ಈಗ ನಮ್ಮ ಭಾರತ ದೇಶ ಡಿಜಿಟಲ್ ಇಂಡಿಯಾ ಆಗಿದೆ. ನಮ್ಮ ದೇಶದ ಜನರು ಹಣಕಾಸಿನ ವಹಿವಾಟನ್ನು ಆನ್ಲೈನ್ ಮೂಲಕ ಸುಲಭವಾಗಿ ಮಾಡುತ್ತಿದ್ದಾರೆ. ಒಂದು ಬ್ಯಾಂಕ್ ಅಕೌಂಟ್ ಇಂದ ಇನ್ನೊಂದು ಬ್ಯಾಂಕ್ ಅಕೌಂಟ್ ಗೆ (Bank Account) ಹಣ ವರ್ಗಾವಣೆ ಮಾಡಲು ಈಗ ನೀವು ಬ್ಯಾಂಕ್ ಗೆ ಹೋಗಬೇಕು ಎನ್ನುವ ನಿಯಮವಿಲ್ಲ.

ನಿಮ್ಮ ಬಳಿ ಒಂದು ಫೋನ್ ಇದ್ದರೆ ಸಾಕು, ಅದನ್ನು ಬಳಸಿ ಸುಲಭವಾಗಿ ಹಣ ವರ್ಗಾವಣೆ (Money Transfer) ಮಾಡಬಹುದು. ಹೆಚ್ಚಿನ ಜನರು ಇದನ್ನೇ ಮಾಡುತ್ತಿದ್ದಾರೆ.

No ATM card needed, Google Pay is enough to withdraw money

ಹೌದು, ನಮ್ಮಲ್ಲಿ ಈಗ ಯುಪಿಐ ಅಪ್ಲಿಕೇಶನ್ ಗಳನ್ನು (UPI App) ಬಳಸಿ ಹಣ ವರ್ಗಾವಣೆ ಮಾಡಲಾಗುತ್ತದೆ. ಮತ್ತೊಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡುವುದು, ಆನ್ಲೈನ್ ಶಾಪಿಂಗ್ (Online Shopping) ಮಾಡುವುದು, ಸಿನಿಮಾ ಟಿಕೆಟ್ ಬುಕ್ (Book Cinema Ticket) ಮಾಡುವುದು, ಟ್ರಾವೆಲ್ಲಿಂಗ್ ಟಿಕೆಟ್ ಬುಕ್ ಮಾಡುವುದು, ಇದೆಲ್ಲವೂ ಕೂಡ ಈಗ ಬಹಳ ಸುಲಭ.

ಪಿಯುಸಿ ಪಾಸ್ ಆಗಿದ್ದು ಬಿಪಿಎಲ್ ಕಾರ್ಡ್ ಇರೋ ಬಡ ಮಕ್ಕಳಿಗೆ ಸಿಗಲಿದೆ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ

ಗೂಗಲ್ ಪೇ (Google Pay), ಫೋನ್ ಪೇ (PhonePe), ಪೇಟಿಎಂ (Paytm) ಈ ಎಲ್ಲಾ ಅಪ್ಲಿಕೇಶನ್ ಗಳ ಮೂಲಕ ನಿಮ್ಮ ಫೋನ್ ಇಂದಲೇ ಈ ವಹಿವಾಟುಗಳನ್ನು ನಡೆಸಬಹುದು. ಎಲ್ಲವೂ ಈಗ ಬೆರಳ ತುದಿಯಲ್ಲೇ ಇದೆ.

ಯುಪಿಐ ಆಪ್ ಗಳ ಪೈಕಿ, ಹೆಚ್ಚಿನ ಜನರು ಗೂಗಲ್ ಪೇ ಬಳಸುತ್ತಾರೆ ಎಂದರೆ ತಪ್ಪಲ್ಲ. ಹೌದು, ಇದು ಸುಲಭವಾಗಿ ಬಳಕೆ ಮಾಡಬಹುದಾದ ಆಪ್ ಆಗಿದೆ. ಹಾಗಾಗಿ ಹೆಚ್ಚಿನ ಜನರು ಗೂಗಲ್ ಪೇ ಬಳಕೆ ಮಾಡುತ್ತಾರೆ.

