Business News

ಬ್ಯಾಂಕ್ ಅಕೌಂಟ್ ನಲ್ಲಿ ನಾಮಿನಿ ಹೆಸರು ಇಲ್ಲದಾಗ ಖಾತೆ ಇದ್ದ ವ್ಯಕ್ತಿ ಸತ್ತರೆ ಹಣ ಏನಾಗುತ್ತೆ ಗೊತ್ತಾ?

ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ನೀವು ಸೇವಿಂಗ್ಸ್ ಅಕೌಂಟ್ (Savings Account) ಅಥವಾ ಇನ್ಯಾವುದೇ ಖಾತೆ ತೆರೆಯುತ್ತೀರಿ ಎಂದರೆ, ಅಪ್ಲಿಕೇಶನ್ ಫಾರ್ಮ್ ನಲ್ಲಿ ನಿಮ್ಮ ಖಾತೆಗೆ ನಾಮಿನಿಯ ಹೆಸರನ್ನು ಸೂಚಿಸಬೇಕು.

ಇದು ಕಟ್ಟುನಿಟ್ಟಿನ ನಿಯಮ ಆಗಿರುತ್ತದೆ, ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡುವಾಗ ಸರಿಯಾಗಿ ಯೋಚಿಸಿ, ನಾಮಿನಿಯ (Nominee) ಹೆಸರನ್ನು ಬರೆಯಬೇಕು. ಅದರಿಂದ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಬಹುದು..

If there is no nominee name in the bank account, what happens to the money if the person holding the account dies

ಇಂದು ನಾವು ಪೋಸ್ಟ್ ಆಫೀಸ್ ನಲ್ಲಿ (Post Office Account) ತೆರೆಯುವ ಅಕೌಂಟ್ ಗಳ ಬಗ್ಗೆ ಮಾತನಾಡುವುದಾದರೆ, ಒಂದು ವೇಳೆ ದಿಢೀರ್ ಎಂದು ಖಾತೆ ತೆರೆದಿರುವ ವ್ಯಕ್ತಿ ಮರಣ ಹೊಂದಿದರೆ, ಆತನ ಅಕೌಂಟ್ ನಲ್ಲಿ ಇರುವ ಹಣ ನಾಮಿನಿ ಆಗಿರುವ ವ್ಯಕ್ತಿಗೆ ಸೇರುತ್ತದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸಂಕಷ್ಟ! ಇಲ್ಲಿದೆ ಹೊಸ ನಿಯಮದ ಬಿಗ್ ಅಪ್ಡೇಟ್

ನಾಮಿನಿ ಆದವರು ಸುಲಭವಾಗಿ ಆ ಹಣವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಕಾರಣಾಂತರಗಳಿಂದ ನಾಮಿನಿಯ ಹೆಸರನ್ನೇ ಸೂಚಿಸಿಲ್ಲದಾಗ ಆಗ ಹಣ ಯಾರಿಗೆ ಸಿಗುತ್ತದೆ? ಯಾರು ಅದನ್ನು ಪಡೆದುಕೊಳ್ಳಬಹುದು?

ಒಂದು ವೇಳೆ ನಾಮಿನಿಯ ಹೆಸರನ್ನು ಸೂಚಿಸಿಲ್ಲ ಎಂದರೆ, ಆ ವ್ಯಕ್ತಿಯ ಕುಟುಂಬದವರು ಹಣವನ್ನು ಪಡೆಯಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. 5 ಲಕ್ಷಕ್ಕಿಂತ ಕಡಿಮೆ ಮೊತ್ತವಾದರೆ ಒಂದು ನಿಯಮ, 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಆದರೆ ನಿಯಮದಲ್ಲಿ ಸಣ್ಣ ಬದಲಾವಣೆ ಇರಬಹುದು.

ಒಂದು ವೇಳೆ 5 ಲಕ್ಷಕ್ಕಿಂತ ಕಡಿಮೆ ಮೊತ್ತ ಇದ್ದು, ಅದನ್ನು ಮನೆಯವರು ಪಡೆದುಕೊಳ್ಳಬೇಕು ಎಂದರೆ, ಆ ವ್ಯಕ್ತಿಯ ಡೆತ್ ಸರ್ಟಿಫಿಕೇಟ್, ಕ್ಲೈಮ್ ಫಾರ್ಮ್, ಪರಿಹಾರ ಪತ್ರ ಇದಿಷ್ಟನ್ನ ನೀಡಬೇಕಾಗುತ್ತದೆ.

