ಗೋಲ್ಡ್ ಲೋನ್ ಪಡೆಯೋಕ್ಕಿಂತ ಮೊದಲು ತಿಳಿಯಬೇಕಾದ ವಿಚಾರ! ಬ್ಯಾಂಕುಗಳಿಂದ ಬಿಗ್ ಅಪ್ಡೇಟ್

Story Highlights

Gold Loan : ಮನೆಯಲ್ಲಿ ಬಂಗಾರ ಇದ್ದರೆ, ಅದನ್ನು ಒತ್ತೆ ಇಟ್ಟು ಲೋನ್ (Loan) ಪಡೆಯಬಹುದು, ಬ್ಯಾಂಕ್ ಗಳು (Banks), ಕೆಲವು ಖಾಸಗಿ ಸಂಸ್ಥೆಗಳು ಚಿನ್ನ ತೆಗೆದುಕೊಂಡು ಲೋನ್ ಕೊಡುತ್ತಾರೆ. ಆದರೆ ಗೋಲ್ಡ್ ಲೋನ್ (Gold Loan) ಪಡೆಯುವುದಕ್ಕಿಂತ ಮೊದಲು ನೀವು ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು.

Gold Loan : ನಮ್ಮ ಭಾರತ ದೇಶದಲ್ಲಿ ಚಿನ್ನ ಖರೀದಿ ಮಾಡುವುದು ಒಂದು ಆಭರಣ, ಧರಿಸಿದರೆ ಸುಂದರವಾಗಿ ಕಾಣುತ್ತೇವೆ ಎನ್ನುವುದಕ್ಕೆ ಮಾತ್ರವಲ್ಲ. ಚಿನ್ನವನ್ನು ಕಷ್ಟಕಾಲದಲ್ಲಿ ಬಳಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹೆಚ್ಚಿನ ಜನರು ಚಿನ್ನ ಖರೀದಿ ಮಾಡುತ್ತಾರೆ.

ಅದರಲ್ಲೂ ಮಧ್ಯಮ ವರ್ಗದ ಜನರು ಚಿನ್ನವನ್ನು ಇನ್ವೆಸ್ಟ್ಮೆಂಟ್ ರೀತಿಯಲ್ಲೇ ಖರೀದಿ ಮಾಡುತ್ತಾರೆ. ಹಣ ಇದ್ದರೆ ಖರ್ಚಾಗುತ್ತದೆ, ಬಂಗಾರದ ಆಭರಣಗಳ (Gold Jewellery) ಮೇಲೆ ಇನ್ವೆಸ್ಟ್ ಮಾಡಿದರೆ, ಮುಂದೊಂದು ದಿನ ಕಷ್ಟಕಾಲಕ್ಕೆ ಸಹಾಯ ಆಗುತ್ತದೆ ಎಂದು ಅವರ ಆಲೋಚನೆ ಇರುತ್ತದೆ.

ಹಾಗೆಯೇ ನಮಗೆ ಕಷ್ಟಕಾಲ ಯಾವಾಗ ಬರುತ್ತದೆ ಎಂದು ಕೂಡ ಹೇಳೋಕೆ ಆಗೋದಿಲ್ಲ, ಊಹಿಸಲು ಕೂಡ ಕಷ್ಟವೇ. ಸಮಯ ಸರಿ ಇಲ್ಲದೇ ಯಾವಾಗ ಬೇಕಾದರೂ ದಿಢೀರ್ ಎಂದು ಆರ್ಥಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

ತವರಿನ ಆಸ್ತಿಯಲ್ಲಿ ಪಾಲು ಕೇಳೋ ಮಹಿಳೆಯರಿಗೆ ಹೊಸ ರೂಲ್ಸ್! ಇಂತಹ ಸಮಯದಲ್ಲಿ ಆಸ್ತಿ ಸಿಗೋದಿಲ್ಲ

ಇಂಥ ಸಮಯದಲ್ಲಿ ಮನೆಯಲ್ಲಿ ಬಂಗಾರ ಇದ್ದರೆ, ಅದನ್ನು ಒತ್ತೆ ಇಟ್ಟು ಲೋನ್ (Loan) ಪಡೆಯಬಹುದು, ಬ್ಯಾಂಕ್ ಗಳು (Banks), ಕೆಲವು ಖಾಸಗಿ ಸಂಸ್ಥೆಗಳು ಚಿನ್ನ ತೆಗೆದುಕೊಂಡು ಲೋನ್ ಕೊಡುತ್ತಾರೆ. ಆದರೆ ಗೋಲ್ಡ್ ಲೋನ್ (Gold Loan) ಪಡೆಯುವುದಕ್ಕಿಂತ ಮೊದಲು ನೀವು ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು.

