Bangalore NewsBusiness News

ನಿಮ್ಮತ್ರ ಹರಿದ ನೋಟು ಇದ್ರೆ ಏನು ಮಾಡಬೇಕು? ಬ್ಯಾಂಕ್ ವಾಪಸ್ ತಗೊಳ್ಳುತ್ತ? ಬಂತು ಹೊಸ ನಿಯಮ

RBI ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅವುಗಳ ಬಗ್ಗೆ ನಾವು ತಿಳಿದುಕೊಂಡರೆ, ನಮಗೆ ಆಗುವ ಸಮಸ್ಯೆಗಳಿಂದ ದೂರ ಉಳಿಯಬಹುದು. ಹೌದು, ಈಗ ಡಿಜಿಟಲ್ ವ್ಯವಹಾರ ಎಷ್ಟೇ ನಡೆದರು ಸಹ ಕೆಲವೊಮ್ಮೆ ಕ್ಯಾಶ್ ಕೊಟ್ಟು ಹಣಕಾಸಿನ ವ್ಯವಹಾರ ನಡೆಸುವುದು ಕೂಡ ಅವಶ್ಯಕವಾಗುತ್ತದೆ.

ಇಂದಿಗೂ ಹಲವು ಜನರು ಕ್ಯಾಶ್ ಬಳಸಿ ವ್ಯವಹಾರ ಮಾಡುತ್ತಾರೆ. ಒಂದು ವೇಳೆ ನೀವು ಬಳಸುತ್ತಿರುವ ನೋಟ್ ಹರಿದು (Torn Note) ಹೋದರೆ ಏನು ಮಾಡಬೇಕು?

What to do if you have a torn note, Will the bank take it back

ಹೌದು, ಕೆಲವು ಸಾರಿ ನಾನಾ ಕಾರಣಕ್ಕೆ ನಮ್ಮ ಬಳಿ ಇರುವ ನೋಟ್ ಗಳು ಹರಿದು ಹೋದರೆ, ಅಥವಾ ಅವು ಹಳೆಯ ನೋಟ್ ಗಳಾಗಿದ್ದು, ಹರಿದಿದೆ ಉಪಯೋಗಕ್ಕೆ ಬರುವುದಿಲ್ಲ ಕೆಲವರು ಅದನ್ನು ಹಾಗೆಯೇ ಬಿಟ್ಟು ಬಿಡುತ್ತಾರೆ.

ನಿಮ್ಮ ಪ್ಯಾನ್ ಕಾರ್ಡ್ ಕೊಟ್ಟು ಬೇರೆಯವರು ಸಾಲ ತಗೋಬಹುದಾ? ಚೆಕ್ ಮಾಡೋದು ಹೇಗೆ ಗೊತ್ತಾ?

ಇನ್ನು ಕೆಲವರು ಅಂಥ ನೋಟ್ ಗಳನ್ನು ಸುಟ್ಟು ಬಿಡುತ್ತಾರೆ. ಈ ರೀತಿಯೆಲ್ಲಾ ಘಟನೆಗಳು ನಡೆಯುತ್ತದೆ, ಆದರೆ ಆ ಹರಿದಿರುವ ನೋಟ್ ಗಳಿಗೆ ಕೂಡ ಬೆಲೆ ಇದೆ ಎನ್ನುವ ವಿಷಯ ನಿಮಗೆಲ್ಲಾ ಗೊತ್ತಿರಬೇಕು. ಆಗ ಸಮಸ್ಯೆಗಳು ಬರದ ಹಾಗೆ ಎಚ್ಚರ ವಹಿಸಬಹುದು.

ಒಂದು ವೇಳೆ ನಿಮ್ಮ ಹತ್ತಿರ ಇರುವ ನೋಟ್ ಹರಿದು ಹೋಗಿದ್ದರೆ, ಆ ನೋಟ್ ಅನ್ನು ನಿಮ್ಮ ಹತ್ತಿರದ ಬ್ಯಾಂಕ್ ಗೆ (Bank) ಹೋಗಿ ಎಕ್ಸ್ಛೇಂಜ್ ಮಾಡಿಸಿಕೊಳ್ಳಬಹುದು (Torn Note Exchange). ಒಂದು ವೇಳೆ ಬ್ಯಾಂಕ್ ನಲ್ಲಿ ನಿಮ್ಮ ಬಳಿ ಇರುವ ಹರಿದಿರುವ ನೋಟ್ ಅನ್ನು ಎಕ್ಸ್ಛೇಂಜ್ ಮಾಡುವುದಿಲ್ಲ ಎಂದರೆ ಆಗ ನೀವು ಬ್ಯಾಂಕ್ ವಿರುದ್ಧ ದೂರು ಕೊಡಬಹುದು..