ಇದೀಗ ನೀವು ಗೂಗಲ್ ಪೇ ಆಪ್ ಬಳಸಿ ಹಣ ವರ್ಗಾವಣೆ ಮಾಡುವುದು ಮಾತ್ರವಲ್ಲ, ಇನ್ನುಮುಂದೆ ಗೂಗಲ್ ಪೇ ಆಪ್ ಇಂದ ಹಣವನ್ನು ವಿತ್ ಡ್ರಾ ಕೂಡ ಮಾಡಬಹುದು. ಅದು ಹೇಗೆ? ಇಂದು ನಿಮಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು ಪ್ರತಿ ತಿಂಗಳು ಇಎಂಐ ಕಂತು ಕಟ್ಟುತ್ತಿರುವವರಿಗೆ ಸಿಹಿಸುದ್ದಿ!

Bank ATMಗೂಗಲ್ ಪೇ ಇಂದ ಹಣ ವಿತ್ ಡ್ರಾ:

*ಈಗ ಎಟಿಎಂ ಗಳು ಕೂಡ ಡಿಜಿಟಲೈಸ್ ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಎಟಿಎಂ ಗಳಲ್ಲಿ (ATM) ನಿಮ್ಮ ಗೂಗಲ್ ಪೇ ಮೂಲಕ ಹಣ ವಿತ್ ಡ್ರಾ ಮಾಡಬಹುದು. ATM ನಲ್ಲಿ UPI Cash Withdrawal ಎನ್ನುವ ಆಯ್ಕೆ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

*ನಂತರ ನೀವು ಎಷ್ಟು ಹಣ ವಿತ್ ಡ್ರಾ ಮಾಡಬೇಕು ಎನ್ನುವುದನ್ನು ಎಂಟರ್ ಮಾಡಿ.

*ಈಗ ATM ಸ್ಕ್ರೀನ್ ಮೇಲೆ UPI Scanner Code ಬರುತ್ತದೆ, ಅದನ್ನು ನಿಮ್ಮ ಫೋನ್ ನಲ್ಲಿ ಗೂಗಲ್ ಪೇ ಆಪ್ ಓಪನ್ ಮಾಡಿ, ಸ್ಕ್ಯಾನ್ ಮಾಡಿ.

*ಈಗ ಯಾವ ಬ್ಯಾಂಕ್ ಅಕೌಂಟ್ ಇಂದ ಹಣ ವಿತ್ ಡ್ರಾ ಮಾಡುತ್ತೀರಾ ಎನ್ನುವುದನ್ನು ಸೆಲೆಕ್ಟ್ ಮಾಡಿ

ಫೋನ್ ಪೇ ಅಕೌಂಟ್ ಇದ್ದೋರಿಗೆ 5 ಲಕ್ಷ ಪರ್ಸನಲ್ ಲೋನ್ ಸಿಗ್ತಾಯಿದೆ, ಬೇಕಾದ್ರೆ ನೀವೂ ತಗೋಬಹುದು!

*ಬಳಿಕ ಪಿನ್ ನಂಬರ್ ಎಂಟರ್ ಮಾಡಿ, ಹಣವನ್ನು ವಿತ್ ಡ್ರಾ ಮಾಡಿ

ಇನ್ನುಮುಂದೆ ಎಟಿಎಂ ಮೂಲಕ ಹಣವನ್ನು ವಿತ್ ಡ್ರಾ ಮಾಡಲು ಎಟಿಎಂ ಕಾರ್ಡ್ ಬೇಕಾಗುವುದಿಲ್ಲ, ನಿಮ್ಮ ಸ್ಮಾರ್ಟ್ ಫೋನ್ ನಿಮ್ಮ ಜೊತೆಗಿದ್ದರೆ ಸಾಕು, ಗೂಗಲ್ ಪೇ ಆಪ್ ಮೂಲಕ ಸ್ಕ್ಯಾನ್ ಮಾಡಿ, ಹಣವನ್ನು ವಿತ್ ಡ್ರಾ ಮಾಡಬಹುದು.

ಪ್ರಸ್ತುತ ಕೆಲವು ಬ್ಯಾಂಕ್ ಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ಈ ಸೌಲಭ್ಯ ಸಿಗಲಿದೆ. ಇನ್ನುಮುಂದೆ ಹಣಕಾಸಿನ ವಹಿವಾಟು ಇನ್ನು ಸುಲಭ ಆಗಲಿರುವುದರಲ್ಲಿ ಯಾವುದೇ ಸಂಶಯವಿಲ್ಲ.

No ATM card needed, Google Pay is enough to withdraw money