ಪೋಸ್ಟ್ ಆಫೀಸ್ ಖಾತೆಗೆ ಮೋದಿ ಹಾಕ್ತಾರಂತೆ ₹3000, ಹೊಸ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು!
ಪೋಸ್ಟ್ ಆಫೀಸ್ ನಲ್ಲಿ ಸಹ ಬ್ಯಾಂಕ್ ನಂತೆ FD ಯೋಜನೆ (Fixed Deposit), ಸಾಲದ ಯೋಜನೆ (Loan Scheme), ಉಳಿತಾಯ ಯೋಜನೆಗಳು (Savings Scheme), ಪಿಂಚಣಿ ಯೋಜನೆ (Pension Scheme) ಇದ್ದು ಸರಿಯಾದ ಮಾಹಿತಿ ಪಡೆದು ಪ್ರಾರಂಭಿಸಿ.
ಕೆಲವೊಮ್ಮೆ ನಮಗೆ ಅರಿವೇ ಇಲ್ಲದ ಹಾಗೆ ಕೆಲವು ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದೇ ರೀತಿ ಇತ್ತೀಚೆಗೆ ಪಿಎಮ್ ಮೋದಿ ಅವರ ಬಗ್ಗೆ ಒಂದು ಸುದ್ದಿ ವೈರಲ್ ಆಗಿದೆ. ಪೋಸ್ಟ್ ಆಫೀಸ್ ನಲ್ಲಿ ಖಾತೆ (Post Office Account) ತೆರೆಯುವ ಎಲ್ಲಾ ಮಹಿಳೆಯರಿಗೆ ಅವರ ಅಕೌಂಟ್ ಗೆ 3000 ರೂಪಾಯಿಗಳನ್ನು ಮೋದಿ ಅವರು ಜಮೆ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು, ಇದರಿಂದ ಎಲ್ಲಾ ಮಹಿಳೆಯರು ಅಕೌಂಟ್ ಓಪನ್ ಮಾಡಲು ಪೋಸ್ಟ್ ಆಫೀಸ್ ನತ್ತ ಧಾವಿಸಿ ಬರುತ್ತಿದ್ದಾರೆ.
ಹೌದು, ಕಳೆದ ಒಂದೆರಡು ತಿಂಗಳುಗಳಿಂದ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಲು ಬರುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಬಂದ ಮಹಿಳೆಯರು ಹೊಸದಾಗಿ ಖಾತೆ ತೆರೆಯಬೇಕು ಎನ್ನುತ್ತಿದ್ದು, ಮಹಿಳೆಯರ ಖಾತೆಗೆ ಮೋದಿ ಅವರು ಹಣ ಹಾಕುತ್ತಾರೆ ಎಂದು ಹೇಳುತ್ತಿದ್ದು, ಮೋದಿ ಅವರು ಹಣ ಹಾಕಲಿರುವ ಆ ಯೋಜನೆ ಯಾವುದು ಎಂದು ಪೋಸ್ಟ್ ಆಫೀಸ್ ಸಿಬ್ಬಂದಿಗಳನ್ನೇ ಕೇಳುತ್ತಿದ್ದಾರೆ.
ಕೃಷಿ ಭೂಮಿ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್! ಬಂಪರ್ ಕೊಡುಗೆ
ಅಸಲಿ ವಿಷಯ ಏನು ಎಂದರೆ, ಮಹಿಳೆಯರು ಕೇಳುತ್ತಿರುವ ಮೋದಿ ಸರ್ಕಾರ ಜಾರಿಗೆ ತಂದಿರುವ ಆ ಯೋಜನೆ ಯಾವುದು ಎಂದು ಪೋಸ್ಟ್ ಆಫೀಸ್ ಸಿಬ್ಬಂದಿಗಳಿಗೂ ಕೂಡ ಗೊತ್ತಿಲ್ಲ.
ಹೌದು, ಕೇಂದ್ರ ಸರ್ಕಾರವು ಮಹಿಳೆಯರಿಗೆ ಖಾತೆ ತೆರೆಯಲು ಹೇಳಿ, ಅದಕ್ಕೆ 3000 ರೂಪಾಯಿಗಳ ವರ್ಗಾವಣೆ (Money Deposit) ಮಾಡಲಾಗುತ್ತದೆ ಎಂದು ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ. ಇದು ಶುದ್ಧ ಸುಳ್ಳಾಗಿದ್ದು, ಗಾಳಿ ಸುದ್ದಿಯ ರೀತಿಯಲ್ಲಿ ಹರಡಿರುವ ಸುದ್ದಿ ಆಗಿದೆ.
