪ್ ಬಳಕೆ ಮಾಡುತ್ತಿದ್ದಾರೆ.
ಇದರಿಂದ ಸಮಸ್ಯೆ ಇಲ್ಲದೆ ಸುಲಭವಾಗಿ ಹಣ ವರ್ಗಾಯಿಸಲು ಅನುಕೂಲ ಆದರೂ ಕೂಡ ಆನ್ಲೈನ್ ವಂಚನೆಗೆ ಕೂಡ ತುತ್ತಾಗುವ ಪ್ರಮಾಣ ಅಧಿಕ ವಾಗುತ್ತಿದೆ. ಮೊಬೈಲ್ ಕಳೆದುಹೋದಾಗ ನೀವು ಅಗತ್ಯವಾಗಿ UPI ಸೇವೆ ನಿಷ್ಕ್ರಿಯ ಮಾಡಲೇಬೇಕು.
ನಿಮ್ಮ ಹೆಂಡತಿ ಹೆಸರಲ್ಲಿ ಹೋಮ್ ಲೋನ್ ತಗೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಭಾರೀ ಬೆನಿಫಿಟ್
ಈ ವಿಧಾನ ಬಳಸಿ
*ಫೋನ್ ಪೇ ಬಳಕೆದಾರರು ಕಳೆದು ಹೋದ ಮೊಬೈಲ್ ನಿಂದ UPI ಸೇವೆ ನಿಷ್ಕ್ರಿಯ ಮಾಡಲು 02268727374, 08068727374 ಈ ನಂಬರ್ ಡಯಲ್ ಮಾಡಿ ಅಲ್ಲಿನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಅವರ ಬಳಿ ಮಾಹಿತಿನೀಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಹೇಳಿ ಎಲ್ಲ ಕೆಲವು ಮಾಹಿತಿ ಬ್ಯಾಂಕ್ ಡೀಟೆಲ್ಸ್ ನೀಡಿದ್ದ ಬಳಿಕ ನಿಮ್ಮ PhonePe ನಿಷ್ಕ್ರಿಯ ಮಾಡಲಾಗುವುದು.
*ಪೇಟಿಎಂ ಬಳಕೆದಾರರು ಮಿಸ್ ಆದ ಮೊಬೈಲ್ ನಲ್ಲಿ ಯುಪಿಐ ನಿಷ್ಕ್ರಿಯ ಮಾಡಲಿಕ್ಕೆ 01204456456 ಕರೆ ಮಾಡಬೇಕು. ನಿಮ್ಮ ಪೇಟಿಎಂ ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಮೂಲಕ ಲಾಗ್ ಔಟ್ ಆಗಲು ಸಾಧ್ಯವಿದೆ. ನಿಮ್ಮ ಮೊಬೈಲ್ ಮಿಸ್ ಆದ ಬಗ್ಗೆ ವರದಿ ನೀಡಿದರೆ ಪೇಟಿಎಂ ಸೇವೆ ನಿಷ್ಕ್ರಿಯ ಆಗಲಿದೆ.
ಮನೆಯಲ್ಲಿ ಮಿತಿಗಿಂತ ಜಾಸ್ತಿ ಚಿನ್ನ ಇಟ್ಟಿದ್ದೀರಾ! ಅಷ್ಟಕ್ಕೂ ನೀವು ಎಷ್ಟು ಚಿನ್ನ ಇಡಬಹುದು ಗೊತ್ತಾ?
*ನೀವು ಗೂಗಲ್ ಪೇ ಬಳಕೆದಾರರು ಆಗಿದ್ದ ಸಂದರ್ಭದಲ್ಲಿ ಮೊದಲು ಬೇರೊಂದು ಫೋನಿನ ಮೂಲಕ 18004190157 ಈ ನಂಬರ್ ಡಯಲ್ ಮಾಡಿ ಅಲ್ಲಿನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಅವರ ಬಳಿ ಮಾಹಿತಿನೀಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಹೇಳಿ ಎಲ್ಲ ಖಾತರಿ ಆದ ಬಳಿಕ ನಿಮ್ಮ ಗೂಗಲ್ ಪೇ ನಿಷ್ಕ್ರಿಯ ಆಗಲಿದೆ. ಈ ವಿಧಾನ ಅನುಸರಿಸಿದರೆ ನಿಮ್ಮ ಹಣ ಕಳ್ಳರು ವಶಪಡಿಸಿಕೊಳ್ಳುವುದು ತಪ್ಪಲಿದೆ.
How to disable PhonePe, Google Pay from a lost phone, Here is the information