Business News

ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹೊಸ ಕಾನೂನು, ಬಾಡಿಗೆ ಮನೆ ಓನರ್ ಗಳಿಗೂ ಇದು ಅನ್ವಯ!

ಕೆಲಸಕ್ಕಾಗಿ ಬೆಂಗಳೂರಿನಂಥ ದೊಡ್ಡ ಊರಿಗೆ ರಾಜ್ಯದಿಂದ, ಹೊರರಾಜ್ಯದಿಂದ ಬಹಳಷ್ಟು ಜನ ಬರುತ್ತಾರೆ. ಅಂಥವರು ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುತ್ತಾರೆ, ನಮಗೆಲ್ಲ ಗೊತ್ತಿರೋ ಹಾಗೆ ಕೆಲವು ಬಾಡಿಗೆ ಮನೆ ಓನರ್ ಗಳು ಕಿರಿಕ್ ಮಾಡೋದು ಜಾಸ್ತಿ, ಹೊತ್ತು ಘಳಿಗೆ ಇಲ್ಲದೇ ಮನೆಗೆ ಬರುತ್ತಾರೆ, ಬೇರೆ ಸಮಸ್ಯೆಗಳನ್ನು ತಂದೊಡ್ಡುತ್ತಾರೆ.

ಹೀಗೆಲ್ಲಾ ಆಗೋದು ನಿಮಗೂ ಕಿರಿಕಿರಿ ಉಂಟು ಮಾಡುತ್ತದೆ. ಹಾಗಾಗಿ ಬಾಡಿಗೆದಾರರು ಅವರಿಗಾಗಿ ಇರುವ ಕಾನೂನಿನ ನಿಯಮಗಳನ್ನು ತಿಳಿದುಕೊಳ್ಳಬೇಕು. ಆಗ ನಿಮಗೆ ಇಂಥ ಸಮಸ್ಯೆಗಳು ಉಂಟಾಗುವುದಿಲ್ಲ. ಹಾಗಿದ್ದಲ್ಲಿ ಆ ಕಾನೂನುಗಳು ಏನೇನು ಎಂದು ತಿಳಿದುಕೊಳ್ಳೋಣ..

New Rules for people living in rented house, also applicable for rented house owners

*ಮೊದಲನೆಯದಾಗಿ ಮನೆ ಬಾಡಿಗೆ ಕಟ್ಟೋಕೆ ತಡ ಆಗಿದೆ ಎಂದು ಓನರ್ ಗಳು ಮನೆಯ ವಿದ್ಯುತ್ (Electricity) ಮತ್ತು ನೀರನ್ನು (Water) ನಿಲ್ಲಿಸುವ ಹಾಗಿಲ್ಲ. ಇದು ನಿಮ್ಮ privacy ವಿಚಾರ ಆಗಿದ್ದು, ಬಾಡಿಗೆ ಕೊಡೋದು ತಡ ಆಗಿದೆ ಎಂದು ಓನರ್ ಗಳು ಈ ರೀತಿ ಮಾಡುವ ಹಾಗಿಲ್ಲ.

ಎಷ್ಟೇ ಪ್ರಯತ್ನಪಟ್ಟರೂ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗ್ತಿಲ್ವಾ? ಬನ್ನಿ ಈ ರೀತಿ ಟ್ರೈ ಮಾಡಿ ಸಾಕು!

ಜೊತೆಗೆ ನಿಮ್ಮ ಮನೆಗೆ ಯಾವಾಗೆಂದರೆ ಹಾಗೆ ಬರುವ ಹಾಗಿಲ್ಲ, ಮನೆಗೆ ಬರುವ 24 ಗಂಟೆಯ ಮೊದಲು ಬಾಡಿಗೆದಾರರಿಗೆ ವಿಷಯ ತಿಳಿಸಿರಬೇಕು. ಇದು ಪ್ರಮುಖವಾದ ನಿಯಮ ಆಗಿದೆ.

*ಒಂದು ಮನೆಯಲ್ಲಿ ನೀವು ಬಾಡಿಗೆಗೆ ಇದ್ದೀರಾ ಅಂದರೆ ಈ ಹಕ್ಕುಗಳು ನಿಮಗೆ ಮಾತ್ರವಲ್ಲ, ನಿಮ್ಮ ಕುಟುಂಬಕ್ಕೂ ಸಮನಾದ ಹಕ್ಕು ಇರುತ್ತದೆ.

*ಮನೆಯೊಂದೇ ಅಲ್ಲ, ಸ್ವಿಮಿಂಗ್ ಪೂಲ್, ಹೆಲ್ತ್ ಕ್ಲಬ್ ಇವುಗಳ ಬಾಡಿಗೆ ವಿಷಯದಲ್ಲಿ ಕೂಡ ಇಂಥದ್ದೇ ನಿಯಮಗಳು ಇರುತ್ತದೆ. ಹಾಗಾಗಿ ಬಾಡಿಗೆಗೆ ಹೋಗುವುದಕ್ಕಿಂತ ಮೊದಲು ಬಾಡಿಗೆಗೆ ಸಂಬಂಧಿಸಿದ, ಕಾನೂನು, ನಿಯಮಗಳು, ಹಕ್ಕುಗಳು ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಅಗ್ರಿಮೆಂಟ್ ನಲ್ಲಿ ನಿಯಮಗಳನ್ನು ಸೇರಿಸುವುದು ಉತ್ತಮ.

