ನಿಮ್ಮ ಪ್ಯಾನ್ ಕಾರ್ಡ್ ಕೊಟ್ಟು ಬೇರೆಯವರು ಸಾಲ ತಗೋಬಹುದಾ? ಚೆಕ್ ಮಾಡೋದು ಹೇಗೆ ಗೊತ್ತಾ?
SBI ಕಾರ್ಡ್ ಅಪ್ಲಿಕೇಶನ್ ಸಹ ಇದ್ದು, ಅದರಲ್ಲಿ ನೀವು ಉಚಿತವಾಗಿ ಈ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಬಳಿ SBI Credit Card ಇರಬೇಕು. ಕ್ರೆಡಿಟ್ ಕಾರ್ಡ್ ಕೊಟ್ಟಿರುವಂಥ ಮಾಹಿತಿಯನ್ನು ಬಳಸಿ ಇಲ್ಲಿ ಲಾಗಿನ್ ಮಾಡಬೇಕು.
ಈಗ ಟೆಕ್ನಾಲಜಿ ಎಷ್ಟು ಮುಂದುವರೆಯುತ್ತಿದೆಯೋ ಅದೇ ರೀತಿ ಸೈಬರ್ ಕ್ರೈಮ್ ಗಳು ಕೂಡ ಹೆಚ್ಚಾಗುತ್ತಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಕೆಲಸ ಕೊಡಿಸುತ್ತೇವೆ, ಸಾಲ ಕೊಡಿಸುತ್ತೇವೆ ಎಂದು ಸಾಕಷ್ಟು ಆಪ್ ಗಳು (Loan Apps) ಬರುತ್ತಿದ್ದು, ಅವುಗಳನ್ನು ನಂಬಿದ ಜನರು ಮೋಸ ಹೋಗುತ್ತಿದ್ದಾರೆ.
ಯಾವುದೇ ದಾಖಲೆ ಇಲ್ಲದೇ Loan ಕೊಡಲಾಗುತ್ತದೆ ಎಂದು ಹೇಳಿ ಜನರು ಬಡ್ಡಿ, ಚಕ್ರಬಡ್ಡಿ ಕಟ್ಟುವ ಹಾಗೆ ಮಾಡಿ, ಸಾಲದ ಸುಳಿಗೆ ಸಿಲುಕುವ ಹಾಗೆ ಮಾಡಲಾಗುತ್ತಿದೆ. ಇನ್ನು ಕೆಲವು ಆಪ್ ಗಳು ಕೆಲಸದ ಆಮಿಷ ಒಡ್ಡಿ ಮೋಸ ಮಾಡುತ್ತಿದ್ದಾರೆ.
ಹೌದು, ಕೆಲವು ಆಪ್ ಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ, ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಪಡೆಯುತ್ತಿದ್ದಾರೆ, ಕೆಲಸ ಕೊಡಬೇಕು ಎಂದರೆ 500 ಅಥವಾ 1000 ರೂಪಾಯಿ ಠೇವಣಿ ಮಾಡಬೇಕು ಎಂದು ಹೇಳಿ, ಹಣ ಪಡೆದು ಕೊನೆಗೆ ಮೋಸ ಮಾಡುತ್ತಿದ್ದಾರೆ.
ಕೇವಲ 500, 1000ಕ್ಕೆ ಪೊಲೀಸರ ಮೊರ ಹೋಗೋದು ಬೇಡ ಎಂದು ಜನರು ಸುಮ್ಮನಾಗುತ್ತಿದ್ದು, ಈ ಆಪ್ ಗಳು ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು, ಜನರಿಗೆ ಮೋಸ ಮಾಡುತ್ತಿವೆ.
ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?
ಈ ರೀತಿಯಾಗಿ ಜನರಿಗೆ ಒಂದು ಆಪ್ ಮೂಲಕ ಭಾರಿ ಮೊಸವಾಗಿದ್ದು, ಇದೀಗ ಈ ಮೋಸದ ಪ್ರಕರಣ ಬೆಳಕಿಗೆ ಬರುತ್ತಿದೆ. ಈ ಹಿಂದೆ ಧನಿ ಹೆಸರಿನ ಈ ಒಂದು ಆಪ್ ನಲ್ಲಿ ಜನರಿಗೆ ಸಾಲ ಸೌಲಭ್ಯ ಕೊಡುವುದಾಗಿ ತಿಳಿಸಲಾಗಿದ್ದು, ಆಪ್ ಗೆ ಲಾಗಿನ್ ಮಾಡುವವರ ವೈಯಕ್ತಿಕ ಮಾಹಿತಿಯನ್ನು ಪಡೆದು, ಅವರ ಪ್ಯಾನ್ ಕಾರ್ಡ್ ಡೀಟೇಲ್ಸ್ ಬಳಸಿ ಇನ್ಯಾರಿಗೋ ಸಾಲ ಕೊಡಲಾಗಿದೆ ಎಂದು ಜನರು ಈ ಆಪ್ ಮೇಲೆ ದೂರು ನೀಡಿದ್ದರು ಆಗ ಟ್ವಿಟರ್ ನಲ್ಲಿ ಒಬ್ಬ ವ್ಯಕ್ತಿ ಈ ಬಗ್ಗೆ ಟ್ವೀಟ್ ಮಾಡಿದ್ದರು.
