ಆಧಾರ್ ಕಾರ್ಡ್ ಒಂದು ಇದ್ರೆ ಸಾಕು, 2 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಅರ್ಜಿ ಹೀಗೆ ಸಲ್ಲಿಸಿ
- ಆಧಾರ್ ಕಾರ್ಡ್ ಒಂದಿದ್ರೆ ಸಾಕು ಸಿಗುತ್ತೆ ಎರಡು ಲಕ್ಷ ರೂಪಾಯಿ ಸಾಲ
- ಅರ್ಜಿ ಸಲ್ಲಿಸಿದ 24 ರಿಂದ 48 ಗಂಟೆಗಳಲ್ಲಿ ಲೋನ್ ಮಂಜೂರು
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಖಾತೆಗೆ ಹಣ ವರ್ಗಾವಣೆ ಆಗುತ್ತೆ
ಆಧಾರ್ ಕಾರ್ಡ್ ನ್ನು ಮೂಲಾಧಾರವಾಗಿ ಇಟ್ಟುಕೊಂಡು ಬ್ಯಾಂಕ್ ಗಳು (Banks), ಹಣಕಾಸು ಸಂಸ್ಥೆಗಳು ಸಾಲವನ್ನು (Loan) ಮಂಜೂರು ಮಾಡುತ್ತವೆ. ಬೇರೆ ಯಾವುದೇ ಗ್ಯಾರೆಂಟಿ ಕೊಡದೆ ನಿಮ್ಮ ಗುರುತಿನ ಚೀಟಿಯ ಆಧಾರದ ಮೇಲೆಯೇ ಎರಡು ಲಕ್ಷ ರೂಪಾಯಿಗಳವರೆಗೂ ಕೂಡ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
ಇದನ್ನ ಆಧಾರ್ ಕಾರ್ಡ್ ಸಾಲ (Aadhaar Card Loan) ಎಂದು ಕೂಡ ಕರೆಯಬಹುದು. ಈ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಆಧಾರ್ ಕಾರ್ಡ್ ಆಧಾರದ ಮೇಲೆ ಎರಡು ಲಕ್ಷ ಸಾಲ ಪಡೆದುಕೊಳ್ಳುವುದು ಹೇಗೆ?
ಗುರುತು ಮತ್ತು ವಿಳಾಸ ಎರಡನ್ನು ಹೊಂದಿರುವ ಆಧಾರ್ ಕಾರ್ಡ್ ಮೂಲಕವೇ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಳ್ಳಬಹುದು.
21ರಿಂದ ಅರವತ್ತು ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು ಕೆಲವೊಮ್ಮೆ 65 ವರ್ಷ ವಯಸ್ಸಿನವರೆಗೂ ಕೂಡ ಆಧಾರ್ ಕಾರ್ಡ್ ಆಧಾರಿತ ಸಾಲ ಸಿಗುತ್ತದೆ. ಇನ್ನು ಕೇವಲ 15 ರಿಂದ 25 ಸಾವಿರ ರೂಪಾಯಿ ಮಾಸಿಕ ಸಂಬಳ ಇರುವವರು ಆಧಾರ್ ಕಾರ್ಡ್ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿ ವಯಕ್ತಿಕ ಉದ್ಯೋಗ ಮಾಡುತ್ತಿರುವವರಿಗೂ ಸಾಲ ಸಿಗುತ್ತದೆ.
ಬಂಪರ್ ಕೊಡುಗೆ, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಮೂರರಿಂದ ಐದು ಲಕ್ಷಕ್ಕೆ ಏರಿಕೆ!
ಇನ್ನು ಕ್ರೆಡಿಟ್ ಸ್ಕೋರ್ (Credit Score) 750ಕ್ಕಿಂತ ಜಾಸ್ತಿ ಇದ್ದಲ್ಲಿ ಸಾಲ (Loan) ಬೇಗ ಸಿಗುತ್ತದೆ ಮತ್ತು ಬಡ್ಡಿಯೂ ಕಡಿಮೆ ಇರುತ್ತದೆ. ಇನ್ನು ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ಮತ್ತು ಪ್ಯಾನ್ ಕಾರ್ಡ್ ಹೊಂದಿರಬೇಕು. ಬ್ಯಾಂಕ್ ಖಾತೆಗೆ ಕೆ ವೈ ಸಿ ಆಗಿರಬೇಕು. ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದು ಸಕ್ರಿಯಗೊಂಡಿರಬೇಕು.
ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವ ಬ್ಯಾಂಕ್ ಆಧಾರ್ ಕಾರ್ಡ್ ಆಧಾರದ ಮೇಲೆ ಲೋನ್ ಕೊಡುತ್ತವೆ ಎಂಬುದನ್ನು ಪರಿಶೀಲಿಸಿಕೊಂಡು ಆಯಾ ಬ್ಯಾಂಕ್ ನ ವೆಬ್ಸೈಟ್ ಅನ್ನು ಪ್ರವೇಶಿಸಿ. ನಂತರ ನಿಮ್ಮ ಉದ್ಯೋಗ ಮತ್ತು ದಾಖಲೆಗಳ ಆಧಾರದ ಮೇಲೆ ನಿಮಗೆ ಎಷ್ಟು ಸಾಲ ಸೌಲಭ್ಯ ಸಿಗುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಬಡ್ಡಿದರ, ಇಎಂಐ ಪ್ರತಿಯೊಂದು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ 24 ರಿಂದ 48 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಹಣ ಮಂಜೂರಾಗುತ್ತದೆ.
30 ಲಕ್ಷಗಳವರೆಗೆ ಲೋನ್ ಬೇಕು ಅಂದ್ರೆ ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ?
ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವವರಿಗೆ ಬಹಳ ಬೇಗ ಸಾಲ ಸಿಗುತ್ತದೆ. ಇನ್ನು ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಬಡ್ಡಿ ದರವನ್ನು ವಿಧಿಸುತ್ತವೆ. ಅದನ್ನು ಕೂಡ ನೀವು ಬ್ಯಾಂಕ್ ನ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.
ಇನ್ನು ಆಧಾರ್ ಕಾರ್ಡ್ ಆಧಾರದ ಮೇಲೆ ತೆಗೆದುಕೊಳ್ಳುವ ಸಾಲಕ್ಕೆ ಬಡ್ಡಿದರ ತುಸು ಜಾಸ್ತಿ ಎನ್ನಬಹುದು. ಹೀಗಾಗಿ ಬಹಳ ಅನಿವಾರ್ಯತೆಯ ಸಂದರ್ಭದಲ್ಲಿ ಮಾತ್ರ ಈ ಸಾಲವನ್ನು ತೆಗೆದುಕೊಳ್ಳುವುದು ಸೂಕ್ತ.
Aadhaar Card is Enough to Get a Loan of 2 Lakhs