ನಿಮ್ಮತ್ರ ಹರಿದ ನೋಟು ಇದ್ರೆ ಏನು ಮಾಡಬೇಕು? ಬ್ಯಾಂಕ್ ವಾಪಸ್ ತಗೊಳ್ಳುತ್ತ? ಬಂತು ಹೊಸ ನಿಯಮ

Bank Account
Image Source: DNA

ಇದರ ಜೊತೆಗೆ ಅರ್ಜಿ ಹಾಕುವವರ kyc, ಅಫಿಡವಿಟ್, ಹಕ್ಕು ನಿರಾಕರಣೆ ಪತ್ರದ ಅಫಿಡವಿಟ್, ಸಾಕ್ಷಿ ಮತ್ತು ಸೆಕ್ಯೂರಿಟಿ ಇದಿಷ್ಟು ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ. ಈ ಎಲ್ಲಾ ಮಾಹಿತಿಗಳು ಸರಿ ಇದೆಯಾ ಎಂದು ಚೆಕ್ ಮಾಡಿ, ನಂತರ ಖಾತೆದಾರರ ಅಕೌಂಟ್ ಇದ್ದ ಮೊತ್ತವನ್ನು ಅರ್ಜಿದಾರರಿಗೆ ಕೊಡಲಾಗುತ್ತದೆ. ಒಂದು ವೇಳೆ 5 ಲಕ್ಷಕ್ಕಿಂತ ಹೆಚ್ಚು ಹಣ ಇದ್ದರೆ, ಆಗ ಹಣವನ್ನು ವಾಪಸ್ ಪಡೆಯಲು ಯಾವ ನಿಯಮಗಳನ್ನು ಅನುಸರಿಸಬೇಕು? ಇದರ ಬಗ್ಗೆ ತಿಳಿಯೋಣ..

ನಿಮ್ಮ ಪ್ಯಾನ್ ಕಾರ್ಡ್ ಕೊಟ್ಟು ಬೇರೆಯವರು ಸಾಲ ತಗೋಬಹುದಾ? ಚೆಕ್ ಮಾಡೋದು ಹೇಗೆ ಗೊತ್ತಾ?

ಒಂದು ವೇಳೆ 5 ಲಕ್ಷಕ್ಕಿಂತ ಜಾಸ್ತಿ ಮೊತ್ತ ಇದ್ದರೆ, ಹಣವನ್ನು ಕ್ಲೈಮ್ ಮಾಡುತ್ತಿರುವ ವ್ಯಕ್ತಿ, ತಾನೇ ಮೃತ ವ್ಯಕ್ತಿಯ ಉತ್ತರಾಧಿಕಾರಿ ಎಂದು ಸಾಬೀತು ಪಡಿಸುವುದಕ್ಕೆ ಪ್ರಮಾಣಪತ್ರವನ್ನು ಕೊಡಬೇಕಾಗುತ್ತದೆ.

ಮರಣ ಹೊಂದಿದ ವ್ಯಕ್ತಿ ವಿಲ್ ಮಾಡಿಸದೇ ಇದ್ದಾಗ ಈ ಪತ್ರ ಕೊಡಬೇಕು. ಕೋರ್ಟ್ ಇಂದ ಈ ಪ್ರಮಾಣಪತ್ರವನ್ನು ಪಡೆದು, kyc ಮಾಡಿಸಿ, ನಂತರ ಈ ಎಲ್ಲಾ ದಾಖಲೆಗಳನ್ನು ಪೋಸ್ಟ್ ಆಫೀಸ್ ಗೆ ಕೊಡಬೇಕು. ಬಳಿಕ ಕ್ಲೈಮ್ ಮಾಡಿದ ವ್ಯಕ್ತಿಗೆ ಆ ಖಾತೆಯಲ್ಲಿದ್ದ ಹಣ ಸಿಗುತ್ತದೆ. ಈ ನಿಯಮ ಮತ್ತು ಪ್ರೊಸಿಜರ್ ಗಳು ಒಂದು ಮಟ್ಟಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದರೆ ತಪ್ಪಲ್ಲ.

ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?

If there is no nominee name in the bank account, what happens to the money if the person holding the account dies

Our Whatsapp Channel is Live Now 👇

Whatsapp Channel

Related Stories