ಆಧಾರ್ ಕಾರ್ಡ್ ಇದ್ರೆ ಸಾಕು, ಸಿಗುತ್ತೆ ಯಾವುದೇ ಶೂರಿಟಿ ಇಲ್ಲದೆ 50,000 ತನಕ ಸಾಲ
Loan Scheme : ನೀವು ಯಾವುದೇ ಬಿಸಿನೆಸ್ ಮಾಡ್ತಿದ್ರು ಶ್ಯೂರಿಟಿ ಕೊಡದೆ 50,000 ರೂಪಾಯಿ ಸಾಲ ಸಿಗುತ್ತೆ! ಸರ್ಕಾರದ ಈ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್
Loan Scheme : 2020ರ ಕೋವಿಡ್ ಸಂಕಷ್ಟದ ಸಂದರ್ಭ ಎಲ್ಲರಿಗೂ ನೆನಪಿರಬಹುದು. ಸಣ್ಣ ಪುಟ್ಟ ವ್ಯಾಪಾರ ಮಾಡುವ ಬೀದಿ ಬೀದಿಗಳಲ್ಲಿ ಹಣ್ಣು, ಹೂವು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ವ್ಯಾಪಾರಸ್ಥರು ಈ ಸಮಯದಲ್ಲಿ ಬಹಳ ದೊಡ್ಡ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಿತ್ತು.
ಈ ಸಂದರ್ಭದಲ್ಲಿ ಸರ್ಕಾರ ಅಂತಹ ವ್ಯಾಪಾರಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಒಂದು ಅತ್ಯುತ್ತಮ ಯೋಜನೆಯನ್ನು ಪರಿಚಯಿಸಿತ್ತು. ಈಗಾಗಲೇ ಲಕ್ಷಾಂತರ ವ್ಯಾಪಾರಿಗಳು ಈ ಯೋಜನೆಯ ಅಡಿಯಲ್ಲಿ ಶ್ಯೂರಿಟಿ ರಹಿತ ಸಾಲ ಸೌಲಭ್ಯವನ್ನು (Loan Facility) ಪಡೆದುಕೊಂಡು, ತಮ್ಮ ವ್ಯಾಪಾರವನ್ನು (Own Business) ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ.
ಪಿಎಂ ಸ್ವನಿಧಿ ಯೋಜನೆ!
ಹಲವು ಮಹಿಳೆಯರು, ಸಣ್ಣಪುಟ್ಟ ವ್ಯಾಪಾರಸ್ಥರು, ಯುವಕರು ಇಂದು ತಮ್ಮ ವ್ಯಾಪಾರವನ್ನು (Business Loan) ಮುಂದುವರಿಸಲು ಪಿಎಂ ಸ್ವನಿಧಿ ಯೋಜನೆ ನೆರವಾಗಿದೆ.
ಸ್ವನಿಧಿ ಯೋಜನೆಯ ಬೆನಿಫಿಟ್ಗಳು!
ಪಿಎಂ ಸ್ವನಿಧಿ ಯೋಜನೆಯ (PM SVANidhi Scheme) ಪ್ರಮುಖ ಪ್ರಯೋಜನ ಅಂದ್ರೆ ಸಣ್ಣಪುಟ್ಟ ವ್ಯಾಪಾರ ಮಾಡುವವರು ಅಥವಾ ಬೀದಿ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಸ್ಥರು ಕೇವಲ ಆಧಾರ್ ಕಾರ್ಡ್ ನೀಡಿ ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಅಂದರೆ ಬ್ಯಾಂಕುಗಳಲ್ಲಿ ಕೊಡುವಂತೆ ಶ್ಯೂರಿಟಿಯನ್ನು ಕೊಡದೆ ಕೇವಲ ಆಧಾರ್ ಕಾರ್ಡ್ ನೊಂದಿಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ವ್ಯಾಪಾರಿಗಳು ಮೊದಲಿಗೆ 10,000ರೂ.ಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು.
ಹೂವು, ಸೊಪ್ಪು ಮೊದಲಾದ ಸಣ್ಣಪುಟ್ಟ ವ್ಯಾಪಾರಕ್ಕೆ ಈ ಹಣವನ್ನು ಬಳಸಿಕೊಳ್ಳಬಹುದು. ಇನ್ನು ಮೊದಲು ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಎರಡನೇ ಸಾರಿ 20 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ವ್ಯಾಪಾರಸ್ಥರು ಅರ್ಹರಾಗುತ್ತಾರೆ. ಸಕಾಲದಲ್ಲಿ ಈ ಸಾಲವನ್ನು ಮರುಪಾವತಿ ಮಾಡಿದಲ್ಲಿ 50,000ಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು.
ಪಿಎಂ ಸ್ವಾನಿಧಿ ಸಾಲ ಪಡೆದುಕೊಳ್ಳುವುದು ಹೇಗೆ?
ಇದಕ್ಕಾಗಿ ಕೇವಲ ಆಧಾರ್ ಕಾರ್ಡ್ ಅನ್ನು ಶ್ಯೂರಿಟಿಯಾಗಿ ಕೊಟ್ಟರೆ ಸಾಕು, ಸರ್ಕಾರಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ವ್ಯಾಪಾರಸ್ಥರು ತೆಗೆದುಕೊಂಡ ಸಾಲವನ್ನು 12 ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಕೆ ಮಾಡಬಹುದು. ಆದರೆ ಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ವ್ಯಾಪಾರಸ್ಥರು ನಗರ ಸ್ಥಳೀಯ ಸಂಸ್ಥೆಗಳಿಂದ ರೆಕಮಂಡೇಶನ್ ಸರ್ಟಿಫಿಕೇಟ್ (ಶಿಫಾರಸು ಪ್ರಮಾಣ ಪತ್ರ) ಪಡೆದುಕೊಂಡಿರಬೇಕು. ಯಾವುದೇ ಸರ್ಕಾರಿ ಬ್ಯಾಂಕ್ ಪೋರ್ಟಲ್ಗಳಲ್ಲಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.
ಈಗಿರುವ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ಚಾಲ್ತಿ ಇರುವ ಬಡ್ಡಿದರ ಈ ಯೋಜನೆಗೂ ಅಪ್ಲೈ ಆಗುತ್ತದೆ. ಸಾಲ ಸೌಲಭ್ಯ ಪಡೆದುಕೊಳ್ಳಲು ಸರ್ಕಾರದ ಈ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. https://pmsvanidhi.mohua.gov.in/login
Aadhaar Card is Enough, Get a Loan up to 50,000 Without Any Security