ತವರಿನ ಆಸ್ತಿಯಲ್ಲಿ ಪಾಲು ಕೇಳೋ ಮಹಿಳೆಯರಿಗೆ ಹೊಸ ರೂಲ್ಸ್! ಇಂತಹ ಸಮಯದಲ್ಲಿ ಆಸ್ತಿ ಸಿಗೋದಿಲ್ಲ

Story Highlights

ಕೆಲವು ಸಂದರ್ಭಗಳಲ್ಲಿ ಮಹಿಳೆಯರಿಗೆ ತವರಿನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಅಂಥ ಸಂದರ್ಭಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳುವದು ಒಳ್ಳೆಯದು.

ನಮ್ಮ ದೇಶದಲ್ಲಿ ಆಸ್ತಿ (Property), ಆಸ್ತಿ ಹೆಂಚಿಕೆಗೆ ಸಂಬಂಧಿಸಿದ ಹಾಗೆ ಸಾಕಷ್ಟು ನಿಯಮಗಳಿವೆ. ಅವುಗಳನ್ನು ತಿಳಿದುಕೊಂಡರೆ ಜನರಿಗೆ ಒಳ್ಳೆಯದು ಎಂದು ಹೇಳಿದರೆ ತಪ್ಪಲ್ಲ. ನಿಯಮಗಳನ್ನು ಮೊದಲೇ ತಿಳಿದಿದ್ದರೆ ಆಸ್ತಿ ಹಂಚಿಕೆ ವೇಳೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಈಗ ಆಸ್ತಿ ಹಂಚುವ ಬಗ್ಗೆ ಹೇಳುವುದಾದರೆ, ಮೊದಲೆಲ್ಲಾ ಮನೆಯ ಗಂಡು ಮಕ್ಕಳಿಗೆ ಮಾತ್ರ ಆಸ್ತಿಯಲ್ಲಿ ಪಾಲು (Shares in Property) ಸಿಗುತ್ತಿತ್ತು, ಆದರೆ ಈಗ ಮೊದಲಿನ ಹಾಗಿಲ್ಲ, ಆಸ್ತಿ ಹಂಚಿಕೆ ನಿಯಮಗಳಲ್ಲಿ ಬದಲಾವಣೆ ತಂದ ಬಳಿಕ ಮನೆಯ ಹೆಣ್ಣುಮಗಳಿಗೆ ಕೂಡ ಆಸ್ತಿಯಲ್ಲಿ ಪಾಲು ನೀಡಬೇಕು.

ಕುಟುಂಬದ ಆಸ್ತಿ ಅಥವಾ ಪೂರ್ವಜರ ಆಸ್ತಿ ಎನ್ನುವ ವಿಷಯ ಬಂದರೆ, ಆಸ್ತಿಯ ಮೇಲೆ ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕು ಹೆಣ್ಣುಮಕ್ಕಳಿಗೆ ಕೂಡ ಇರುತ್ತದೆ. ಹಾಗಾಗಿ ಮಹಿಳೆಯರಿಗೆ ಕೂಡ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎನ್ನುವುದು ಕಾನೂನಿನ ನಿಯಮ ಆಗಿರುತ್ತದೆ.

ಹಾಗಿದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಮಹಿಳೆಯರಿಗೆ ತವರಿನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಅಂಥ ಸಂದರ್ಭಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳುವದು ಒಳ್ಳೆಯದು. ಹಾಗಿದ್ದಲ್ಲಿ ಯಾವಾಗ ಮಹಿಳೆಯರಿಗೆ ತವರಿನ ಆಸ್ತಿ ಸಿಗೋದಿಲ್ಲ? ತಿಳಿಯೋಣ..

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ

ಇಂಥ ಸಮಯದಲ್ಲಿ ಮಹಿಳೆಯರಿಗೆ ತವರಿನ ಆಸ್ತಿ ಸಿಗೋದಿಲ್ಲ:

*ತವರು ಮನೆಯ ಆಸ್ತಿ ತಂದೆಯ ಸ್ವಯಾರ್ಜಿತ ಆಗಿದ್ದು, ಆಸ್ತಿ ಭಾಗ ಮಾಡದೇ ತಂದೆ ವಿಧಿವಶರಾದರೆ, ಅಂಥ ಸಮಯದಲ್ಲಿ ಮನೆಯ ಗಂಡುಮಗ ಮತ್ತು ಹೆಣ್ಣುಮಗಳು ಇಬ್ಬರಿಗೂ ಕೂಡ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ.

*ಅದು ತಂದೆಯ ಸ್ವಯಾರ್ಜಿತ ಆಸ್ತಿ ಆಗಿರುವುದರಿಂದ ಅದನ್ನು ಪಾಲು ಮಾಡುವುದು, ಯಾರಿಗೆ ಎಷ್ಟು ನೀಡಬೇಕು ಎಂದು ಆಸ್ತಿಯನ್ನು ಹಂಚಿಕೆ ಮಾಡುವುದು ತಂದೆಯ ನಿರ್ಧಾರ ಆಗಿರುತ್ತದೆ. ಮಕ್ಕಳು ಅದನ್ನು ಪ್ರಶ್ನೆ ಮಾಡುವ ಹಾಗಿಲ್ಲ.

