ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸಂಕಷ್ಟ! ಇಲ್ಲಿದೆ ಹೊಸ ನಿಯಮದ ಬಿಗ್ ಅಪ್ಡೇಟ್
ಈ ವಿಚಾರದ ಬಗ್ಗೆ ಬ್ಯಾಂಕ್ ನಿಯಮಗಳನ್ನು (Bank Rules) ತಿಳಿದುಕೊಂಡರೆ ನಿಮಗೆ ಕ್ಲಾರಿಟಿ ಸಿಗುತ್ತದೆ. ಹಾಗಿದ್ದಲ್ಲಿ ಹೆಚ್ಚು ಬ್ಯಾಂಕ್ ಅಕೌಂಟ್ (Multiple Bank Accounts) ಹೊಂದಿರುವವರು ತಿಳಿದುಕೊಳ್ಳಬೇಕಾದ ವಿಷಯಗಳು ಏನೇನು ಎಂದು ನೋಡೋಣ
ಈಗ ಹಣಕಾಸಿನ ವ್ಯವಹಾರ ನಡೆಸಲು ನಮ್ಮೆಲ್ಲರ ಬಳಿ ಬ್ಯಾಂಕ್ ಅಕೌಂಟ್ ಇರಲೇಬೇಕು. ಬ್ಯಾಂಕ್ ಅಕೌಂಟ್ (Bank Account) ಇದ್ದರೆ ಬ್ಯಾಂಕ್ ಗಳಿಂದ ಹಲವು ಸೌಲಭ್ಯಗಳು ಸಿಗುತ್ತದೆ. ಆದರೆ ಕೆಲವೊಮ್ಮೆ ನಾವು ಎರಡಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ಸ್ ಹೊಂದಿರುತ್ತೇವೆ.
ಹೆಚ್ಚು ಬ್ಯಾಂಕ್ ಅಕೌಂಟ್ಸ್ ಹೊಂದಿರುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಈ ವಿಚಾರದ ಬಗ್ಗೆ ಬ್ಯಾಂಕ್ ನಿಯಮಗಳನ್ನು (Bank Rules) ತಿಳಿದುಕೊಂಡರೆ ನಿಮಗೆ ಕ್ಲಾರಿಟಿ ಸಿಗುತ್ತದೆ. ಹಾಗಿದ್ದಲ್ಲಿ ಹೆಚ್ಚು ಬ್ಯಾಂಕ್ ಅಕೌಂಟ್ (Multiple Bank Accounts) ಹೊಂದಿರುವವರು ತಿಳಿದುಕೊಳ್ಳಬೇಕಾದ ವಿಷಯಗಳು ಏನೇನು ಎಂದು ನೋಡೋಣ..
ನಿಮ್ಮತ್ರ ಹರಿದ ನೋಟು ಇದ್ರೆ ಏನು ಮಾಡಬೇಕು? ಬ್ಯಾಂಕ್ ವಾಪಸ್ ತಗೊಳ್ಳುತ್ತ? ಬಂತು ಹೊಸ ನಿಯಮ
*ಮಿನಿಮಮ್ ಬ್ಯಾಲೆನ್ಸ್: ಎಲ್ಲಾ ಬ್ಯಾಂಕ್ ಗಳಲ್ಲಿ ಸಹ ಅಕೌಂಟ್ ಗೆ ಮಿನಿಮಮ್ ಬ್ಯಾಲೆನ್ಸ್ (Bank Balance) ಇಡುವುದು ಕಡ್ಡಾಯ ನಿಯಮ ಆಗಿದೆ. ಅಕೌಂಟ್ ನಿರ್ವಹಣೆ ಹಾಗೂ ಇನ್ನಿತರ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು, ಒಂದೊಂದು ಬ್ಯಾಂಕ್ ನಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲೆನ್ಸ್ ನಿಗದಿ ಮಾಡಲಾಗಿರುತ್ತದೆ. ಒಂದು ಅಥವಾ ಎರಡು ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದರೆ, ಮಿನಿಮಮ್ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳುವುದಕ್ಕೆ ಅಂಥ ಸಮಸ್ಯೆ ಏನು ಆಗುವುದಿಲ್ಲ.
ಆದರೆ ಹೆಚ್ಚು ಅಕೌಂಟ್ ಗಳು ಹೊಂದಿದ್ದರೆ, ಎಲ್ಲಾ ಬ್ಯಾಂಕ್ ಅಕೌಂಟ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಹಾಗೆಯೇ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದೇ ಹೋದರೆ, ಬ್ಯಾಂಕ್ ಇಂದ ನಿಮ್ಮ ಅಕೌಂಟ್ ಗೆ ಬೇರೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಹಾಗಾಗಿ ನೀವು ಹುಷಾರಾಗಿ ಇರಬೇಕು.
