ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿದ್ದೀರಾ? ಬಂತು ಬಡವರ ಕನಸು ನನಸು ಮಾಡೋ ಹೊಸ ಯೋಜನೆ!
ಎಲ್ಲರೂ ದುಡಿಯುವುದು ಹೊಟ್ಟೆಪಾಡಿಗಾಗಿ ಮತ್ತು ತಮಗಾಗಿ ಒಂದು ಸ್ವಂತ ಸೂರು (Own House) ಮಾಡಿಕೊಳ್ಳಬೇಕು ಎನ್ನುವ ಸಲುವಾಗಿ. ಬಹಳಷ್ಟು ಜನರು ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಗಳಲ್ಲಿ (Rent House) ವಾಸ ಮಾಡುತ್ತಾರೆ. ಮಿಡ್ಲ್ ಕ್ಲಾಸ್ ಗಳಲ್ಲಿ ಬಾಡಿಗೆ ಮನೆಯ ವಾಸ ಹೆಚ್ಚು ಎಂದರೆ ತಪ್ಪಲ್ಲ.
ಮಿಡ್ಲ್ ಕ್ಲಾಸ್ ಫ್ಯಾಮಿಲಿಗಳ ಕನಸು ತಮಗಾಗಿ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದಾಗಿರುತ್ತವೆ. ಆದರೆ ಈಗ ಒಂದು ಮನೆ ಕಟ್ಟಬೇಕು ಎಂದರೆ ಎಷ್ಟು ಹಣ ಖರ್ಚಾಗುತ್ತದೆ ಎನ್ನುವುದು ಗೊತ್ತೇ ಇದೆ..
ಹಾಗಾಗಿ ಅಷ್ಟು ಖರ್ಚನ್ನು ಭರಿಸುವುದು ಸಾಧ್ಯವಾಗದೇ ಬಹಳಷ್ಟು ಮಿಡ್ಲ್ ಕ್ಲಾಸ್ ಜನರು ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಿರುತ್ತಾರೆ. ಬ್ಯಾಂಕ್ ಗಳಲ್ಲಿ ಹೋಮ್ ಲೋನ್ (Bank Home Loan) ಸಿಕ್ಕರೂ ಕೂಡ, ಅದಕ್ಕೆ ಪಾವತಿ ಮಾಡಬೇಕಾದ ಬಡ್ಡಿ, ತಿಂಗಳ ಇಎಂಐ, ದೀರ್ಘಕಾಲ ಅಂದರೆ 15, 20, 25 ವರ್ಷಗಳ ಕಾಲ ಬಡ್ಡಿ ಕಟ್ಟಬೇಕಾದ ಪರಿಸ್ಥಿತಿ ಇದೆಲ್ಲವೂ ಇರುವುದರಿಂದ ಹೆಚ್ಚಿನ ಜನ ಹೋಮ್ ಲೋನ್ (Home Loan) ಪಡೆಯಲು ಹಿಂದೇಟು ಹಾಕಿ, ತಮ್ಮ ಕನಸನ್ನು ಕನಸಾಗಿಯೇ ಇರುವುದಕ್ಕೆ ಬಿಟ್ಟು ಬಿಡುತ್ತಾರೆ.
ಫೋನ್ ಪೇ ಅಕೌಂಟ್ ಇದ್ದೋರಿಗೆ 5 ಲಕ್ಷ ಪರ್ಸನಲ್ ಲೋನ್ ಸಿಗ್ತಾಯಿದೆ, ಬೇಕಾದ್ರೆ ನೀವೂ ತಗೋಬಹುದು!
ಆದರೆ ಬಡತನದಲ್ಲಿದ್ದು, ಯಾರೆಲ್ಲಾ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಕನಸು ಕಾಣುತ್ತಿದ್ದಾರೋ ಅಂಥವರಿಗೆ ಕೇಂದ್ರ ಸರ್ಕಾರವು ಪಿಎಮ್ ಆವಾಸ್ ಯೋಜನೆಯನ್ನ ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಜನರು ಸರ್ಕಾರದ ಸಹಾಯ ಪಡೆದು, ಕಡಿಮೆ ಮೊತ್ತದಲ್ಲಿ ಮನೆ ಕಟ್ಟಬಹುದು, ಸ್ವಂತ ಮನೆ ಕಟ್ಟಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಬಹುದು. ಇದು ಸ್ವಂತ ಮಾಡಿಕೊಳ್ಳಬೇಕು ಎನ್ನುವ ಬಡವರ ಕನಸನ್ನು ನನಸು ಮಾಡಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಗಿದೆ.
15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ನೀವು ಬಾಡಿಗೆ ಮನೆಯಲ್ಲಿದ್ದು, ಸ್ವಂತ ಮನೆ ಹೊಂದುವ ಕನಸು ಕಾಣುತ್ತಿದ್ದರೆ, ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ. ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ.
ಪಿಎಮ್ ಆವಾಸ್ ಯೋಜನೆಯ ಮೂಲಕ ಸ್ವಂತ ಮನೆ ಮಾಡಿಕೊಳ್ಳಲು ನಿಮ್ಮ ಮನೆಯವರ ವಾರ್ಷಿಕ ಆದಾಯ 3 ರಿಂದ 18 ಲಕ್ಷಗಳ ಒಳಗಿರಬೇಕು. ಹಾಗೆಯೇ ನಮ್ಮ ದೇಶದ ಬೇರೆ ಎಲ್ಲಿ ಕೂಡ ನಿಮಗೆ ಸ್ವಂತ ಮನೆ (Own House) ಇರಬಾರದು. ನಿಮ್ಮ ಮನೆಯ ಬೇರೆ ಯಾರು ಕೂಡ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿರಬಾರದು.
ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹೊಸ ಕಾನೂನು, ಬಾಡಿಗೆ ಮನೆ ಓನರ್ ಗಳಿಗೂ ಇದು ಅನ್ವಯ!
ಈ ಎಲ್ಲಾ ಕಂಡೀಷನ್ ಗಳು ಪಾಸ್ ಆದರೆ, ನಿಮಗೆ ಸ್ವಂತ ಮನೆ ಖಂಡಿತವಾಗಿ ಸರ್ಕಾರದ ಕಡೆಯಿಂದ ಸಿಗುತ್ತದೆ. ಪಿಎಮ್ ಆವಾಸ್ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಕಡೆಯಿಂದ ಅತೀಕಡಿಮೆ ಬಡ್ಡಿಗೆ ಸಾಲ (Low Interest Loan) ಸಿಗಲಿದ್ದು, 1.5 ಲಕ್ಷ ರೂಪಾಯಿಗಳವರೆಗು ಸಹಾಯಧನ ಕೂಡ ಸಿಗುತ್ತದೆ.
ಮುಂಬರುವ ವರ್ಷಗಳಲ್ಲಿ ಸಹಾಯಧನದ ಮೊತ್ತ ಇನ್ನು ಜಾಸ್ತಿ ಆಗಬಹುದು ಎಂದು ಸರ್ಕಾರ ತಿಳಿಸಿದೆ. ಸ್ವಂತ ಮನೆಯ ಕನಸು ಹೊಂದಿರುವವರು ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
get a Home loan from the government Scheme at a very low interest rate To buy your own house
Our Whatsapp Channel is Live Now 👇