ಕೋಳಿ ಫಾರ್ಮ್ ತೆರೆಯಲು ಸ್ಟೇಟ್ ಬ್ಯಾಂಕ್ ನಿಂದಲೇ ಸಿಗಲಿದೆ 9 ಲಕ್ಷ ರೂಪಾಯಿ! ಇಂದೇ ಅರ್ಜಿ ಸಲ್ಲಿಸಿ
State Bank Loan : ಉತ್ತಮವಾದ ಆದಾಯ ಪಡೆದು, ಮುಂದಿನ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು ಎಂದರೆ, ಒಳ್ಳೆಯ ಕೆಲಸ ಇರಬೇಕು ಅಥವಾ ಲಾಭ ಬರುವಂಥ ಬ್ಯುಸಿನೆಸ್ ಇರಬೇಕು. ಒಂದು ವೇಳೆ ನೀವು ಕೂಡ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದು, ಬಂಡವಾಳ ಇಲ್ಲವೆಂದರೆ SBI ನಿಮಗೆ ಸಾಲ (Business Loan) ಕೊಡುತ್ತದೆ.
ಈ ರೀತಿ ಬ್ಯುಸಿನೆಸ್ ಶುರು ಮಾಡಿ, ಒಳ್ಳೆಯ ಲಾಭ ಗಳಿಸುವುದಕ್ಕೆ ಕೋಳಿ ಸಾಕಾಣಿಕೆ (Poultry Farming) ಉತ್ತಮವಾದ ಬ್ಯುಸಿನೆಸ್ ಐಡಿಯಾ ಎಂದು ಹೇಳಿದರೆ ತಪ್ಪಲ್ಲ. ಹೌದು, ಈಗ ಮಾಂಸಾಹಾರ ಸೇವಿಸುವ ಜನರು ಜಾಸ್ತಿ ಇದ್ದಾರೆ, ಅವರೆಲ್ಲರು ಇಷ್ಟಪಟ್ಟು ಕೋಳಿಯ ಮಾಂಸವನ್ನು ಸೇವಿಸುತ್ತಾರೆ. ಹಾಗಾಗಿ ಕೋಳಿಗಳಿಗೆ ಬೇಡಿಕೆ ಜಾಸ್ತಿ ಇದೆ.
ಓಲ್ಡ್ ಮಾಡೆಲ್ ಹೀರೋ ಹೋಂಡಾ ಸ್ಪ್ಲೇಂಡರ್ ಬೈಕ್ ಇದ್ದೋರಿಗೆ ಗುಡ್ ನ್ಯೂಸ್! ಕಂಪನಿ ಹೊಸ ಆಫರ್
ಈ ಕಾರಣದಿಂದ ನೀವು ಬ್ಯುಸಿನೆಸ್ ಮಾಡುವ ಆಸಕ್ತಿ ಹೊಂದಿದ್ದರೆ, ಕೋಳಿ ಸಾಕಾಣಿಕೆ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ಅನ್ನು ಹಳ್ಳಿಯಲ್ಲಿ ಇದ್ದುಕೊಂಡೇ ಶುರು ಮಾಡಬಹುದು. ಹಾಗೆಯೇ ಇದಕ್ಕಾಗಿ SBI ಇಂದ ಸಬ್ಸಿಡಿ ಲೋನ್ (Subsidy Loan) ಕೂಡ ಸಿಗುತ್ತದೆ. ಹಾಗಾಗಿ ಇದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಆಗಿದೆ..
ಇನ್ನು State Bank Of India ನಲ್ಲಿ ಕೋಳಿ ಸಾಕಾಣಿಕೆಗಾಗಿ ನೀವು 9 ಲಕ್ಷ ರೂಪಾಯಿಗಳ ವರೆಗು Loan ಪಡೆದುಕೊಳ್ಳಬಹುದು. ಈ ಸಾಲ ಪಡೆಯಲು ನೀವು ಶುರು ಮಾಡುವ ಬ್ಯುಸಿನೆಸ್ ಬಗ್ಗೆ ಪೂರ್ತಿಯಾಗಿ ಮಾಹಿತಿಯನ್ನು ಬ್ಯಾಂಕ್ ಗೆ ಕೊಡಬೇಕಾಗುತ್ತದೆ.
