ಬಾಡಿಗೆ ಮನೆಯಲ್ಲಿ ಇದ್ದು ನೀವಿನ್ನೂ ರೆಂಟ್ ಅಗ್ರಿಮೆಂಟ್ ಮಾಡಿಸಿಲ್ವಾ? ಬಂತು ನೋಡಿ ಹೊಸ ರೂಲ್ಸ್
ಈಗಿನ ಕಾಲದಲ್ಲಿ ಉದ್ಯೋಗ ಅರಸಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವವರ ಸಂಖ್ಯೆ ದೊಡ್ಡದು. ಸಣ್ಣ ಊರುಗಳಿಂದ ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಬರುತ್ತಾರೆ. ಇಲ್ಲಿ ಬಂದು ಜೀವನ ಕಟ್ಟಿಕೊಳ್ಳುತ್ತಾರೆ.
ಈ ಊರಿನಲ್ಲಿ ತಮ್ಮದೇ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎಂದು ಆಸೆ ಇದ್ದರೂ, ಈಗ ಭೂಮಿ ಬೆಲೆ (Land Price) ನೋಡಿದರೆ ಸ್ವಂತ ಮನೆ ಮಾಡಿಕೊಳ್ಳುವುದೆಲ್ಲವು ಕನಸಿನ ಮಾತೇ ಆಗಿದೆ. ಹಾಗಾಗಿ ಬೇರೆ ಊರುಗಳಿಗೆ ಈ ರೀತಿ ಬರುವ ಜನರು ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುವುದೇ ಹೆಚ್ಚು..
ಹೌದು, ಕೋಟ್ಯಾಂತರ ಜನರು ಒಂದು ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ. ಬೆಂಗಳೂರಿನ ತರಹ ದೊಡ್ಡ ನಗರಗಳಲ್ಲಿ ಬಾಡಿಗೆ (Rent) ಕೂಡ ಬಹಳ ಜಾಸ್ತಿಯೇ ಇರುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಜಾಸ್ತಿ ಹಣ ಇಟ್ಟಿದ್ದೆ ಆದ್ರೆ ಏನಾಗುತ್ತೆ ಗೊತ್ತಾ?
ಒಂದು ಸಣ್ಣ ಮನೆಗು ವಿಪರೀತ ಬಾಡಿಗೆ ಹೇಳುತ್ತಾರೆ. ಬೇರೆ ವಿಧಿ ಇಲ್ಲದೇ ಮನೆಯ ಓನರ್ ಗಳು ಕೇಳಿದಷ್ಟೇ ಬಾಡಿಗೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಾಡಿಗೆ ಮನೆಗೆ ಸಂಬಂಧಿಸಿದ ಹಾಗೆ ನಾವು ಗಮನಿಸಬೇಕಾದ ಪ್ರಮುಖ ವಿಷಯ ಏನು ಎಂದರೆ ಬಾಡಿಗೆ ಮನೆಯ ಒಪ್ಪಂದ.
ಹೌದು, ಬಾಡಿಗೆ ಮನೆಗೆ ಸಂಬಂಧಿಸಿದ ಹಾಗೆ ಓನರ್ ಗಳ ಜೊತೆಗೆ ಅಗ್ರಿಮೆಂಟ್ (Rent Agreement) ಮಾಡಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಬಾಡಿಗೆ ಮನೆಯ ಅಗ್ರಿಮೆಂಟ್ ಅನ್ನು 11 ತಿಂಗಳಿಗೆ.. ಅಂದರೆ ಸುಮಾರು 1 ವರ್ಷಕ್ಕೆ ಮಾಡಿಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಮಯಕ್ಕೆ ಅಥವಾ ಕಡಿಮೆ ಸಮಯಕ್ಕೆ ಅಗ್ರಿಮೆಂಟ್ ಮಾಡಿಸುವುದಿಲ್ಲ, ಯಾಕೆ 11 ತಿಂಗಳಿಗೆ ಅಗ್ರಿಮೆಂಟ್ ಮಾಡಿಸಬೇಕು ಎನ್ನುವ ಪ್ರಶ್ನೆ ಹಲವರಲ್ಲಿ ಇದ್ದು, ಇಂದು ಅದಕ್ಕೆ ಉತ್ತರ ತಿಳಿಯೋಣ..