ಅಮೌಂಟ್ ವಿತ್ ಡ್ರಾ ಲಿಮಿಟ್: ಒಂದು ದಿನಕ್ಕೆ ಡೆಬಿಟ್ ಕಾರ್ಡ್ (Debit Card) ಬಳಸಿ ಇಷ್ಟು ಹಣವನ್ನು ಮಾತ್ರ ವಿತ್ ಡ್ರಾ ಮಾಡಬಹುದು ಎನ್ನುವ ಲಿಮಿಟ್ ಇದೆ. ದೊಡ್ಡ ಮೊತ್ತವನ್ನು ವಿತ್ ಡ್ರಾ ಮಾಡಬೇಕು ಎಂದರೆ, ಹೆಚ್ಚು ಬ್ಯಾಂಕ್ ಅಕೌಂಟ್ ಗಳು ಇದ್ದಾಗ, ಒಂದೊಂದು ಅಕೌಂಟ್ ಇಂದ ಇಂತಿಷ್ಟು ಮೊತ್ತ ಎಂದು ವಿತ್ ಡ್ರಾ ಮಾಡಬಹುದು.
ನಿಮ್ಮ ಪ್ಯಾನ್ ಕಾರ್ಡ್ ಕೊಟ್ಟು ಬೇರೆಯವರು ಸಾಲ ತಗೋಬಹುದಾ? ಚೆಕ್ ಮಾಡೋದು ಹೇಗೆ ಗೊತ್ತಾ?
ಈ ಥರದ ಸಂದರ್ಭಕ್ಕೆ ಹೆಚ್ಚು ಬ್ಯಾಂಕ್ ಅಕೌಂಟ್ ಇರುವುದು ಒಳ್ಳೆಯದು. ಆದರೆ ಒಂದು ವೇಳೆ ಒಂದಷ್ಟು ತಿಂಗಳುಗಳ ಕಾಲ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಯಾವುದೇ ಹಣಕಾಸಿನ ವಹಿವಾಟು ನಡೆಯದೇ ಹೋದರೆ, ನಿಮ್ಮ ಅಕೌಂಟ್ ಅನ್ನು ನಿಷ್ರ್ಕಿಯ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮ್ಮ ಅಕೌಂಟ್ ಮೇಲೆ ಕೆಲವು ಶುಲ್ಕಗಳನ್ನು ಸಹ ಹಾಕಬಹುದು. ಇದರಿಂದ ಬ್ಯಾಂಕ್ ಬ್ಯಾಲೆನ್ಸ್ ಕಡಿಮೆ ಆಗುತ್ತದೆ.
ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?
ಬ್ಯಾಂಕ್ ಶುಲ್ಕ: ಬ್ಯಾಂಕ್ ಗಳಲ್ಲಿ ಹಲವು ಸೌಲಭ್ಯಗಳನ್ನು ನೀಡುವುದು ನಿಜ, ಅದರ ಜೊತೆಗೆ ಕೆಲವು ವಿಚಾರಕ್ಕೆ ನೀವು ಬ್ಯಾಂಕ್ ಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡುವ ವೇಳೆ ಈ ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಎಲ್ಲಾ ಬ್ಯಾಂಕ್ ಗಳ ಶುಲ್ಕ ಭರಿಸುವುದಕ್ಕೆ, ಹೆಚ್ಚು ಅಕೌಂಟ್ ಇದ್ದರೆ ತೊಂದರೆ ಆಗಬಹುದು.
ಒಬ್ಬ ವ್ಯಕ್ತಿ ಇಷ್ಟು ಬ್ಯಾಂಕ್ ಗಳಲ್ಲಿ ಮಾತ್ರ ಖಾತೆ ಹೊಂದಿರಬೇಕು ಎನ್ನುವುದಕ್ಕೆ ಯಾವುದೇ ಮಿತಿ ಇಲ್ಲ. ಎಷ್ಟು ಬ್ಯಾಂಕ್ ಗಳಲ್ಲಿ ಬೇಕಾದರೂ ಅಕೌಂಟ್ ಹೊಂದಿರಬಹುದು. ಆದರೆ ಈ ಮೂರು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಬ್ಯಾಂಕ್ ಗಳಲ್ಲಿ ಅಕೌಂಟ್ ಓಪನ್ ಮಾಡುವುದು ಒಳ್ಳೆಯದು.
ಬ್ಯಾಂಕ್ ನಿಯಮಗಳ ಅನುಸಾರ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಂಡಿಲ್ಲ ಎಂದರೆ ಅದು ನಿಮ್ಮ ಸಿಬಿಲ್ ಸ್ಕೋರ್ (CIBIL Score) ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ..
ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹20,000 ಹಣ ಇಟ್ಟು ಒನ್ ಟು ಡಬಲ್ ಮಾಡ್ಕೊಳ್ಳಿ!
Big Update for those who have more than one bank account