ಮುಖ್ಯವಾಗಿ ನೀವು ಲೋನ್ ಪಡೆಯಬೇಕು ಎಂದುಕೊಂಡಿರುವ ಚಿನ್ನದ ಮೌಲ್ಯ ಎಷ್ಟು ಎನ್ನುವುದನ್ನು ನೀವು ತಿಳಿಯಬೇಕು. ಗೋಲ್ಡ್ ಲೋನ್ ವಿಚಾರವಾಗಿ ಮೌಲ್ಯಕ್ಕಿಂತ ಕಡಿಮೆ ಬೆಲೆಯನ್ನು ಚಿನ್ನಕ್ಕೆ ಕೊಡಲಾಗುತ್ತಿದೆ ಎನ್ನುವ ಒಂದು ದೂರನ್ನು ಹಲವು ಜನರು RBI ಗೆ ನೀಡಿದ್ದು, ಹಾಗಾಗಿ ಈ ಬಗ್ಗೆ ಜನರು ಕೂಡ ತಿಳಿದುಕೊಳ್ಳುವುದು ಒಳ್ಳೆಯದು.

ನಿಮ್ಮ ಬಳಿ ಇರುವ ಚಿನ್ನದ ಮೌಲ್ಯ ತಿಳಿಯಬೇಕು ಎಂದರೆ, ತನಿಷ್ಕ್, ಕಲ್ಯಾಣ್ ಜ್ಯುವೆಲರ್ಸ್ ಸೇರಿದಂತೆ ಇನ್ನು ಅನೇಕ ಸಂಸ್ಥೆಗಳು ಗೋಲ್ಡ್ ವ್ಯಾಲ್ಯೂವೇಷನ್ ಮಾಡಿ, ನಿಮಗೆ ರಿಸಿಪ್ಟ್ ಕೊಡುತ್ತಾರೆ. ಇದನ್ನು ನೀವು ಪಡೆಯಬಹುದು.

1934ರ ಸೈಕಲ್ ಬಿಲ್ ವೈರಲ್! ಆಗ ಬೆಲೆ ಎಷ್ಟಿತ್ತು ಗೊತ್ತಾ? ಆಗಿನ ಕಾಲವೇ ಚೆನ್ನಾಗಿತ್ತು ಅಂತೀರ!

gold loanಯಾವುದಾದರೂ ಫೈನಾನ್ಸ್ ಕಂಪನಿ ಇಂದ ನೀವು ಸಾಲ ಪಡೆಯುತ್ತಿದ್ದೀರಿ ಎಂದಾದರೆ, ಗೋಲ್ಡ್ ರೇಟ್ (Gold Rate) ಬಗ್ಗೆ ನಿಮಗೆ ಸರಿಯಾದ ಕ್ಲಾರಿಟಿ ಇರಬೇಕು, ನಿಮ್ಮ ಚಿನ್ನಕ್ಕೆ ಸರಿಯಾದ ರೇಟ್ ಅನ್ನೇ ಅವರು ಕೊಡಬೇಕು.

ಒಂದು ವೇಳೆ ಕಡಿಮೆ ಕೊಡುತ್ತಿದ್ದಾರೆ ಎಂದರೆ, ಅದರಿಂದ ನಿಮಗೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದನ್ನ ಅರ್ಥ ಮಾಡಿಕೊಳ್ಳಿ. ಹಾಗೆಯೇ ಈ ರೀತಿ ಕಡಿಮೆ ಬೆಲೆ ಕೊಡುವವರು ಬಡ್ಡಿ ಮತ್ತು ದಂಡದ ವಿಚಾರದಲ್ಲಿ ಕೂಡ ಹೆಚ್ಚು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಹುಷಾರಾಗಿರಿ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ

ಗೋಲ್ಡ್ ಲೋನ್ ಅನ್ನು ಬ್ಯಾಂಕ್ ಇಂದ NBFC ಇಂದ ಪಡೆದರೆ ಅದರ ಮೇಲೆ ವಿಧಿಸುವ ಬಡ್ಡಿದರದಲ್ಲಿ ವ್ಯತ್ಯಾಸ ಇರುತ್ತದೆ. ಸರ್ಕಾರಿ ಬ್ಯಾಂಕ್ ಗಳಲ್ಲಿ 8.65% ಇಂದ 11% ವರೆಗು ಬಡ್ಡಿ ವಿಧಿಸಲಾಗುತ್ತದೆ.

ಆದರೆ ಆಕ್ಸಿಸ್ ಹಾಗೂ HDFC ಬ್ಯಾಂಕ್ ಗಳಲ್ಲಿ 17% ವರೆಗು ಬಡ್ಡಿ ವಹಿಸಲಾಗುತ್ತದೆ. NBFC ಗಳಲ್ಲಿ ಗೋಲ್ಡ್ ಲೋನ್ ಮೇಲೆ 36% ವರೆಗು ಬಡ್ಡಿ ವಿಧಿಸಲಾಗುತ್ತದೆ. ಇದೆಲ್ಲವನ್ನು ಚೆಕ್ ಮಾಡಿಕೊಂಡು, ಎಲ್ಲಿ ಗೋಲ್ಡ್ ಲೋನ್ ಪಡೆಯುತ್ತೀರಿ ಎನ್ನುವುದನ್ನು ಡಿಸೈಡ್ ಮಾಡಿ.

Things to know before getting a gold loan, Big update from banks

Related Stories