ಆದರೆ ಮಹಿಳೆಯರು ಇನ್ಯಾರೋ ಹೇಳಿದ ಮಾತು ಕೇಳಿ, ಸರಿಯಾಗಿ ತಿಳಿದುಕೊಳ್ಳದೆ, ಹೊಸದಾಗಿ ಖಾತೆ ತೆರೆಯಬೇಕು ಎಂದು ಪೋಸ್ಟ್ ಆಫೀಸ್ ಗೆ ಬರುತ್ತಿದ್ದು, ಅವರನ್ನು ಕಂಟ್ರೋಲ್ ಮಾಡುವುದೇ ಪೋಸ್ಟ್ ಆಫೀಸ್ ಸಿಬ್ಬಂದಿಗಳಿಗೆ ಕಷ್ಟವಾಗಿದೆ.
ಕಳೆದು ಹೋದ ಫೋನ್ ನಿಂದ PhonePe, Google Pay ನಿಷ್ಕ್ರಿಯ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಪೋಸ್ಟ್ ಆಫೀಸ್ ಸಿಬ್ಬಂದಿಗಳು ಹೇಳುವ ಹಾಗೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಖಾತೆ ತೆರೆಯಲು ಧಾವಿಸಿ ಬರುತ್ತಿದ್ದಾರೆ. ಅವರ ಖಾತೆಗೆ ₹3000 ಹಾಕುವಂಥ ಯಾವುದೇ ಯೋಜನೆಯನ್ನು ಜಾರಿಗೆ ತರಲಾಗಿಲ್ಲ ಎಂದು ಅರ್ಥ ಮಾಡಿಸುವ ಪ್ರಯತ್ನ ಕೂಡ ವ್ಯರ್ಥವಾಗುತ್ತಿದೆ ಎಂದಿದ್ದು, ಹೊಸದಾಗಿ ಖಾತೆ ತೆರೆಯಲು ಬಂದ ಮಹಿಳೆಯರನ್ನು ಸಿಬ್ಬಂದಿಗಳು ವಾಪಸ್ ಅಂತೂ ಕಳಿಸಿಲ್ಲ. ಮಿನಿಮಮ್ ಮೊತ್ತವನ್ನು ನೀಡಿ ಖಾತೆ ತೆರೆಯಬೇಕು ಎಂದು ಮಹಿಳೆಯರಿಗೆ ಹೇಳಿದ್ದಾರೆ..
ಒಂದೇ ಫೋನ್ ನಂಬರ್, ಎರಡು ಬ್ಯಾಂಕ್ ಅಕೌಂಟ್ ಇರುವ ಎಲ್ಲರಿಗೂ ಇನ್ಮುಂದೆ ಹೊಸ ನಿಯಮ!
ಇತ್ತ ಮಹಿಳೆಯರ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು. ಒಂದು ವಿಷಯ ನಮಗೆ ಗೊತ್ತಾಯ್ತು ಎಂದರೆ, ಅದು ಸರೀನಾ, ತಪ್ಪಾ, ಅಂಥದ್ದೊಂದು ಯೋಜನೆ ಜಾರಿಗೆ ಬಂದಿದ್ಯಾ? ಮೋದಿ ಅವರ ಹೊಸ ಯೋಜನೆ ಯಾವುದು? ಇದೆಲ್ಲವನ್ನು ತಿಳಿದುಕೊಂಡು ಬಳಿಕ ಪೋಸ್ಟ್ ಆಫೀಸ್ ಗೆ ಖಾತೆ ತೆರೆಯಲು ಹೋಗಬೇಕು.
ಪೂರ್ತಿ ತಿಳಿಯದೇ, ನೇರವಾಗಿ ಪೋಸ್ಟ್ ಆಫೀಸ್ ಗೆ ಹೋಗಿ, ಸಮಯ ಮತ್ತು ಹಣ ಎರಡನ್ನು ಕೂಡ ಅನಾವಶ್ಯಕವಾಗಿ ಖರ್ಚು ಮಾಡಿಕೊಂಡಿದ್ದಾರೆ. ಇನ್ನು ಪೋಸ್ಟ್ ಆಫೀಸ್ ನಲ್ಲಿ ಸಹ ಬ್ಯಾಂಕ್ ನಂತೆ FD ಯೋಜನೆ (Fixed Deposit), ಸಾಲದ ಯೋಜನೆ (Loan Scheme), ಉಳಿತಾಯ ಯೋಜನೆಗಳು (Savings Scheme), ಪಿಂಚಣಿ ಯೋಜನೆ (Pension Scheme) ಇದ್ದು ಸರಿಯಾದ ಮಾಹಿತಿ ಪಡೆದು ಪ್ರಾರಂಭಿಸಿ.
ನಿಮ್ಮ ಹೆಂಡತಿ ಹೆಸರಲ್ಲಿ ಹೋಮ್ ಲೋನ್ ತಗೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಭಾರೀ ಬೆನಿಫಿಟ್
Women crowd to open post office accounts