ಮನೆಯ ಓನರ್ ಗಳು ಅಗ್ರಿಮೆಂಟ್ ಮಾಡಿಸುವ ವಿಷಯದಲ್ಲಿ ಮಾಡಿಕೊಳ್ಳುವ ಸಣ್ಣ ತಪ್ಪಿನಿಂದ ಅವರ ಮನೆಯನ್ನೇ ಕಳೆದುಕೊಳ್ಳುವ ಸ್ಥಿತಿ ಬರುತ್ತದೆ, ಅಥವಾ ಅವರ ಮನೆಗಾಗಿ ಅವರೇ ಕಾನೂನಿನ ಹೋರಾಟ ಮಾಡಬೇಕಾದ ಸ್ಥಿತಿ ಕೂಡ ಬರುತ್ತದೆ. ಹಾಗಾಗಿ ಕನಿಷ್ಠ ಸಮಯಕ್ಕೆ ಮನೆಯ ಒಪ್ಪಂದ ಮಾಡಿಕೊಳ್ಳುತ್ತಾರೆ.
ಕೋಳಿ ಫಾರ್ಮ್ ತೆರೆಯಲು ಸ್ಟೇಟ್ ಬ್ಯಾಂಕ್ ನಿಂದಲೇ ಸಿಗಲಿದೆ 9 ಲಕ್ಷ ರೂಪಾಯಿ! ಇಂದೇ ಅರ್ಜಿ ಸಲ್ಲಿಸಿ
1908 ರಲ್ಲಿ ಜಾರಿಗೆ ತಂದ ಸೆಕ್ಷನ್ 17 (ಡಿ) ಅಡಿಯಲ್ಲಿ ಮನೆಯ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. 11 ತಿಂಗಳಿಗೆ ಮಾಡುವ ಈ ಅಗ್ರಿಮೆಂಟ್ ಇರುವುದರಿಂದ ಇದನ್ನು ರಿಜಿಸ್ಟರ್ ಮಾಡಿಸುವ ಅಗತ್ಯ ಇರುವುದಿಲ್ಲ.
ಓಲ್ಡ್ ಮಾಡೆಲ್ ಹೀರೋ ಹೋಂಡಾ ಸ್ಪ್ಲೇಂಡರ್ ಬೈಕ್ ಇದ್ದೋರಿಗೆ ಗುಡ್ ನ್ಯೂಸ್! ಕಂಪನಿ ಹೊಸ ಆಫರ್
ಜೊತೆಗೆ ಇದಕ್ಕಾಗಿ ನೋಂದಣಿ ಶುಲ್ಕ ಹಾಗೂ ಸ್ಟ್ಯಾಂಪ್ ಡ್ಯೂಟಿ ಇದ್ಯಾವುದನ್ನು ಕೂಡ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಹಾಗೆಯೇ ಓನರ್ ಮತ್ತು ಬಾಡಿಗೆದಾರರ ನಡುವೆ ಏನಾದರು ಸಮಸ್ಯೆ ಉಂಟಾಗಿ, ಕೋರ್ಟ್ ಗೆ ಹೋಗುವ ಪರಿಸ್ಥಿತಿ ಬಂದರೆ ಅಗ್ರಿಮೆಂಟ್ ಅನ್ನು ಸಾಕ್ಷಿಯಾಗಿ ತೋರಿಸಬಹುದು. ಈ ಎಲ್ಲಾ ಕಾರಣಗಳಿಂದ ಬಾಡಿಗೆ ಅಗ್ರಿಮೆಂಟ್ ಅನ್ನು 11 ತಿಂಗಳಿಗೆ ಮಾತ್ರ ಮಾಡಿಸಲಾಗುತ್ತದೆ.
Are you living in a rented house and have not signed a rent agreement