ಹಾಗೆಯೇ ಕೋಳಿ ಸಾಕಾಣಿಕೆಗೆ 9 ಲಕ್ಷದವರೆಗು ಲೋನ್ ಸಿಗುತ್ತದೆ, ಈ ಬ್ಯುಸಿನೆಸ್ ಶುರು ಮಾಡಲು 25% ನಷ್ಟು ಹಣವನ್ನು ನೀವು ಹೊಂದಿಸಿಕೊಳ್ಳಬೇಕು, ಇನ್ನು 75% ಹಣವನ್ನು ಬ್ಯಾಂಕ್ ಇಂದ ಸಾಲದ (Bank Loan) ರೂಪದಲ್ಲಿ ಕೊಡಲಾಗುತ್ತದೆ. ಈ ಮೊತ್ತವನ್ನು ಮರುಪಾವತಿ ಮಾಡುವುದಕ್ಕೆ ಅವಧಿ ಕೂಡ ನಿಗದಿ ಆಗಿದೆ.
ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಸಿಗಲಿದೆ ₹50,000! ಮೋದಿ ಸರ್ಕಾರದಿಂದ ಹೊಸ ಯೋಜನೆ
9 ಲಕ್ಷದವರೆಗು ನೀವು ಪಡೆಯುವ ಲೋನ್ ಅನ್ನು ಮರುಪಾವತಿ ಮಾಡುವುದಕ್ಕೆ 3 ರಿಂದ 5 ವರ್ಷದವರೆಗು ಸಮಯ ಕೊಡಲಾಗುತ್ತದೆ. ಈ ಲೋನ್ ಗೆ 10.75% ಇಂದ ಬಡ್ಡಿ ಶುರುವಾಗುತ್ತದೆ. ನೀವು ನಿಮ್ಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಪಡೆಯುವ ಈ ಲೋನ್, ನೀವು ಬ್ಯುಸಿನೆಸ್ ಶುರು ಮಾಡುವುದಕ್ಕೆ ಬುನಾದಿ ಹಾಕಿ ಕೊಡುತ್ತದೆ. ಬ್ಯಾಂಕ್ ಮೂಲಕ ಈ ಲೋನ್ ಪಡೆಯುವುದು ಹೇಗೆ ಎಂದು ಸ್ಟೆಪ್ ಬೈ ಸ್ಟೆಪ್ ಪೂರ್ತಿಯಾಗಿ ತಿಳಿದುಕೊಳ್ಳೋಣ..
ಇಂಟರ್ನೆಟ್ ಇಲ್ಲದೆ PhonePe, Google Pay ಯುಪಿಐ ಪೇಮೆಂಟ್ ಮಾಡೋಕೆ ಇಲ್ಲಿದೆ ಸುಲಭ ವಿಧಾನ
ಕೋಳಿ ಸಾಕಾಣಿಕೆ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿರುವವರು ನಿಮಗೆ ಹತ್ತಿರ ಇರುವ SBI ಬ್ರಾಂಚ್ ಗೆ ಭೇಟಿ ನೀಡಿ, ಅಧಿಕಾರಿಗಳ ಬಳಿ ನಿಮ್ಮ ಬ್ಯುಸಿನೆಸ್ ಐಡಿಯಾ ಬಗ್ಗೆ ತಿಳಿಸಿ ಅವರಿಂದ ಅಪ್ಲಿಕೇಶನ್ ಫಾರ್ಮ್ ಪಡೆದು, ಅದನ್ನು ಭರ್ತಿ ಮಾಡಿ, ನಿಮ್ಮ ಬ್ಯುಸಿನೆಸ್ ಶುರು ಮಾಡಲು ಬೇಕಾಗಿರುವ ಉತ್ಪನ್ನ ಹಾಗೂ ಖರ್ಚು ಎಷ್ಟು ಎನ್ನುವುದರ ಮಾಹಿತಿಯನ್ನು ಅವರಿಗೆ ಸರಿಯಾಗಿ ನೀಡಿ. ಬಳಿಕ ನಿಮ್ಮ ಅಪ್ಲಿಕೇಶನ್ ಅನ್ನು ಚೆಕ್ ಮಾಡಿಸಿ, ಕೋಳಿ ಸಾಕಾಣಿಕೆಗೆ ಲೋನ್ ಮಾಡಿಸಿಕೊಡಲಾಗುತ್ತದೆ.
get State Bank subsidy loan of Rs 9 lakh to open a poultry farm