*ತಂದೆ ಮರಣದ ಮೊದಲು ಆಸ್ತಿಯನ್ನು ಯಾರಿಗಾದರು ಬರೆದಿದ್ದರೆ, ದಾನ ಕೊಟ್ಟಿದ್ದರೆ, ವಿಲ್ ಮಾಡಿದ್ದರೆ ಅಂಥ ಆಸ್ತಿಯ ಮೇಲೆ ಹೆಣ್ಣುಮಕ್ಕಳಿಗೆ ಹಕ್ಕು ಇರುವುದಿಲ್ಲ.

ಪೋಸ್ಟ್ ಆಫೀಸ್ ಖಾತೆಗೆ ಮೋದಿ ಹಾಕ್ತಾರಂತೆ ₹3000, ಹೊಸ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು!

Property Rules*ತಂದೆ ತಮ್ಮ ಆಸ್ತಿಯನ್ನು ಯಾವುದೇ ಥರ ವರ್ಗಾವಣೆ ಮಾಡಿದ್ದರೆ, ಹೆಣ್ಣುಮಗಳಿಗೆ ಹಕ್ಕು ಇರುವುದಿಲ್ಲ.

*ಅದಾಗಲೇ ರಿಲೀಸ್ ಡೀಡ್ ಬಿಡುಗಡೆ ಮಾಡಿಬಿಟ್ಟಿದ್ದರೆ, ಅದಕ್ಕೆ ಸೈನ್ ಕೂಡ ಮಾಡಿದ್ದರೆ, ಅಂಥ ಆಸ್ತಿಯ ಮೇಲೆ ಮಹಿಳೆಗೆ ಹಕ್ಕು ಇರುವುದಿಲ್ಲ. ಆಸ್ತಿ ಪಾಲು ಆಗುವಾಗ, ತನಗೆ ಆಸ್ತಿ ಬೇಡ ಎಂದು ಬರೆದುಕೊಡುವುದೇ ಬಿಡುಗಡೆ ಪತ್ರ.

*ಆಸ್ತಿ ಬೇಡ ಎಂದು ಮಾತಲ್ಲಿ ಹೇಳಿ, ಒಂದಷ್ಟು ವರ್ಷಗಳ ನಂತರ ಹಣಕ್ಕಾಗಿ ಆಸ್ತಿ ಬೇಕು ಎಂದು ಹೇಳುವ ಹಾಗಿಲ್ಲ. ಒಂದು ವೇಳೆ ಮನೆಯವರು ಬೇಕೆಂದೇ ಆಸ್ತಿ ಕೊಡದೇ ಇದ್ದಾಗ ಕಾನೂನಿನ ಮೊರೆ ಹೋಗಬಹುದು.

ಒಂದೇ ಫೋನ್ ನಂಬರ್, ಎರಡು ಬ್ಯಾಂಕ್ ಅಕೌಂಟ್ ಇರುವ ಎಲ್ಲರಿಗೂ ಇನ್ಮುಂದೆ ಹೊಸ ನಿಯಮ!

*2005ರಲ್ಲಿ ಕಾನೂನು ತಿದ್ದುಪಡಿ ಆಗುವುದಕ್ಕಿಂತ ಮೊದಲೇ ಆಸ್ತಿ ಹಂಚಿಕೆ ಆಗಿದ್ದರೆ, ಅದರಲ್ಲಿ ತಮಗೆ ಪಾಲು ಕೊಡಬೇಕು ಎಂದು ಮಹಿಳೆಯರು ಕಾನೂನಿನ ಮೊರೆ ಹೋಗಲು ಸಾಧ್ಯವಿಲ್ಲ.

*ಒಂದು ವೇಳೆ ಗಂಡನ ಆಸ್ತಿ ಇದ್ದಾಗ, ಗಂಡ ತೀರಿಹೋದರೆ ಮಾತ್ರ ಆ ಆಸ್ತಿಯ ಮೇಲೆ ಮಹಿಳೆಗೆ ಹಕ್ಕು ಬರುತ್ತದೆ. ಗಂಡ ಬದುಕಿರುವಾಗ ಆತನ ಆಸ್ತಿಯ ಮೇಲೆ ಮಹಿಳೆಗೆ ಹಕ್ಕು ಇರುವುದಿಲ್ಲ.

ಈ ರೀತಿಯಾಗಿ, ಇಂಥ ಸಂದರ್ಭಗಳಲ್ಲಿ ಮಹಿಳೆಗೆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ. ಕಾನೂನಿನ (Property Law) ಈ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡರೆ, ಮಹಿಳೆಯರು ಎಚ್ಚೆತ್ತುಕೊಳ್ಳಬಬಹುದು.

New rules for women to ask for a share in property

Related Stories