*ಮದುವೆಯಾಗದೆ ಇರುವವರಿಗೆ ಮನೆ ಕೊಡುವ ಹಾಗಿಲ್ಲ, ಸೊಸೈಟಿ ಸವಲತ್ತುಗಳನ್ನು ಬಳಸುವುದು ಇದೆಲ್ಲದಕ್ಕೂ ಈ ನಿಯಮ ಹೊಂದಿಕೊಳ್ಳುತ್ತದೆ. ಅದೇ ಜಾಗದಲ್ಲಿ 1 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಇದ್ದೀರಿ ಎಂದರೆ, ಅಗ್ರಿಮೆಂಟ್ ಮಾಡಿಸಿಕೊಳ್ಳುವುದು ಒಳ್ಳೆಯದು.

ಗೋಲ್ಡ್ ಲೋನ್ ಪಡೆಯೋಕ್ಕಿಂತ ಮೊದಲು ತಿಳಿಯಬೇಕಾದ ವಿಚಾರ! ಬ್ಯಾಂಕುಗಳಿಂದ ಬಿಗ್ ಅಪ್ಡೇಟ್

Rent House*ನೀವು ಬಾಡಿಗೆ ಕಟ್ಟುವ ಮೊತ್ತ ಎಷ್ಟಿದೆಯೋ, ಅದರ 50% ನಷ್ಟು ಮೊತ್ತವನ್ನು ಮಾತ್ರ Maintenance Charges ಆಗಿ ಪಡೆಯಬಹುದು, ಅದಕ್ಕಿಂತ ಜಾಸ್ತಿ ಮೊತ್ತವನ್ನು ಪಡೆಯುವ ಹಾಗಿಲ್ಲ, ಅದು ಕಾನೂನಿಗೆ ವಿರುದ್ಧವಾಗಿದ್ದು, ನೀವು ಇದರ ವಿರುದ್ಧ ಪ್ರತಿಭಟಿಸಬಹುದು. ಓನರ್ ಗಳು Maintenance ಹಣವನ್ನು ಸ್ವಂತಕ್ಕೆ ಬಳಸುವ ಹಾಗಿಲ್ಲ, ಬೇರೆ ಶುಲ್ಕ ಕಟ್ಟಿ ಎಂದು ಬಾಡಿಗೆದಾರರಿಗೆ ಹೇಳುವ ಹಾಗಿಲ್ಲ.

*ಬಾಡಿಗೆ ಜಾಸ್ತಿ ಮಾಡಬೇಕು ಎಂದರೆ, 3 ತಿಂಗಳ ಮೊದಲೇ ಬಾಡಿಗೆದಾರರಿಗೆ ಸೂಚನೆ ನೀಡಬೇಕು. ಬಾಡಿಗೆ ಹೆಚ್ಚಳದ ನಿಯಮ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ

*ಮಹಾರಾಷ್ಟ್ರ ರಾಜ್ಯದಲ್ಲಿ 1 ವರ್ಷದ ಅವಧಿಗೆ 24% ಬಾಡಿಗೆ ಮಾತ್ರ ಜಾಸ್ತಿ ಮಾಡಬಹುದು, ದೆಹಲಿಯಲ್ಲಿ 3 ವರ್ಷಕ್ಕೆ 10% ಮಾತ್ರ ಬಾಡಿಗೆ ಜಾಸ್ತಿ ಮಾಡಬಹುದು. Resident Welfare Association (RWA) ನ ಪ್ರಕಾರ ಬಾಡಿಗೆಗೆ ಇರುವ ವ್ಯಕ್ತಿಯ ಸಂಪರ್ಕ ಮಾಡಬೇಕು ಎಂದರೆ, ಅದು ಓನರ್ ನ ಮೂಲಕ ಹೋಗಬೇಕು. ಬಾಡಿಗೆಗೆ ಇರುವವರಿಗೆ ತೊಂದರೆ ಕೊಟ್ಟರೆ, ಅದು ಓನರ್ ಗು ಕೊಟ್ಟ ಹಾಗೆ, ಹಾಗಾಗಿ ಮಾಲೀಕರು ಕೂಡ ಕ್ರಮ ತೆಗೆದುಕೊಳ್ಳಬಹುದು.

*ಬೆಂಗಳೂರಿನಲ್ಲಿ ಒಂದು ವರ್ಷಕ್ಕೆ 5 to 10% ಬಾಡಿಗೆ ಜಾಸ್ತಿ ಮಾಡಬಹುದು. ಇದನ್ನು ರೆಂಟ್ ಅಗ್ರಿಮೆಂಟ್ ನಲ್ಲಿ ತಿಳಿಸಲಾಗಿರುತ್ತದೆ. ಯಾರು ಕೂಡ RWA ಜೊತೆಗೆ ಇಷ್ಟಬಂದ ಹಾಗೆ ನಡೆದುಕೊಳ್ಳಲು ಆಗುವುದಿಲ್ಲ.

New Rules for people living in rented house, also applicable for rented house owners

Our Whatsapp Channel is Live Now 👇

Whatsapp Channel

Related Stories