ಧನಿ ಆಪ್ ತನ್ನ ಪ್ಯಾನ್ ಕಾರ್ಡ್ ಮಾಹಿತಿ ಬಳಸಿ, ಇನ್ಯಾರಿಗೋ ಸಾಲ ನೀಡಿದೆ, ವಂಚನೆ ಮಾಡಿದೆ ಎಂದು ಟ್ವೀಟ್ ಮಾಡಿದ್ದು, ಇನ್ನೊಬ್ಬರು ಈ ಆಪ್ ಇಂದ ತಾವು ಸಾಲ ಪಡೆದಿಲ್ಲ ಹಾಗಿದ್ದರೂ ತಮ್ಮನ್ನು ಸಾಲಗಾರರನ್ನಾಗಿ ಮಾಡಿದೆ ಎಂದು ತಿಳಿಸಿದ್ದಾರೆ.
ಬಾಲಿವುಡ್ ನಟಿಯೊಬ್ಬರಿಗೆ ಕೂಡ ಇದೇ ರೀತಿ ಅವರ ಪ್ಯಾನ್ ಕಾರ್ಡ್ (Pan Card) ಬಳಸಿ Loan ಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಇನ್ಯಾರೋ ಸಾಲ ಪಡೆದಿರಬಹುದು ಎಂದು ನಿಮಗೆ ಅನ್ನಿಸಿದರೆ, ಅದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿಯೋಣ..
ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹20,000 ಹಣ ಇಟ್ಟು ಒನ್ ಟು ಡಬಲ್ ಮಾಡ್ಕೊಳ್ಳಿ!
ನಿಮ್ಮ ಕ್ರಡಿಟ್ ಸ್ಕೋರ್ (Credit Score) ಚೆಕ್ ಮಾಡುವಾಗ, ನೀವು ಪಡೆದಿರುವ ಸಾಲದ ಬಗ್ಗೆ ಮಾಹಿತಿ ಸಿಗುತ್ತದೆ. TransUnion CIBIL Equifax Experian, CRIF ಹೈ ಮಾರ್ಕ್, ಪೇಟಿಎಂ ಬಜಾರ್, SBI ಕಾರ್ಡ್ ಬ್ಯೂರೋ ಇದೆಲ್ಲದರಿಂದ ಚೆಕ್ ಮಾಡಬಹುದು.
SBI ಕಾರ್ಡ್ ಅಪ್ಲಿಕೇಶನ್ ಸಹ ಇದ್ದು, ಅದರಲ್ಲಿ ನೀವು ಉಚಿತವಾಗಿ ಈ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಬಳಿ SBI Credit Card ಇರಬೇಕು. ಕ್ರೆಡಿಟ್ ಕಾರ್ಡ್ ಕೊಟ್ಟಿರುವಂಥ ಮಾಹಿತಿಯನ್ನು ಬಳಸಿ ಇಲ್ಲಿ ಲಾಗಿನ್ ಮಾಡಬೇಕು.
ಕಡಿಮೆ ಬಡ್ಡಿಗೆ 5 ಲಕ್ಷದವರೆಗೂ ಪರ್ಸನಲ್ ಲೋನ್ ಕೊಡೋ ಬ್ಯಾಂಕುಗಳಿವು! ಜಾಸ್ತಿ ಡಾಕ್ಯುಮೆಂಟ್ಸ್ ಕೇಳೋಲ್ಲ
ಇಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಎಷ್ಟು ಮೊತ್ತ ಸಾಲ ಪಡೆಯಲಾಗಿದೆ ಎಂದು ತೋರಿಸುತ್ತದೆ. ಒಂದು ವೇಳೆ ನೀವು ಆ ಸಾಲ ಪಡೆದಿಲ್ಲ ಎಂದರೆ, ತಕ್ಷಣವೇ ದೂರು ಕೊಡಬಹುದು. ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ ಗೆ ಭೇಟಿ ನೀಡಿ ದೂರು ಕೊಟ್ಟು, ನಿಮಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಹಾಗಾಗಿ ಈ ವಿಷಯದಲ್ಲಿ ಹುಷಾರಾಗಿರಿ.
Can someone else get a loan by giving your PAN card, know how to check