ಈ ಹೊಸ ನಿಯಮಗಳು ಈ ರೀತಿಯಾಗಿ ಜಾರಿಗೆ ಬಂದಿದ್ದು, ಇದನ್ನು ತಿಳಿದುಕೊಳ್ಳಿ. ಹರಿದ ನೋಟ್ ಇದ್ದರೆ, ತಲೆಕೆಡಿಸಿಕೊಳ್ಳದೇ Bank ಗೆ ಹೋಗಿ ಎಕ್ಸ್ಛೇಂಜ್ ಮಾಡಿಸಿ..

ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?

Torn Noteಬ್ಯಾಂಕ್ ನಲ್ಲಿ ಹರಿದ ನೋಟ್ ಗಳನ್ನು ಎಕ್ಸ್ಛೇಂಜ್ ಮಾಡಿಸುವುದಕ್ಕೆ ಒಂದೆರಡು ನಿಯಮಗಳಿವೆ, ಅವುಗಳ ಅನುಸಾರ ಎಕ್ಸ್ಛೇಂಜ್ ಮಾಡಿಸಿಕೊಳ್ಳಬಹುದು. ಹೆಚ್ಚು ಹರಿದ ನೋಟ್ ಗಳನ್ನು ನೀಡಿದರೆ, ಅವುಗಳ ಬೆಲೆ ಸಹ ಕಡಿಮೆ ಆಗಬಹುದು.

ಈ ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಿ ಹಾಗೆಯೇ 5000 ಕ್ಕಿಂತ ಬೆಲೆ ಬಾಳುವ ನೋಟ್ ಗಳು ಹರಿದು ಹೋಗಿದ್ದರೆ, ಅದರ ಮೇಲೆ ಬ್ಯಾಂಕ್ ಇಂದ ಶುಲ್ಕ ವಿಧಿಸಲಾಗುತ್ತದೆ. ನೀವು ಕೊಡುವ ನೋಟ್ ನಲ್ಲಿ ಭದ್ರತೆಯ ಚಿಹ್ನೆ ಇದ್ದರೆ ಮಾತ್ರ ಬ್ಯಾಂಕ್ ಅದನ್ನು ಎಕ್ಸ್ಛೇಂಜ್ ಗೆ ತೆಗೆದುಕೊಳ್ಳುತ್ತದೆ. ಇಲ್ಲದಿದ್ದರೆ ಇಲ್ಲ.

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹20,000 ಹಣ ಇಟ್ಟು ಒನ್ ಟು ಡಬಲ್ ಮಾಡ್ಕೊಳ್ಳಿ!

ಹಾಗೆಯೇ ನೀವು ಗಮನದಲ್ಲಿ ಇಡಬೇಕಾದ ಮತ್ತೊಂದು ಪ್ರಮುಖ ವಿಷಯ ಏನು ಎಂದರೆ, ನೀವು ಎಕ್ಸ್ಛೇಂಜ್ ಗೆ ಕೊಡುವ ನೋಟ್ ಗಳು ಒರಿಜಿನಲ್ ಆಗಿರಬೇಕು, ಒಂದು ವೇಳೆ ನಕಲಿ ನೋಟ್ ಗಳನ್ನು ಎಕ್ಸ್ಛೇಂಜ್ ಗಾಗಿ ಕೊಟ್ಟರೆ, ಬ್ಯಾಂಕ್ ಅದನ್ನು ಪರಿಶೀಲಿಸಿ, ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಈ ಒಂದು ವಿಷಯದಲ್ಲಿ ಹುಷಾರಾಗಿರಿ. ನಕಲಿ ನೋಟ್ ಗಳನ್ನು ಎಕ್ಸ್ಛೇಂಜ್ ಗೆ ಕೊಡಬೇಡಿ.

What to do if you have a torn note, Will the bank take it back

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories